12 ತಿಂಗಳು; 15 ಸಿನೆಮಾ, ಇದು ಕೋಸ್ಟಲ್‌ ಮಹಿಮೆ!


Team Udayavani, Dec 20, 2018, 12:14 PM IST

20-december-7.gif

ಕೋಸ್ಟಲ್‌ವುಡ್‌ ಜಮಾನ ಶೈನಿಂಗ್‌ ಹಂತದಲ್ಲಿರುವುದು ಎಲ್ಲ ರಿ ಗೂ ಗೊತ್ತೇ ಇದೆ. ಹಿಂದೆಲ್ಲ ವರ್ಷಕ್ಕೆ ಒಂದೋ- ಎರಡೋ- ಮೂರೋ ತೆರೆ ಕಾಣುತ್ತಿದ್ದ ಸಿನೆಮಾಗಳ ಸಂಖ್ಯೆ ಈಗ ತಿಂಗಳಿಗೊಂದು ರಿಲೀಸ್‌ ಆಗುವ ಮಟ್ಟಿಗೆ ಬದಲಾಗಿದೆ. ವಿಶೇಷವೆಂದರೆ ಈ ವರ್ಷ 12 ತಿಂಗಳಿನಲ್ಲಿ ಬರೋಬ್ಬರಿ 15 ಸಿನೆಮಾ ತೆರೆಕಂಡಿದೆ.

ಅಂದಹಾಗೆ, ಈ ವರ್ಷ ಬಿಡುಗಡೆಯಾದ ಯಾವ್ಯಾವ ಸಿನೆಮಾಗಳು ಎಷ್ಟು ದಿನ ಇತ್ತು ಹಾಗೂ ಎಷ್ಟು ಗಳಿಕೆ ಮಾಡಿವೆ ಎಂಬುದನ್ನು ಹೊರತುಪಡಿಸಿದರೆ ತುಳು ಚಿತ್ರರಂಗದಲ್ಲಿ ಇದೊಂದು ಆಶಾಭಾವನೆಯನ್ನು ಮೂಡಿಸಿರುವುದಂತೂ ಸತ್ಯ. ಯಾರಿಗೆ ಲಾಭ ಆಗಿದೆ? ಯಾರಿಗೆ ನಷ್ಟ ಆಗಿದೆ? ಯಾರ ಸಿನೆಮಾ ಎಷ್ಟು ಪ್ರಮಾಣದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿತ್ತು ಎಂಬೆಲ್ಲ ಲೆಕ್ಕಾಚಾರ ನಡೆಸುವ ಬದಲು ತುಳು ಸಿನೆಮಾ ಲೋಕದಲ್ಲಿ ಹೊಸ ಟ್ರೆಂಡ್‌ ಸೆಟ್ಟಿಂಗ್‌ ಮಾಡಿದೆ ಎಂಬ ಆಶಾಭಾವನೆ ನಮ್ಮದು.

ಆದರೂ, ಎಂದಿನಂತೆ, ಒಮ್ಮೆ ಚಿತ್ರ ಮಾಡಿದ ನಿರ್ಮಾಪಕರು ಮತ್ತೂಮ್ಮೆ ಸಿನೆಮಾ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂಬ ಆತಂಕ ಈ ವರ್ಷವೂ ಇದೆ. ಬೆರಳೆಣಿಕೆಯ ನಿರ್ಮಾಪಕರು ಮಾತ್ರ ಎರಡನೇ ಬಾರಿ ‘ಧೈರ್ಯ’ ಮಾಡಿ ಚಿತ್ರ ಮಾಡುತ್ತಿರುವುದು ಇಲ್ಲಿ ಗಮನಿಸಬೇಕಾದ ಸಂಗತಿಯೂ ಹೌದು.

