ಮುಖದ ಅಂದಕ್ಕೆ ,ವಸಡಿನ ಚಂದ ಏಕೆ ಹೇಗೆ ?


Team Udayavani, Apr 22, 2018, 6:00 AM IST

For-the-face,.jpg

ನಗುವಾಗ ಮುತ್ತಿನಂಥ ಹಲ್ಲಿಗೆ, ಕಿರೀಟವಿದ್ದಂತೆ, ಕಾಣುವ ವಸಡಿನ ಅಂದ, ಚಂದ ಎಷ್ಟು ಮುಖ್ಯ ಎಂದು ತಿಳಿಯುವುದು, ಯಾರಾದರೂ ನಮ್ಮ ವಸಡಿನ ಬಗ್ಗೆ ಕೇಳಿದಾಗ, ಅಥವಾ ನಮ್ಮ ಅಂದ, ನಗುವಿನ ಚಂದವನ್ನು  ನಾವು ಕನ್ನಡಿಯಲ್ಲಿ ನೋಡಿದಾಗ, ವಸಡಿನ ಬಣ್ಣ, ಆಕಾರ, ರೂಪ ಬದಲಾದ್ದಲ್ಲಿ, ಹಲ್ಲಿನ ಚಂದ ಎಷ್ಟು ಅಂದವಾಗಿದ್ದರೂ, ಅದು ಮುಖದ ಸೌಂದರ್ಯವನ್ನು ಕಡಿಮೆ ಮಾಡುವುದರಲ್ಲಿ ಸಂದೇಹವಿಲ್ಲ. ಈ ವಸಡಿನ ಬದಲಾವಣೆಗಳೇನು? ಅದಕ್ಕೆ ಸೂಕ್ತ ಚಿಕಿತ್ಸೆಯೇನು? ವಸಡಿನ ಬಣ್ಣ – ಮುಖದ ಚರ್ಮದ ಬಣ್ಣ, ಹೊಂದಾಣಿಕೆಯಿಲ್ಲದಿರುವುದು.

ನಮ್ಮ ಚರ್ಮದ ಬಣ್ಣಕ್ಕೆ ಅನುಗುಣವಾಗಿ, ವಸಡಿನ ಬಣ್ಣವು ಇದ್ದಲ್ಲಿ, ವಸಡಿನ ಚಂದವೇ ಬೇರೆ. ಬಿಳಿ ಚರ್ಮದವರಲ್ಲಿ ವಸಡಿನ ಬಣ್ಣ ತೆಳು ಗುಲಾಬಿ (PINK) ಬಣ್ಣದ್ದಾಗಿರುವುದು. ಆದರೆ ಇಂತಹ ಬಣ್ಣ ಪಾಶ್ಚಾತ್ಯರಲ್ಲಿ ಇರುವುದು ಸಾಮಾನ್ಯ. ಭಾರತೀಯರಲ್ಲಿ, ಸಾಮಾನ್ಯವಾಗಿ ಚರ್ಮದ ಬಣ್ಣ ಗೋಧಿ/ಕಪ್ಪು ಇರುವುದು, ಇದಕ್ಕೆ ಅನುಗುಣವಾಗಿ, ವಸಡಿನ ಬಣ್ಣ , ಕಪ್ಪು / ಕಂದು ಬಣ್ಣದಿರುವುದು. ಚರ್ಮದ ಬಣ್ಣ ಕಪ್ಪು ಇದ್ದಲ್ಲಿ , ವಸಡಿನ ಬಣ್ಣ ಕಂದು/ಕಪ್ಪು ಇದ್ದಲ್ಲಿ , ಹೊಂದಾಣಿಕೆಯಿಂದ, ಮುಖದ ಅಂದ ಒಪ್ಪುವಂತಿರುತ್ತದೆ. ಅದೇ, ಕೆಲವರಲ್ಲಿ ಚರ್ಮದ ಬಣ್ಣ ಗೋಧಿ ಬಣ್ಣವಿದ್ದು ವಸಡಿನ  ಬಣ್ಣ  ಕಪ್ಪು / ಕಂದು ಇದ್ದಲ್ಲಿ , ನಗಾಡುವಾಗ, ಅಥವಾ ಮಾತನಾಡುವಾಗ, ವಸಡಿನ ಬಣ್ಣ  ಎದ್ದು  ಕಂಡು, ಮುಖದ ಸೌಂದರ್ಯ ಒಪ್ಪುವಂತಿರದೇ ಇರಬಹುದು. ಇದರಿಂದಾಗಿ ಕೆಲವರು ಕೃತಕ ನಗುವಿನಿಂದ, ಕೃತಕವಾಗಿರುತ್ತಾರೆ. ಮುಖದ ಸೌಂದರ್ಯ ಚಿಕಿತ್ಸೆಯಲ್ಲಿ, ವಸಡಿನ ಅಂದ ಚಿಕಿತ್ಸೆಯು ಒಂದು ಭಾಗ ಎನ್ನುವುದು, ತುಂಬಾ ಜನರಿಗೆ ಇನ್ನೂ ತಿಳಿಯದು. ಇದಕ್ಕೆ ಚಿಕಿತ್ಸೆಯೇನು? ಇದಕ್ಕೆ ಶಾಶ್ವತ ಪರಿಹಾರವಿದೆಯೇ? ಎಂದು ನೋಡೋಣ.

