ಎಚ್‍ ಪಿ ಯಿಂದ ಕೈಗೆಟುಕುವ ದರದ ಹೊಸ ಸ್ಮಾರ್ಟ್ ಪ್ರಿಂಟರ್ ಗಳ ಬಿಡುಗಡೆ


Team Udayavani, Dec 17, 2022, 1:20 PM IST

ಎಚ್‍ ಪಿ ಯಿಂದ ಕೈಗೆಟುಕುವ ದರದ ಹೊಸ ಸ್ಮಾರ್ಟ್ ಪ್ರಿಂಟರ್ ಗಳ ಬಿಡುಗಡೆ

ಬೆಂಗಳೂರು: ಗೃಹ ಬಳಕೆ, ಅತಿ ಸಣ್ಣ ಮತ್ತು ಸಣ್ಣ ವ್ಯಾಪಾರಸ್ಥರ ದೈನಂದಿನ ಪ್ರಿಂಟೌಟ್ ಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಎಚ್ ಪಿ ಇಂಡಿಯಾ ತನ್ನ ಹೊಸ ಶ್ರೇಣಿಯ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್ ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

HP Smart Tank 580, HP Smart Tank 520 ಹಾಗೂ HP Smart Tank 210 ಎಂಬ ಹೊಸ ಮಾಡೆಲ್‍ ಗಳನ್ನು ಹೊರತರಲಾಗಿದೆ.

ಭಾರತದ ಗೃಹ ಬಳಕೆ ಮತ್ತು ಸಣ್ಣ ವ್ಯಾಪಾರಸ್ಥರು ತಮ್ಮ ಡಿಜಿಟಲ್ ರೂಪಾಂತರಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ದಿಸೆಯಲ್ಲಿ ಅವರು ಕೈಗೆಟುಕುವ ದರ, ಬಳಕೆದಾರ ಸ್ನೇಹಿ ಮತ್ತು ಸ್ಮಾರ್ಟ್ ಆದ ಪ್ರಿಂಟರ್ ಗಳನ್ನು ಬಯಸುತ್ತಾರೆ. ಅಂಥವರಿಗಾಗಿ ಈ ಪ್ರಿಂಟರ್‍ ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ತಡೆರಹಿತವಾದ ಸೆಟಪ್, ಸ್ಮಾರ್ಟ್ ವೈಶಿಷ್ಟ್ಯತೆಗಳನ್ನು ಹಾಗೂ ಉತ್ತಮ ಸಂಪರ್ಕದ ಜೊತೆಗೆ ಗ್ರಾಹಕರಿಗೆ ಉತ್ತಮ ಬಳಕೆದಾರ ಸ್ನೇಹಿ ಅನುಭವವನ್ನು ನೀಡುತ್ತದೆ. ಇದರಲ್ಲಿ ಸೆಲ್ಫ್ ಹೀಲಿಂಗ್ ವೈಫೈ, ಸ್ಮಾರ್ಟ್ ಅಪ್ಲಿಕೇಶನ್ ಹಾಗೂ ಸ್ಮಾರ್ಟ್ ಅಡ್ವಾನ್ಸ್ ನಂತಹ ವಿನೂತನವಾದ ವೈಶಿಷ್ಟ್ಯತೆಗಳಿವೆ. ಈ ಎಚ್ ಪಿ ಯ ಹೊಸ ಇಂಕ್ ಪ್ರಿಂಟರ್ ನಿಂದ 18,000 ಕಪ್ಪು ಬಿಳುಪು ಪುಟಗಳನ್ನು ಅಥವಾ 6,000 ಕಲರ್ ಪೇಜ್ ಗಳ ಪ್ರಿಂಟೌಟ್ ತೆಗೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ:11 ಅತ್ಯಾಚಾರಿ ಆರೋಪಿಗಳ ಬಿಡುಗಡೆ ಪ್ರಶ್ನಿಸಿದ ಬಿಲ್ಕಿಸ್ ಬಾನೋ ಅರ್ಜಿ ವಜಾಗೊಳಿಸಿದ ಸುಪ್ರೀಂ

ಈ ಬಗ್ಗೆ ಮಾತನಾಡಿದ ಎಚ್ ಪಿ ಇಂಡಿಯಾ ಮಾರ್ಕೆಟ್ ನ ಪ್ರಿಂಟಿಂಗ್ ಸಿಸ್ಟಮ್ಸ್ ನ ಸೀನಿಯರ್ ಡೈರೆಕ್ಟರ್ ಸುನೀಶ್ ರಾಘವನ್, “ಭಾರತದ ಆರ್ತಿಕತೆಯ ಪ್ರಗತಿಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಸಹಕಾರಿಯಾಗಿವೆ. ಈ ಕ್ಷೇತ್ರದ ಉದ್ದಿಮೆಗಳು ದೇಶದ ಜಿಡಿಪಿಗೆ ಶೇ.30 ರಷ್ಟು ಕೊಡುಗೆ ನೀಡುತ್ತಿವೆ. ಎಂಎಸ್ಎಂಇಗಳು ಸ್ಮಾರ್ಟ್ ತಂತ್ರಜ್ಞಾನದ ಪರಿಹಾರಗಳನ್ನು ಸದಾ ಹುಡುಕುತ್ತಿರುತ್ತವೆ. ಇಂತಹ ಉದ್ದಿಮೆಗಳಿಗೆ ನಮ್ಮ ಹೊಸ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್ ಗಳು ಸಹಕಾರಿಯಾಗಲಿವೆ” ಎಂದರು.