ಆಮೂಲಾಗ್ರ ಸಂಗತಿ ಅಂದರೆ, ಕೋಸ್ಟಲ್‌ ವುಡ್‌ ಶತಕದ ದಾಖಲೆಯನ್ನು ಇದೇ ವರ್ಷ ಬರೆದಿದೆ. ನವೆಂಬರ್‌ನಲ್ಲಿ ಬಂದ ‘ಕರ್ಣೆ’ ತುಳುವಿನ 100ನೇ ಸಿನೆಮಾವಾಗಿತ್ತು. ಮುಂದಿನ ತಿಂಗಳು ‘100 ಸಡಗರ’ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ. ಇದೇ ವರ್ಷ ಬಿಡುಗಡೆಯಾದ ‘ಪಡ್ಡಾಯಿ’ ಸಿನೆಮಾ ರಾಷ್ಟ್ರೀಯ ಸಹಿತ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗೂ ಭಾಜನವಾಗಿದ್ದು, ತುಳು ಸಿನೆಮಾ ಲೋಕಕ್ಕೆ ದೊರಕಿದ ಬಹುದೊಡ್ಡ ಗೌರವ. 2018ರ ಜನವರಿಯಿಂದ ಆರಂಭವಾಗಿ ಡಿಸೆಂಬರ್‌ ವರೆಗೆ 12 ತಿಂಗಳಲ್ಲಿ 15 ಸಿನೆಮಾ ಪ್ರದರ್ಶನವಾಗಿದ್ದು, ತುಳು ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ. ಯಾಕೆಂದರೆ ಇಷ್ಟು ಸಿನೆಮಾಗಳು ಒಂದೇ ವರ್ಷದಲ್ಲಿ ಬಂದಿರಲಿಲ್ಲ. ಕಳೆದ ವರ್ಷ 11 ಸಿನೆಮಾ ಬಿಡುಗಡೆಯಾಗಿತ್ತು. ಆದಕ್ಕೂ ಮೊದಲು ಅಂದರೆ 2016ಕ್ಕೆ 13 ಸಿನೆಮಾಗಳು ತೆರೆ ಕಂಡಿತ್ತು. ಅದು ತುಳುವಿನ ಅತ್ಯಧಿಕ ಸಿನೆಮಾ ಪ್ರದರ್ಶನ ಕಂಡ ವರ್ಷ ಎಂದಾಗಿತ್ತು. ಆದರೆ, ಇದನ್ನು ಮೀರಿ ಈ ವರ್ಷ 15 ಸಿನೆಮಾಗಳು ತೆರೆಕಾಣುವಂತಾಗಿದೆ.