ವಸಡಿನ ಕಪ್ಪು/ಕಂದು ಬಣ್ಣಕ್ಕೆ ಕಾರಣ – ಮೆಲಾನಿನ್‌ (Melanin) ಎಂಬ ಚರ್ಮಕ್ಕೆ/ ವಸಡಿನ ಬಣ್ಣ ಕೊಡುವ ಒಂದು ರಾಸಾಯನಿಕ ವಸ್ತು. “ಈ ರಾಸಾಯನಿಕ ವಸ್ತುವು ನಮ್ಮ ಚರ್ಮ/ವಸಡಿನ ಮೇಲ್ಪದರದಲ್ಲಿರುವ, ಜೀವಕೋಶ ಮೆಲನೋಸೈಟ್‌ (MELANOCYTE) ನಿಂದ ಸ್ರವಿಸುವುದು. ಈ ಮೆಲನೋಸೈಟಸ್‌ ಕೆಲಸವು ಅತೀ ಕಾರ್ಯಶೀಲವಾಗಿದ್ದರೆ (active), ಮೆಲಾನಿನ್‌ ರಾಸಾಯನಿಕ ವಸ್ತುವಿನ ಉತ್ಪಾದನೆ ಅತಿಯಾಗಿರುತ್ತದೆ. ಹಾಗೂ, ಚರ್ಮದ/ ವಸಡಿನ ಬಣ್ಣವು ಕಪ್ಪು/ಕಂದಾಗಿರುತ್ತದೆ. ಕೆಲವರಲ್ಲಿ ಅಲ್ಲಲ್ಲಿ ಕಪ್ಪು/ಕಂದು ಚುಕ್ಕೆಗಳು ಕಂಡರೆ, ಕೆಲವರಲ್ಲಿ ಇಡೀ ವಸಡೇ ಕಪ್ಪು/ಕಂದಾಗಿರಬಹುದು. ಈ ವಸಡಿನ ಬಣ್ಣ, ಚರ್ಮದ ಬಣ್ಣಕ್ಕೆ (ವಸಡು ಕಂದು/ಕಪ್ಪು ಆದರೆ  ಚರ್ಮದ ಬಣ್ಣ ಗೋಧಿ/ಬಿಳಿಯಾಗಿರುವುದು) ಹೊಂದಾಣಿಕೆಯಾಗಿರದೇ ನಗಾಡುವಾಗ, ಮಾತನಾಡುವಾಗ ಎದ್ದು ಕಾಣುವುದು. 

