CONNECT WITH US  

ಚಿಂತಿಸಿ,ತಲೆಕೆರೆದು
ಕವಿಗಳಿಗೆ ಕೂದಲು
ಉದುರುತ್ತದೆ ಯೌವನದಲ್ಲೆ 
ಆದ್ದರಿಂದ ಸನ್ಮಾನದಲ್ಲಿ
ಪೇಟ ತೊಡಿಸುತ್ತಾರೆ
ಕಾಣದಂತೆ ಬೋಳು ತಲೆ !
ಎಚ್‌. ಡುಂಡಿರಾಜ್‌ 

ಜೀವ ಇಲ್ಲದಿದ್ದರೂ 
ಸದಾ ತನ್ನ ಮಟ್ಟ
ಕಾಯ್ದುಕೊಳ್ಳುತ್ತದೆ ನೀರು ,
ಟೀಕಿಸುವ ಭರದಲ್ಲಿ 
ತೀರಾ ಕೆಳಮಟ್ಟಕ್ಕೆ 
ಇಳಿಯುತ್ತಾರೆ ನಾಯಕರು !
ಎಚ್‌.ಡುಂಡಿರಾಜ್‌

ಪ್ರೀತಿಯ ನಾಟಕವಾಡಿ
ಅರ್ಧದಲ್ಲೆ 
ಎಳೆಯುತ್ತಾರೆ ಪರದೆ
ಪ್ರೇಮಿಸುವಾಗಲೆ ಇರುತ್ತೆ
ಕೈಕೊಡುವ ಇರಾದೆ
ಪ್ರಿಯ"ಕರ' ಎಂಬ ಶಬ್ದದಲ್ಲೆ 
ಕರ ಇದೆ !
ಎಚ್‌. ಡುಂಡಿರಾಜ್‌...

ಒಲ್ಲದ ಗಂಡನಿಗೆ
ಮೊಸರಿನಲ್ಲಿ ಕಲ್ಲು,
ಸಂದೇಹಿ ಹೆಂಡತಿಗೆ
ಜ್ಯೂಸಿನಲ್ಲೂ
ಸ್ಮೆಲ್ಲು  !
 ಎಚ್‌. ಡುಂಡಿರಾಜ್‌

ಎಲ್ಲರೂ ಮೆಚ್ಚುವರು
ಮೋಹಕವಾಗಿ ಕುಣಿವ
ನಮ್ಮ ರಾಷ್ಟ್ರೀಯ ಪಕ್ಷಿ
ನವಿಲನ್ನು
ಹಾವುಗಳಿಗೆ ಮಾತ್ರ
ಅದು ವಿಲನ್ನು!
 ಎಚ್‌. ಡುಂಡಿರಾಜ್‌

ಜನಸಾಮಾನ್ಯರ ಮಕ್ಕಳಿಗೆ 
ಚೆಂಡು, ಪೀಪಿ , ಬಲೂನು 
ಗೊಂಬೆ ಮುಂತಾದ ಆಟಿಕೆ 
ರಾಜಕಾರಣಿಗಳ ಮಕ್ಕಳಿಗೆ 
ಕಾರು, ರೇಸು, ಜೂಜು 
ಹೊಡೆದಾಟ ಬೂಟಾಟಿಕೆ !
 ಎಚ್‌. ಡುಂಡಿರಾಜ್‌...

ಅದೆಷ್ಟೊ ಆಯುಕ್ತರನ್ನು ಕಂಡಿದೆ
ನಮ್ಮ ಚುನಾವಣಾ ಕಮಿಶನ್‌
ನೆನಪಲ್ಲಿ ಉಳಿದವರು ಒಬ್ಬರೇ
ಅವರು ಟಿ ಎನ್‌ ಶೇಷನ್‌
ಉಳಿದವರೆಲ್ಲ ಅವಶೇಷನ್‌
ನಿಶ್ಯೇಷನ್‌!
ಎಚ್‌.ಡುಂಡಿರಾಜ್...

ಸವರಬೇಕು ಅತೃಪ್ತ
ಶಾಸಕರ ಮೊಣಕೈಗೆ
ಸಂಪುಟ ವಿಸ್ತರಣೆಯ ತುಪ್ಪ
ಇಲ್ಲದಿದ್ದರೆ ಅವರನ್ನು
ಕಮಲ ಪಾಳಯದತ್ತ
ಸೆಳೆಯುವರು ಯಡಿಯೂರಪ್ಪ!
 ಎಚ್‌. ಡುಂಡಿರಾಜ್‌ 

ಮೈತ್ರಿ ಸರ್ಕಾರ ಇನ್ನೂ
ಟೇಕಾಫ್ ಆಗಿಲ್ಲವೆಂದು
ಕಾಂಗ್ರೆಸ್‌ ನಾಯಕರೇ
ದೂರುತ್ತಿದ್ದಾರೆ
ಹೌದು, ಟೇಕ್‌ ಆಗಿಲ್ಲ
ಆದರೆ
ಆಫ್ ಆಗಿರುವುದು ಖರೆ!
ಎಚ್‌. ಡುಂಡಿರಾಜ್‌...

ಚುನಾವಣೆ ಮಗಿವವರೆಗೆ
ಆಗಾಗ ಪ್ರಸ್‌ ಮೀಟು
ವಿರೋಧಿಗಳಿಗೆ ತಿರುಗೇಟು
ಗೆದ್ದ ನಂತರ ಮಾಧ್ಯಮ
ಮಿತ್ರರ ಮೇಲೆ ಸಿಟ್ಟು
ಬಿಡುತ್ತಾರೆ ಟೂ ಟು
ಮುಚ್ಚುತ್ತಾರೆ ಗೇಟು!
ಎಚ್‌....

