ಪರಂಪರೆ- ಆಧುನಿಕತೆಯ ಅನುಸಂಧಾನದ ಕವಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ

Team Udayavani, Dec 8, 2019, 6:07 AM IST

ಕವಿ-ಗಾಯಕರ‌ ಮುಖಾಮುಖೀ : ಎಚ್‌. ಎಸ್‌. ವೆಂಕಟೇಶಮೂರ್ತಿ- ಶಿವಮೊಗ್ಗ ಸುಬ್ಬಣ್ಣ

ಪು. ತಿ. ನರಸಿಂಹಾಚಾರ್‌, ಕೆ. ಎಸ್‌. ನರಸಿಂಹಸ್ವಾಮಿ, ಜಿ. ಎಸ್‌. ಶಿವರುದ್ರಪ್ಪ , ಎಂ. ಗೋಪಾಲಕೃಷ್ಣ ಅಡಿಗ ಮೊದಲಾದವರ ಪ್ರೇರಣೆಯಿಂದ, ತಮ್ಮದೇ ಆದ ಕಾವ್ಯಪಥವನ್ನು ರೂಪಿಸಿದ ನಮ್ಮ ಕಾಲದ ಮಹಣ್ತೀದ ಕವಿ ಎಚ್‌. ಎಸ್‌. ವೆಂಕಟೇಶಮೂರ್ತಿಯವರಿಗೆ ಕಲ್ಬುರ್ಗಿಯಲ್ಲಿ ಬರುವ ಫೆಬ್ರವರಿಯಲ್ಲಿ ನಡೆಯಲಿರುವ 85ನೆಯ ಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಲಭಿಸಿದೆ. ಕತೆ, ಕಾದಂಬರಿ, ನಾಟಕ, ಪ್ರಬಂಧ, ಶಿಶುಸಾಹಿತ್ಯ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ನಡೆಸಿದರೂ ಅವರೊಳಗಿರುವುದು ಅಪ್ಪಟ ಕವಿಹೃದಯ. ಅವರು ಬರೆದರೂ ಒರೆದರೂ ಕಾವ್ಯವೇ..

ವಿಚಾರಗೋಷ್ಠಿಯಲ್ಲಿ ಎಚ್‌. ಎಸ್‌. ವೆಂಕಟೇಶಮೂರ್ತಿ ಅವರು ಬರಗೂರು ರಾಮಚಂದ್ರಪ್ಪ , ಕೆ. ಎಸ್‌. ನಿಸಾರ್‌ ಅಹಮದ್‌, ದೊಡ್ಡರಂಗೇಗೌಡರೊಂದಿಗೆ

ಕನ್ನಡ ಸಾರಸ್ವತ ಲೋಕಕ್ಕೆ ನೂರಕ್ಕಿಂತಲೂ ಅಧಿಕ ಕೃತಿಗಳನ್ನು ನೀಡಿರುವ ಎಚ್‌ಎಸ್‌ವಿಯವರು ಹಿರಿಯ ತಲೆಮಾರಿನ ಸಾಹಿತಿಗಳೊಂದಿಗೆ ನಿಕಟವಾಗಿ ಒಡನಾಡಿದವರು. ವಿದ್ವದ್ವಿನಯಗಳು ಅವರ ವ್ಯಕ್ತಿಣ್ತೀದಲ್ಲಿ ಸಹಜವಾಗಿ ಮಿಳಿತಗೊಂಡಿವೆ. ಅವರು ಅನೌಪಚಾರಿಕವಾಗಿ, ಆತ್ಮೀಯವಾಗಿ ಮಾತನಾಡಿದಾಗ…

