ಸಂಗೀತ ಆಲಿಸಲು ಉತ್ತಮ ಆಯ್ಕೆ ಒನ್‍ಪ್ಲಸ್‍ ಬಡ್ಸ್ ಪ್ರೊ: ಏನಿದರ ವಿಶೇಷತೆ? ಬೆಲೆ ಎಷ್ಟು?


Team Udayavani, Nov 26, 2021, 11:06 AM IST

oneplus buds pro

ಮೊಬೈಲ್‍ ಫೋನ್‍ ಸಂಬಂಧಿತ ಗ್ಯಾಜೆಟ್‍ ಗಳಲ್ಲಿ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವುದು ಟ್ರೂ ವೈರ್ ಲೆಸ್‍ ಇಯರ್ ಬಡ್‍ಗಳು. ಕೆಲವು ವರ್ಷಗಳ ಹಿಂದೆ ವೈರ್ ಇರುವ, ಮೊಬೈಲ್‍ ಫೋನ್‍ ನ 3.5 ಎಂ.ಎಂ. ಪೋರ್ಟ್ ಗೆ ಅಳವಡಿಸುವ ಇಯರ್ ಫೋನ್‍ಗಳು ಜನಪ್ರಿಯವಾಗಿದ್ದವು. ಅದಾದ ಬಳಿಕ ಎರಡು ಇಯರ್ ಬಡ್‍ ಅನ್ನು ಸಂಪರ್ಕಿಸಲು ಮಾತ್ರ ವೈರ್ ಇದ್ದು, ಮೊಬೈಲ್‍ ಗೆ ಅಳವಡಿಸದೇ ಬ್ಲೂ ಟೂತ್‍ ಮೂಲಕ ಬಳಸುವ ವೈರ್ ಲೆಸ್‍ ಇಯರ್ ಫೋನ್‍ ಗಳು ಜನಪ್ರಿಯವಾಗಿದ್ದವು. ಈಗ ಯಾವುದೇ ವೈರ್ ಇಲ್ಲದ, ಎರಡು ಕಿವಿಗಳಲ್ಲಿ ಮಾತ್ರ ಸಿಕ್ಕಿಸುವ ಟ್ರೂ ವೈರ್ ಲೆಸ್‍ ಇಯರ್ ಬಡ್‍ ಗಳು (ಟಿಡಬ್ಲೂಎಸ್‍) ಜನಪ್ರಿಯವಾಗಿವೆ.

ಕೇವಲ ಒಂದು ಇಂಚು ಉದ್ದ ಸಹ ಇಲ್ಲದ ಈ ಟ್ರೂ ವೈರ್ ಲೆಸ್‍ ಇಯರ್ ಬಡ್‍ ಗಳಲ್ಲಿ ಇಂಥ ಉನ್ನತ ಮಟ್ಟದ ಸಂಗೀತ, ಹಾಡು ಹೇಗೆ ಮೂಡಿ ಬರುತ್ತದೆ ಎಂದು ಅಚ್ಚರಿಯಾಗುತ್ತದೆ.

ಕೇವಲ ಸಂಗೀತ ಆಲಿಕೆಗೆ ಮಾತ್ರವಲ್ಲ, ಫೋನ್‍ ಅನ್ನು ಕಿವಿಯಲ್ಲಿಟ್ಟುಕೊಳ್ಳದೇ ನಿರಾಯಾಸವಾಗಿ ಮಾತುಕತೆ ನಡೆಸಲು ಇಯರ್ ಬಡ್‍ ಗಳು ಈಗ ಹೆಚ್ಚು ಬಳಕೆಯಾಗುತ್ತಿವೆ. ಒಂದಷ್ಟ ದಿನ ಟಿಡಬ್ಲುಎಸ್‍ ಮೂಲಕ ಮಾತನಾಡಲು ಅಭ್ಯಾಸವಾಗಿ ಹೋದರೆ, ಅದಿಲ್ಲದೇ ಫೋನಿನಲ್ಲಿ ಮಾತನಾಡಲು ಸಾಧ್ಯವಿಲ್ಲ ಎಂಬಂತಾಗುತ್ತದೆ!

