ಪಲಾಝೋ ಪ್ಯಾಂಟ್‌: ಬೇಸಿಗೆಯ ಫ್ಯಾಷನ್‌

Team Udayavani, May 24, 2019, 6:00 AM IST

60ರ ದಶಕದಲ್ಲಿ ಟ್ರೆಂಡಿಯಾಗಿದ್ದ ಪಲಾಝೋ ಬಗೆಯ ಪ್ಯಾಂಟ್‌ಗಳು ಇಂದು ಮತ್ತೆ ಜನಪ್ರಿಯವಾಗಿವೆ. ಧರಿಸಿದರೆ ಆರಾಮದಾಯಕ ಜೊತೆಗೆ ಆಕರ್ಷಕ ಹಾಗೂ ವಿಶೇಷ ಲುಕ್‌ ನೀಡುವ ಪಲಾಝೋ ಪ್ಯಾಂಟ್‌ ಹತ್ತುಹಲವು ಕುರ್ತಿ, ಕುರ್ತಾ, ಟೀಶರ್ಟ್‌ ಇತ್ಯಾದಿಗಳೊಂದಿಗೆ ಚೆನ್ನಾಗಿ ಹೊಂದಿಕೊಂಡು ಅಂದವಾಗಿ ಕಾಣಿಸುತ್ತವೆ. ಬೇಸಿಗೆಗಾಗಿಯೇ ವಿಶೇಷ ಪಲಾಝೋ ಪ್ಯಾಂಟ್‌ ಹಾಗೂ ವೈವಿಧ್ಯಮಯ ಟೀಶರ್ಟ್‌ಗಳ ಕಾಂಬಿನೇಷನ್‌ ಈ ಕೆಳಗೆ ನೀಡಲಾಗಿದೆ.

ಸಿಂಪಲ್‌ ಲುಕ್‌ಗಾಗಿ
ಪಲಾಝೋ ಪ್ಯಾಂಟ್‌ನೊಂದಿಗೆ ಟೀಶರ್ಟ್‌ ಧರಿಸಿದರೆ ಸಿಂಪಲ್‌ ಲುಕ್‌ ನೀಡುತ್ತದೆ. ವಿವಿಧ ಪ್ರಿಂಟ್‌, ಚಿತ್ತಾರ, ವಿನ್ಯಾಸವುಳ್ಳ ಪಲಾಝೋ ಪ್ಯಾಂಟ್‌ನ ಮೇಲೆ ಸರಳ ಟೀಶರ್ಟ್‌ ಧರಿಸಿದರೆ ಚಂದ. ಸರಳ, ಚಿತ್ತಾರವಿಲ್ಲದ ಪಲಾಝೋ ಪ್ಯಾಂಟ್‌ ಮೇಲೆ ಬಣ್ಣ ಬಣ್ಣದ ಚಿತ್ತಾರದ ಆಕರ್ಷಕ ಟೀಶರ್ಟ್‌ ಚೆನ್ನಾಗಿ ಕಾಣಿಸುತ್ತದೆ.

ಪಲಾಝೋ ಹಾಗೂ ಟ್ಯಾಂಕ್‌ ಟಾಪ್‌
ಉರಿಬಿಸಿಲಿನ ಬೇಸಿಗೆಗೆ ಇದು ಆರಾಮದಾಯಕ ಜೊತೆಗೆ ಫ್ಯಾನ್ಸಿ ಲುಕ್‌ ನೀಡುವುದು. ಪಲಾಝೋ ಪ್ಯಾಂಟ್‌ ಧರಿಸಿ, ಅದರ ಮೇಲೆ ಟ್ಯಾಂಕ್‌ ಟಾಪ್‌ ಹಾಕಿ, ನಡುವೆ ಸೊಂಟಪಟ್ಟಿ (ಬೆಲ್ಟ್) ಕಟ್ಟಿದರೆ ಬಲು ಅಂದ.

ಪಲಾಝೋ ಟ್ರೋಶರ್‌ಗಳು
ಆಫೀಸುಗಳಲ್ಲಿ ಧರಿಸಲು ಗೌರವಯುತ ಲುಕ್‌ ನೀಡುವ ಈ ಪಲಾಝೋ ಟ್ರೋಶರ್‌ ಬ್ಲೇಝರ್‌ನೊಂದಿಗೆ ಭಾರೀ ಅಂದ.

