Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
Team Udayavani, Apr 5, 2024, 12:40 PM IST
ನಟ ಕಿರಣ್ ರಾಜ್ ಹಾಗೂ ಯಶ ಶಿವಕುಮಾರ್ ನಾಯಕ-ನಾಯಕಿಯಾಗಿ ನಟಿಸಿರುವ ಹಾಗೂ ಪ್ರಸಿದ್ಧ್ ನಿರ್ದೇಶನದ “ಭರ್ಜರಿ ಗಂಡು’ ಇಂದು ತೆರೆಕಾಣುತ್ತಿದೆ.
ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಸಿದ್ಧ್, “ರತ್ನ ಮಂಜರಿ ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ನನ್ನ ಸ್ನೇಹಿತ ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಅವರು, ನಾಯಕ ಕಿರಣ್ ರಾಜ್ ಸೇರಿದಂತೆ ಸಾಕಷ್ಟು ಜನ ಕಲಾವಿದರನ್ನು ಈ ಚಿತ್ರಕ್ಕಾಗಿ ನನಗೆ ಪರಿಚಯಿಸಿದರು. ಚಾಕಲೇಟ್ ಬಾಯ್ ಆಗಿದ್ದ ಕಿರಣ್ ರಾಜ್, ಈ ಚಿತ್ರದ ಮೂಲಕ ಆಕ್ಷನ್ ಹೀರೋ ಆಗುವುದಂತು ಖಚಿತ. ಅಷ್ಟು ಅದ್ಭುತವಾಗಿ ಸಾಹಸವನ್ನು ಮಾಡಿದ್ದಾರೆ. ಭರ್ಜರಿ ಗಂಡು ಗ್ರಾಮೀಣ ಸೊಗಡಿನ ಕಥೆ. ಬರೀ ಪ್ರೀತಿಗಷ್ಟೇ ಸೀಮಿತವಾಗದ ನಾಯಕ, ತನ್ನ ಊರಿಗೆ ಹಾಗೂ ಊರ ಜನರಿಗೆ ಏನೆಲ್ಲಾ ಮಾಡುತ್ತಾನೆ ಎಂಬುದೆ ಕಥಾಹಂದರ’ ಎನ್ನುತ್ತಾರೆ.
ಯಶ ಶಿವಕುಮಾರ್ ಈ ಚಿತ್ರದ ನಾಯಕಿ. ವಿಭಿನ್ನವಾದ ಪಾತ್ರ ಸಿಕ್ಕಿದ್ದು, ಇಂದಿನ ಟ್ರೆಂಡ್ಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆ ಎನ್ನಲು ಮರೆಯುವುದಿಲ್ಲ. ಪ್ರಸಿದ್ಧ್ ಫಿಲಂಸ್, ಅನಿಲ್ ಕುಮಾರ್ ಹಾಗೂ ಮದನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಮೇಶ್ ಗೌಡ ಮತ್ತು ಸುದರ್ಶನ್ ಸುಂದರರಾಜ್ ಅವರ ಸಹನಿರ್ಮಾಣವಿದೆ