ಈಗ ಪ್ರಖ್ಯಾತ ಬ್ರಾಂಡ್‍ ಗಳೆಲ್ಲವೂ ಟಿಡಬ್ಲೂಎಸ್‍ ಗಳನ್ನು ಮಾರುಕಟ್ಟೆಗೆ ಹೊರತರುತ್ತಿವೆ. ಒನ್‍ ಪ್ಲಸ್‍ ಕೂಡ ಮೊದಲು ಆರಂಭಿಕ ದರ ಪಟ್ಟಿಯಲ್ಲಿ ಎರಡು ಟಿಡಬ್ಲುಎಸ್‍ ಗಳನ್ನು ಹೊರತಂದಿತ್ತು. ಈಗ ಅದು ಮಾರುಕಟ್ಟೆಗೆ ತಂದು ಬಹಳ ಜನಪ್ರಿಯತೆ ಗಳಿಸಿರುವ ಇಯರ್ ಬಡ್‍ ಎಂದರೆ, ಒನ್‍ ಪ್ಲಸ್‍ ಬಡ್ಸ್ ಪ್ರೊ. ಇದರ ದರ 9,990 ರೂ.

ವಿನ್ಯಾಸ: ಈ ಇಯರ್ ಬಡ್‍ ಗಳ ಯುಗಳ ತಲಾ 4.35 ಗ್ರಾಂ ತೂಕ ಇದೆ. 4.35 ಗ್ರಾಂ ಅಂದರೆ ಇದನ್ನು ಕಿವಿಯೊಳಗೆ ಹಾಕಿಕೊಂಡರೆ ಅದರ ಇರವೇ ನಮಗೆ ಗೊತ್ತಾಗದು ಅಷ್ಟೊಂದು ಹಗುರ! ಬಡ್ಸ್ ನ ವಿನ್ಯಾಸ ನೋಡಿದ ತಕ್ಷಣ ಇದೊಂದು ಪ್ರೀಮಿಯಂ ಗುಣಮಟ್ಟದ್ದು ಎಂಬುದು ಅರಿವಾಗುತ್ತದೆ. ಬಡ್ಸ್ ನ ಸ್ಪೀಕರ್ ಇರುವ ದುಂಡಾದ ಜಾಗದಲ್ಲಿ ಹೊಳಪಿಲ್ಲದ ವಿನ್ಯಾಸವನ್ನೂ, ಸ್ಪೀಕರಿನಿಂದ ಕೆಳಗೆ ಇರುವ ಕಡ್ಡಿ (ಹಿಡಿಕೆ)ಗೆ ಹೊಳಪಿನ ವಿನ್ಯಾಸವನ್ನೂ ಮಾಡಲಾಗಿದೆ. ಇದು ಬಡ್ಸ್ ನ ಸೌಂದರ್ಯ ಹೆಚ್ಚಿಸಿದೆ. ಕಿವಿಯೊಳಗೆ ಅತ್ಯಂತ ಕರಾರುವಾಕ್ಕಾಗಿ ಕೂರುತ್ತದೆ. ನಾಲ್ಕು ವಿವಿಧ ಅಳತೆಯ ಇಯರ್ ಟಿಪ್ ಗಳನ್ನು ನೀಡಲಾಗಿದೆ. ನಿಮ್ಮ ಕಿವಿಯೊಳಗೆ ಯಾವುದು ಸರಿಯಾಗಿ ಕೂರುತ್ತದೋ ಅದನ್ನು ಬಡ್ ಗೆ ಅಳವಡಿಸಿಕೊಳ್ಳಬಹುದು. ನಿಮ್ಮ ಕಿವಿಗೆ ಹೊಂದುವ ಟಿಪ್‍ ಹಾಕಿಕೊಂಡು, ಬಡ್‍ ಗಳನ್ನು ಕಿವಿಯೊಳಗೆ ಇಟ್ಟರೆ, ನೀವು ವೇಗವಾಗಿ ಕುತ್ತಿಗೆ ಅಲುಗಾಡಿಸಿದರೂ, ನಡೆದರೂ, ಕುಣಿದರೂ, ಬಡ್‍ ಗಳು ಕಿವಿಯಿಂದ ಉದುರಿ ಬೀಳುವುದಿಲ್ಲ. ಅಷ್ಟೊಂದು ಫಿಟ್‍ ಆಗಿ ಕೂರುತ್ತವೆ. ಬಡ್‍ ಗಳ ಮೇಲೆ ಎಲ್ಲೂ ಒನ್‍ ಪ್ಲಸ್‍ ಲೋಗೋ ಇಲ್ಲದಿರುವುದು ಆಶ್ಚರ್ಯಕರ. ಈ ಇಯರ್ ಬಡ್‍ ಗಳು ಐಪಿ 55 ರೇಟೆಡ್‍ ಹೊಂದಿವೆ. ಅಂದರೆ ಧೂಳು ಮತ್ತು ನೀರು ನಿರೋಧಕ ಸಾಮರ್ಥ್ಯ ಹೊಂದಿವೆ.

