ಟ್ವಿಟಾಪತಿ

ಕರ್ನಾಟಕ ಕಂಡಷ್ಟು ರೆಸಾರ್ಟ್‌ ಡ್ರಾಮಾಗಳನ್ನು ಬೇರಾವ ರಾಜ್ಯವೂ ಕಂಡಿರಲಿಕ್ಕಿಲ್ಲ. ಕಳೆದೊಂದು ದಶಕದಲ್ಲಿ ಇಂಥ 14-15 ಘಟನೆಗಳು ನಡೆದಿವೆ. ಇಂದು ರಾಜ್ಯ ರಾಜಕೀಯದಾಟವು 4 ಭಿನ್ನ ರೆಸಾರ್ಟ್‌ಗಳಲ್ಲಿ ನಡೆಯುತ್ತಿದೆ. ರಾಜ್ಯದ ಜನ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯವಿದು.

- ಪೂಜಾ ಪ್ರಸನ್ನ

ನಮ್ಮ ರಾಜ್ಯದಲ್ಲಿ ಹೊಸ ಲಾಭದಾಯಕ ವ್ಯವಹಾರ ಮಾಡಲು ಅವಕಾಶವಿದೆ. ಅದೇನೆಂದರೆ, ದುಡ್ಡು ಜಾಸ್ತಿ ಇರುವವರು ಸಾಧ್ಯವಾದಷ್ಟು ಶಾಸಕರನ್ನು ಕೊಂಡು ಇಟ್ಟುಕೊಳ್ಳವುದು. ಇನ್ನೊಂದು ಪಕ್ಷದಿಂದ ಬೇಡಿಕೆ ಬಂದಾಗ ಒಳ್ಳೆ ಬೆಲೆಗೆ ಮಾರುವುದು.

- ಶ್ರೀಪತಿ ಗೋಗಡಿ

ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಮಿಲಿಂದ್‌ ದೇವೊರಾ ತಮ್ಮ ರಾಜೀನಾಮೆಯನ್ನು ರಾಹುಲ್‌ಗಾಂಧಿಗೆ ಸಲ್ಲಿಸಿದ್ದಾರೆ. ಈಗಾಗಲೇ ರಾಜೀನಾಮೆ ಸಲ್ಲಿಸಿರುವಂಥ ವ್ಯಕ್ತಿಯೊಬ್ಬರಿಗೆ ರಾಜೀನಾಮೆ ಸಲ್ಲಿಸುವುದನ್ನು ಎಲ್ಲಾದರೂ ನೋಡಿದ್ದೀರಾ?

- ಶಾಜಿಯಾ ಇಲ್ಮಿ

ಶಾಸಕರು, ಸಚಿವರೆಲ್ಲ ಈಗ ಜನರ ಪ್ರತಿನಿಧಿಗಳಾಗಿ ಉಳಿದಿಲ್ಲ. ಬದಲಿಗೆ, ಭಾರತದ ಚುನಾವಣಾ ಮಾರುಕಟ್ಟೆಯಲ್ಲಿನ ಸರಕುಗಳಾಗಿದ್ದಾರೆ.

- ನಿರ್ಜರಿ ಸಿನ್ಹಾ

ರಾಜ್ಯದಲ್ಲಿ ನಾಯಕರು ಅಧಿಕಾರಕ್ಕಾಗಿ ಮತ್ತು ಸಚಿವಗಿರಿಗಾಗಿ ಹೊಡೆದಾಡುತ್ತಿದ್ದರೆ, ಇತ್ತ ನಾವು ಅಭಿವೃದ್ಧಿ ಮತ್ತು ಪ್ರಗತಿಗಾಗಿ ಕಾಯುತ್ತಲೇ ಇದ್ದೇವೆ. ●-ನಂದಿನಿ ಬಿ

- ನಂದಿನಿ ಬಿ

ಸಾಮಾನ್ಯ ಜನರು ಅಧಿಕಾರಿಗಳ ಮೇಲೆ ಧ್ವನಿಯೇರಿಸಿ ಮಾತನಾಡಿದರೂ ತಪ್ಪು, ರಾಜಕಾರಣಿಗಳು ಕೆಸರು ಚೆಲ್ಲಿದರೂ ನಡೆಯುತ್ತದೆ.

- ●ಸುಮೇಶ್‌ ಚಾವ್ಡಿಕ್‌

ಪಾಕಿಸ್ತಾನ ತಂಡ ಸೆಮಿಫೈನಲ್‌ ಪ್ರವೇಶಿಸಲು ಈಗಿರುವುದು ಒಂದೇ ಉಪಾಯ. ಮೊದಲು 400 ರನ್‌ ಸ್ಕೋರ್‌ ಮಾಡಬೇಕು. ನಂತರ ಅಲ್ಲಿ 15 ಕೆಜಿ ಹೆರಾಯಿನ್‌ ಇಟ್ಟು, ಬಾಂಗ್ಲಾದೇಶಿ ಆಟಗಾರರು ಅರೆಸ್ಟ್‌ ಆಗುವಂತೆ ನೋಡಿಕೊಳ್ಳಬೇಕು!

- ●ಜಂಗ್‌ಜೂ ಜರ್ನೈಲ್‌

ಚರ್ಚೆಗಳ ಮುಖ್ಯ ಉದ್ದೇಶ, ಜ್ಞಾನದ ಪರಿಧಿಯನ್ನು ವಿಸ್ತರಿಸುವುದಾಗಿರಬೇಕೇ ಹೊರತು, ಗೆಲ್ಲುವುದಲ್ಲ!

- ●ಪೌಲೋ ಕೋಲ್ಹೋ

ಕಾಂಗ್ರೆಸ್‌ ಪರ್ಯಾಯ ಅಧ್ಯಕ್ಷರನ್ನು ಆಯ್ಕೆ ಮಾಡಿದರೆ ರಾಹುಲ್‌ ಗಾಂಧಿಯೇನೂ ಮೂಲೆಗುಂಪಾಗುವುದಿಲ್ಲವಲ್ಲ. ಏಕೆ ಕಾಂಗ್ರೆಸ್‌ಗೆ ಹಿಂಜರಿಕೆ?

- ●ಕಾನನ್‌ ಅನೂಪ್‌

ಸಂದರ್ಶಕ: ನಿನ್ನಲ್ಲಿರುವ ಅದ್ಭುತ ಸಾಮರ್ಥ್ಯ ಯಾವುದು? ಉದ್ಯೋಗಾಕಾಂಕ್ಷಿ: ಮುಂಬೈ ಮಳೆಯಲ್ಲೂ ಸರಿಯಾದ ಸಮಯಕ್ಕೆ ಕಚೇರಿ ತಲುಪುವುದು. ಸಂದರ್ಶಕ: ವಾವ್‌, ಸ್ಯಾಲರಿ ಎಷ್ಟು ಬೇಕು ಕೇಳು.