ಫ್ಲೋರಲ್‌ ಶರಾರಾ ಪಲಾಝೊ
ಬಣ್ಣಬಣ್ಣದ ಹೂವು ಚಿತ್ತಾರಗಳಿಂದ ಕೂಡಿದ ಶರಾರಾ ಪಲಾಝೋ ಪ್ಯಾಂಟ್‌ ಮೇಲೆ, ಟರ್ಟಲ್‌ನೆಕ್‌ ವಿನ್ಯಾಸದ ಟೀಶರ್ಟ್‌ ಧರಿಸಿ, ವಿವಿಧ ಟ್ರೆಂಡಿ ಆಭರಣ ಧರಿಸಿದರೆ ವಿಶೇಷ ನೋಟ ಬೀರುತ್ತದೆ.

ಪಲಾಝೊ ಹಾಗೂ ಕುರ್ತಾ
ಈ ಬಗೆಯ ವಸ್ತ್ರವಿನ್ಯಾಸ ಹೆಚ್ಚಾಗಿ ಬಳಕೆಯಲ್ಲಿದೆ. ಹದಿಹರೆಯದಿಂದ ಯುವತಿಯರು, ಮಧ್ಯವಯಸ್ಕರು ಧರಿಸಲು ಯೋಗ್ಯ ಗಂಭೀರ. ಆದರೆ, ಸ್ಟೈಲಿಶ್‌ ನೋಟ ಉಂಟುಮಾಡುತ್ತದೆ. ಹದಿಹರೆಯದವರಿಗೆ, ಮಕ್ಕಳಿಗೆ ಶಾರ್ಟ್‌ ಕುರ್ತಾ ಬಲು ಅಂದ.

ಪಲಾಝೊ ಹಾಗೂ ಲಾಂಗ್‌ ಕುರ್ತಿ
ಇದು ಯುವತಿಯರ ಮೆಚ್ಚಿನ ವಿನ್ಯಾಸ. ಚೂಡಿದಾರ್‌ ಅಥವಾ ಸಲ್ವಾರ್‌ ಧರಿಸಿದಂತೆಯೇ ತೋರಿದರೂ, ಇನ್ನೂ ಆಕರ್ಷಕ ಹಾಗೂ ಆರಾಮದಾಯಕವಾಗಿದೆ.

ತ್ರಿಫೋರ್ಥ್ ಪಲಾಝೋ ಹಾಗೂ ಟೀಶರ್ಟ್‌
ಸಣ್ಣ ಮಕ್ಕಳಿಗೆ ಹಾಗೂ ಕಾಲೇಜು ಯುವತಿಯರಿಗೆ ಇದು ಅಚ್ಚುಮೆಚ್ಚು.

ಬಿಳಿಬಣ್ಣದ ಪಲಾಝೋ
ಹತ್ತಿಯ ಅಥವಾ ಲೆನಿನ್‌ ಬಟ್ಟೆಯ ಬಿಳಿಬಣ್ಣದ ಪಲಾಝೋ ಪ್ಯಾಂಟ್‌ ಹಾಗೂ ಅದರ ಮೇಲೊಂದು ಬಿಳಿಬಣ್ಣದ ಟೀಶರ್ಟ್‌ ಬೇಸಿಗೆಗೆ ಹೇಳಿಮಾಡಿಸಿದ ಟ್ರೆಂಡಿ ವಿನ್ಯಾಸ. ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು.

ಪಾರ್ಟಿವೇರ್‌ ಪಲಾಝೋ
ಸಭೆ-ಸಮಾರಂಭಗಳಿಗೆ ಹೋಗುವಾಗ ಆಕರ್ಷಕ ವಿಶೇಷ ನೋಟ ನೀಡುವುದರ ಜೊತೆಗೆ ಸೆಕೆಯ ಬೇಗೆಯನ್ನು ನಿವಾರಣೆ ಮಾಡಲೂ ಸಹಕಾರಿ. ಪಲಾಝೋ ಜಂಪ್‌ಸೂಟ್‌ ಎಂಬ ಈ ಬಗೆಯ ಪಾರ್ಟಿವೇರ್‌ ಪಲಾಝೋ ಆಕರ್ಷಕ ಆಭರಣ, ಬ್ಯಾಗ್‌ ಹಾಗೂ ಆ್ಯಕ್ಸಸೆರಿಗಳೊಂದಿಗೆ ವಿಶೇಷ ಲುಕ್‌ ನೀಡುತ್ತದೆ.

