ಸೃಜನಶೀಲತೆಯೇ ಯಶಸ್ಸಿನ ಗುಟ್ಟು


Team Udayavani, Mar 12, 2018, 3:59 PM IST

12-March-14.jpg

ವಸಂತ ಕಾಲ ಆರಂಭವಾಗಿದೆ. ಮಾವು-ಬೇವು ಕೂಡ ಚಿಗುರುತ್ತವೆ. ಯುಗಾದಿ ಹಬ್ಬದ ಸಂಭ್ರಮಾಚರಣೆಯ ಮೂಲಕ ನಾವು ನೂತನ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಬೇವು-ಬೆಲ್ಲ ಸವಿಯುವುದರೊಂದಿಗೆ ನೂತನ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದೇವೆ. ಇದು ಒಂದೆಡೆ ಸಂತೋಷದ
ವಿಷಯವಾದರೆ, ಇನ್ನೊಂದೆಡೆ, ಒಂದು ವರ್ಷ ಕಳೆಯಿತಲ್ಲ ಎಂಬ ಚಿಂತೆ ಕಾಡುತ್ತದೆ. ದಿನಗಳು ಉರುಳುತ್ತಿದಂತೆ ಕಾಲ ಕೂಡ ಬದಲಾಗುತ್ತಿದೆ.

ಬದಲಾವಣೆ ಅಗತ್ಯ
ಇದು ತಂತ್ರಜ್ಞಾನದ ಯುಗ. ದಿನಕ್ಕೊಂದು ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ಅಂತಹ ಕಾಲದಲ್ಲಿ ಕೆಲವರು ಈ ಯುಗವೂ ನಮ್ಮಂತವರಿಗಲ್ಲ ಎಂಬ ಆಲೋಚನೆಯನ್ನು ವ್ಯಕ್ತಪಡಿಸುವವರನ್ನು ನೋಡಿದ್ದೇವೆ. ಇದರ ಬಗ್ಗೆ ನಾವು ಯೋಚಿಸಬೇಕಿದೆ. ಬದಲಾವಣೆ ಜಗದ ನಿಯಮ. ಅಂತಹದರಲ್ಲಿ ಓಡುತ್ತಿರುವ ಕಾಲ ದೊಂದಿಗೆ ನಮ್ಮ ತನದೊಂದಿಗೆಯೇ ನಾವು ಹೆಜ್ಜೆ ಹಾಕಬೇಕಿದೆ. ಇದು ಅನಿವಾರ್ಯ ಕೂಡ.

ಭವಿಷ್ಯ ರೂಪಿಸಿ
ಇಂದು ಯುವಕರು ತಮ್ಮ ಭವಿಷ್ಯ ರೂಪಿಸಿ ಕೊಳ್ಳಲು ಹೆಣಗಾಡುತ್ತಾರೆ. ಒಂದು ಬಾರಿಯ ಸೋಲನ್ನು, ಇಡೀ ಜೀವನದ ಸೋಲು ಎಂದು ಭಾವಿಸಿ ಹತಾಶೆಯೊಂದಿಗೆ ತಮ್ಮ ಜೀವನವನ್ನು ಮುಗಿಸಿಕೊಳ್ಳುತ್ತಾರೆ. ಇದು ಶುದ್ಧ ಮೂರ್ಖತನ. ನಾವು ಕಟ್ಟಿಕೊಳ್ಳಬೇಕಾದ ಆಲೋಚನೆಗಳ ಕಟ್ಟಡವನ್ನು ಸರಿಯಾಗಿ ಕಟ್ಟುತ್ತಿಲ್ಲ ಎಂಬುವುದಕ್ಕೆ ಈ ಉದಾಹರಣೆಯೇ ಸಾಕ್ಷಿ. ಭವಿಷ್ಯ ನಿರ್ಧರಿತವಾಗುವುದು ಒಂದು ಸನ್ನಿವೇಶದ ಸೋಲಿನಿಂದಲ್ಲ. ಅದು ನಿರಂತರವಾದ ಪ್ರಯತ್ನಶೀಲತೆಯಿಂದ ಎಂಬ ಸಾಮಾನ್ಯ ತಿಳಿವಳಿಕೆ ನಮ್ಮಲ್ಲಿರುವುದು ಒಳಿತು.