- ●ಶ್ರುತಿ ಪನ್ಹಾಲ್ಕರ್‌

ರಿಷಭ್‌ ಪಂತ್‌ಗ್ಯಾಕೆ ಈ ಟೀಂನಲ್ಲಿ ಜಾಗ ಸಿಗುತ್ತಿಲ್ಲವೋ ತಿಳಿಯುತ್ತಿಲ್ಲ. ವಿಜಯ್‌ ಶಂಕರ್‌ ತಂಡದಲ್ಲಿ ಏಕಿದ್ದಾರೆ?

- ●ತನುವಾಂಶ್‌ ದತ್‌

ಈಗ ಅವರ ಆಯ್ಕೆಯ ಹಿಂದಿನ ಅಗತ್ಯದ ಅರಿವಾಗಿರಬಹುದು!

- ●ತಲಾಫ್ಯಾನ್ಸ್‌

ಧೋನಿಯ ಬಗ್ಗೆ ಋಣಾತ್ಮಕವಾಗಿ ಮಾತನಾಡುತ್ತಿದ್ದವರಿಗೆಲ್ಲ, ಡಿಮಾನಿಟೈಸೇಷನ್‌ನ ನಂತರ ದೇಶದಲ್ಲಿ ನಡೆದ ಅತಿ ಅಪಾಯಕಾರಿ ಪ್ರಯೋಗವೆಂದರೆ ವಿಜಯ ಶಂಕರ್‌ ಆಯ್ಕೆ!

- ●ಗಬ್ಬರ್‌ ಸಿಂಗ್‌

ಹೈಸ್ಪೀಡ್‌ ನಿರ್ಮಾಣ ಮಾಡುವ ಮೂಲಕ ದಕ್ಷಿಣ ಏಷ್ಯಾದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಜಪಾನ್‌ ಮುಂದಿದೆ. 58.7 ಬಿಲಿಯನ್‌ ಡಾಲರ್‌ ಮೊತ್ತದ ಹನೋಯ್‌ ಮತ್ತು ಸಿಯಗಾನ್‌ ನಡುವಿನ ಹೈಸ್ಪೀಡ್‌ ರೈಲು ಕಾಮಗಾರಿ ಪೂರ್ತಿಯಾಗಿದ್ದೇ ಸಾಧನೆ.

- ●ಬ್ರಹ್ಮ ಚಲಾನಿ

ಶ್ರೀನಗರದಲ್ಲಿ ಈಗ ಮಳೆಯಾಗುತ್ತಿದೆ. ದೇಶದ ಇತರ ಭಾಗಗಳಂತೆ ನಮ್ಮಲ್ಲಿಯೂ ಬಿಸಿಲಿನ ಬೇಗೆಯಿಂದ ತೊಂದರೆ ಉಂಟಾಗಿತ್ತು. ನಿಜಕ್ಕೂ ಈಗ ನೆಮ್ಮದಿ ತಂದಿದೆ.

- ●ಶಾಹಿದ್‌ ಚೌಧರಿ

ಮಹಿಳೆಯರ ಹಾಕಿ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ದೇಶದ ತಂಡ ಗೆದ್ದಿದೆ. ತಂಡದ ಸಾಧನೆ ಅನನ್ಯವಾದದ್ದು. ಅವರಿಗೆ ನನ್ನ ಅಭಿನಂದನೆ.

- ●ನರೇಂದ್ರ ಮೋದಿ

ನಿನ್ನೆ ಹೇಗಿತ್ತು ಎನ್ನುವುದಕ್ಕಿಂತ ಈ ದಿನ ಹೇಗಿರಬೇಕು ಎನ್ನುವುದರತ್ತ ನಮ್ಮ ಗಮನಿವಿರಬೇಕು.

- ●ಟ್ರೂಕೋಟ್ಸ್‌

ಗೂಗಲ್‌ನಲ್ಲಿ ಯೋಗದ ಫೋಟೋ ಹುಡುಕಿದರೆ ಬರೀ ವಿದೇಶಿಯರೇ ಕಾಣಿಸುತ್ತಾರೆ. ಭಾರತೀಯರಿಗೆ ನಮ್ಮ ಪರಂಪರೆಯ ಮೇಲೆ ಎಷ್ಟು ಅಸಡ್ಡೆಯಿದೆ ಎನ್ನುವುದಕ್ಕೆ ಇದು ಸಾಕ್ಷಿ.

- ●ಭಾವನಾ ಆನ್ವಿಕ್‌

ಭಾರತವು ಸೂಪರ್‌ಪವರ್‌ ಆಗಬೇಕೆಂದರೆ, ಮೊದಲು ಶ್ರೀರಾಮ, ಅಲ್ಲಾಹ್‌, ಜೀಸಸ್‌ರನ್ನು ಮಂದಿರ, ಮಸೀದಿ ಮತ್ತು ಚರ್ಚುಗಳ ನಾಲ್ಕು ಗೋಡೆಗಳೊಳಗೆ ಇಟ್ಟುಬಿಡಬೇಕು.

- ●ಅಶೋಕ್‌

ಸಾಮಾನ್ಯ ಜನರು ಹೆಚ್ಚಾಗಿ ಮನರಂಜನೆಯನ್ನು ಬಯಸಿದರೆ, ಅಸಾಮಾನ್ಯರು ಜ್ಞಾನಾರ್ಜನೆಯನ್ನು ಬಯಸುತ್ತಾರೆ.

- ●ರಾಬಿನ್‌ ಶರ್ಮಾ

ಒಂದು ದೇಶ, ಒಂದು ಚುನಾವಣೆಯಂಥ ಮಹತ್ವದ ಚರ್ಚೆಯಲ್ಲಿ ಭಾಗವಹಿಸುವುದಿಲ್ಲವಂತೆ ಮಮತಾ. ಇವರು ನಮ್ಮ ದೇಶದಲ್ಲಿದ್ದಾರೋ ಅಥವಾ ಪ.ಬಂಗಾಲವೇ ಬೇರೆ ದೇಶವೋ?

