ಅಫ್ಘಾನ್ ತಾಲಿಬಾನ್ ವಿರುದ್ಧ ಅಮೆರಿಕ ಕಾರ್ಯಾಚರಣೆ: ಪಾಕಿಗೆ ಭಯ
Team Udayavani, Jan 8, 2018, 12:13 PM IST
ಇಸ್ಲಾಮಾಬಾದ್ : ಅಫ್ಘಾನಿಸ್ಥಾನದಲ್ಲಿನ ತಾಲಿಬಾನ್ ಉಗ್ರರ ವಿರುದ್ಧ ಬಲವಾದ ಸೇನಾ ಕಾರ್ಯಾಚರಣೆಯನ್ನು ಕೈಗೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪಾಕಿಸ್ಥಾನ ಅಮೆರಿಕಕ್ಕೆ ಹೇಳಿದೆ.
ಅಫ್ಘಾನಿಸ್ಥಾನದಲ್ಲಿನ ತಾಲಿಬಾನ್ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕಲು ಸಾಧ್ಯವಾಗದೇ ಹೋದ ಪಕ್ಷದಲ್ಲಿ, ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ಗಡಿಯಲ್ಲಿರುವ ಪರ್ವತ ಪ್ರಾಂತ್ಯಗಳಲ್ಲಿ ತಾಲಿಬಾನ್ ಉಗ್ರರ ಮತ್ತೆ ಬಲಿಷ್ಠರಾಗುವ ಸಾಧ್ಯತೆ ಹೆಚ್ಚಿದೆ ಎಂದು ಪಾಕಿಸ್ಥಾನ ಹೇಳಿದೆ.
ತಾಲಿಬಾನ್ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕುವಲ್ಲಿ ಅಮೆರಿಕಕ್ಕೆ ಯಶಸ್ಸು ಸಿಗದೇ ಹೋದ ಪಕ್ಷದಲ್ಲಿ ತಾಲಿಬಾನ್ ಉಗ್ರರೊಂದಿಗೆ ಯಾವುದೇ ರೀತಿಯ ಶಾಂತಿ ಇಲ್ಲವೇ ರಾಜಿ ಮಾತುಕತೆ ನಡೆಸುವ ಸಾಧ್ಯತೆಗಳು ಇಲ್ಲವಾಗುತ್ತವೆ; ಈ ಬಗ್ಗೆ ಅಮೆರಿಕ ಎಚ್ಚರಿಕೆ ವಹಿಸಬೇಕು ಎಂದು ಪಾಕ್ ನಿಯತಕಾಲಿಕ ಡಾನ್ ವರದಿ ಮಾಡಿದೆ.
ಮುಂಬಯಿ ಮೇಲಿನ ಉಗ್ರ ದಾಳಿಯ ಬಳಿಕ ಅಮೆರಿಕ ಪಾಕಿಸ್ಥಾನಕ್ಕೆ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ವಿವಿಧ ಸಂಘಟನೆಗಳನ್ನು ಮೂಲೋತ್ಪಾಟನೆ ಮಾಡುವಂತೆ ಕೋರಿ ಅಪಾರ ಪ್ರಮಾಣದ ಮಿಲಿಟರಿ ನೆರವು ನೀಡಿತ್ತು.ಆದರೆ ಪಾಕಿಸ್ಥಾನ ಅಮೆರಿಕದ ಆಶಯದಂತೆ ನಡೆದುಕೊಳ್ಳಲಿಲ್ಲ.
ಅಮೆರಿಕವೇ ಆಪಾದಿಸಿರುವಂತೆ “ಪಾಕಿಸ್ಥಾನ ನಮ್ಮಿಂದ ಎಲ್ಲ ರೀತಿಯ ನೆರವು ಪಡೆದು ನಮ್ಮ ವಿರುದ್ಧವೇ ಡಬಲ್ ಗೇಮ್ ಆಡಿಕೊಂಡು ಬಂದಿದೆ’ ಎಂದು ಪಾಕಿಗೆ ತರಪಾಕಿ ನೀಡಿರುವುದು ಇಸ್ಲಾಮಾಬಾದ್ ಸಂಕಷ್ಟವನ್ನು ಹೆಚ್ಚುಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್