ಭಾಜಪದ ನಾಯಕರ
ಬಾಯಿ ಮುಚ್ಚಿಸಿತ್ತು
ಉಪ ಚುನಾವಣೆಯ ಸೋಲು
ಇಂಥ ಹೊತ್ತಿನಲ್ಲಿ ಸಿಎಂ
ಹೊಡೆಯಿರಿ ಎಂದು ಅವರೇ
ಕೊಟ್ಟಿದ್ದಾರೆ ಕಬ್ಬಿನ ಕೋಲು !
 ಎಚ್‌. ಡುಂಡಿರಾಜ್‌

ಹಿಂದಿನ ಕಾಲದ ರಾಜರು
ಮಾಡುತ್ತಿದ್ದರು ಭೂದಾನ
ಅನ್ನದಾನ, ಚಿನ್ನದಾನ, ಗೋದಾನ
ಇಂದಿನ ರಾಜಕಾರಣಿಗಳು
ಮಾಡುವುದು ಒಂದೇ
ಎಂದಿಗೂ ಈಡೇರದ ವಾಗ್ಧಾನ !
 ಎಚ್‌. ಡುಂಡಿರಾಜ್‌

ಕಬ್ಬು ಸಿಹಿಯಾದರೂ
ಬೆಳೆದವರ ಪಾಲಿಗೆ
ಸಿಹಿಯಲ್ಲ ಅದರ ದರ ,
ಕಿವುಡಾದರೆ ಸರ್ಕಾರ
ಕಬ್ಬಿಗರ ಕೂಗಿಗೆ
ಮಾಡುತ್ತಾರೆ ಮುಷ್ಕರ !
 ಎಚ್‌. ಡುಂಡಿರಾಜ್‌

ತೃಪ್ತಿ ದೇಸಾಯಿ
ಕೊಚ್ಚಿಕೊಂಡಿದ್ದಳು
ಮಂದಿರ ಪ್ರವೇಶ
ಮಾಡುತ್ತೇನೆ ಎಂದು,
ಮನಸ್ಸು ಬದಲಿಸಿ
ವಾಪಸು ಹೋದಳು
ಕೊಚ್ಚಿ ವರೆಗೆ ಬಂದು,
ಕೇರಳ ಪೊಲೀಸರು
...

ಓ ರಣಬೀರ್‌ ಸಿಂಗ್‌, ದೀಪಿಕಾ
ಇರಲಿ ದಿನಾಂಕ ಜ್ಞಾಪಕ
ಮಧುಚಂದ್ರ ಬೇಗ ಮುಗಿಸಿ
ಶೂಟಿಂಗಿಗೆ ಆಗಮಿಸಿ
ಕರೆಯುತ್ತಿದ್ದಾನೆ ನಿರ್ಮಾಪಕ !
ಎಚ್‌.ಡುಂಡಿರಾಜ್‌

ಬೆಕ್ಕು ಕಾಯುವುದು ಹಾಲಿಗೆ
ಕೋಳಿ ಅಲೆಯುವುದು ಕಾಳಿಗೆ
ಕಾಯುತ್ತಿರುವರು
ಕಾಲೇಜ್‌ ಹುಡುಗರು
ಹುಡುಗಿಯರ ಮಿಸ್‌ ಕಾಲಿಗೆ!
 ಎಚ್‌. ಡುಂಡಿರಾಜ್‌ 

ಬೆಕ್ಕು ಕಾಯುವುದು ಹಾಲಿಗೆ
ಕೋಳಿ ಅಲೆಯುವುದು ಕಾಳಿಗೆ
ಕಾಯುತ್ತಿರುವರು
ಕಾಲೇಜ್‌ ಹುಡುಗರು
ಹುಡುಗಿಯರ ಮಿಸ್‌ ಕಾಲಿಗೆ!
 ಎಚ್‌. ಡುಂಡಿರಾಜ್‌ 

ಕವಿಯಲ್ಲ ಮಗು ನಾನು
ಪದಗಳ ಜತೆ ಆಡುವೆನು
ನೋಡಿ ನಗುವಳು ಕನ್ನಡತಾಯಿ
ನಿರಂತರವಾಗಿ ಬರೆದು
ಆದಾಗ ಲೇಖನಿ ಬರಿದು
ಮರೆಯದೆ ತುಂಬುವಳು ಶಾಯಿ! 
 *ಎಚ್‌. ಡುಂಡಿರಾಜ್...

ತೆನೆಹೊತ್ತ ಮಹಿಳೆ, ಕರ
ಉಪ ಚುನಾವಣೆ ಸಮರ
ಒಟ್ಟಾಗಿ ಸೆಣಸಿ
ಕಮಲವ ಮಣಿಸಿ
ಸಾರಿದ್ದಾರೆ ಮೈತ್ರಿ ಲಾಭಕರ !
ಎಚ್‌.ಡುಂಡಿರಾಜ್‌

ಸಾಹಿತಿಗಳ ನಡುವೆ ಉಂಟು
ಸೈದ್ಧಾಂತಿಕ ಜಗಳ
ಪ್ರಗತಿಪರ, ಪ್ರತಿಗಾಮಿ
ಎಡ ಮತ್ತು ಬಲ
ವಾಚಕರಿಗೆ ವಾದ ಬೇಡನ
ಓದುವ ಹಂಬಲ
ಒಳ್ಳೆಯ ಕೃತಿ ರಚಿಸಿದರೆ
ನೀಡುವರು ಬೆಂಬಲ!...

Back to Top