ಸ್ಟ್ರಿಪ್ಟ್ ಪಲಾಝೊ
ಬೇಸಿಗೆಯಲ್ಲಿ ಬೀಚ್‌ಗಳಿಗೆ, ಪಿಕ್‌ನಿಕ್‌ಗಳಿಗೆ ಹೋಗುವಾಗ ಈ ಬಗೆಯ ಪಲಾಝೋ ತುಂಬಾ ಖುಷಿದಾಯಕ. ಇದರ ಮೇಲೆ ಕ್ರಾಪ್‌ಟಾಪ್‌ ಚೆನ್ನಾಗಿ ಹೊಂದುತ್ತದೆ.

ಪಲಾಝೋ ಪಲುಕುಗಳು
.ಪಲಾಝೊ “ಫಾರ್ಮಲ್‌’ ಬಗೆಯ ಉಡುಗೆಯೆ? ಎಂದು ಹಲವರು ಪ್ರಶ್ನಿಸುವುದಿದೆ. ಹೌದು, ನೀಳ ಪಲಾಝೋದೊಂದಿಗೆ ಡೀಸೆಂಟ್‌ ಆಗಿ ಹೊಂದುವ ಟಾಪ್ಸ್‌, ಟೀಶರ್ಟ್‌, ಕುರ್ತಿ, ಕುರ್ತಾ ಧರಿಸಿದರೆ ವಿಶೇಷ ಫಾರ್ಮಲ್‌ ಡ್ರೆಸ್‌. ಕಾಲೇಜು, ಆಫೀಸುಗಳಲ್ಲಿ ಧರಿಸಲು ಸುಯೋಗ್ಯ.

.ಉದ್ದವಿರುವ ಮಹಿಳೆಯರಿಗೆ ತುಂಬಾ ಚೆನ್ನಾಗಿ ಕಾಣಿಸುವ ಉಡುಗೆಯೆಂದರೆ ಪಲಾಝೋ. ಅಂತೆಯೇ ಕುಳ್ಳಗಿರುವ ಯುವತಿಯರು ಪಲಾಝೋ ಆರಿಸುವಾಗ ಅಗಲ ಕಡಿಮೆಯಿರುವ ಪಲಾಝೋ ಪ್ಯಾಂಟ್‌ ಆರಿಸಬೇಕು.

.ಅಧಿಕ ತೂಕವಿರುವ ಯುವತಿಯರಿಗೂ ನೀಳ ಪಲಾಝೋ ಜೊತೆಗೆ ಗಿಡ್ಡ ಕುರ್ತಾ ಅಥವಾ ಕುರ್ತಿ ಧರಿಸಿದರೆ ಉತ್ತಮ. ಮಸ್ಲಿನ್‌ ವಸ್ತ್ರದಿಂದ ವಿನ್ಯಾಸಮಾಡಿದ ಸಿಂಥೆಟಿಕ್‌ ಪಲಾಝೋ ಕುರ್ತಿಗಳು ಇವರಿಗೆ ಚೆನ್ನಾಗಿ ಹೊಂದುತ್ತವೆ.

.ತುಂಬಾ ತೆಳ್ಳಗಿರುವ ಯುವತಿಯರಿಗೆ ಹತ್ತಿಯ ಬಟ್ಟೆಯ ಅಗಲವಾದ ಪಲಾಝೋ ಹಾಗೂ ಹಲವು ಲೇಯರ್‌ಗಳನ್ನು ಹೊಂದಿರುವ ಟಾಪ್ಸ್‌ ಚೆನ್ನಾಗಿ ಹೊಂದುತ್ತದೆ.

ಮಧ್ಯವಯಸ್ಸಿನ ಮಹಿಳೆಯರಿಗೆ ಫಾರ್ಮಲ್‌ ಪಲಾಝೋ ಪ್ಯಾಂಟ್‌ ಹಾಗೂ ಅದರ ಮೇಲೆ ಉದ್ದದ ಕುರ್ತಿ ಅಥವಾ ಕುರ್ತಾ ಧರಿಸಿದರೆ ಅವರ ವಯಸ್ಸಿಗೂ ಹೊಂದುತ್ತದೆ. ಆಕರ್ಷಕವಾಗಿಯೂ ಕಾಣಿಸುತ್ತಿದೆ. ಈ ತರಹದ ಪಲಾಝೋ ಡ್ರೆಸ್‌ ನೋಡಿದರೆ ಸೆಲ್ವಾರ್‌ ಅಥವಾ ಚೂಡಿದಾರ್‌ನಂತಹ ಲುಕ್‌ ನೀಡುತ್ತದೆ. ವಯಸ್ಸಾದವರೂ ಧರಿಸಲು ಯೋಗ್ಯ.

