UV Fusion: Independence Day-ನಮ್ಮೂರಿನ ಹಿರಿಮೆ ದಿವಂಗತ ಶ್ರೀ ನಾರಾಯಣ ಭಟ್ಟ ಆಸ್ತಾಳ್‌

ಕ್ರಮೇಣವಾಗಿ ಭಟ್ಟರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

Team Udayavani, Aug 15, 2023, 2:15 PM IST

UV Fusion: Independence Day-ನಮ್ಮೂರಿನ ಹಿರಿಮೆ ದಿವಂಗತ ಶ್ರೀ ನಾರಾಯಣ ಭಟ್ಟ ಆಸ್ತಾಳ್‌

ಇವರು ನಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. 1905ರಲ್ಲಿ ಭಾಗೀರಥಿ ಮತ್ತು ವೆಂಕಟ್ರಮಣ ಭಟ್ಟರ ಮಗನಾಗಿ ನಾರಾಯಣ ಭಟ್ಟರು ಜನಿಸಿದರು. ಇವರದು ಅವಿಭಕ್ತ ಕುಟುಂಬ ವಾಗಿತ್ತು. ಕೇವಲ ಹೋರಾಟಗಾರರಾಗಿರದೇ ಚಿಂತಕ, ಹಾಡುಗಾರ, ಭಾಗವತ, ಯಕ್ಷಗಾನ ಕಲಾವಿದ, ಉತ್ತಮ ಕೃಷಿಕರು ಆಗಿದ್ದರು. ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಇವರು ವಿಶಾಲ ಸಹೃದಯಿಗಳು ಆಗಿದ್ದರು.

ಅಪ್ಪನನ್ನು ಕಳೆದುಕೊಂಡ ನಂತರ ನಾರಾಯಣ ಭಟ್ಟರು, ಅಮ್ಮನ ಜೊತೆ ಕಲ್ಲೇಶ್ವರಕ್ಕೆ ಹೋಗಿ ಗಾಂವ್ಕರ್‌ ಶಾಲೆಗೆ ಸೇರಿಕೊಂಡರು. ಒಂದು ಹೊತ್ತು ಶಾಲೆ. ಒಂದು ಹೊತ್ತು ದನ ಕಾಯುತ್ತಿದ್ದರು. ಗಾಂವ್ಕರ್‌ ಮನೆಯಲ್ಲಿ ತರುತ್ತಿದ್ದ ತಿಲಕರ “ಕೇಸರಿ’ ಪತ್ರಿಕೆ ಹಾಗೂ ಕನ್ನಡ ಪತ್ರಿಕೆ “ಕಾನಡಾ ವೃತ್ತ’ವನ್ನು ಓದುತ್ತಿದ್ದ ಇವರಿಗೆ ಹೊರ ಜಗತ್ತಿನ ಸನ್ನಿವೇಶಗಳ ಅರಿವಾಯಿತು. ಇದೇ ಮುಂದೆ ಹೋರಾಟಕ್ಕೂ ಪ್ರೇರಣೆ ನೀಡಿತ್ತು.

ಕ್ರಮೇಣವಾಗಿ ಭಟ್ಟರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಕಾರವಾರದ ಗಾಂಧಿ ಎಂದೇ ಹೆಸರಾಗಿದ್ದ ತಿಮ್ಮಪ್ಪ ನಾಯಕರ ಮಾರ್ಗದರ್ಶನದಲ್ಲಿ ಇವರ ಹೋರಾಟ ಶುರುವಾಯಿತು. ಬ್ರಿಟಿಷರು ಇವರನ್ನು ಹತ್ತಿಕ್ಕಿ ಸಾವಿರಾರು ಕಾರ್ಯಕರ್ತರನ್ನು ಸೆರೆಮನೆಗೆ ಹಾಕಿದರು. ನಾರಾಯಣ ಭಟ್ಟರಿಗೆ ಆರು ತಿಂಗಳು ಜೈಲು ಶಿಕ್ಷೆಯಾಯಿತು. ಎರಡು ತಿಂಗಳು ಕಾರವಾರ ಜೈಲು, ನಾಲ್ಕು ತಿಂಗಳು ಇಸಾಪುರ ಜೈಲಿನಲ್ಲಿ ಇದ್ದರು. ಬಿಡುಗಡೆಯ ಅನಂತರ ಮತ್ತೆ ಹೋರಾಟದಲ್ಲಿ ಪಾಲ್ಗೊಂಡರು. ಹಲವು ಸಂದೇಶಗಳನ್ನು ಪ್ರಚಾರ ಮಾಡಿ 15 – 20 ಯುವಕರನ್ನು ಸೇರಿಸಿಕೊಂಡು ಹೋರಾಟಕ್ಕೆ ಮುಂದಾದರು.