“ಈ ಹೊಸ ಸ್ಮಾರ್ಟ್ ಟ್ಯಾಂಕ್ ಅನ್ನು ವಿಶೇಷವಾಗಿ ಸಣ್ಣ ವ್ಯವಹಾರಗಳು, ಉದ್ದಿಮೆಗಳು ಮತ್ತು ಮನೆಯಲ್ಲೇ ಕುಳಿತು ಹೆಚ್ಚು ಹೆಚ್ಚು ಪ್ರಿಂಟ್ ತೆಗೆಯಲು, ಹೆಚ್ಚು ಸ್ಮಾರ್ಟರ್ ಮತ್ತು ಕೈಗೆಟುಕುವ ದರದಲ್ಲಿ ಪ್ರಿಂಟಿಂಗ್ ಅನುಭವವನ್ನು ಬಯಸುವವರಿಗೆಂದೇ ವಿನ್ಯಾಸಗೊಳಿಸಲಾಗಿದೆ” ಎಂದು ಅವರು ಹೇಳಿದರು.

 

ಸ್ಮಾರ್ಟ್ ಅನುಭವ: ಅತ್ಯುತ್ತಮ ದರ್ಜೆಯ ಎಚ್ ಪಿ ಸ್ಮಾರ್ಟ್ ಅಪ್ಲಿಕೇಶನ್ ದೈನಂದಿನ ಪ್ರಿಂಟ್, ಸ್ಕ್ಯಾನ್, ಜೆರಾಕ್ಸ್ ಮತ್ತು ಫ್ಯಾಕ್ಸ್ ಕಾರ್ಯಚಟುವಟಿಕೆಗಳನ್ನು ನಡೆಸಲು ಸೂಕ್ತ ಮಾರ್ಗದರ್ಶನ ನೀಡುವ ಬಟನ್ ಗಳನ್ನು ಹೊಂದಿದೆ.

ಐಡಿಗಳನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ ಮತ್ತು ಐಡಿ ಕಾಪಿ ಬಟನ್ ನೊಂದಿಗೆ ಪ್ರಿಂಟ್ ಅನ್ನು ನೀಡುತ್ತದೆ.

ಸೆಲ್ಫ್ ಹೀಲಿಂಗ್ ವೈಫೈ ಇದೆ ಮತ್ತು ಸ್ಮಾರ್ಟ್ ಆ್ಯಪ್ ಮತ್ತು ಸ್ಮಾರ್ಟ್ ಅಡ್ವಾನ್ಸ್ ನೊಂದಿಗೆ ಅತ್ಯುತ್ತಮ ಮೊಬಿಲಿಟಿಯನ್ನು ನೀಡುತ್ತದೆ. ಈ ಎರಡು ವೈಶಿಷ್ಟ್ಯತೆಗಳಿಂದಾಗಿ ಅತ್ಯಂತ ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾದ ಸಂಪರ್ಕಗಳನ್ನು ಪಡೆಯುತ್ತದೆ.

ಸೂಕ್ಷ್ಮ ಮಾಹಿತಿಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗುವ HP Wolf Essential Security ಸೌಲಭ್ಯವೂ ಇದರಲ್ಲಿದೆ.

ಕೈಗೆಟುಕುವ ದರ

ಹೆಚ್ಚಿನ ಪ್ರಮಾಣದ ಪ್ರಿಂಟ್ ಗಳ ಅಗತ್ಯತೆಗಳನ್ನು ಪೂರೈಸುವ ದಿಸೆಯಲ್ಲಿ ಈ ಸ್ಮಾರ್ಟ್ ಟ್ಯಾಂಕ್ ಶ್ರೇಣಿಯ ಪ್ರಿಂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಕಲರ್ ಮತ್ತು ಮೋನೋ ಪ್ರಿಂಟಿಂಗ್ ಅನ್ನು ನೀಡುತ್ತದೆ.

ಶೇ.45 ಪೋಸ್ಟ್ ಕನ್ಸೂಮರ್ ರೀಸೈಕಲ್ಡ್ ಕಂಟೆಂಟ್ ಅನ್ನು ಬಳಸಿಕೊಂಡು ಈ ಪ್ರಿಂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ.

EPEAT Silver ಮತ್ತು Energy Star ಪ್ರಮಾಣೀಕರಣವನ್ನು ಪಡೆದುಕೊಂಡಿದೆ.

Energy ಉಳಿತಾಯ ಮಾಡುವ Auto On/Off ತಂತ್ರಜ್ಞಾನವನ್ನು ಒಳಗೊಂಡಿದೆ. ಇದಕ್ಕೆ ಬಳಕೆದಾರರಿಂದ ಯಾವುದೇ ಹೆಚ್ಚು ಪ್ರಯತ್ನಗಳ ಅಗತ್ಯ ಇರುವುದಿಲ್ಲ.

ತ್ಯಾಜ್ಯ ಟ್ಯಾಂಕ್ ಇಲ್ಲ ಮತ್ತು ಸ್ಪಿಲ್ ಫ್ರೀ ಇರುತ್ತದೆ.

ಇಂಕ್ ಮ್ಯಾನೇಜ್ಮೆಂಟ್ ಸುಸಜ್ಜಿತವಾಗಿದೆ. ಇದರಿಂದಾಗಿ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್ ಗಳನ್ನು ಸುಲಭ ಮತ್ತು ಅನುಕೂಲಕರವಾಗಿ ಮ್ಯಾನೇಜ್ ಮಾಡಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

HP Smart Tank 580 ಮಾದರಿ 18848 ರೂ.

HP Smart Tank 520 ಮಾದರಿ 15980 ರೂ.

HP Smart Tank 210 ಮಾದರಿ, 13326 ರೂ.

ಟಾಪ್ ನ್ಯೂಸ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.