ದಾವಣಗೆರೆ ಜಿಲ್ಲೆಯ ಹೊದಿಗೆರೆಯಿಂದ ತೊಡಗಿ, ಹೊಳಲ್ಕೆರೆಯ ಮೂಲಕ ಚಿತ್ರದುರ್ಗವಾಗಿ ಬೆಂಗಳೂರಿಗೆ ಬಂದಿರಿ. ಈಗ ಮರಳಿ ಕಲ್ಬುರ್ಗಿಗೆ ಹೊರಟು ನಿಂತಿರುವಿರಿ. ಈ ಪಯಣದ ಕುರಿತು ಹೇಗನ್ನಿಸುತ್ತದೆ?
-ದೂರದಾರಿಯ ಪಯಣ- ಕೆ. ಎಸ್‌. ನ. ಹೇಳುವಂತೆ. ಊರು ಸೇರುವ ತನಕ ಈ ಪಯಣ ಸಾಗಲೇಬೇಕು. ಚಲನೆಯೇ ಜೀವನ, ನಿಶ್ಚಲತೆ ಮರಣ ಎನ್ನುವ ಕವಿವಾಕ್ಯವನ್ನು ನಾವು ಮರೆಯಲಿಲ್ಲ.

ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದೀರಿ. ನೂರು ವರ್ಷಗಳ ಹಿಂದಿನ ಸಮ್ಮೇಳನದ ಕಲ್ಪನೆ ಇಂದಿಗೂ ಪ್ರಸ್ತುತ ಎನ್ನಿಸುತ್ತಿದೆಯೆ?
-ನಮ್ಮ ಉತ್ಸವ-ಜಾತ್ರೆಗಳು ಸಾವಿರಾರು ವರ್ಷದಷ್ಟು ಹಳೆಯ ಕಲ್ಪನೆಗಳೇ. “ಕಳ್ಳೇಕಾಯಿ ಪರಿಷೆ’ ಬೆಂಗಳೂರಿನಲ್ಲಿ ಈಗಲೂ ಚಾಲ್ತಿಯಲ್ಲಿದೆ. ಸ್ಥೂಲಾಕಾರಗಳು ಹಳೆಯವೇ. ತಿರುಳು ಹೊಸಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುವುದು. ಸಾಹಿತ್ಯ ಸಮ್ಮೇಳನಗಳು ನಿಧಾನವಾಗಿ ಸಾಹಿತ್ಯಿಕ ನೆಲೆಯಿಂದ ಸಾಂಸ್ಕೃತಿಕ ನೆಲೆಗೆ ಹೊರಳಿಕೊಳ್ಳುತ್ತ ಬಂದಿವೆ. ಕರ್ನಾಟಕದ ಎಲ್ಲ ಸಮಸ್ಯೆಗಳ ಕುರಿತಂತೆ ಈಗ ಸಮ್ಮೇಳನಗಳಲ್ಲಿ ಗೋಷ್ಠಿಗಳಿರುವುದನ್ನು ಗಮನಿಸಬಹುದು.

ಪು. ತಿ. ನರಸಿಂಹಾಚಾರ್‌ ಅವರ ಇಕ್ಕೆಲಗಳಲ್ಲಿ ಎಚ್‌. ಎಸ್‌. ವೆಂಕಟೇಶಮೂರ್ತಿ, ಬಿ. ಸಿ. ರಾಮಚಂದ್ರ ಶರ್ಮ

ಇದು ಅವಸರದ ಕಾಲ. ಎಲ್ಲೆಡೆ ಗೌಜಿ-ಗದ್ದಲ. ನಡುವೆ ನಿಮ್ಮದೇ “ಶಂಖದೊಳಗಿನ ಮೌನ’ವನ್ನು ಧ್ಯಾನಿಸುತ್ತಿರುವಿರಾ?
-ಶಬ್ದದೊಳಗಣ ನಿಶ್ಯಬ್ದ ಎಂಬುದು ವಚನಕಾರರ ನುಡಿಗಟ್ಟು. ಈಗ ಸಂತರ ಮೌನಾನುಸಂಧಾನ ನಡೆಯಬೇಕಾಗಿದೆ. ನಡೆಯುವ ಅಗತ್ಯವೂ ಇದೆ.

