Onam ಹಿನ್ನೆಲೆ ಒನ್ ಪ್ಲಸ್ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ
Team Udayavani, Aug 28, 2023, 10:48 PM IST
ಓಣಂ ಹಿನ್ನೆಲೆಯಲ್ಲಿ ಒನ್ ಪ್ಲಸ್ ಬ್ರಾಂಡ್ ತನ್ನ ಉತ್ಪನ್ನಗಳಿಗೆ ರಿಯಾಯಿತಿಗಳನ್ನು ಘೋಷಿಸಿದೆ. ಒನ್ ಪ್ಲಸ್ ಎನ್ಸೆಂಬೆಲ್ ಬಂಡಲ್ ನಲ್ಲಿ ಒನ್ ಪ್ಲಸ್ 11, ಒನ್ ಪ್ಲಸ್ ಪ್ಯಾಡ್ ಮತ್ತು ಬಡ್ಸ್ ಪ್ರೊ ಸೇರಿದ್ದು, ಇಷ್ಟು ಸಹ ಒಂದೇ ಬಂಡಲ್ ನಲ್ಲಿ 1,07,997 ರೂ.ಗಳಿಗೆ ದೊರಕಲಿವೆ. ಐಸಿಐಸಿಐ, ಆಕ್ಸಿಸ್, ಸಿಟಿ, ಎಚ್ಡಿಎಪ್ಸಿ ಕಾರ್ಡ್ ಗಳಿಗೆ ರಿಯಾಯಿತಿ, ಬಡ್ಡಿರಹಿತ ಇಎಂಐ ಸೌಲಭ್ಯ ಘೋಷಿಸಿದೆ.
ಇದಲ್ಲದೇ ಒನ್ ಪ್ಲಸ್ ಬುಲೆಟ್ಸ್ ವೈರ್ಲೆಸ್ ಝಡ್ 2 ನೆಕ್ ಬ್ಯಾಂಡ್ ಇಯರ್ ಫೋನ್ 2,299 ರೂ. ಹಾಗೂ ಒನ್ ಪ್ಲಸ್ ಕೀಬೋರ್ಡ್ 81 ಗೆ 17,999 ರೂ ರಿಯಾಯಿತಿ ದರ ಪ್ರಕಟಿಸಲಾಗಿದೆ. ಒನ್ ಪ್ಲಸ್ ಪ್ಯಾಡ್ ಗೆ ಐಸಿಐಸಿಐ, ಒನ್ ಕಾರ್ಡ್ ಬಳಕೆದಾರರಿಗೆ 2000 ರೂ. ರಿಯಾಯಿತಿ ಇದೆ.
ಇದಲ್ಲದೇ, ಒನ್ ಪ್ಲಸ್ ಟಿವಿ 65, ಕ್ಯೂ2 ಪ್ರೊಗೆ ಐಸಿಐಸಿಐ ಕಾರ್ಡ್ ಮೂಲಕ 5000 ರೂ. ರಿಯಾಯಿತಿ, ಒನ್ ಪ್ಲಸ್ ಟಿವಿ ಐ ಸೀರೀಸ್ ಗೆ 2000 ದಿಂದ 3000 ರೂ.ಗಳವರೆಗೆ, ಒನ್ಪ್ಲಸ್ ಟಿವಿ ಯು1 ಸರಣಿಗೆ3000 ರೂ.ಗಳಿಂದ 4000 ರೂ.ಗಳ ರಿಯಾಯಿತಿಯನ್ನು ಐಸಿಐಸಿಐ, ಒನ್ ಕಾರ್ಡ್ ಮೂಲಕ ನೀಡಲಾಗಿದೆ. ಒನ್ ಪ್ಲಸ್ ನಾರ್ಡ್ ಸಿಇ3 ಲೈಟ್ ಗೆ 1000 ರೂ.,ನಾರ್ಡ್ ಬಡ್ಸ್ 2ಆರ್ ಗೆ ಐಸಿಐಸಿಐ ಕಾರ್ಡ್ ಮೂಲಕ 200 ರೂ. ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