ಕೆಲವರು ತಮ್ಮ ಚರ್ಮದ ಬಣ್ಣ ಬಿಳಿಯಾಗಿರಬೇಕು/ಗೋಧಿ ಬಣ್ಣವಾಗಿರಬೇಕೆಂದು, ಆಶಿಸುತ್ತಾರೆ, ಹೀಗೆಯೇ ಕಂದು /ಕಪ್ಪು ವಸಡು ಬಣ್ಣವಿರುವವರು, ತಮ್ಮ ಮುಖದ ಚರ್ಮಕ್ಕೆ ಸರಿಯಾಗಿ, ವಸಡು ಬಣ್ಣವಿರಬೇಕೆದು ನೆನೆಸುತ್ತಾರೆ. ಇದು ಸಾಧ್ಯವೆ? ಖಂಡಿತ ಸಾಧ್ಯ. ಈ ಚಿಕಿತ್ಸೆಯ ಪರಿಣಾಮವು ಶಾಶ್ವತವಲ್ಲದಿದ್ದರೂ, ಪರಿಣಾಮಕಾರಿಯಾಗಿ, ವಸಡಿನ ಬಣ್ಣ ಬದಲಾಯಿಸುವುದರಲ್ಲಿ ಸಂದೇಹವಿಲ್ಲ.

ಇಂತಹ ವಸಡಿನ ಬಣ್ಣ  ಬದಲಾಯಿಸುವ ಚಿಕಿತ್ಸೆಗೆ “ಡಿಪಿಗಮೆಂಟೇಶನ್‌'(DEPIGMENTATION), “”ವಸಡಿನ ಬಣ್ಣಕ್ಕೆ ಕಾರಣವಾಗುವ ರಾಸಾಯನಿಕ ವಸ್ತು”ವನ್ನು ತೆಗೆಯುವ ಚಿಕಿತ್ಸೆ ಎನ್ನುತ್ತಾರೆ. ಇದನ್ನು ಬೇರೆ ಬೇರೆ ವಿಧಾನ/ರೀತಿಯಲ್ಲಿ ಮಾಡುತ್ತಾರೆ.

“”ಈ ಮೆಲಾನಿನ್‌ ಸ್ರವಿಸುವ ಜೀವಕೋಶಗಳು ನಮ್ಮ ವಸಡಿನ ಮೇಲ್ಪದರದಲ್ಲಿರುವುದರಿಂದ, ಈ ಪದರವನ್ನು ಬೇರೆ ಬೇರೆ ವಿಧಾನಗಳಿಂದ ತೆಗೆಯುವುದರಿಂದ, ವಸಡಿನ ಬಣ್ಣ ಬದಲಾಯಿಸಬಹುದು.

1. ಶಸ್ತ್ರಚಿಕಿತ್ಸೆಯ “”ಬ್ಲೇಡ್‌” ನಿಂದ ವಸಡಿನ ಮೇಲ್ಪದರವು 0.5mm/0.75mm ದಪ್ಪವಿರುತ್ತದೆ. ಇದನ್ನು ಸಂಪೂರ್ಣವಾಗಿ ತೆಗೆಯಬಹುದು. ಶಸ್ತ್ರ ಚಿಕಿತ್ಸೆಯ “”ಬ್ಲೇಡ್‌ನಿಂದ” ಈ ಪದರವನ್ನು ತೆಗೆಯುವ ಮುನ್ನ. ಆ ಜಾಗಕ್ಕೆ ಅರಿವಳಿಕೆ ಚುಚ್ಚು ಮದ್ದನ್ನು ಕೊಡುತ್ತಾರೆ. ಅದಾದ ನಂತರ “”ಎಷ್ಟು ವಸಡು” ಬಣ್ಣ ಬದಲಾಗಬೇಕೋ, ಅಷ್ಟು  ಜಾಗವನ್ನು  ಗುರುತಿಸಿ, ಜಾಗದ ಒಂದು ತುದಿಯಿಂದ, ಇನ್ನೊಂದು ತುದಿಯವರೆಗೆ, ಬ್ಲೇಡ್‌ನಿಂದ ಖಾಲಿ ವಸಡಿನ ಮೇಲ್ಪದರವನ್ನು ವಿಂಗಡಿಸಿ, ರಕ್ತ ಒಸರುವುದನ್ನು ತಡೆಗಟ್ಟಿ , ಈ ಶಸ್ತ್ರ ಚಿಕಿತ್ಸೆಯ ಜಾಗವನ್ನು, ಶೀಘ್ರ ಗುಣವಾಗಲು, ವಸಡನ್ನು ರಕ್ಷಿಸುವ ತಾತ್ಕಾಲಿಕ ಪದರವನ್ನು ((PACK) ಹಾಕುತ್ತಾರೆ. ಈ ತಾತ್ಕಾಲಿಕ ಪದರದಿಂದ, ವಸಡಿನ ರಕ್ತನಾಳಗಳ ರಕ್ಷಣೆ, ರಕ್ತ ಒಸರುವುದು ಕಡಿಮೆಯಾಗುವುದು, ಊಟ ಮಾಡುವಾಗ, ತಿನ್ನುವಾಗ, ಈ ಜಾಗಕ್ಕೆ ತೊಂದರೆಯಾಗದೇ, ಹಾಗೇ ಇರುವುದು, ಒಂದು ವಾರ 10 ದಿನಗಳ ನಂತರ ಈ ಪದರವನ್ನು ತೆಗೆದರೆ, ವಸಡಿನ ಬಣ್ಣ ಬದಲಾವಣೆಯಾಗುವುದು ಗೋಚರಿಸುವುದು. ಒಂದು ತಿಂಗಳಲ್ಲಿ ಇದರ ಪರಿಣಾಮ ಸರಿಯಾಗಿ ಕಾಣುವುದು. ಅಲ್ಲಲ್ಲಿ ಮತ್ತೆ ಚುಕ್ಕೆ  ಕಂಡಲ್ಲಿ ಅದನ್ನು ಚಿಕ್ಕ ಶಸ್ತ್ರ ಚಿಕಿತ್ಸೆಯಿಂದ ಅಲ್ಲಲ್ಲೇ ಸರಿಪಡಿಸಬಹುದು. ಈ ವಿಧಾನದ ತೊಂದರೆಯೆಂದರೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸ್ವಲ್ಪ ರಕ್ತ ಒಸರುವುದು ಮತ್ತು ಶಸ್ತ್ರಚಿಕಿತ್ಸೆಯ ಅನಂತರ ಇರುವ ನೋವು.