ಜನವರಿಯಲ್ಲಿ ‘ಬಲೇ ಪುದರ್‌ ದೀಕ ಈ ಪ್ರೀತಿಗ್‌’ ಸಿನೆಮಾದಿಂದ ಆರಂಭವಾಗಿ ತೊಟ್ಟಿಲ್‌, ಅಪ್ಪೆ ಟೀಚರ್‌, ನಮ್ಮ ಕುಸೇಲ್ದ ಜವನೆರ್‌, ಪೆಟ್‌ ಕಮ್ಮಿ, ಅಮ್ಮೆರ್‌ ಪೊಲೀಸಾ, ಪಡ್ಡಾಯಿ, ದಗಲ್‌ಬಾಜಿಲು, ಪತ್ತೀಸ್‌ ಗ್ಯಾಂಗ್‌, ಪಮ್ಮಣ್ಣೆ ದಿ ಗ್ರೇಟ್‌, ಮೈ ನೇಮ್‌ ಈಸ್‌ ಅಣ್ಣಪ್ಪೆ, ಏರಾ ಉಲ್ಲೆರ್‌ಗೆ, ಕೋರಿ ರೊಟ್ಟಿ, ಕರ್ಣೆ ಸಿನೆಮಾ ಬಿಡುಗಡೆಯಾಗಿ ಈ ತಿಂಗಳಿನಲ್ಲಿ ‘ಉಮಿಲ್‌’ ಪ್ರದರ್ಶನದಲ್ಲಿದೆ. ಈ ತಿಂಗಳಾಂತ್ಯದ ವೇಳೆಗೆ, ಸದ್ಯದ ಮಾಹಿತಿ ಪ್ರಕಾರ ಬೇರೆ ಸಿನೆಮಾ ತೆರೆಕಾಣುವ ಸಾಧ್ಯತೆ ಇಲ್ಲವಾದ್ದರಿಂದ 15 ಸಿನೆಮಾಗಳು ಈ ವರ್ಷಕ್ಕೆ ಬಂದಿದ್ದು ಎಂದು ಬಹುತೇಕ ಪಕ್ಕಾ ಆದಂತಾಗಿದೆ. ಅಂದಹಾಗೆ, ತುಳು ಇಂಡಸ್ಟ್ರಿಯಲ್ಲಿ ಸಣ್ಣ ಮಟ್ಟಿಗಿನ ಕಲಹಕ್ಕೆ ವೇದಿಕೆ ಒದಗಿಸಿದ್ದು ಕೂಡ ಇದೇ ವರ್ಷ ಎಂಬುದು ಗಮನಾರ್ಹ. ಮೂರು ವಾರಕ್ಕೊಂದು ಸಿನೆಮಾ ಬಿಡುಗಡೆ ಎಂಬ ನಿಯಮವನ್ನೆಲ್ಲ ಗಾಳಿಗೆ ತೂರಿ ಚಿತ್ರ ನಿರ್ಮಾಪಕ ಬಂದದ್ದೇ ದಾರಿ ಎಂಬ ಕಥೆ ನಡೆದದ್ದು ಈ ವರ್ಷ. ಅಪ್ಪೆ ಟೀಚರ್‌ ಹಾಗೂ ತೊಟ್ಟಿಲ್‌ ಸಿನೆಮಾ ಒಂದೇ ದಿನ ರಿಲೀಸ್‌ ಆಗಿ ವೈರುಧ್ಯಗಳಿಗೆ ವೇದಿಕೆ ಒದಗಿಸಿತ್ತು. ಮುಂದೆಯಾದರೂ ಇಂತಹ ಸಂಗತಿ ಆಗುವುದು ಬೇಡ ಎಂಬ ತುಳುವರ ಅಭಿಪ್ರಾಯ ಇದ್ದಾಗಲೇ, ಕೆಲವೇ ತಿಂಗಳ ಬಳಿಕ ಬಂದ ಮೈ ನೇಮ್‌ ಈಸ್‌ ಅಣ್ಣಪ್ಪ ಹಾಗೂ ಏರಾ ಉಲ್ಲೆರ್‌ಗೆ ಸಿನೆಮಾ ಕೂಡ ಒಂದೇ ದಿನ ತೆರೆಕಂಡು ಕೋಸ್ಟಲ್‌ವುಡ್‌ನ‌ಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೂಮ್ಮೆ ಸಾಬೀತಾದಂತಾಯಿತು.

ಇದೆಲ್ಲದರ ಮಧ್ಯೆ ಕೋಸ್ಟಲ್‌ವುಡ್‌ನ‌ ಸಿನೆಮಾಗಳನ್ನು ಬೆರಗುಕಣ್ಣಿನಿಂದ ನೋಡುತ್ತಿದ್ದ ಸ್ಯಾಂಡಲ್‌ವುಡ್‌ ಪ್ರಮುಖರು ತುಳು ಸಿನೆಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಡಿಯೋ ಕೂಡ ರಿಲೀಸ್‌ ಮಾಡಿದ್ದಾರೆ. ಮಹತ್ವದ ಸಂಗತಿ ಎಂದರೆ ಸರಿಸುಮಾರು 10ರಿಂದ 15 ಸಿನೆಮಾಗಳು ಈಗಾಗಲೇ ಶೂಟಿಂಗ್‌ ಆಗಿ ಸದ್ಯ ರಿಲೀಸ್‌ನ ಹೊಸ್ತಿಲಲ್ಲಿದ್ದರೆ, ಅಷ್ಟೇ ಪ್ರಮಾಣದ ಸಿನೆಮಾಗಳು ಶೂಟಿಂಗ್‌ ಹಂತದಲ್ಲಿವೆ. ಇದು ಈ ವರ್ಷದ ತುಳು ಸಿನೆಮಾ ಕೃಷಿ ಎಂಬುದನ್ನು ಒಪ್ಪಲೇ ಬೇಕು.