- ●ಸುನಿಲ್‌ ಕಾರ್ತಿಕಿ

ಬಿಹಾರದಲ್ಲಿ ಮಿದುಳು ಜ್ವರದಿಂದ 100ಕ್ಕೂ ಹೆಚ್ಚು ಮಕ್ಕಳು ಅಸುನೀಗಿದ್ದಾರೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೇ ಕುಸಿದುಹೋಗುತ್ತಿದೆ. ಆದರೆ ಈ ಬಗ್ಗೆ ಯಾವೊಬ್ಬ ನೇತಾರ, ಸೆಲೆಬ್ರಿಟಿ, ಹೈಪ್ರೊಫೈಲ್‌ ನಾಗರಿ ಕರೂ ಟ್ವೀಟ್‌ ಮಾಡಿಲ್ಲ. ಆದರೆ, ಭಾರತವು ಪಾಕಿಸ್ತಾನವನ್ನು ಸೋಲಿಸಿದಾಗ ಇವರೆಲ್ಲರೂ ಪ್ರತಿಕ್ರಿಯಿಸಿದ್ದರು!

- ●ನರೇಂದ್ರನಾಥ್‌

ಭಾರತದ ಸುದ್ದಿ ಮಾಧ್ಯಮಗಳೆಲ್ಲ ಸುದ್ದಿಯ ಅಭಾವ ಎದುರಾದಾಗ ಯೂಟ್ಯೂಬ್‌ ವಿಡಿಯೋಗಳ ಮೊರೆ ಹೋಗುತ್ತವೆ!

- ●ಭಕ್‌ಸಾಲಾ

ಪಾಕಿಸ್ತಾನ ತಂಡ ಅದೆಷ್ಟು ದುರ್ಬಲವಾಗಿದೆಯೆಂದರೆ, ಈಗ ಇಂಡಿಯಾ-ಪಾಕ್‌ ಮ್ಯಾಚ್‌ ಮಜಾ ಕೊಡುತ್ತಲೇ ಇಲ್ಲ.

- ●ಟ್ರಾಲ್‌ಲಾಲಾ

ಕೊನೆಗೂ ಮ್ಯಾಚ್‌ ಮುಗಿಯಿತು. ಪ್ರೀತಿಯ ಪಾಕಿಸ್ತಾನದ ಗೆಳೆಯರೇ, ನೀವು ಈಗಮ್ಯಾಂಚೆಸ್ಟರ್‌ನ ಮಳೆಯೊಂದಿಗೆ ಚಹಾ ಸವಿಯುತ್ತಿರಬಹುದು. ಚಿಂತೆಮಾಡಬೇಡಿ. ಕಪ್‌ ಅನ್ನು ನಮ್ಮ ಹುಡುಗರೇ ಮನೆಗೆ ಒಯ್ಯುತ್ತಾರೆ.

- ●ದಿ ಜನರಲ್ಸ್‌ ಡಾಟರ್‌

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ 300 ಎಸಿ ಸಹಿತ ಗೋಶಾಲೆಗಳನ್ನು ನಿರ್ಮಿಸಲು ಮುಂದಾಗಿದೆ. ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್‌ ಅಧಿಕಾರ ನಡೆಸುತ್ತಿದೆಯಾ?

- ●ಕೃಷಿಕ್‌ ಎ.ವಿ.

ಮಮತಾ ಬ್ಯಾನರ್ಜಿ: ಮೋದಿ ಸರ್ಜನ್‌ಗಳು ಸ್ಟ್ರೈಕ್‌ ಮಾಡುವಂತೆ ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ನಾನು ಡಾಕ್ಟರ್‌ಗಳು ಸ್ಟ್ರೈಕ್‌ ಮಾಡುವಂತೆ ಮಾಡಿದರೆ ಎಲ್ಲರೂ ಟೀಕಿಸುತ್ತಾರೆ. ನಾನು: ಮೇಡಂ ನೀವು ಸರ್ಜಿಕಲ್‌ ಸ್ಟ್ರೈಕ್‌ಅನ್ನು ತಪ್ಪಾಗಿ ಭಾವಿಸಿದ್ದೀರಿ.

- ●ರಮೇಶ್‌ ಶ್ರೀವಾತ್ಸವ್‌

ವೈದ್ಯರು ಒಳ್ಳೆಯವರು, ಆದರೆ ರಾಜಕಾರಣಿಗಳು ಒಳ್ಳೆಯವರಲ್ಲ. ಇದು ತುಂಬಾ ಸರಳ. ಇದನ್ನು ನೀವು ಉಲ್ಟಾ ಭಾವಿಸಿದರೆ, ನಿಮಗೆ ಚಿಕಿತ್ಸೆಯ ಅಗತ್ಯವಿದೆ ಎಂದರ್ಥ.-

- ●ವೀರ್‌ ದಾಸ್‌

ಕನಸಿದ್ದರೆ ಸಾಲದು, ಕನಸನ್ನು ನನಸು ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮತ್ತು ಬದ್ಧತೆ ಮುಖ್ಯ.

- ●ರಾಬಿನ್‌ ಶರ್ಮಾ

ಕ್ರಿಕೆಟ್‌ಗೆ ಮಳೆ ಅಡ್ಡಿಪಡಿಸುತ್ತಿದೆಯೋ, ಮಳೆಗೆ ಕ್ರಿಕೆಟ್‌ ಅಡ್ಡಿಪಡಿಸುತ್ತಿದೆಯೋ ತಿಳಿಯುತ್ತಿಲ್ಲ. ಒಟ್ಟಲ್ಲಿ ಯಾರೂ ಆಟವಾಡದೇ ಪಾಯಿಂಟ್ಸ್‌ ಪಡೆಯುತ್ತಾ ಹೊರಟಿದ್ದಾರೆ!

- ●ಟ್ರಾಲ್‌ಲಾಲಾ

ಯುವರಾಜ್‌ ಸಿಂಗ್‌ ಅವರಿಗೆ ಸೂಕ್ತ ವಿದಾಯ ಸಿಗಲಿಲ್ಲ ಎಂದೇ ಅನಿಸುತ್ತದೆ. ಈ ಬಾರಿ ವಿಶ್ವಕಪ್‌ ಗೆದ್ದರೆ, ಭಾರತ ತಂಡ ಯುವರಾಜ್‌ಗೆ ಅರ್ಪಿಸಲಿ.

- ಕ್ರಿಕೆಟ್‌ಕೀಡಾ

ನೆಮ್ಮದಿಯಿಂದಿರಲು ನಾಲ್ಕು ರೊಟ್ಟಿ, ಎರಡು ಬಟ್ಟೆ, ಒಂದು ಸೂರಪ ಸಾಕು. ಆದರೆ ಕೆಲವರಿಗೆ ನಾಲ್ಕು ಬಂಗಲೆ, 5 ಕಾರು, ಮೂರು ಮನೆಯಿದ್ದರೂ ನೆಮ್ಮದಿಯಿರುವುದಿಲ್ಲ.

