Udayavni Special

ಒನ್‌ಪ್ಲಸ್ ಸಿಇ 5ಜಿ: ಮಾರುಕಟ್ಟೆಗೆ ಬಂತು ಕಡಿಮೆ ದರದ ಒನ್‌ಪ್ಲಸ್ ಫೋನು!


Team Udayavani, Jun 11, 2021, 3:40 PM IST

ಒನ್‌ಪ್ಲಸ್ ಸಿಇ 5ಜಿ: ಮಾರುಕಟ್ಟೆಗೆ ಬಂತು ಕಡಿಮೆ ದರದ ಒನ್‌ಪ್ಲಸ್ ಫೋನು!

ಒನ್ ಪ್ಲಸ್ ಫೋನುಗಳೆಂದರೆ ದರ ತುಂಬಾ ಜಾಸ್ತಿ. ಅಷ್ಟು ದರ ಮತ್ತು ಅಷ್ಟೊಂದು ಪ್ರೀಮಿಯಂ ಫೀಚರ್‌ಗಳು ನಮಗೆ ಅಗತ್ಯವಿಲ್ಲ. ಇಪ್ಪತ್ತು ಸಾವಿರದ ಆಸು ಪಾಸಿನಲ್ಲಿ ಅವರು ಫೋನ್ ಬಿಟ್ಟರೆ ಒಳ್ಳೆಯದು ಎಂಬುದು ಅನೇಕರ ಅನಿಸಿಕೆಯಾಗಿತ್ತು. ಗ್ರಾಹಕರ ಇಂಥ ಆಶಯಗಳನ್ನು ಗಮನಿಸಿದ ಒನ್‌ಪ್ಲಸ್ ನಿನ್ನೆ ರಾತ್ರಿ ಭಾರತದಲ್ಲಿ ತನ್ನ ಹೊಸ ಮಿಡ್‌ಲ್ ರೇಂಜ್ ಫೋನನ್ನು ಬಿಡುಗಡೆ ಮಾಡಿದೆ. ಅದುವೇ ಒನ್ ಪ್ಲಸ್ ನೋರ್ಡ್ ಸಿಇ 5ಜಿ.  ಈ ಫೋನ್ ಜೂನ್ 16ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ದರ 22,999 ರೂ. ನಿಂದ ಆರಂಭವಾಗುತ್ತದೆ.

ಇದಕ್ಕೂ ಮೊದಲು ಒನ್‌ಪ್ಲಸ್ ಕೆಲವು ತಿಂಗಳ ಹಿಂದೆ ಒನ್‌ಪ್ಲಸ್ ನೋರ್ಡ್ ಬಿಡುಗಡೆ ಮಾಡಿತ್ತು. ಅದರ ಕುಟುಂಬಕ್ಕೆ ಇದು ಹೊಸ ಸೇರ್ಪಡೆ. ನೋರ್ಡ್ ಸಿಇ ತನ್ನ ವರ್ಗದಲ್ಲಿ ಉತ್ತಮ ಹಾರ್ಡ್‌ವೇರ್, 64 ಮೆಗಾಪಿಕ್ಸಲ್ ತ್ರಿವಳಿ ಕ್ಯಾಮರಾ, ಅಮೋಲೆಡ್ ಪರದೆ, 90 ಹರ್ಟ್‌ಜ್ ಸರಾಗ ಡಿಸ್‌ಪ್ಲೇ, ಈ ವರ್ಗದಲ್ಲಿ ಅತ್ಯುನ್ನತ ಪ್ರೊಸೆಸರ್ ಆದ ಸ್ನಾಪ್‌ಡ್ರಾಗನ್ 750 ಐ 5ಜಿ ಪ್ರೊಸೆಸರ್ ಹೊಂದಿದೆ. ಅಲ್ಲದೇ ಉನ್ನತೀಕರಿಸಿದ ಅತಿ ವೇಗದ 30ಟಿ ಪ್ಲಸ್ ಚಾರ್ಜರ್ ಹೊಂದಿದೆ. ಆಕ್ಸಿಜನ್ 11 ಕಾರ್ಯಾಚರಣೆ ಹೊಂದಿದೆ.