ಎರಡನೆಯ ವಿಧಾನ, ಮೇಲೆ ಹೇಳಿದ ಚಿಕಿತ್ಸೆಯನ್ನು ಶಸ್ತ್ರಚಿಕಿತ್ಸೆಯ ಬ್ಲೇಡಿನ ಬದಲಾಗಿ, ಹಲ್ಲು ಹುಳುಕು ತೆಗೆಯಲು ಉಪಯೋಗಿಸುವ ಸಾಧನವಾದ “”ಬರ್‌” (ಆಖೀR) ನ್ನು ಉಪಯೋಗಿಸಿ ತೆಗೆಯಬಹುದು. ಈ ವಿಧಾನವು ಮೇಲೆ ಹೇಳಿದ “”ಬ್ಲೇಡ್‌”ನ ತರಹವೇ ಆದರೂ, ನಿಕಟವಾಗಿ ಇಷ್ಟೇ ಮೇಲ್ಪದರವನ್ನು ತೆಗೆಯಲಾಗಿದೆ ಎಂದು ಹೇಳಲಾಗುವುದಿಲ್ಲ ಇದರಿಂದಾಗಿ ಎಷ್ಟು “”ಮೆಲಾನಿನ್‌” ಸ್ರವಿಸುವ ಜೀವಕೋಶಗಳನ್ನು ತೆಗೆದಿದ್ದೇವೆ ಎಂದು ಹೇಳಲಾಗದೇ, ಅಲ್ಲಲ್ಲಿ “ವಸಡು ಕಲೆ’ಗಳು, ಉಳಿಯಬಹುದು ಮತ್ತು ಮತ್ತೆ ಪುನಃ ಚಿಕಿತ್ಸೆ ಮಾಡುವ ಆವಶ್ಯಕತೆಯೂ ಬೀಳಬಹುದು.3ನೆಯ ವಿಧಾನ, ಕ್ರಯೋಸರ್ಜರಿ – ವಸಡಿನ ಮೇಲಿನ ಪದರವನ್ನು ಶೀತಲೀಕರಿಸಿ, ವಸಡಿನ ಮೇಲಿನ ಪದರವನ್ನು ಅರಿವಳಿಕೆ ಸಹಾಯವಿಲ್ಲದೇ, ಅಥವಾ ಅತೀ ಕಡಿಮೆ ಅರಿವಳಿಕೆಯ ಸಹಾಯದೊಂದಿಗೆ ತೆಗೆಯುವುದು. ಹೀಗೆ ಮಾಡುವುದರಿಂದ ರಕ್ತ ಒಸರುವುದು ಕಡಿಮೆ, ಅಲ್ಲದೇ, ಶಸ್ತ್ರಚಿಕಿತ್ಸೆಯ ಅನಂತರ ನೋವು ಕೂಡ ಕಡಿಮೆ.