- ಅಗಾಥಾ ಮ್ಯಾಲ್ಕಂ

ರಾಧಾ ರವಿ ಅವರನ್ನು ಮತ್ತೆ ಎಐಎಡಿಎಂಕೆ ಸೇರಿಸಿಕೊಳ್ಳುತ್ತದಂತೆ. ಎಂಥಾ ನಾಚಿಕೆಗೇಡಿನ ಬೆಳವಣಿಗೆ ಇದು. ಪಕ್ಷದ ನಾಯಕರಿಗೆ ಮರ್ಯಾದೆ ಇಲ್ಲವೇ?

- ಸಾಯಿಕಿರಣ್‌ ಕಣ್ಣನ್‌

ಯಾವ ಸರ್ಕಾರ ಕೂಡ ಅಭಿವ್ಯಕ್ತಿ ಸ್ವಾತಂತ್ರÂವನ್ನು ಹತ್ತಿಕ್ಕುವ ಕೆಲಸ ಮಾಡಬಾರದು, ಅಂತೆಯೇ, ಯಾರೂ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆ ಮಾಡಿಕೊಳ್ಳಬಾರದು.

- ●ಹನಿಐಮ್‌ಹಿಯರ್‌

ಯುವರಾಜ್‌ ಸಿಂಗ್‌ ಅವರು ಈ ರೀತಿ ನಿರ್ಗಮಿಸಬಾರದಿತ್ತು. ಅವರಿಗೆ ಸಿಗಬೇಕಾದ ಗೌರವ ಬಿಸಿಸಿಐನಿಂದ ಸಿಗದೇ ಇದ್ದದ್ದು ಬೇಸರದ ಸಂಗತಿ.

- ●ಸೋಮನಾಥ್‌ ಬೂಂಬಕ್‌

ಮುಲಾಯಂ ಸಿಂಗ್‌ರನ್ನು ಭೇಟಿಯಾಗುವ ಮೂಲಕ ಯೋಗಿ ಆದಿತ್ಯನಾಥ್‌ ಅವರು, ಚುನಾವಣೆಯಲ್ಲಿ ಹಾವು - ಮುಂಗುಸಿಯಂತೆ ಕಚ್ಚಾಡಿದ್ದರೂ, ತಾವು ವೈಯಕ್ತಿಕವಾಗಿ ಕಾರುಣ್ಯವುಳ್ಳ ವ್ಯಕ್ತಿ ಮತ್ತು ಶತ್ರುಗಳನ್ನೂ ಪ್ರೀತಿಸುವ ನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

- ●ಕೇಶವ್‌ ಹೆಡಗೇವಾರ್‌

ನನ್ನ ಅಮ್ಮ ಶುದ್ಧ ಸಸ್ಯಾಹಾರಿ. ಕರುಣಾಮಯಿ ಮತ್ತು ಅಹಿಂಸೆಯಲ್ಲೇ ನಂಬಿಕೆಯಿಟ್ಟಿರುವವಳು. ಆದರೆ, ಅಡುಗೆ ಮನೆಯಲ್ಲಿ ಯಾವಾಗ ಇರುವೆ ಮತ್ತು ಜಿರಳೆಯನ್ನು ನೋಡುತ್ತಾಳ್ಳೋ, ಆಗ ಆಕೆ ವೃತ್ತಿಪರ ಸ್ನೆ„ಪರ್‌ ಆಗಿ ಬದಲಾಗುತ್ತಾಳೆ!

- ● ಸಾಗರ್‌

ಗುರುವಾಯೂರಿನಲ್ಲಿ ಕೇರಳದ ದಿರಿಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಪ್ಯಾಂಟ್‌ ಜುಬ್ಟಾ ಬಿಟ್ಟು ಧೋತಿಯನ್ನೇ ಮೋದಿ ದಿನವೂ ತೊಡಲಿ.

- ●ಕಸ್ತೂರಿ ಶಂಕರ್‌

ಎಷ್ಟು ಮತ ಹಾಕಿಸುತ್ತೀಯೋ ಅಷ್ಟು ಕಮಲದ ಹೂವುಗಳನ್ನು ನಿನಗೆ ಅರ್ಪಿಸುತ್ತೇನೆ ಎಂದು ಗುರುವಾಯೂರಪ್ಪನಿಗೆ ಮೋದಿ ಹರಕೆ ಹೊತ್ತುಕೊಂಡಿದ್ದರಂತೆ, ಹೌದೇ?

- ●ಶಿವರಾಂ

ಪ್ರಧಾನಿ ಮೋದಿ ವಿದೇಶ ಪ್ರವಾಸ ಶುರುವಾಗಿದೆ. ಹಾಗೆಯೇ ವಿಪರೀತ ವಿದೇಶ ಪ್ರವಾಸ ಮಾಡುತ್ತಾರೆ ಎಂದು ದೂರುವ ಕೆಲಸವೂ ಶುರುವಾಗಿದೆ.

- ●ಶಂಕರ್‌

ಕುಡಿಯುವ ನೀರಿಂದ ಕಾರು ತೊಳೆದರು ಎಂದು ಕೊಹ್ಲಿಗೆ 500 ರೂಪಾಯಿ ದಂಡ ವಿಧಿಸಲಾಗಿದೆ. ಕೊಹ್ಲಿ ಒಂದು ಲೀಟರ್‌ ಬಾಟಲಿ ನೀರಿಗೇ 600 ರೂಪಾಯಿಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ಈ ದಂಡ ಯಾವ ಲೆಕ್ಕ!

- ●ತೂಜಾನೇನಾ

ನಡೆದುಹೋದದ್ದರ ಕುರಿತು ಚಿಂತಿಸಿ ಫ‌ಲವಿಲ್ಲ, ಆ ಘಟನೆಯ ಕುರಿತ ನಿಮ್ಮ ಭಾವನೆ ಮತ್ತು ಯೋಚನೆಯನ್ನು ಬದಲಿಸಿಕೊಂಡು ಮುನ್ನಡೆಯಿರಿ. 7

- ●ಪೌಲೋ ಕೋಲ್ಹೋ

ಜಗತ್ತಿನ ಯಾರು ಕೂಡ ನೋವು, ಕಷ್ಟ ಅನುಭವಿಸಲು ಬಯಸುವುದಿಲ್ಲ. ಆದರೂ, ನಾವು ಎದುರಿಸುವ ಸಂಕಷ್ಟಗಳು ನಮ್ಮದೇ ತಪ್ಪಿನಿಂದ ಆಗಿರುತ್ತವೆ. ಇದಕ್ಕೆ ಕಾರಣ, ನಿರ್ಲಕ್ಷ್ಯ. ಈ ನಿರ್ಲಕ್ಷ್ಯದಿಂದ ಹೊರಬಂದರೆ ಎಲ್ಲವೂ ಸಲೀಸು.