ಸಭೆಗಳು ದೊಡ್ಡ-ದೊಡ್ಡದಾಗಿ, ಸಾಮೂಹಿಕ, ಸಾಮುದಾಯಿಕವಾಗಿ ಬೆಳೆದ ಹಾಗೆಲ್ಲ “ವೈಯಕ್ತಿಕ’ ಸೂಕ್ಷ್ಮಗಳು ಮಾಸಿಹೋಗುತ್ತವೆಯೆ?
-ಸಭೆ ದೊಡ್ಡದಾಗುವುದು ಸಮುದಾಯದ ಹಿಗ್ಗಿಗೆ ಅಗತ್ಯ. ಉತ್ಸವ ನಡೆಯಬೇಕಾದ್ದೇ ಹಾಗೆ. ಅದು ಕನ್ನಡದ ಶಕ್ತಿವಿಸ್ತಾರವನ್ನು ಸೂಚಿಸುವುದು. ಇದು ಲೋಕಾಂತ. ಇನ್ನು ಏಕಾಂತವು ಆತ್ಮದ ಸಂಸ್ಕಾರಕ್ಕೆ ಅಗತ್ಯವಾದುದು. ಲೋಕಾಂತದಿಂದ ಏಕಾಂತಕ್ಕೆ, ಏಕಾಂತಕ್ಕೆ ಚಲಿಸುತ್ತಲೇ ಬಾಳಿನ ಪತ್ತಲ ಸಿದ್ಧವಾಗುವುದು.

ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಉತ್ತರಕರ್ನಾಟಕ ಶ್ರೀಮಂತವಾಗಿದ್ದರೂ “ರಾಜಧಾನಿ ಕೇಂದ್ರಿತ ಯೋಚನ ಕ್ರಮ’ ದಲ್ಲಿ ಆ ಪ್ರದೇಶದ ಬಗ್ಗೆ ಒಂದು ಬಗೆಯ ಅವಜ್ಞೆ ಇದ್ದಂತೆ ಅನ್ನಿಸುತ್ತದೆಯೆ?
-ಸಾಹಿತ್ಯಸಮ್ಮೇಳನಗಳು ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿ ನಡೆಯುತ್ತಿರುವುದು ಅವಜ್ಞೆಯನ್ನು ಹೋಗಲಾಡಿಸುವ ಯತ್ನವೆಂದು ನನ್ನ ಭಾವನೆ.

ಟಿ. ಎಸ್‌. ರಾಧಾಕೃಷ್ಣ , ನರಹಳ್ಳಿ ಬಾಲಸುಬ್ರಹ್ಮಣ್ಯ, ಬಿ. ಆರ್‌. ಲಕ್ಷ್ಮಣ ರಾವ್‌ ಅವರೊಂದಿಗೆ ಎಚ್‌ಎಸ್‌ವಿ.

ಇವತ್ತು ಕನ್ನಡ ಭಾಷೆ-ಸಂಸ್ಕೃತಿ “ಬೆಳೆಯುತ್ತಿದೆ’ ಅಂತನ್ನಿಸುತ್ತಿದೆಯೆ?
-ಭಾಷೆ-ಸಂಸ್ಕೃತಿ ಯಾವತ್ತೂ ನಿಂತ ನೀರಲ್ಲ. ಸದಾ ಪರಿವರ್ತನಶೀಲ. ಅದನ್ನು ಬೆಳವಣಿಗೆ ಎನ್ನುವುದಕ್ಕಿಂತ ಬದಲಾವಣೆ ಎಂದು ಗುರುತಿಸಿ ವ್ಯಾಖ್ಯಾನಿಸಬೇಕು.
ಕನ್ನಡ ಭಾಷೆಯ ಬಗ್ಗೆ ಕನ್ನಡ ಅಧ್ಯಾಪಕರಿಗಿಂತ ಉಳಿದವರು ಆಸಕ್ತಿ ತಳೆದಿದ್ದಾರೆ ಅಂತನ್ನಿಸುತ್ತಿದೆಯೆ?