ಬಡ್‍ ಗಳ ಚಾರ್ಜಿಂಗ್‍ ಕೇಸ್‍ 52 ಗ್ರಾಂ. ತೂಕವಿದೆ. ಅದನ್ನು ಜೇಬಿನಲ್ಲಿಟ್ಟುಕೊಂಡರೂ ದಪ್ಪ ಕಾಣದಂತೆ ಚಪ್ಪಟೆ ಆಕಾರದಲ್ಲಿ ವಿನ್ಯಾಸ ಮಾಡಲಾಗಿದೆ. ಅದರ ವಿನ್ಯಾಸವೂ ಬಹಳ ಪ್ರೀಮಿಯಂ ಆಗಿದೆ. ಈ ಚಾರ್ಜಿಂಗ್‍ ಕೇಸ್‍ ವೈರ್ ಲೆಸ್‍ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಯುಎಸ್‍ಬಿ ಟೈಪಿ ಸಿ ಪೋರ್ಟ್ ಹೊಂದಿರುವ ಈ ಚಾರ್ಜಿಂಗ್‍ ಕೇಸ್‍, ಟೈಪ್‍ ಸಿ ಕೇವಲ್‍ ಮೂಲಕ ಚಾರ್ಜ್ ಆಗುತ್ತದೆ. ಮಾತ್ರವಲ್ಲ, ವೈರ್ ಲೆಸ್‍ ಚಾರ್ಜರ್ ಮೇಲೆ ಇಟ್ಟರೂ ಬ್ಯಾಟರಿ ಚಾರ್ಜ್ ಆಗುತ್ತದೆ. ಕೇಸ್‍ 520 ಎಂಎಎಚ್‍ ಬ್ಯಾಟರಿ ಹೊಂದಿದೆ.

ಸುಲಭ ಪೇರಿಂಗ್‍: ಈ ಇಯರ್ ಬಡ್‍ ಗಳನ್ನು ಬಳಸುವುದು ಪೇರ್ ಮಾಡುವುದು ಬಹಳ ಸುಲಭ. ನಿಮ್ಮ ಮೊಬೈಲ್‍ ನಲ್ಲಿ ಬ್ಲೂಟೂತ್ ಆನ್‍ ಮಾಡಿ, ಚಾರ್ಜಿಂಗ್‍ ಕೇಸ್‍ ಓಪನ್‍ ಮಾಡಿದ ತಕ್ಷಣ ಬ್ಲೂಟೂತ್‍ನಲ್ಲಿ ಒನ್‍ ಪ್ಲಸ್‍ ಇಯರ್ ಬಡ್ಸ್ ಪ್ರೊ ಎಂದು ಮೊಬೈಲ್‍ ತೋರಿಸುತ್ತದೆ. ನೀವು ಅದನ್ನು ಡನ್‍ ಕೊಟ್ಟರೆ ಆಯಿತು. ನಿಮ್ಮ ಇಯರ್ ಬಡ್‍ ಗಳು ಪೇರ್ ಆಗುತ್ತವೆ. ಒನ್‍ ಪ್ಲಸ್‍ ಫೋನ್‍ ಗಳಲ್ಲಿ ಬ್ಲೂಟೂತ್‍ ಸೆಟಿಂಗ್‍ಗೆ ಹೋದರೆ, ಅಲ್ಲಿ ಬಡ್ಸ್ ಗೆ ವಿವಿಧ ಸೆಟಿಂಗ್‍ ಗಳು ದೊರಕುತ್ತವೆ.

