ಸದ್ಯವೇ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬದಲಾವಣೆ ನೀತಿ?
Team Udayavani, Jul 2, 2022, 6:40 AM IST
ಹೊಸದಿಲ್ಲಿ: ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬ್ಯಾಟರಿ ಬದಲಾಯಿಸಿಕೊಳ್ಳಲು ಅನುವು ಮಾಡಿಕೊಡುವುದಕ್ಕೆ ಸಂಬಂಧಿಸಿದ ನೀತಿಯ ವಿವರಗಳನ್ನು ಈ ತಿಂಗಳ ಉತ್ತರಾರ್ಧದಲ್ಲಿ ಸರಕಾರ ಪ್ರಕಟಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದು ಜಾರಿಗೆ ಬಂದರೆ ಈ ವಾಹನಗಳ ಮಾಲಕರು ಖಾಲಿಯಾದ ಬ್ಯಾಟರಿಗಳನ್ನು ಚಾರ್ಜಿಂಗ್ ಸ್ಟೇಶನ್‌ಗಳಲ್ಲಿ ಚಾರ್ಜ್ ಆಗಿರುವ ಬ್ಯಾಟರಿಗಳಿಗೆ ಬದಲಾಯಿಸಿ ಕೊಳ್ಳಲು ಸಾಧ್ಯವಾಗುತ್ತದೆ; ಚಾರ್ಜ್ ಮಾಡಿಸಿಕೊಳ್ಳಲು ಕಾಯಬೇಕಾದ ಅಗತ್ಯ ಇರುವುದಿಲ್ಲ.
ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದ ಈ ಯೋಜನೆಯನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಗಾತ್ರವನ್ನು ಯಾವುದೇ ವಾಹನಗಳಲ್ಲಿ ಬಳಕೆ ಮಾಡಬಹುದಾದಂತೆ ಏಕರೂಪಕ್ಕೆ ತರುವುದು ಈ ಯೋಜನೆಯ ಪ್ರಧಾನ ಅಂಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧ್ವಜಾರೋಹಣ:ಗಮನಸೆಳೆದ ಪ್ರಧಾನಿ ಮೋದಿ ಪೇಟಾ, ಬಿಳಿಕುರ್ತಾ; ಈ ಬಾರಿ ಟೆಲಿಪ್ರಾಂಪ್ಟರ್ ಗೆ ಕೊಕ್
ಮುಂದಿನ ಪೀಳಿಗೆಗಾಗಿ ನವಭಾರತದ ನಿರ್ಮಾಣ :ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ
ನಿಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಬೇಕೇ? ಹಾಗಾದರೆ ನೀವು ಮದ್ಯಪಾನ ತ್ಯಜಿಸಿ
38 ವರ್ಷಗಳ ನಂತರ ಸಿಕ್ಕಿತು ಹುತಾತ್ಮ ಯೋಧನ ಮೂಳೆ! ಅಂತಿಮ ನಮನಕ್ಕಾಗಿ ಕಾಯುತ್ತಿದೆ ಕುಟುಂಬ
ದೇವೇಂದ್ರ ಫಡ್ನವೀಸ್ಗೆ ಮಹಾ ಗೃಹ, ಆರ್ಥಿಕ ಹೊಣೆ