ಈ ದರಪಟ್ಟಿಯಲ್ಲಿ ಗ್ರಾಹಕರಿಗೆ ಗುಣಮಟ್ಟದಲ್ಲಿ ರಾಜಿಯಾಗದೇ, ಉತ್ತಮ ಅನುಭವ ನೀಡುವ ಮೊಬೈಲ್ ನೀಡಬೇಕೆಂಬುದು ನಮ್ಮ ಆಶಯ. ಒನ್ ಪ್ಲಸ್ ನೋರ್ಡ್ ವರ್ಗದ ಸಿಇ 5 ಜಿ ಎಂದಿನಂತೆ ಒನ್‌ಪ್ಲಸ್‌ನ ಗುಣಮಟ್ಟದೊಡನೆ ದಿನನಿತ್ಯ ಉತ್ತಮ ಅನುಭವ ನೀಡುತ್ತದೆ. ಮತ್ತು ನೆವರ್ ಸೆಟ್‌ಲ್ ಎಂಬ ನಮ್ಮ ಧ್ಯೇಯಕ್ಕೆ ಬದ್ಧವಾಗಿದೆ ಎಂದು ಒನ್‌ಪ್ಲಸ್ ಸಂಸ್ಥಾಪಕ ಮತ್ತು ಸಿಇಒ ಪೀಟ್ ಲಾವ್ ಬಿಡುಗಡೆ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ:ಗೇಮಿಂಗ್ ಗೆ ಮೊಬೈಲ್ ಗಿಂತ ಪಿಸಿಯೇ ಬೆಸ್ಟ್: ಸಮೀಕ್ಷೆ

ಒನ್‌ಪ್ಲಸ್ ನೋರ್ಡ್ ಸಿಇ 4500 ಎಂಎಎಚ್ ಬ್ಯಾಟರಿ, ವಾರ್ಪ್ ಚಾಜ್ 30 ಟಿ ಪ್ಲಸ್ ಎಂಬ ತಂತ್ರಜ್ಞಾನ ಹೊಂದಿದ್ದು, ಶೂನ್ಯ ದಿಂದ ಶೇ. 70ರವರೆಗೆ ಅರ್ಧಗಂಟೆಯಲ್ಲಿ ಚಾರ್ಜ್ ಆಗುತ್ತದೆ.

ಇದು ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 750ಜಿ  5ಜಿ ಪ್ರೊಸೆಸರ್ ಹೊಂದಿದ್ದು, ಹಿಂದಿನ ಪ್ರೊಸೆಸರ್‌ಗಿಂತ ಶೇ. 20ರಷ್ಟು ಹೆಚ್ಚು ವೇಗ ಹೊಂದಿದೆ. ಒನ್‌ಪ್ಲಸ್‌ನ ಪ್ರಸಿದ್ಧ ಆಕ್ಸಿಜನ್ ಓಎಸ್ 11 ಆವೃತ್ತಿ ಹೊಂದಿದ್ದು,   ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ ಹೊಂದಿದೆ.

ತ್ರಿವಳಿ ಕ್ಯಾಮರಾ: ಇದು 64 ಮೆ.ಪಿ. ಮುಖ್ಯ ಲೆನ್‌ಸ್, 8 ಮೆ.ಪಿ. ಅಲ್ಟ್ರಾ ವೈಡ್ ಲೆನ್‌ಸ್ ಮತ್ತು 2 ಮೆ.ಪಿ. ಮೋನೋಕೊರೀಮ್ ಸೆನ್ಸರ್ ಹೊಂದಿದೆ. ಸೆಲ್ಫೀಗೆ 16 ಮೆ.ಪಿ. ಕ್ಯಾಮರಾ ಇದೆ.

6.43 ಇಂಚಿನ ಅಮೋಲೆಡ್ ಪರದೆ ಹೊಂದಿದ್ದು, ಫುಲ್‌ಎಚ್‌ಡಿಪ್ಲಸ್ ಹಾಗೂ ಎಚ್‌ಡಿಆರ್ 10ಪ್ಲಸ್ ಸವಲತ್ತು ಇದೆ. 7.9 ಮಿ.ಮೀ. ಮಂದ ಹಾಗೂ 170 ಗ್ರಾಮ್ ತೂಕವಿದೆ. ಒನ್‌ಪ್ಲಸ್ 6ಟಿ ನಂತರ ಇದು ಅತ್ಯಂತ ತೆಳುವಾದ ಫೋನೆಂದು ಕಂಪೆನಿ ಹೇಳಿಕೊಂಡಿದೆ.

ವಿಶೇಷವೆಂದರೆ ಇದಕ್ಕೆ 3.5 ಎಂ.ಎಂ. ಆಡಿಯೋ ಜಾಕ್ ಹಾಕುವ ಸೌಲಭ್ಯ ನೀಡಲಾಗಿದೆ! ಈಗ ಬರುತ್ತಿರುವ ಒನ್ ಪ್ಲಸ್ ಫೋನ್‌ಗಳಲ್ಲಿ 3.5 ಎಂ.ಎಂ. ಆಡಿಯೋ ಜಾಕ್ ಸವಲತ್ತು ಇರಲಿಲ್ಲ. ಒನ್‌ಪ್ಲಸ್‌ನ ಅತ್ಯುನ್ನತ ದರ್ಜೆಯ ಫೋನ್‌ಗಳಿಗೆ ನೀಡುವಂತೆ, ಇದಕ್ಕೂ ಎರಡು ವರ್ಷಗಳ ಕಾಲ ಸಾಪ್‌ಟ್ ವೇರ್ ಅಪ್‌ಡೇಟ್ ಹಾಗೂ ಮೂರು ವರ್ಷಗಳ ಕಾಲ ಸೆಕ್ಯುರಿಟಿ ಅಪ್‌ಡೇಟ್ ನೀಡುವುದಾಗಿ ಕಂಪೆನಿ ತಿಳಿಸಿದೆ.