-ಸಾಮಾನ್ಯಿಕರಣ ಸರಿಯಲ್ಲ. ಆದರೆ, ಒಂದು ಮಾತು ಹೇಳಲೇಬೇಕು. ಬೇರೆಬೇರೆ ವೃತ್ತಿ, ವಲಯಗಳಲ್ಲಿರುವ ಲೇಖಕರು ಈಗ ಮಹಣ್ತೀದ ಕೃತಿಗಳನ್ನು ರಚಿಸುತ್ತಿದ್ದಾರೆ. ಸಾಹಿತ್ಯದ ಅಭ್ಯಾಸ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಪಂಡಿತ ಪರಂಪರೆ ಕ್ಷೀಣವಾಗುತ್ತಿದೆಯೆ?
-ಪಂಡಿತ ಪರಂಪರೆ (ಅದನ್ನು ವಿದ್ವತ್‌ ಪರಂಪರೆ ಎಂದು ಕರೆಯಲು ಬಯಸುತ್ತೇನೆ) ಕ್ಷೀಣಿಸುತ್ತಿರುವುದು ನಿಜ.

ಇಂಗ್ಲಿಶ್‌-ಹಿಂದಿಗಳು ಕನ್ನಡದ ಬೆಳವಣಿಗೆಗೆ ಸವಾಲಾಗಿವೆಯೆ?
-ಇಂಗ್ಲಿಷ್‌ ಹಿಂದಿಗಳು ಕನ್ನಡದ ಬೆಳವಣಿಗೆಗೆ ಕಂಟಕಕಾರಿ ಸವಾಲುಗಳು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೇಶಕ್ಕೊಂದು ಸಂವಿಧಾನವನ್ನು ರೂಪಿಸಿ ಅನುಮೋದಿಸಿದ್ದು 1949 ನವೆಂಬರ್‌ 26ರಂದು. ಹೀಗೆ ಅಂಗೀಕರಿಸಿದ ಸಂವಿಧಾನ ಜಾರಿಗೆ ಬಂದದ್ದು 1950 ಜನವರಿ 26ರಂದು. ಅಪರೂಪಕ್ಕೊಮ್ಮೊಮ್ಮೆ...

  • ಮೆಣಸಿನಕಾಯಿ ಬಸವಣ್ಣ, ಬೆಲ್ಲದ ರಾಮಣ್ಣ , ಉಪ್ಪಿನ ಪುಟ್ಟಪ್ಪ, ಪುರಿ ಪರಮೇಶ, ಈರುಳ್ಳಿ ಗಂಗಾಧರ... ನಮ್ಮೂರಿನಲ್ಲಿ ಅಣೆಕಟ್ಟು ನಿರ್ಮಾಣ ಆರಂಭವಾದಾಗ ಅಲ್ಲಿ ನೆಲೆನಿಂತ...

  • ಮಗಳು ಹೆರಿಗೆಗೆಂದು ಜರ್ಮನಿಯಿಂದ ಬಂದಳು. ಬರುವಾಗ ಹೆತ್ತವರಿಗೆ ಒಂದು ಐಪ್ಯಾಡ್‌ ತಂದಿದ್ದಳು. ಹೆರಿಗೆಯಾಯಿತು. ಮೊಮ್ಮಗ ಹುಟ್ಟಿದ. ಆಸ್ಪತ್ರೆಗೆ ಎಲ್ಲ ಓಡಾಡಿದ್ದು...

  • ಗಂಡಹೆಂಡಿರ ಜಗಳ ಉಂಡು ಮಲಗುವವರೆಗೆ ಅಂತ ಹೇಳುತ್ತಾರೆ. ಒಂದು ವೇಳೆ ಅದು ನೂರೈವತ್ತು ವರ್ಷಗಳವರೆಗೂ ನಡೆದರೆ? ಈಗಂತೂ ಅದು ಸಾಧ್ಯವೇ ಇಲ್ಲ ಅಂತೀರಾ? ಹೌದು! ಅದು ನಡೆದಿರುವುದೂ...

  • ಚಿಕ್ಕವರಿದ್ದಾಗ ಮುಂಬಯಿಯ ಹಡಗು ಪಯಣ, ಅಲ್ಲಿನ ಜನನಿಬಿಡತೆ, ಬೆರಗುಪಡಿಸುವ ಹತ್ತಾರು ಮಹಡಿಗಳ ಕಟ್ಟಡಗಳು, ಸಾಲುಗಟ್ಟಿ ಸಾಗುವ ಕಾರುಗಳು, "ಹ್ಯಾಂಗಿಂಗ್‌ ಗಾರ್ಡನ್ನಿ'ನಂತಹ...

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...