- ●ದಲೈ ಲಾಮಾ

ವಿಶ್ವಕಪ್‌ನಲ್ಲಿ ಚೆನ್ನಾಗಿ ಆಡಬೇಕೆಂದು ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ ಗಳು ಕನಸು ಕಾಣುತ್ತಾರೆ. ಆದರೆ, ಆ ಕನಸುಗಳನ್ನು ನುಚ್ಚುನೂರು ಮಾಡಲು ಜಸ್‌ಪ್ರೀತ್‌ ಬೂಮ್ರಾ ಬರುತ್ತಾರೆ.

- ●ಆಲಿಯಾ

ಇರುವುದೊಂದೇ ಬದುಕು, ಇರುವುದೊಂದೇ ಭೂಮಿ. ಪರಿಸರ ರಕ್ಷಿಸಿ, ಅದನ್ನು ಉಳಿಸಿ.

- ●ಸುಪ್ರಿಯಾ ಸಾಹು

ಅಮರ್ತ್ಯ ಸೇನ್‌ ಅವರು ಕೆನಡಾದ ಟೆಲಿಫೋನ್‌ ಆಪರೇಟರ್‌ಗೆ ತಮ್ಮ ಸರ್‌ನೆàಮ್‌ನ ಸ್ಪೆಲ್ಲಿಂಗ್‌ ಹೇಳುವಂತೆ ಕೇಳಿಕೊಂಡರಂತೆ. ಅದಕ್ಕೆ ಆತ, "ಎಸ್‌ ಫಾರ್‌ ಸಮ್‌ಬಡಿ, ಇ ಫಾರ್‌ ಎವರಿಬಡಿ, ಎನ್‌ ಫಾರ್‌ ನೋಬಡಿ' ಎಂದನಂತೆ.

- ●ಕೌಶಿಕ್‌ ಬಸು

ಈಗ ರಾಜಸ್ಥಾನದಲ್ಲಿ ಅಶೋಕ್‌ ಗೆಹೊÉàಟ್‌ ಮತ್ತು ಸಚಿನ್‌ ಪೈಲಟ್‌ ನಡುವಿನಘಟಬಂಧನ್‌ ಕೂಡ ಮುರಿದುಬೀಳುವ ಹಂತಕ್ಕೆ ತಲುಪಿದೆ.

- ●ಪ್ರದೀಪ್‌ ಕಪೂರ್‌

ಎಸ್‌ಪಿ-ಬಿಎಸ್‌ಪಿ ಜೊತೆಯಾದಷ್ಟೇ ವೇಗದಲ್ಲಿ ದೂರವಾಗಿವೆ. ಇವುಗಳ ಈ ದುರ್ಗುಣದ ಅರಿವಿರುವುದರಿಂದಲೇ ಮತದಾರರು ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ.

- ●ಭಾವೇಶ್‌ ಭಡಾಲಿಯಾ

ಪ್ರಪಂಚ ಪರ್ಯಟನೆ ಮಾಡಲು ಬಯಸುವವರು, ತಮ್ಮ ಊರು, ದೇಶವೂ ಪ್ರಪಂಚದ ಭಾಗ ಎನ್ನುವುದು ಮೊದಲು ತಿಳಿದುಕೊಳ್ಳಲಿ.

- ●ರಾಬಿನ್‌ ಶರ್ಮಾ

ಛೆ, ವಿಶ್ವ ಸೈಕಲ್‌ ದಿನದಂದೇ ಮಾಯಾವತಿ ಅವರು ಸಮಾಜವಾದಿ ಪಕ್ಷದ ಅಖೀಲೇಶ್‌ಗೆ ಈ ರೀತಿ ಮಾಡಬಾರದಿತ್ತು!

- ●ಅತುಲ್‌ ಅಹುಜಾ

ದೆಹಲಿಯ ಆಪ್‌ ಸರ್ಕಾರ ಮಹಿಳೆಯರನ್ನು ವೋಟ್‌ಬ್ಯಾಂಕ್‌ಗೆ ಬಳಸುವ ಬದಲು, ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಬ್ಸಿಡಿ ಪಾಸ್‌ಗಳನ್ನು ಒದಗಿಸಬಹುದಿತ್ತು.

- ●ಆಕಾಂಕ್ಷಾ ನರೈನ್‌

ಕಳೆದ ಬಜೆಟ್‌ನಲ್ಲಿ ಹೇಳಿದಂತೆ ದೇಶದಲ್ಲಿ 1 ಲಕ್ಷ ಡಿಜಿಟಲ್‌ ಹಳ್ಳಿಗಳನ್ನು ನಿರ್ಮಿಸುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಸದ್ಯದಲ್ಲೇ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಭಾರತ್‌ ನೆಟ್‌ನಿಂದ ಡಿಜಿಟಲ್‌ ಸೇವೆಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು.

- ●ರವಿಶಂಕರ್‌ ಪ್ರಸಾದ್‌

"ಮಹಿಳೆಗೆ ವಿತ್ತ ಖಾತೆ, ಪುರುಷನಿಗೆ ಗೃಹ ಖಾತೆ- ಇದುವೇ ನವಭಾರತ' - ದೇಶದ ಆರ್ಥಿಕ ಆರೋಗ್ಯದ ಹೊಣೆಯನ್ನು ಮಹಿಳೆಗೆ ನೀಡುತ್ತಿರುವುದು ನಿಜಕ್ಕೂ ಗೇಮ್‌ಚೇಂಜರ್‌ ಆಗಲೂಬಹುದು.

- ●ಆನಂದ್‌

ಏರ್‌ ಇಂಡಿಯಾ ನಷ್ಟದ ಸ್ಥಿತಿಗೆ ಕಾರಣ ಪ್ರಫ‌ುಲ್‌ ಪಟೇಲ್‌ ಎಂಬ ವಿಚಾರ ಬಹಿರಂಗ ರಹಸ್ಯ. ಸಂಸ್ಥೆಯ ಯಾವುದೇ ಉದ್ಯೋಗಿಯನ್ನು ಕೇಳಿದರೆ ಅವರ ವಿಚಾರ ಹೇಳುತ್ತಾರೆ. ಅವರಿಂದಾಗಿಯೇ ಸಂಸ್ಥೆ ಭಾರೀ ನಷ್ಟ ಅನುಭವಿಸುತ್ತಿದೆ.