ಇಯರ್ ಬಡ್‍ ಫಿಟ್‍ ಟೆಸ್ಟ್: ಎರಡೂ ಇಯರ್ ಬಡ್‍ ಗಳನ್ನು ಕಿವಿಯೊಳಗೆ ಹಾಕಿಕೊಂಡು ಪ್ಲೇ ಆಯ್ಕೆಯನ್ನು ಒತ್ತಿದರೆ ಮೆಲುವಾದ ಸಂಗೀತ ಬಂದು ನೀವು ಬಡ್‍ ಅನ್ನು ಕಿವಿಯೊಳಗೆ ಸರಿಯಾಗಿ ಹಾಕಿದ್ದೀರೋ ಇಲ್ಲವೋ ಎಂದು ಪರೀಕ್ಷಿಸುತ್ತದೆ. ಒಂದು ಬಡ್ ಸರಿಯಾಗಿ ಕುಳಿತಿಲ್ಲದಿದ್ದರೆ, ಅದನ್ನು ಸರಿಯಾಗಿ ಕೂರಿಸಿ ಅಥವಾ ಬೇರೆ ಟಿಪ್‍ ಹಾಕಿಕೊಳ್ಳಿ ಎಂಬ ಸಂದೇಶ ಫೋನಿನಲ್ಲಿ ಮೂಡುತ್ತದೆ. ಒನ್‍ ಪ್ಲಸ್‍ ಹೊರತುಪಡಿಸಿ ಬೇರೆ ಫೋನ್‍ ಉಳ್ಳವರು ಹೇ ಮೆಲೋಡಿ ಎಂಬ ಆಪ್‍ ಹಾಕಿಕೊಂಡರೆ ಈ ಸೆಟಿಂಗ್ ಗಳು ದೊರಕುತ್ತವೆ.

ಪರ್ಸನಲೈಸ್ಡ್ ಸೌಂಡ್‍ ಬೂಸ್ಟ್:  ಈ ಆಯ್ಕೆಯನ್ನು ಒತ್ತಿದಾಗ ನಿಮ್ಮ ಎಡ ಮತ್ತು ಬಲ ಕಿವಿಗಳಿಗೆ ಯಾವ ಪ್ರಮಾಣದ ಆಲಿಸುವಿಕೆ ಸಾಮರ್ಥ್ಯ ಇದೆ ಎಂದು ಬೀಪ್‍ ನ ಮೂಲಕ ಪರೀಕ್ಷಿಸಿ, ಅದಕ್ಕೆ ಅನುಗುಣವಾಗಿ ಎರಡೂ ಕಿವಿಗಳಲ್ಲಿ ಸಂಗೀತ ಆಲಿಸುವಿಕೆ ಸಮಾನ ಪ್ರಮಾಣದಲ್ಲಿರುವಂತೆ ಹೊಂದಾಣಿಕೆ ಮಾಡುತ್ತದೆ. ಇದೊಂದು ಉತ್ತಮ ಫೀಚರ್ ಆಗಿದ್ದು, ಒಂದು ಕಿವಿಯಲ್ಲಿ ಜಾಸ್ತಿ ಕೇಳಿಸುವಿಕೆ ಸಾಮರ್ಥ್ಯ ಇದ್ದು, ಇನ್ನೊಂದು ಸ್ವಲ್ಪ ಕಡಿಮೆ ಕೇಳಿಸುವಿಕೆ ಇರುವವರಿಗೆ ಎರಡೂ ಕಿವಿಗಳಿಗೆ ಸಮಾನ ವ್ಯಾಲ್ಯೂಮ್‍ನಲ್ಲಿ ಸಂಗೀತ ಕೇಳಿಸಲು ಸಹಕಾರಿಯಾಗಿದೆ. ಇಯರ್ ಬಡ್‍ ಅನ್ನು ಕಿವಿಯಿಂದ ತೆಗೆದಾಗ ಸಂಗೀತ ನಿಲ್ಲುವ ಆಯ್ಕೆಯಿದೆ.