1946ರಂದು ಹಲವು ಜನರ ಸಹಕಾರದೊಂದಿಗೆ ಕಾನಮುಸ್ಕಿಯಲ್ಲಿ ಶಾಲೆಯನ್ನು ತೆರೆದರು. ತಮ್ಮ ಮನೆಯಲ್ಲಿಯೇ ಶಿಕ್ಷಕರಿಗೆ ಊಟ, ವಸತಿಯನ್ನು ಕಲ್ಪಿಸಿದರು. ಶಾಲೆಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಭಟ್ಟರು 1994ರಲ್ಲಿ ಧ್ವಜ ಕಟ್ಟೆ ಕಟ್ಟಿಸಿಕೊಟ್ಟರು. ಅವರು ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದರು. ಪೌರೋಹಿತ್ಯ ಹಾಗೂ ಹರಿ ಕತೆಯನ್ನು ಮಾಡುತ್ತಿದ್ದರು. ತಮ್ಮ ಮನೆಯಲ್ಲಿಯೇ ಒಂದು ಗ್ರಂಥಾಲಯವನ್ನು ನಿರ್ಮಿಸಿದ್ದ ಇವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಭಟ್ಟರು ಜೂನ್‌ 3, 2000ರಲ್ಲಿ ದಿವಂಗತರಾದರು. ಹೀಗೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಎಲ್ಲಾ ಯೋಧರಿಗೂ ಸೆಲ್ಯೂಟ್‌.
ಸ್ವಾತಂತ್ರ್ಯ ದಿನದ ಶುಭಾಶಯಗಳು.

ಕಾವ್ಯಾ ರಮೇಶ ಹೆಗಡೆ ವಾನಳ್ಳಿ
ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ

ಟಾಪ್ ನ್ಯೂಸ್

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

police crime

West Bengal ಬಿಜೆಪಿಯ ಮುಸ್ಲಿಂ ಕಾರ್ಯಕರ್ತನ ಬರ್ಬರ ಹತ್ಯೆ

1-wq-wewqe

T20 World Cup; ಪಪುವಾ ನ್ಯೂ ಗಿನಿಯ ವಿರುದ್ಧ ವಿಂಡೀಸ್‌ ಗೆ 5 ವಿಕೆಟ್ ಗಳ ಜಯ

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Japan Movie: ಚಿತ್ರ ಸಂತೆ: ಕುರಸೋವಾರ ಡ್ರೀಮ್ಸ್‌ ನೋಡಿದ್ದೀರಾ?

7-food

Food Waste: ಒಂದೊಂದು ಆಹಾರಕ್ಕೂ ಇದೆ ಅರ್ಥ, ಮಾಡದಿರೋಣ ವ್ಯರ್ಥ

6-uv-fusion

Unity in diversity: ಭಾರತೀಯತೆಯ ಅಂತಃಸತ್ವ …

5-uv-fusion

Conversation: ವೃದ್ಧಾಪ್ಯರ ಸಂವಾದ ಕೇಳಿದಾಗ

4-uv-fusion

New Life: ಹೊಸ ಹುರುಪಿನಲ್ಲಿ ನವಜೀವನ ಆರಂಭಿಸಿ

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

1-asdasdas

Tamil actor ಕರುಣಾಸ್‌ ಬಳಿ 40 ಬುಲೆಟ್‌ಗಳು ಪತ್ತೆ!

mob

WhatsApp ನಲ್ಲಿ ಶೀಘ್ರ ಚಾಟ್‌ ಫಿಲ್ಟರ್‌ ಅಪ್‌ಡೇಟ್‌?

Vimana 2

Again ವಿಮಾನಕ್ಕೆ ಬಾಂಬ್‌ ಬೆದರಿಕೆ: ವಾರದಲ್ಲಿ 4ನೇ ಘಟನೆ

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.