- ●ತೊತ್ಲಾನಿ ಕಿಶನ್‌

ಮನೇಕಾ ಗಾಂಧಿಯವರನ್ನು ಲೋಕಸಭೆ ಸ್ಪೀಕರ್‌ ಆಗಿ ನೇಮಿಸಿದರೆ ಸೋನಿಯಾ ಮತ್ತು ರಾಹುಲ್‌ ಸ್ಥಿತಿ ಏನಾಗಲಿದೆ? ಮನೇಕಾರನ್ನು ಮೇಡಮ್‌ ಸ್ಪೀಕರ್‌ ಎಂದು ಗೌರವದಿಂದ ಕರೆಯಬೇಕು ಇಲ್ಲದೇ ಇದ್ದರೆ ಸುಮ್ಮನಿರಬೇಕು.

- ●ಎಂಆರ್‌ವಿ

ಸತ್ಯವನ್ನು ನುಡಿಯಿರಿ. ನಿಮ್ಮ ಒಂದು ಸುಳ್ಳೂ ಕೂಡ ನಿಮ್ಮ ಎಲ್ಲಾ ಸತ್ಯಗಳನ್ನು ಪ್ರಶ್ನಾರ್ಹವಾಗಿಸಿ ಬಿಡುತ್ತದೆ.

- ●ರಿಚರ್ಡ್‌ ಬ್ರಾನ್ಸನ್‌

ಮಮತಾ ಬ್ಯಾನರ್ಜಿಯವರ ವರ್ತನೆಯನ್ನು ನೋಡಿದರೆ, ಅವರು ರಾಜ್ಯದಲ್ಲಿ ತಮ್ಮ ಭವಿಷ್ಯದ ಬಗ್ಗೆ ಕಳವಳಗೊಂಡಿದ್ದಾರೆ ಎನ್ನುವುದು ಅರ್ಥವಾಗುತ್ತದೆ.

- ●ಮುಕುಂದ್‌ ಕೇತ್ಕರ್‌

"ಟೈಮ್‌' ಹೇಗೆ ಬದಲಾಗುತ್ತೆ ನೋಡಿದಿರಾ? 15 ದಿನಗಳ ಹಿಂದೆ ಮೋದಿ "ಪ್ರಧಾನ ವಿಭಜಕ'ರಾಗಿದ್ದರು, ಈಗ "ಭಾರತವನ್ನೇ ಒಗ್ಗೂಡಿಸುವ ಶಕ್ತಿ' ಉಳ್ಳವರಾಗಿದ್ದಾರೆ. ನಾಯಕ ಬಲಿಷ್ಠನಾಗಿದ್ದರೆ ಮುಂದಿರುವವರು ತಲೆ ಬಾಗಲೇಬೇಕು.

- ● ರಾಜೀವ್‌ ಮಲ್ಹೋತ್ರಾ

ಅನ್ಯರ ವಿಷಯದಲ್ಲಿ ತೋರಿಸುವ ಉದಾತ್ತತ್ತೆ, ಕ್ಷಮಾರ್ಹ ಗುಣವನ್ನು ನಿಮ್ಮ ವಿಷಯದಲ್ಲೂ ತೋರಿಸಿಕೊಳ್ಳಿ.

- ●ಟ್ರೂಕೋಟ್‌

ಧೋನಿ ಬಗ್ಗೆ ಋಣಾತ್ಮಕವಾಗಿ ಮಾತನಾಡಿದವರೆಲ್ಲ, ಈಗ ಮನೆಯಲ್ಲಿ ಹೊದ್ದು ಮಲಗಿರಬಹುದು.

- ●ಅನಿರ್ಬಾನ್‌ ಚಾಟರ್ಜಿ

ಮೋದಿ ನಾಯಕತ್ವಕ್ಕೆ ಮೆಚ್ಚುಗೆ, ರಾಹುಲ್‌ಗಾಂಧಿಗೆ ಪ್ರೇರೇಪಣೆ, ಕಮಲ್‌ಗೆ ಅಭಿನಂದನೆ. ಪ್ರತಿಯೊಬ್ಬ ವ್ಯಕ್ತಿಯ ಸಕಾರಾತ್ಮಕತೆಗಳನ್ನೇ ನೋಡುವವರು ನಮ್ಮ ತಲೈವಾ.

- ●ಇಟಿಸ್‌ ವಿನ್‌

ಪ್ರಮಾಣ ವಚನ ಸ್ವೀಕಾರಕ್ಕೆ ಬಿಮ್‌ಸ್ಟಿಕ್‌ ರಾಷ್ಟ್ರಗಳಿಗೆ ಆಹ್ವಾನ ನೀಡಿದ್ದಾರೆ ಪ್ರಧಾನಿ ಮೋದಿ. ಪಾಕಿಸ್ತಾನ ಮೂಲೆಗುಂಪು ಮಾಡಲು ಇದು ಉತ್ತಮ ಅವಕಾಶ.

- ●ವರುಣ್‌ ಮಹಾಜನ್‌

ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಮತ ನೀಡಿರುವುದು ಕೇಂದ್ರದಲ್ಲಿ ಅಧಿಕಾರ ನಡೆಸಲಿ ಎಂದೇ ಹೊರತು, ರಾಜ್ಯದಲ್ಲಿನ ಸರ್ಕಾರ ಬೀಳಿಸಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದಲ್ಲ. ಲೋಕಸಭಾ ಫ‌ಲಿತಾಂಶ ನಮಗೆ ವಿರುದ್ಧವಾಗಿ ಬಂದ ಮಾತ್ರಕ್ಕೆ ವಿಧಾನಸಭೆಯನ್ನೂ ವಿಸರ್ಜನೆ ಮಾಡಲಿ ಎಂದು ಹೇಳುವುದು ನಾನ್‌ಸೆನ್ಸ್‌.