ಪಿಂಚ್‍ ಕಂಟ್ರೋಲ್‍: ಕೆಲವೊಂದು ಇಯರ್ ಬಡ್‍ ಗಳಲ್ಲಿ ಬಡ್‍ಗಳ ಮೇಲ್ಭಾಗದಲ್ಲಿ ಸ್ಪರ್ಶ ಮಾಡಿದರೆ ಪ್ಲೇ, ಪಾಸ್‍, ಕರೆ ಸ್ವೀಕರಿಸುವಿಕೆ, ಕರೆ ಕಡಿತಗೊಳಿಸುವಿಕೆ ಮಾಡಬಹುದು. ಈ ಒನ್‍ಪ್ಲಸ್‍ ಬಡ್ಸ್ ಪ್ರೊ ದಲ್ಲಿ ಬಡ್ಸ್ ನ ಕಡ್ಡಿಯ ತುದಿಭಾಗವನ್ನು ಎರಡು ಬೆರಳುಗಳಿಂದ ಪಿಂಚ್‍ ಮಾಡುವ ಮೂಲಕ ಕಾರ್ಯಾಚರಿಸಬಹುದು. ಬಡ್‍ ಗಳ ಕಡ್ಡಿಯ ತುದಿಯನ್ನು ಹೆಬ್ಬೆರಳು ಮತ್ತು ತೋರುಬೆರಳಿನಿಂದ ಮುಟ್ಟಿದಾಗ ವಿವಿಧ ರೀತಿಯ ಕಾರ್ಯಾಚರಿಸುತ್ತದೆ. ಒಂದು ಬಾರಿ ಮುಟ್ಟಿದರೆ ಹಾಡು ಪ್ಲೇ ಅಥವಾ ಪಾಸ್‍ ಆಗುತ್ತದೆ. ಕಡ್ಡಿಯನ್ನು ಎರಡು ಬಾರಿ ಪಿಂಚ್‍ ಮಾಡಿದರೆ ಮುಂದಿನ ಹಾಡು ಬರುತ್ತದೆ. ಮೂರು ಬಾರಿ ಪಿಂಚ್‍ ಮಾಡಿದರೆ ಹಿಂದಿನ ಹಾಡು ಬರುತ್ತದೆ. ಇದು ಸಂಗೀತ ಆಲಿಸುವಿಕೆಗಾಯಿತು.

ಇನ್ನು ಇಯರ್ ಬಡ್‍ ಹಾಕಿದ್ದಾಗ ನಿಮಗೆ ಕರೆ ಬಂದಾಗ, ಇಯರ್ ಬಡ್‍ನ ಕಡ್ಡಿಯನ್ನು ಒಮ್ಮೆ ಪಿಂಚ್‍ ಮಾಡಿದರೆ ಕರೆ ಸ್ವೀಕರಿಸಬಹುದು. ಕರೆ ಮುಗಿದಾಗ ಒಮ್ಮೆ ಪಿಂಚ್‍ ಮಾಡಿದರೆ ಕರೆ ಕಡಿತಗೊಳ್ಳುತ್ತದೆ. ಎರಡು ಬಾರಿ ಪಿಂಚ್‍ ಮಾಡಿದರೆ ನಿಮಗೆ ಬಂದ ಕರೆಯನ್ನು ತಿರಸ್ಕರಿಸಬಹುದು.