ತುಳು ಸಿನೆಮಾರಂಗದ ಆರಂಭದ 10 ವರ್ಷಗಳ ಅವಧಿಯಲ್ಲಿ 17 ತುಳು ಸಿನೆಮಾಗಳ ಕೊಡುಗೆ ನೀಡಿತು. ಅನಂತರ ಸ್ವಲ್ಪ ಆಮೆಗತಿಯಲ್ಲಿ ಸಾಗುತ್ತಾ 20 ವರ್ಷದ ಅವಧಿಯಲ್ಲಿ ಕೇವಲ 15 ಸಿನೆಮಾಗಳು ಮಾತ್ರ ಬಂದಿತ್ತು. 2001ರಲ್ಲಿ ತೆರೆಗೆ ಬಂದ ‘ತುಡರ್‌’ ಚಿತ್ರದ ಬಳಿಕ ತುಳು ಚಿತ್ರರಂಗ ಸ್ವಲ್ಪ ವರ್ಷ ಸ್ಥಗಿತಗೊಂಡಿತ್ತು. ಬಳಿಕ 2006ರಲ್ಲಿ ‘ಕೋಟಿ ಚೆನ್ನಯ’, ‘ಕಡಲ ಮಗೆ’ ಸಿನೆಮಾ ಮತ್ತೆ ಭರವಸೆ ಮೂಡಿಸಿತು.

2007ರಲ್ಲಿ ‘ಬದಿ’ ಚಿತ್ರ, 2008ರಲ್ಲಿ ಎರಡು ತುಳು ಸಿನೆಮಾಗಳು ತೆರೆ ಕಂಡು, 2009ರಲ್ಲಿ ಚಿತ್ರ ತೆರೆ ಕಾಣಲಿಲ್ಲ. 2010ರಲ್ಲಿ ‘ದೇವೆರ್‌’ 2011ರಲ್ಲಿ ‘ಗಗ್ಗರ’, ‘ಕಂಚಿಲ್ದ ಬಾಲೆ’ ಹಾಗೂ ‘ಒರಿಯರ್ದೊರಿ ಅಸಲ್‌’ ಚಿತ್ರ ತೆರೆ ಕಾಣುವ ಮೂಲಕ ತುಳು ಚಿತ್ರರಂಗದಲ್ಲಿ ಹೊಸ ಅಲೆ ಎದ್ದು, ಚಿತ್ರರಂಗದತ್ತ ಆಸಕ್ತಿ ಮೂಡಿಬಂತು. 2012ರಲ್ಲಿ ನಾಲ್ಕು ಸಿನೆಮಾ ಬಂದು, 2013ರಲ್ಲಿ ‘ರಿಕ್ಷಾ ಡ್ರೈವರ್‌’ ತೆರೆ ಕಂಡಿತು. 2014ರಲ್ಲಿ ಒಟ್ಟು 7 ಸಿನೆಮಾಗಳು ಪ್ರದರ್ಶನಗೊಂಡಿದ್ದರೆ, 2015ರಲ್ಲಿ 10 ಚಿತ್ರಗಳು ತೆರೆಕಂಡಿತ್ತು. ಹೀಗೆ ಮುಂದುವರಿದ ಸಿನೆಮಾಗಳ ಸಂಖ್ಯೆ ಈಗ ವರ್ಷಕ್ಕೆ 15 ಎನ್ನುವಂತಾಗಿರುವುದು ವಿಶೇಷ.

 ದಿನೇಶ್‌ ಇರಾ

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.