- ●ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಸ್ಮೃಇರಾನಿ ಅವರು ಪಕ್ಷದ ಕಾರ್ಯಕರ್ತನ ಮೃತದೇಹಕ್ಕೆ ಹೆಗಲು ಕೊಟ್ಟಿರುವುದು ಸ್ಫೂರ್ತಿದಾಯಕ ವಿಚಾರ. ಎಲ್ಲ ರಾಜಕೀಯ ನಾಯಕರೂ ಚುನಾವಣೆ ಸಮೀಪದಲ್ಲಿರುವಾಗ ಇಂಥದ್ದನ್ನು ಮಾಡುತ್ತಾರೆ. ಸ್ಮತಿ ಅವರ ನಡೆ ಶ್ಲಾಘನೀಯ.

- ● ಸಿದ್ಧಾರ್ಥ್

ದೇಶ ಬಿಟ್ಟು ಓಡಿಹೋಗಲು ವಿಮಾನ ಹತ್ತಿದ್ದ ನರೇಶ್‌ ಗೋಯಲ್‌ರನ್ನು ಕೆಳಗಿಳಿಸಿ ಮನೆಗೆ ಕಳುಹಿಸಿದ್ದಾರೆ.ಇದು ನವ ಭಾರತ.

- ●ಅಶು

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ರಾಜೀನಾಮೆ ತಿರಸ್ಕೃತವಾಗಿದ್ದು ಎಲ್ಲರಿಗಿಂತ ಹೆಚ್ಚಾಗಿ ಬಿಜೆಪಿಗೆ ಖುಷಿ ಕೊಟ್ಟಿದೆ.

- ●ಕೇಶವ್‌

ವಿಮಾನ ಕಂಪನಿ ಹೊಂದಿದ್ದ ನರೇಶ್‌ ಗೋಯೆಲ್‌ಗೆ ಈಗ ವಿಮಾನ ಹತ್ತಲೂ ಅನುಮತಿ ಇಲ್ಲ!

- ●ಖಬರ್‌ದಾರ್‌

ಚುನಾವಣೆಯೆನ್ನುವುದು ದೇಶದ ಅತಿದೊಡ್ಡ ರಿಯಾಲಿಟಿ ಶೋ ಎನ್ನುವುದು ಈಗ ಅರ್ಥವಾಯಿತು!

- ●ಟ್ರಾಲ್‌ಲಾಲಾ

ರಾಹುಲ್‌ ಸೋತರೆ ರಾಜಕೀಯ ಬಿಡುತ್ತೇನೆ ಅಂದ ಸಿಧು ಈಗ ಹಲ್ಲುಕಿರಿಯುತ್ತಿದ್ದಾರೆ. ರಾಜಕೀಯವನ್ನು ಕಾಮಿಡಿ ನೈಟ್ಸ್‌ ಅಂದುಕೊಂಡಿದ್ದಾರವರು!

- ●ಭುವನೇಶ್‌ ತೆ

ಇದು ಮೋದಿ ಅಲೆ ಅಲ್ಲ. ಅಲೆ ಬಂದು, ಹೋಗುತ್ತದೆ. ಆದರೆ, ಇದು ಮೋದಿ ಸಾಗರ.

- ●ಚೇತನ್‌ ಭಗತ್‌

ಬದುಕೆಂಬುದು ಒಂದು ಕಾದಂಬರಿಯಿದ್ದಂತೆ. ಅದರ ಕರ್ತೃಗಳು ನೀವೇ. ನಿಮ್ಮ ಕಥೆ ಹೇಗಿರಬೇಕೋ ತೀರ್ಮಾನಿಸಿ!

- ●ಕಥಿಕ್‌ಕಾನ್‌

ಇವಿಎಂ ಮೇಲೆ ತಪ್ಪು ಹೊರಿಸುವುದು ಪ್ರಾಮಾಣಿಕತೆಯಿಂದ ನುಣುಚಿಕೊಳ್ಳುವುದಕ್ಕೆ ಸಮ. ಮತದಾರರ ತೀರ್ಪಿಗೆ ಅವಮಾನ ಮಾಡದಿರಿ.

- ●ಮಾರುತಿ ಚಂದಾವರ್ಕರ್‌

ಬ್ರೇಕಿಂಗ್‌ ನ್ಯೂಸ್‌  - ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಭೆಯನ್ನು ಕಾಂಗ್ರೆಸ್‌ 24 ಮೇಯಿಂದ ಮೇ 2024ಕ್ಕೆ ಮುಂದೂಡಿದೆ.

- ●ಮಹೇಶ್‌ ವಿಕ್ರಂ ಹೆಗ್ಡೆ

ಚುನಾವಣೋತ್ತರ ಸಮೀಕ್ಷೆಗಳನ್ನು ನಂಬಬಾರದು ಅನ್ನುತ್ತವೆ ಪ್ರತಿಪಕ್ಷಗಳು. ಒಂದು ವೇಳೆ ಈ ಸಮೀಕ್ಷೆಗಳೇನಾದರೂ ತಮ್ಮ ಪರ ಬಂದಿದ್ದರೆ ಇವೇ ಸಂಭ್ರಮಾಚರಣೆ ಮಾಡುತ್ತಿದ್ದವು.

- ಜಯದೇವ್‌ ಶಿರೋಡ್ಕರ್‌

ಆರಂಭವಾಯಿತು ನೋಡಿ ಇವಿಎಂ ಮೇಲೆ ಪ್ರಹಾರ! ಪ್ರತಿಪಕ್ಷಗಳು ಇವಿಎಂ ಅನ್ನು ದೂರುತ್ತಾ ಕೂರುವ ಬದಲು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದರೆ, ಇಷ್ಟೆಲ್ಲ ಕಟ್ಟುಕಥೆ ಅಗತ್ಯವೇ ಅವಕ್ಕೆ ಎದುರಾಗುತ್ತಿರಲಿಲ್ಲ.

- ತನ್ಮಯ್‌ ವಿ

ರಾಹುಲ್‌ ಗಾಂಧಿ ತಮ್ಮ ಅಮ್ಮನ ಮಾಲೀಕತ್ವದ ಶಾಲೆಯಲ್ಲಿ ಒಬ್ಬ ಅತ್ಯುತ್ತಮ, ವಿಧೇಯ ವಿದ್ಯಾರ್ಥಿ. ಆದರೂ ಅವರಿಗೆ ಪರೀಕ್ಷೆ ಪಾಸು ಮಾಡಲು ಈವರೆಗೂ ಸಾಧ್ಯವಾಗಿಲ್ಲ. ಕಾರಣ ಪ್ರಶ್ನೆ ಪತ್ರಿಕೆ ಪರೀಕ್ಷಾ ಮಂಡಳಿ ನೀಡುತ್ತದೆ.  