ಕಾರ್ಯಾಚರಣೆ: ಇದು ಬ್ಲೂಟೂತ್‍ 5.2 ಆವೃತ್ತಿ ಹೊಂದಿದೆ. ಎಸ್‍ಬಿಸಿ, ಎಎಸಿ ಮತ್ತು ಎಲ್‍ಎಚ್‍ಡಿಸಿ ಬ್ಲೂಟೂತ್‍ ಕೋಡೆಕ್ ಹೊಂದಿದೆ. ಸ್ಪೀಕರ್ ಗಳು 11 ಮಿ.ಮೀ. ಡ್ರೈವರ್ ಹೊಂದಿದೆ. ಕರೆಯ ಗುಣಮಟ್ಟಕ್ಕಾಗಿ ಒಂದೊಂದು ಬಡ್ಸ್ ನಲ್ಲೂ ತಲಾ ಮೂರು ಮೈಕ್ರೋಫೋನ್‍ ಗಳಿವೆ. ಇವು ಕರೆ ಮಾಡುವಾಗ ಅತ್ತಲಿನವರಿಗೆ ಪರಿಸರದ ಶಬ್ದ ಕೇಳದಂತೆ ಆಕ್ಟೀವ್‍ ನಾಯ್ಸ್ ಕ್ಯಾನ್ಸಲೇಷನ್‍ ಮೈಕ್‍ ಸೌಲಭ್ಯ ಹೊಂದಿವೆ. ಸಾಮಾನ್ಯವಾಗಿ ಇಯರ್ ಬಡ್‍ ಗಳನ್ನು ಬಳಸಿ ಕರೆ ಮಾಡಿದಾಗ ಅತ್ತಲಿನವರು ದೂರು ಏನೆಂದರೆ ನಿನ್ನ ವಾಯ್ಸ್ ಗಿಂತ ಅಕ್ಕಪಕ್ಕದ ಶಬ್ದಗಳೇ ಜಾಸ್ತಿ ಕೇಳುತ್ತಿವೆ ಎಂಬುದು. ಈ ಇಯರ್ ಬಡ್‍ ನಲ್ಲಿ ಮೂರು ಎಎನ್‍ಸಿ ಮೈಕ್‍ ಇರುವುದರಿಂದ   ಈ ಸಮಸ್ಯೆ ಇಲ್ಲ. ಆ ಕಡೆಯಿಂದ ಮಾತನಾಡುವವರ ಧ್ವನಿ ಕೂಡ ಇಯರ್ ಬಡ್‍ ನಲ್ಲಿ ಉತ್ತಮವಾಗಿ ಕೇಳಿಬರುತ್ತದೆ.