.ಬೋಹೋ ಪಲಾಝೊ ಪ್ಯಾಂಟ್‌ಗಳು ಯೋಗ, ಏರೋಬಿಕ್ಸ್‌ ಮಾಡುವಾಗ, ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸುವಾಗ ತುಂಬಾ ಆರಾಮದಾಯಕವಾಗಿರುತ್ತದೆ.

.ಪಾರ್ಟಿವೇರ್‌ ಪಲಾಝೋ ಇಂದಿನ ಫ್ಯಾಶನ್‌ ಟ್ರೆಂಡ್‌ ಆಗಿದೆ. ಗ್ರ್ಯಾಂಡ್‌ ಲುಕ್‌ ನೀಡುವ, ತುಂಬು ಎಂಬ್ರಾಯಿಡರಿ, ಬೀಡ್ಸ್‌ ಇತ್ಯಾದಿಗಳನ್ನು ಹೊಂದಿರುವ ಲೇಸ್‌ಗಳಿರುವ ಸಿಲ್ಕ್ ಪಲಾಝೋ ಶರಾರಾ
ಬಗೆಯ ಪಲಾಝೊ ಇಂದಿನ ಆಕರ್ಷಣೆಯಾಗಿದೆ.

ವೈವಿಧ್ಯಮಯ ಪಲಾಝೋ ಉಡುಗೆಯ ಜಗತ್ತು ಬೆರಗುಗೊಳಿಸುವುದು ದಿಟ!

ಮೈಥಿಲಿ ಕಾಮತ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಒಂದೆಡೆ ಪಟಾಕಿ ಹಬ್ಬದ ಹವಾ ಮುಗಿದಿದೆ. ಅದೇ ಸಂದರ್ಭದಲ್ಲಿ ಫ್ಯಾಷನ್‌ ರಂಗದಲ್ಲಿ ಪಟಾಕಾದ ಹವಾ ಜೋರಾಗಿದೆ. ಪಟಾಕಿಗಳ ಆಕಾರದ ಒಡವೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು,...

  • ಫ್ಯಾಷನ್‌ ಜಗತ್ತು, ದಿನದಿನಕ್ಕೂ ಬದಲಾಗುತ್ತಿರುತ್ತದೆ. ಇವತ್ತಿನ ಟ್ರೆಂಡ್‌ ನಾಳೆ ಹಳೆಯದಾಗಿ, ನಾಡಿದ್ದು ಮಾಯವೇ ಆಗಿಬಿಡಬಹುದು. ಹಾಗಾಗಿ, ಟ್ರೆಂಡ್‌ಗೆ ತಕ್ಕಂತೆ...

  • ಹೆಣ್ಣು ಮತ್ತು ಹೂವು ಇವೆರಡೂ ಜೋಡಿ ಪದಗಳು. ಚೆಲುವು ಹೂವಿನಧ್ದೋ, ಹೂವು ಮುಡಿದ ಹೆಣ್ಣಿನಧ್ದೋ ಎಂಬುದು ಕವಿಗಳ ಜಿಜ್ಞಾಸೆ. ಹೀಗೆ ಹೆಣ್ಣಿನೊಂದಿಗೆ ನಡೆದು ಬಂದ...

  • ನಾಗಾಲ್ಯಾಂಡ್‌ನ‌ಲ್ಲಿ ಮಹಿಳೆಯರು ತೊಡುವ ಸಾಂಪ್ರದಾಯಿಕ ದಿರಿಸು ಭಾರತದ ಇತರ ರಾಜ್ಯಗಳ ದಿರಿಸಿಗಿಂತ ಭಿನ್ನವಾಗಿದೆ. ನಾಗಾಲ್ಯಾಂಡ್‌ ಜನತೆ ತಮ್ಮ ಸಾಂಪ್ರದಾಯಿಕತೆ...

  • ಮಣಿಪುರದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯ ವೈಶಿಷ್ಟéವೆಂದರೆ ಹಲವು ಗಾಢರಂಗಿನ ವೈವಿಧ್ಯಮಯ ಹಲವು ಬುಡಕಟ್ಟು ಪಂಗಡಗಳ ಉಡುಗೆಗಳ ಆಗರ! ಈ ಕೆಳಗೆ ಹಲವು ಬಗೆಯ ಮಣಿಪುರದ...

ಹೊಸ ಸೇರ್ಪಡೆ