4ನೆಯ ವಿಧಾನ ಮತ್ತು ಇತ್ತೀಚೆಗೆ ಬಹು ಚಾಲಿತವಾಗಿರುವ ವಿಧಾನ ಲೇಸರ್‌ ಚಿಕಿತ್ಸೆ. ಲೇಸರ್‌ ಸಹಾಯದಿಂದ ಈ ಮೇಲ್ಪದರವನ್ನು ತೆಗೆಯುವ ವಿಧಾನ ಬಹುವಾಗಿ ಚಾಲ್ತಿಯಲ್ಲಿದೆ. ಈ ಚಿಕಿತ್ಸೆಯಿಂದ, ಉಪಯೋಗಗಳು ಜಾಸ್ತಿ ಮತ್ತು ತೊಂದರೆಗಳು ಕಡಿಮೆ. ಅರಿವಳಿಕೆಯ ಅಗತ್ಯವಿಲ್ಲ, ಚುಚ್ಚುವುದು ತಪ್ಪುವುದು, ತುಂಬಾ ಜನರು ದಂತ ವೈದ್ಯರಲ್ಲಿ ಬರಲು ಹೆದರುವುದು, ಈ ಅರಿವಳಿಕೆ ಚುಚ್ಚುಮದ್ದಿನ ಭಯದಿಂದ ಮತ್ತು ರಕ್ತ ಒಸರುವ ತೊಂದರೆಯಲ್ಲಿ, ಶಸ್ತ್ರ ಚಿಕಿತ್ಸೆಯ ನಂತರ ನೋವಿಲ್ಲ. ಹಾಗೂ ಮೊದಲನೇ ಮತ್ತು ಎರಡನೇ ಚಿಕಿತ್ಸೆಯ ವಿಧಾನದಲ್ಲಿ ಹೇಳಿದ ಪ್ರಕಾರ ಶಸ್ತ್ರ ಚಿಕಿತ್ಸೆಯ ನಂತರ ರಕ್ಷಕ ಕವಚ ಕೊಡುವ ಪ್ರಮೇಯವೂ ಇಲ್ಲ. ಅಲ್ಲದೇ ಈ ಚಿಕಿತ್ಸೆಯ ಅನಂತರ ಮತ್ತೆ ಮತ್ತೆ, ಶಸ್ತ್ರ ಚಿಕಿತ್ಸೆಯ ಅಗತ್ಯವೂ ಕಡಿಮೆ.ಹೀಗೆ ಬೇರೆ ಬೇರೆ ವಿಧಾನಗಳಿಂದ ವಸಡಿನ ಬಣ್ಣವನ್ನು ಕಪ್ಪು/ಕಂದು ಬಣ್ಣದಿಂದ, ತೆಳು ಗುಲಾಬಿ ಬಣ್ಣ ಮಾಡಲು, ಸಾಧ್ಯ. ಇದು ಶಾಶ್ವತ ಪರಿಹಾರವಲ್ಲವಾದರೂ, ಬೇಕಾದಾಗ, ಮುಖದ ಚಂದಕ್ಕೆ ವಸಡಿನ ಅಂದದ ಮೆರುಗನ್ನು ಕೊಡಲು ಸಹಕಾರಿಯಾಗುತ್ತದೆ.
 

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Monsoon Diseases:ಮಳೆಗಾಲದಲ್ಲಿ ಸಾಮಾನ್ಯ; ಮಾನ್ಸೂನ್‌ ರೋಗಗಳು,ತಡೆಗಟ್ಟುವಿಕೆಗಾಗಿ ಸಲಹೆಗಳು

2-health

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.