ಪವರ್ ಫುಲ್‍ ಬಾಸ್‍: ಇಯರ್ ಫೋನ್‍ ಇರಲಿ, ಟಿಡಬ್ಲೂಎಸ್‍ ಇರಲಿ ಅನೇಕ ಸಂಗೀತ ಪ್ರಿಯರು ಕೇಳುವುದು ಇದರಲ್ಲಿ ಬಾಸ್‍ ಹೇಗಿದೆ? ಬಾಸ್ ಚೆನ್ನಾಗಿರದಿದ್ದರೆ ಇಯರ್ ಬಡ್‍ ಗಳು ಬೋರ್ ಎನಿಸುತ್ತವೆ. ಆದರೆ ಒನ್‍ಪ್ಲಸ್‍ ಬಡ್ಸ್ ಪ್ರೊ ನಲ್ಲಿ ಸಂಗೀತ ಆಲಿಸಿದಾಕ್ಷಣ ಅದರ ಬಾಸ್‍ ಗುಣಮಟ್ಟ ದಂಗುಬಡಿಸುತ್ತದೆ! ಇಷ್ಟು ಪುಟ್ಟ ಬಡ್ಸ್ ನಲ್ಲಿ ಈ ರೀತಿಯ ಬಾಸ್‍ ಇದೆಯೇ ಅನಿಸುತ್ತದೆ. ಅಲ್ಲದೇ ಅದಕ್ಕನುಗುಣವಾಗಿ, ಟ್ರೆಬಲ್‍, ವೋಕಲ್‍ ಕೂಡ ದನಿಗೂಡಿಸಿವೆ! ಹಾಡುಗಳನ್ನು, ಉತ್ತಮ ಸಂಗೀತವನ್ನು ನಿಮ್ಮಲ್ಲಿರುವ ಉಳಿದ ಬಡ್‍ ಗಳಿಗಿಂತಲೂ ಇದರಲ್ಲೇ ಕೇಳಬೇಕು ಎನಿಸುತ್ತದೆ. ನಾಯ್ಸ್ ಕ್ಯಾನ್ಸಲೇಷನ್ ಆಯ್ಕೆಯಿದ್ದು, ನಿಮಗೆ ಸಂಗೀತ ಆಲಿಸುವಿಕೆಯ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಜೆನ್‍ ಮೋಡ್‍ ಏರ್: ಇದರಲ್ಲಿ ಜೆನ್‍ ಮೋಡ್‍ ಎಂಬ ಇನ್ನೊಂದು ಆಯ್ಕೆಯಿದೆ. ಅದನ್ನು ಒತ್ತಿದಾಗ ಮೇಡಿಟೇಶನ್, ವಾರ್ಮ್ ಸನ್‍ರೈಸ್‍ ಮತ್ತಿತರ ಐದು ರೀತಿಯ ಪ್ರಶಾಂತವಾದ ಸಂಗೀತ, ಹಕ್ಕಿಗಳ ಚಿಲಿಪಿಲಿ ಇತ್ಯಾದಿ ಶಬ್ದಗಳಿವೆ. ಹಾಡು ಕೇಳಿ ಬೇಸರವಾದಾಗ, ಅಥವಾ ನಿಮ್ಮ ಕೆಲಸದ ಒತ್ತಡದಿಂದ ಸ್ವಲ್ಪ ಶಾಂತಿ ಬೇಕೆನಿದಾಗ ಜೆನ್‍ ಮೋಡ್‍ ಏರ್ ಆಯ್ಕೆ ಮಾಡಿ ಕಣ್ಣು ಮುಚ್ಚಿ ಆಲಿಸಬಹುದು.

ಬ್ಯಾಟರಿ ಬಾಳಿಕೆ: ಇಯರ್ ಬಡ್‍ ಗಳೊಳಗೆ 40 ಎಂಎಎಚ್‍ ಬ್ಯಾಟರಿ ಇದೆ. ಕೇಸ್‍ ನಿಂದ ಬಡ್‍ ಹೊರತೆಗೆದು ಸುಮಾರು 5 ತಾಸುಗಳ ಕಾಲ ಸಂಗೀತ ಆಲಿಸಬಹುದು. ಸುಮಾರು 3.5 ಗಂಟೆಗಳ ಕಾಲ ಕರೆ ಮಾಡಲು ಬಳಸಬಹುದು. ಕೇಸ್‍ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 25 ರಿಂದ 30 ಗಂಟೆಗಳ ಕಾಲ ಬಡ್ ಗಳಿಗೆ ಬ್ಯಾಟರಿ ಒದಗುತ್ತದೆ. ಅಂದರೆ ಒಮ್ಮೆ ಕೇಸ್ ಚಾರ್ಜ್ ಮಾಡಿಕೊಂಡರೆ, ಕರೆ ಮತ್ತು ಸಂಗೀತ ಆಲಿಸಿದ ಬಡ್ ಗಳನ್ನು ಅದರೊಳಗೆ ಮೂರರಿಂದ ನಾಲ್ಕು ಬಾರಿ ಇಟ್ಟು ಚಾರ್ಜ್ ಮಾಡಬಹುದು.

