ಈಜಿಪ್ಟ್ ನಲ್ಲಿ ಎಲ್‌ಸಿಜೆ ಘಟಕ ಶೀಘ್ರ? ಈಜಿಪ್ಟ್- ಭಾರತದ ನಡುವೆ ಉನ್ನತ ಮಟ್ಟದ ಮಾತುಕತೆ
ಮಧ್ಯ ಪ್ರಾಚ್ಯಕ್ಕೂ ಭಾರತದ ರಕ್ಷಣ ಉತ್ಪನ್ನ ಮಾರಾಟಕ್ಕೆ ಯತ್ನ
Team Udayavani, Jun 28, 2022, 6:40 AM IST
ಹೊಸದಿಲ್ಲಿ: ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶಗಳಲ್ಲಿ ರಕ್ಷಣ ಸಾಮಗ್ರಿಗಳ ರಫ್ತು ವಿಸ್ತರಣೆಯ ಗುರಿ ಹಾಕಿಕೊಂಡಿರುವ ಭಾರತವು ಈಗ ಈಜಿಪ್ಟ್ ನಲ್ಲಿ ಲಘು ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನ ಘಟಕಗಳನ್ನು ತೆರೆಯಲು ನಿರ್ಧರಿಸಿದೆ.
ಭಾರತ ಮತ್ತು ಈಜಿಪ್ಟ್ ವಾಯು ಪಡೆ ಮುಖ್ಯಸ್ಥರ ನಡುವೆ ಈ ಕುರಿತು ಉನ್ನತ ಮಟ್ಟದ ಸರಣಿ ಮಾತುಕತೆಗಳು ಈಗಾಗಲೇ ನಡೆದಿವೆ. ಕೆಲವೇ ದಿನಗಳಲ್ಲಿ ಈಜಿಪ್ಟ್ ವಾಯುಪಡೆ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡಿ, ಯುದ್ಧ ವಿಮಾನಗಳ ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಭಾರತದ ಪರಿಣತಿಯ ಕುರಿತು ಪರಿಶೀಲನೆಯನ್ನೂ ನಡೆಸಲಿದ್ದಾರೆ.
70 ಎಲ್‌ಸಿಜೆ ಬೇಕಂತೆ: ಪ್ರಸ್ತುತ ಈಜಿಪ್ಟ್ ವಾಯುಪಡೆಗೆ ಸುಮಾರು 70 ಲಘು ಯುದ್ಧ ವಿಮಾನಗಳ ಆವಶ್ಯಕತೆಯಿದ್ದು, ಸ್ಥಳೀಯವಾಗಿ ಉತ್ಪಾದನೆ ಮಾಡಲು ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಈಗ ಅಲ್ಲಿ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾ ಮೂಲದ ಜೆಟ್‌ಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ.
ಈಗ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಲಿದ್ದು, ಅಲ್ಲೇ ಉತ್ಪಾದನ ಘಟಕವನ್ನು ಸ್ಥಾಪಿಸಲು ಚಿಂತನೆ ನಡೆಸಿದೆ.
ಕೇವಲ ತೇಜಸ್ ಲಘು ಯುದ್ಧ ವಿಮಾನ ಎಂಕೆ1ಎ ಮಾತ್ರವಲ್ಲದೇ ಸ್ವದೇಶಿ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್(ಎಎಲ್‌ಎಚ್) ಮತ್ತು ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್)ಗಳನ್ನೂ ಅಲ್ಲಿ ನಿರ್ಮಿಸಲು ಹಿಂದುಸ್ತಾನ್ ಏರೋನಾಟಿಕ್ಸ್ ಲಿ. ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉತ್ತರಪ್ರದೇಶ: ಯಮುನಾ ನದಿಯಲ್ಲಿ ದೋಣಿ ಮುಳುಗಿ 20ಕ್ಕೂ ಅಧಿಕ ಮಂದಿ ಸಾವು?
ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್
ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!
ರಾಜಕೀಯ ಪಕ್ಷಗಳ ಉಚಿತ ಕೊಡುಗೆ ದೇಶದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ: ಸುಪ್ರೀಂಕೋರ್ಟ್
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 16,299 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