ಇದರ ದರ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹಕ್ಕೆ 22,999 ರೂ. ಕಪ್ಪು ಬಣ್ಣದಲ್ಲಿ ಲಭ್ಯ.

8 ಜಿಬಿ ರ್ಯಾಮ್ ಮತ್ತು 128 ಜಿಬಿ ಸಂಗ್ರಹ: 24,999 ರೂ. ಇದು ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಲಭ್ಯ.

12 ಜಿಬಿ ರ್ಯಾಮ್ ಮತ್ತು 256 ಜಿಬಿ ಸಂಗ್ರಹ. 27,999 ರೂ.  ಕಪ್ಪು, ನೀಲಿ ಮತ್ತು ಬೆಳ್ಳಿ ಬಣ್ಣದಲ್ಲಿ ಲಭ್ಯ.

ಜೂನ್ 16ರಿಂದ ಅಮೆಜಾನ್, ಒನ್‌ಪ್ಲಸ್.ಇನ್ ನಲ್ಲಿ ಲಭ್ಯ. ಇಂದಿನಿಂದ ಒನ್‌ಪ್ಲಸ್.ಇನ್ ನಲ್ಲಿ ಮುಂಚೆಯೇ ಬುಕಿಂಗ್ ಕೂಡ ಮಾಡಬಹುದಾಗಿದೆ. ಅಮೆಜಾನ್‌ನಲ್ಲಿ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಗೆ 1000 ರೂ. ರಿಯಾಯಿತಿ ದೊರಕಲಿದೆ. ಅಲ್ಲದೇ 6 ತಿಂಗಳ ಕಂತಿನ ಬಡ್ಡಿಯಿಲ್ಲದ ಇಎಂಐ ಸೌಲಭ್ಯ ಕೂಡ ಇದೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.

ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

Cristiano Ronaldo sets another record, becomes first person to reach 300 million followers mark on Instagram

ಇನ್ ಸ್ಟಾಗ್ರಾಮ್ ನಲ್ಲಿ 300ಮಿಲಿಯನ್ ಫಾಲೋವರ್ಸ್ ದಾಟಿದ ಫುಟ್ ಬಾಲ್ ಸ್ಟಾರ್ ಆಟಗಾರ ರೊನಾಲ್ಡೋ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Set up and manage your Pixel Buds right from your Android 6.0+ device with the Google Pixel Buds app.

ಗೂಗಲ್ ಪಿಕ್ಸೆಲ್ಸ್ ಇಯರ್ ಬಡ್ಸ್ – ರಿಯಲ್ ಟೈಮ್ ಟ್ರಾನ್‌ ಸ್ಲೇಶನ್

joker malware in android mobile

“ಜೋಕರ್’ ಮೂಲಕ ಡೇಟಾ, ಹಣ ಕಳವು!

syska sw200 smart watch

ಸಿಸ್ಕಾದಿಂದ ಅಗ್ಗದ ದರದ ಹಲವು ವೈಶಿಷ್ಟ್ಯಗಳ ಸ್ಮಾರ್ಟ್ ವಾಚ್‍

ಮೈಕ್ರೋಸಾಫ್ಟ್ ಟೀಮ್ಸ್ ಈಗ ಕನ್ನಡದಲ್ಲಿಯೂ ಲಭ್ಯ: ಈಗ ವೈಯಕ್ತಿಕ ವೈಶಿಷ್ಟ್ಯಗಳು ಉಚಿತ

ಮೈಕ್ರೋಸಾಫ್ಟ್ ಟೀಮ್ಸ್ ಈಗ ಕನ್ನಡದಲ್ಲಿಯೂ ಲಭ್ಯ: ಈಗ ವೈಯಕ್ತಿಕ ವೈಶಿಷ್ಟ್ಯಗಳು ಉಚಿತ

T VS Excel

ದಿನಕ್ಕೆ 49 ರೂ. ಪಾವತಿಸಿ ಟಿ ವಿಎಸ್‌ ಎಕ್ಸೆಲ್‌ ಖರೀದಿಸಿ

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

20-17

ಯುವ ಸಮೂಹಕ್ಕೆ ಪರಿಸರ ರಕ್ಷಣೆ ಅರಿವು ಮೂಡಿಸಿ

20-16

ತೌಕ್ತೆ ಚಂಡಮಾರುತ ಹಾನಿ ವರದಿ ಕೇಂದ್ರಕ್ಕೆ ಸಲ್ಲಿಕೆ

hasana news

ತುರ್ತು ವಿಧಾನಸಭೆ ಅಧಿವೇಶನ ಕರೆಯಿರಿ

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

20-15

ಮಳೆನಾಡಲ್ಲಿ ಜಲ ನರ್ತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.