ವಾಸ್ತವ ಮಯಂ


Team Udayavani, Jul 6, 2018, 6:00 AM IST

u-27.jpg

ಸಂಬಂಧಗಳ ಕುರಿತು ಅನೇಕ ಚಿತ್ರಗಳು ಬಂದು ಹೋಗಿವೆ. ಬರುತ್ತಲೂ ಇವೆ. ಆ ಸಾಲಿಗೆ “ಅಸತೋಮ ಸದ್ಗಮಯ’ ಚಿತ್ರವೂ ಹೊಸ ಸೇರ್ಪಡೆ ಎನ್ನಬಹುದು. ಈ ವಾರ ಚಿತ್ರ ತೆರೆಗೆ ಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಎರಡು ತಿಂಗಳ ಹಿಂದೆಯೇ ಚಿತ್ರ ಪ್ರೇಕ್ಷಕರ ಎದುರು ಬರಬೇಕಿತ್ತು. ಆದರೆ, ನಿರ್ಮಾಪಕ ಅಶ್ವಿ‌ನ್‌. ಜಿ.ಪರೋರ ಅವರು ಚುನಾವಣೆಯಲ್ಲಿ ತೊಡಗಿಕೊಂಡಿದ್ದರಿಂದ ಚಿತ್ರದ ಬಿಡುಗಡೆ ವಿಳಂಬವಾಗಿ, ಈ ವಾರ ರಾಜ್ಯಾದ್ಯಂತ ಸುಮಾರು 70 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ ನಿರ್ಮಾಪಕರು.

ಇದು ಈಗಿನ ವಾಸ್ತವ ಚಿತ್ರಣ ಹೊಂದಿರುವ ಚಿತ್ರ. ಹಿಂದಿನವರು ಸಂಬಂಧಗಳನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಆದರೆ, ಈಗಿನ ಜನರೇಷನ್‌ ಕೇವಲ ವಾಟ್ಸಾಪ್‌, ಫೇಸ್‌ಬುಕ್‌ ಮೂಲಕ ಸಂಬಂಧ ಬೆಸೆಯುತ್ತಿದ್ದಾರೆ. ಆ ಕುರಿತ ವಿಶೇಷ ಅಂಶಗಳು ಚಿತ್ರದ ಹೈಲೆಟ್‌. ಇನ್ನು, ಇಲ್ಲಿ ಹಾರರ್‌ಗೂ ಜಾಗವಿದೆ. ಜೊತೆಗೆ ಶಿಕ್ಷಣ ವ್ಯವಸ್ಥೆ ಕುರಿತಾದ ವಿಷಯವೂ ಇರಲಿದೆ. ಒಟ್ಟಾರೆ ಇಲ್ಲಿ ಭಾವನೆಗಳ ಕುರಿತಾದ ಒಂದು ಮೌಲ್ಯ ಸಾರುವ ಕಥೆ ಇಲ್ಲಿದೆ ಎಂಬುದು ಚಿತ್ರತಂಡದ ಮಾತು.

ಚಿತ್ರಕ್ಕೆ ರಾಜೇಶ್‌ ವೇಣೂರು ನಿರ್ದೇಶಕರು. ಕಥೆ, ಚಿತ್ರಕಥೆ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ವಹಾಬ್‌ ಸಲೀಂ ನಾಲ್ಕು ಹಾಡುಗಳಿಗೆ ಸಾಹಿತ್ಯ ರಚಿಸಿ ಸಂಗೀತ ನೀಡಿದ್ದಾರೆ. ರಾಧಿಕಾ ಚೇತನ್‌ ಇಲ್ಲಿ ಮುಖ್ಯ ಆಕರ್ಷಣೆ. ಅವರು ವಿದೇಶದಿಂದ ಭಾರತಕ್ಕೆ ಆಗಮಿಸುವ ಪಾತ್ರವಂತೆ. ಸದಾ ಸೋಷಿಯಲ್‌ ಮೀಡಿಯಾದ ನಂಟು ಬೆಳೆಸಿಕೊಂಡಿರುವ ಹುಡುಗಿಯ ಪಾತ್ರವದು. ಹೊಸ ರೀತಿಯ ಪಾತ್ರ ಮಾಡಿದ್ದಕ್ಕೆ ರಾಧಿಕಾ ಚೇತನ್‌ ಅವರಿಗೂ ಖುಷಿ ಇದೆ. ನಾಯಕ ರಾಜ್‌ ಕಿರಣ್‌ಗೆ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಒಂದು ಕಡೆ ಭಯ, ಇನ್ನೊಂದು ಕಡೆ ಖುಷಿ ಇದೆಯಂತೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಅವರದು.  ವಿಕ್ರಮ್‌ ಖಳನಾಯಕರಾಗಿ ನಟಿಸಿದ್ದಾರೆ.

 ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕಿಶನ್‌ ಛಾಯಗ್ರಹಣವಿದೆ.

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.