ಪ್ರಯತ್ನ ಅಗತ್ಯ
ಹೌದು. ಇದು ಸ್ಪರ್ಧಾತ್ಮಕ ಯುಗ. ಇಂದು ಹೆಚ್ಚಿನ ಸ್ಪರ್ಧೆಯಿದೆ. ನಮ್ಮ ನಿಮ್ಮಂತೆಯೇ ಬೇರೆಯವರೂ ಕೂಡ ಭವಿಷ್ಯಕ್ಕಾಗಿ ಸ್ಪರ್ಧಿಸುತ್ತಾರೆ. ಅವರಲ್ಲಿರುವ ಭಿನ್ನ ಸಾಮರ್ಥ್ಯದಿಂದಾಗಿ ಅವರು ತಮ್ಮ ಗುರಿಯನ್ನು ಮುಟ್ಟುತ್ತಾರೆ. ಗೆಲುವಿಗೆ ಕಾರಣ ಅವರ ಪ್ರಯತ್ನ ಹಾಗೂ ಅದರ ಹಿಂದೆ ಇರುವ ಹಲವಾರು ಸೋಲುಗಳ ಪಟ್ಟಿ.

ಸಾಮಾನ್ಯವಾಗಿ ಗೆಲುವು ಎನ್ನುವುದು ಹಾಗೇ ಬರುವುದಿಲ್ಲ. ಅದಕ್ಕೆ ಬೇಕಾದ ತಯಾರಿ ಹಾಗೂ ಬೌದ್ಧಿಕಶಕ್ತಿ, ತಾಳ್ಮೆಯ ಜತೆ ಜತೆಗೆ ನಮ್ಮಲ್ಲಿರುವ ಸೃಜನಾಶೀಲತೆಯ ಬಹುಮುಖ್ಯವಾದ ಸರಕು. ಎಲ್ಲ ಯುವಕರು ರೂಢಿಸಿಕೊಳ್ಳಬೇಕಾದುದು ಮುಖ್ಯವಾದುದೆಂದರೆ ಸೃಜನಾಶೀಲತೆ. ಯಾರಲ್ಲಿ ಸೃಜನಾಶೀಲತೆ ಇರುತ್ತದೆಯೋ, ಅವರು ಯಶಸ್ವಿಯಾಗಲು ಸಾಧ್ಯ. ಏಕೆಂದರೆ ಬೇರೆಯವರಿಗಿಂತ ಭಿನ್ನವಾಗಿ ನಮ್ಮ ತನವನ್ನು ತೋರಿಸಿಕೊಳ್ಳಲು ಹಾಗೂ ಕಾರ್ಯೋನ್ಮುಖವಾಗುವಂತೆ ಮಾಡುವುದು ಸೃಜನಶೀಲತೆ. ಮಾಡುವ ಕೆಲಸವನ್ನು ಭಿನ್ನವಾಗಿ ಹಾಗೂ ಮೆಚ್ಚುಗೆ ಗಳಿಸುವಂತೆ ಮಾಡುವುದು. ಎಷ್ಟೋ ವಿದ್ಯಾರ್ಥಿಗಳು ಕ್ಲಾಸಿನಲ್ಲಿ ಫೇಲಾದವರೂ ಬದುಕಿನಲ್ಲಿ ಪಾಸಾಗಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರಲ್ಲಿರುವ ಸೃಜನಾಶೀಲತೆ. ಅದು ಅವರನ್ನು ಭಿನ್ನವಾಗಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ಈ ನೂತನ ಸಂವತ್ಸವರದ ಆಗಮನವನ್ನು ಕೂಡ ಇದೇ ಭವ್ಯವಾದ ಆಲೋಚನೆಗಳಿಂದ ನಾವೆಲ್ಲ ಆರಂಭಿಸಬೇಕಿದೆ. ಬದುಕಿನಲ್ಲಿ ಸುಖ- ದುಃಖ ಇರುವುದೇ ಆದರೆ ಇವುಗಳ ಮಧ್ಯದಲ್ಲಿ ನಾವು ಹೇಗೆ ಬದುಕುತ್ತಿದ್ದೇವೆ ಎಂಬುದು ಬಹುಮುಖ್ಯ.

 ಶಿವ ಸ್ಥಾವರಮಠ

ಟಾಪ್ ನ್ಯೂಸ್

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.