ಉತ್ತಮ ಬಾಸ್‍ ಉಳ್ಳ, ಗುಣಮಟ್ಟದ ಸಂಗೀತ ಆಲಿಸಬೇಕೆನ್ನುವ ಹಾಗೂ ಕರೆ ಮಾಡಿದಾಗ ಮಾತನಾಡಲು ಉತ್ತಮ ಇಯರ್ ಬಡ್‍ ಬೇಕೆನ್ನುವವರಿಗೆ ಒನ್‍ ಪ್ಲಸ್‍ ಬಡ್ಸ್ ಪ್ರೊ ಒಂದು ಅತ್ಯುತ್ತಮ ಆಯ್ಕೆ.

ಕೆ.ಎಸ್.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1rqr

ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡುವುದು ಬೇಡ ಎಂದಿದ್ದರು: ಹೆಚ್ ಡಿಡಿ

1dfs

ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ : ಯಡಿಯೂರಪ್ಪ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

siddu 2

ರಮೇಶ ಜಾರಕಿಹೊಳಿ ಈ ಬಾರಿ ಬಿಜೆಪಿ ಸೋಲಿಸಿದರೆ ಅಚ್ಚರಿಯಿಲ್ಲ: ಸಿದ್ದರಾಮಯ್ಯ

1-fdfd.

ದೂದ್ ಸಾಗರ್ ನಲ್ಲಿ ಕೋವಿಡ್ ಇದೆಯೆಂದು ಸುಳ್ಳು ಪ್ರಚಾರ; ಸ್ಪಷ್ಟನೆ

17banana

ಶಾಲೆಗಳಲ್ಲಿ ಮೊಟ್ಟೆ ವಿತರಿಸದಂತೆ ಬಸವ ಧರ್ಮ ಮಠಾಧೀಶರ ಹೇಳಿಕೆಗೆ ಖಂಡನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯುತ್‌ ಚಾಲಿತ ಬೌನ್ಸ್‌ ಇನ್ಫಿನಿಟಿ ಇ-1 ಮಾರುಕಟ್ಟೆಗೆ ಬಿಡುಗಡೆ

ವಿದ್ಯುತ್‌ ಚಾಲಿತ ಬೌನ್ಸ್‌ ಇನ್ಫಿನಿಟಿ ಇ-1 ಮಾರುಕಟ್ಟೆಗೆ ಬಿಡುಗಡೆ

Artium Academy – Music learning

ಆರ್ಟಿಯಮ್‍ ನಿಂದ ದಕ್ಷಿಣ ಭಾರತೀಯ ಸಂಗೀತ ಕೋರ್ಸ್

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

ನಥಿಂಗ್‍ ಇಯರ್ (1) ಹೊಸ ಆವೃತ್ತಿ ಬಿಡುಗಡೆ: ಏನಿದರ ವಿಶೇಷತೆ?

ನಥಿಂಗ್‍ ಇಯರ್ (1) ಹೊಸ ಆವೃತ್ತಿ ಬಿಡುಗಡೆ: ಏನಿದರ ವಿಶೇಷತೆ?

ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ

ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

1rqr

ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡುವುದು ಬೇಡ ಎಂದಿದ್ದರು: ಹೆಚ್ ಡಿಡಿ

1dfs

ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ : ಯಡಿಯೂರಪ್ಪ

accident

ತಿರುಪತಿ: ಅಪಘಾತದಲ್ಲಿ ಮಗು ಸೇರಿ ಐವರು ಯಾತ್ರಾರ್ಥಿಗಳ ದುರ್ಮರಣ

1ffd

ಸೇವೆಗೆ ಸೇರಿದ 3 ತಿಂಗಳಲ್ಲೇ ಮೃತಪಟ್ಟ ಮುದ್ದೇಬಿಹಾಳದ ಸೈನಿಕ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.