- ದ ಬ್ಯಾಡ್‌ ಡಾಕ್ಟರ್‌

ನಾವು ಯಾವ ಪರಿ ಮೊಬೈಲ್‌ನ ಒಳಹೊಕ್ಕಿದ್ದೇವೆಂದರೆ, ಬಿಡುವು ಸಿಕ್ಕಾಗ ಮಾತ್ರ ನಿಜವಾದ ಜಗತ್ತನ್ನು ನೋಡುತ್ತಿದ್ದೇವೆ.

- ●ಆ್ಯಂಟಿರ್ಯಾಶ್ನಲ್‌

ಬಿಜೆಪಿ ತನ್ನನ್ನು ಕೊಲ್ಲಿಸುತ್ತದೆ ಅಂತಾರೆ ಕೇಜ್ರಿವಾಲ್‌. ಕೇಜ್ರಿವಾಲ್‌ ಅವರು ರಾಜಕೀಯ ಬಿಟ್ಟು ಫಿಲಂ ಪ್ರೊಡಕ್ಷನ್‌ ಕಂಪನಿ ಆರಂಭಿಸುವುದು ಒಳಿತು. ಎಂತೆಂಥ ಕಥೆ ಕಟ್ಟುತ್ತಾರೆ ಮತ್ತೆ!

- ●ಟ್ರಾಲ್‌ಲಾಲ್‌

ಎಂಥ ದಟ್ಟಕತ್ತಲೆಯೂ ಕೂಡ ಮುಂಜಾವಿನ ಬೆಳಕಿನ ಕಿರಣಗಳಿಗೆ ಬೆಚ್ಚು ಓಡಿಹೋಗುತ್ತದೆ.

- ●ಲೈಫ್ಇನ್‌ಸೆನ್ಸ್‌

ಇಂದು ಭಾರತೀಯ ರಾಜಕೀಯ ರಿಯಾಲಿಟಿ ಶೋದಂತೆ ಬದಲಾಗಿದೆ. ಜನರ ಭಾವನೆಗಳ ಜತೆ ಆಟವಾಡುವುದೇ ರಾಜಕಾರಣಿಗಳ ನಿಜವಾದ ಕೆಲಸವಾಗಿ ಬದಲಾಗಿದೆ.

- ●ನವೀನ್‌ ಬೂಂಬಕ್‌

ಶೇ.61 ಮಂದಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಲೆಂದು ಬಯಲಸುತ್ತಾರೆ. ಆದರೆ ಪಪ್ಪುಗೆ ಕಿಂದುಸ್ತಾನಕ್ಕೆ ಪ್ರಧಾನಿಯಾಗಲು 20 ಸಾವಿರ ಮಂದಿಯ ಬೆಂಬಲ ಮಾತ್ರ ಇದೆ.

- ●ಚೌಕಿದಾರ್‌ ಹುವಾತೋಹುವಾ

ಪ್ರತಿಪಕ್ಷಗಳ ನಾಯಕರೆಲ್ಲ ಮೋದಿ ವಿರುದ್ಧ ಮಾತನಾಡುವುದನ್ನೇ ರಾಜಕೀಯವೆಂದು ಭಾವಿಸಿಬಿಟ್ಟಿದ್ದಾರೆಯೇ?

- ●ಮುಕುಂದ ವಾಸುದೇವನ್‌

ಅನ್ಯರ ಬಗ್ಗೆ ಹೊಟ್ಟೆ ಕಿಚ್ಚು ಪಡದೇ ನಿಮ್ಮ ಗುರಿಯೆಡೆಗೇ ದೃಷ್ಟಿ ನೆಟ್ಟು ಮುಂದುವರಿಯಿರಿ.

- ●ರಾಬಿನ್‌ ಶರ್ಮಾ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಪಕ್ಷದೊಳಗೆ ಮೂಲೆಗುಂಪಾಗಿರುವ ಟೈಂ ಬಾಂಬ್‌ ಎಕ್ಸ್‌ಪರ್ಟ್‌ ಜಗದೀಶ್‌ ಶೆಟ್ಟರ್‌ ಅವರು ತಮ್ಮ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಆಗಾಗ ಇಂತಹ ಜೋಕ್‌ಗಳನ್ನು ಮಾಡುತ್ತಿರುತ್ತಾರೆ. ಅವರನ್ನು ಪಕ್ಷದ ಒಳಗೆ, ಹೊರಗೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದೇ ಅವರ ಕೊರಗು.

- ●ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ವೆಲ್‌ಕಂ ಮಣಿಶಂಕರ್‌ ಅಯ್ಯರ್‌ಜೀ. ನಿಮ್ಮನ್ನು ಬಿಜೆಪಿ ಬಹಳ ಮಿಸ್‌ ಮಾಡಿಕೊಳ್ಳುತ್ತಿತ್ತು! ●ಇನ್ಫಿàರಿಯರೈಸಿಂಗ್‌

- ●ಇನ್ಫೀರಿಯರೈಸಿಂಗ್‌

ಫೇಸ್‌ಬುಕ್‌ನಿಂದ ರಾಜಕೀಯಕ್ಕೆ ಸಂಬಂಧಿಸಿದ ಕಮೆಂಟ್‌ಗಳು, ಸ್ಟೇಟಸ್‌ಗಳನ್ನೆಲ್ಲ ಬ್ಯಾನ್‌ ಮಾಡಬೇಕು. ಗೆಳೆಯರಿಗಾಗಿ ಇದ್ದ ವೇದಿಕೆಯೀಗ ಹೊಡೆದಾಟದ ಅಖಾಡವಾಗಿ ಬದಲಾಗಿದೆ.

- ●ಮನೋಹರ್‌ ಸನ್ವಾನ್‌ಕರ್‌

ದೇಶದ ವಿಭಜನೆಗೆ ಗಾಂಧಿಯೇ ಕಾರಣ ಎಂದು ತೋರಿಸುವ ಹೇ ರಾಮ್‌ ಸಿನಿಮಾದ ಚಿತ್ರಕಥೆ ಬರೆದು ನಿರ್ದೇಶಿಸಿದ ಕಮಲ್‌ ಹಾಸನ್‌ ಈಗ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.

- ರಾಹುಲ್‌ ಶರ್ಮಾ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಪಠ್ಯಪುಸ್ತಕದಲ್ಲಿ ವೀರ ಸಾವರ್ಕರ್‌ ಕುರಿತ ಪಠ್ಯವನ್ನು ಬದಲಿಸಿದೆ. ಆದರೆ 1970ರಲ್ಲಿ ಇಂದಿರಾ ಗಾಂಧಿ ