ಶತಕ ದಾಖಲಿಸಿದ “ಗಿರಿಗಿಟ್‌’

Team Udayavani, Dec 5, 2019, 5:10 AM IST

ಕೋಸ್ಟಲ್‌ವುಡ್‌ನ‌ಲ್ಲಿ ಹಲವು ದಾಖಲೆ ಬರೆದಿರುವ “ಗಿರಿಗಿಟ್‌’ ಸಿನೆಮಾ ಮೊನ್ನೆ ಶನಿವಾರ ಶತಕದ ಸಾಧನೆ ಬರೆದಿದೆ. ಮಂಗಳೂರಿನ ಜ್ಯೋತಿ, ಭಾರತ್‌ ಸಿನೆಮಾಸ್‌, ಸಿನೆಪೊಲೀಸ್‌, ಮಣಿಪಾಲದ ಭಾರತ್‌ ಸಿನೆಮಾಸ್‌, ಉಡುಪಿಯ ಕಲ್ಪನಾ, ಕಾರ್ಕಳದ ಪ್ಲಾನೆಟ್‌ ಮತ್ತು ಮೂಡುಬಿದಿರೆಯ ಅಮರಶ್ರೀ ಚಿತ್ರಮಂದಿರದಲ್ಲಿ ಶತಕದ ಜತೆಯಾಟ ದಾಖಲಿಸಿದೆ.

ಕರಾವಳಿಯಲ್ಲಿ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಮುಂಬೈನಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಬಾರಿಗೆ ತುಳು ಚಿತ್ರ 15ಕ್ಕೂ ಅಧಿಕ ವಿವಿಧ ರೀತಿಯ ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ. ಮತ್ತೂಂದೆಡೆ ಅಮೇರಿಕದಲ್ಲಿಯೇ ಬರೋಬ್ಬರಿ 25 ಪ್ರದರ್ಶನ ಕಂಡಿರುವುದು ಮತ್ತೂಂದು ವಿಶೇಷ. ಇಂಗ್ಲೆಂಡ್‌ನ‌ಲ್ಲಿ 4 ಪ್ರದರ್ಶನ ಹಾಗೂ ಇಸ್ರೇಲ್‌, ನೈಜೀರಿಯಾ, ಮಲೇಶಿಯಾ, ಸಿಂಗಾಪುರದಲ್ಲಿಯೂ ಸಿನೆಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬ್ಯಾಂಕಾಕ್‌ನಲ್ಲಿಯೂ ಸಿನೆಮಾ ಸಕ್ಸಸ್‌ ಬರೆದಿದೆ.

ಕೋಸ್ಟಲ್‌ವುಡ್‌ನ‌ಲ್ಲಿ ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಟ್ರೇಲರ್‌-ಪೋಸ್ಟರ್‌-ಹಾಡಿನ ಮೂಲಕ ಸದ್ದು ಮಾಡಿದ ರೂಪೇಶ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿದ “ಗಿರಿಗಿಟ್‌’ ಕರಾವಳಿಯ ಜತೆಗೆ ದೇಶ-ವಿದೇಶದಲ್ಲಿಯೂ ಸದ್ದು ಮಾಡಿರುವುದು ನಿಜಕ್ಕೂ ರೋಚಕ.

ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್‌ ಮಿಜಾರ್‌, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರ ಅಭಿನಯಕ್ಕೆ ಚಿತ್ರಪ್ರೇಮಿಗಳು ಶಹಬ್ಟಾಸ್‌ ಅಂದಿದ್ದಾರೆ. ಗುರುಕಿರಣ್‌ ಹಾಗೂ ಪಲ್ಲವಿ ಪ್ರಭು ಹಾಡಿರುವ “ಊರೇ ಮುರ್‌ಕಡ್‌.. ಕರ್ಫ್ಯೂ ಪಾಡಡ್‌..’ ಹಾಡಿಗೆ ಡರೆಲ್‌ ಮಸ್ಕರೇನ್ಹಸ್‌ ಹಾಗೂ ಜೋಯೆಲ್‌ ರೆಬೆಲ್ಲೋ ಸಂಗೀತ ನೀಡಿದ ಕೀರ್ತನ್‌ ಭಂಡಾರಿ ಸಾಹಿತ್ಯದ ಹಾಡು ವೈರಲ್‌ ಆಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕುತೂಹಲ ಪ್ರದೇಶಕ್ಕೆ ಹೋಗುವುದೆಂದರೆ ನಿಜಕ್ಕೂ ಸಾಹಸ ಹಾಗೂ ಮೈ ರೋಮಾಂಚನಗೊಳ್ಳುವ ವಿಚಾರ. ಚಿತ್ರದಲ್ಲಿ ಹಿಮಾಲಯದ ಸೌಂದರ್ಯವನ್ನು ನೋಡಿ ಖುಷಿ ಪಟ್ಟಿದ್ದೆ. ಆದರೆ...

  • ಜಿಆರ್‌ಕೆ ನಿರ್ಮಾಣದ ಎ.ವಿ. ಜಯರಾಜ್‌ ನಿರ್ದೇಶನದ ಗೌರಿ ಆರ್‌. ಹೊಳ್ಳ ಮತ್ತು ಸುಹಾಸ್‌ ಹೊಳ್ಳ ನಿರ್ಮಾಣದ "ಕುದ್ಕನ ಮದ್ಮೆ' ಸಿನೆಮಾ ಜ. 31ರಿಂದ ತುಳುನಾಡಿನಾದ್ಯಂತ...

  • ಕೋಸ್ಟಲ್‌ವುಡ್‌ನ‌ಲ್ಲಿ "ಅಪ್ಪೆ ಟೀಚರ್‌' ಸಿನೆಮಾ ಮಾಡಿದ ಸಾಧನೆ ಉಲ್ಲೇಖ ನೀಯ. ತುಳು ಸಿನೆಮಾ ರಂಗದಲ್ಲಿ ಈ ಸಿನೆಮಾ ಹೊಸ ಮನ್ವಂತರವನ್ನೇ ಸೃಷ್ಟಿಸಿತ್ತು. ಸ್ವಯಂ...

  • ಕೋಸ್ಟಲ್‌ವುಡ್‌ನ‌ ಅತಿ ಬೇಡಿಕೆಯ ನಟ ಪೃಥ್ವಿ ಅಂಬರ್‌ ಸಿನೆಮಾದ ಜತೆಗೆ ಧಾರವಾಹಿಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುವ...

  • ಕಾಂಕ್ರೀಟ್‌ ಸ್ಲ್ಯಾಬ್ ಹಾಸಿದ ಹಾಗಿರುವ ಈ ಪಾರೆಯ ಮೇಲ್ಭಾಗದಲ್ಲಿ ಆರಾಮವಾಗಿ ಯಾವುದೇ ಆತಂಕವಿಲ್ಲದೇ ನಡೆದಾಡಬಹುದು. ಹತ್ತಿರ ಹತ್ತಿರ ಇಂಥ ಎರಡು ರಚನೆಗಳನ್ನು...

ಹೊಸ ಸೇರ್ಪಡೆ