ಬ್ರೈನ್ ಗೇಮ್ ಸುತ್ತ ‘ರೈಮ್ಸ್’: ರಿಲೀಸ್ಗೆ ರೆಡಿ
Team Udayavani, Jul 9, 2021, 3:42 PM IST
“ರೈಮ್ಸ್’ – ಹೀಗೊಂದು ಸಿನಿಮಾದ ಹೆಸರನ್ನು ನೀವು ಕೇಳಿರಬಹುದು. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಪೂರೈಸಿದೆ.
ಅಜಿತ್ ಜಯರಾಜ್ ನಾಯಕರಾಗಿರುವ ಈ ಚಿತ್ರದಲ್ಲಿ ಸುಷ್ಮಾ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟಿ ಭವ್ಯಾ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಜ್ಞಾನಶೇಖರ್ ಈ ಚಿತ್ರದ ನಿರ್ಮಾಪಕರು. ಅಜಿತ್ ಕುಮಾರ್ ಜೆ. ನಿರ್ದೇಶಕರು. ಅವರಿಗೆ ಇದು ಮೊದಲ ಸಿನಿಮಾ.
ಒಂದು ಕೊಲೆಯ ತನಿಖೆ ಸುತ್ತ ನಡೆಯುವ ಕಥೆ ಇದು. ಇಲ್ಲಿ ಸಾಂಗ್ಸ್ ಇಲ್ಲ, ಫೈಟ್ಸ್ ಕೂಡ ಇಲ್ಲ. ಹಾಗಂತ, ಕಲಾತ್ಮಕ ಸಿನಿಮಾ ಅಲ್ಲ, ನೋಡುಗರಿಗೆ ಕುತೂಹಲ ಕೆರಳಿಸುವ ಅಂಶಗಳು ಇಲ್ಲಿವೆ.
ಇದನ್ನೂ ಓದಿ:‘ರಾಣ’ರೋಚಕ! ಶ್ರೇಯಸ್ಗೆ ನಂದ ಕಿಶೋರ್ ನಿರ್ದೇಶನ
“ರೈಮ್ಸ್’ ಶೀರ್ಷಿಕೆ ಯಾಕೆ ಎಂಬುದಕ್ಕೆ ಸಿನಿಮಾ ನೋಡಿದಾಗ ಗೊತ್ತಾಗುತ್ತೆ ಎನ್ನುವುದು ನಿರ್ದೇಶಕರ ಮಾತು. ಇನ್ನು, ನಾಯಕ ಅಜಿತ್ ಜಯ ರಾಜ್ ಅವರಿಗೆ ಈ ಪಾತ್ರ ತುಂಬಾ ಹೊಸದಾಗಿ ದೆಯಂತೆ. ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಇಷ್ಟವಾಗುವ ವಿಶ್ವಾಸ ಅವರಿಗಿದೆ.
“ರೈಮ್ಸ್ ಕಥೆಯಲ್ಲಿ ಸಾಕಷ್ಟು ವಿಶೇಷತೆ ಇತ್ತು. ಹಾಗಾಗಿ ಒಪ್ಪಿಕೊಂಡೆ. ಪಾತ್ರ ವಿಭಿನ್ನವಾಗಿದೆ. ಕಥೆ ಕೂಡ ಹೊಸತನ ದಿಂದ ಕೂಡಿದೆ. ಮೊದಲ ಸಲ ಬ್ರೈನ್ಗೇಮ್ ಕುರಿತಾದ ಪಾತ್ರ ಮಾಡಿದ್ದೇನೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ’ ಎನ್ನುವುದು ಅಜಿತ್ ಮಾತು.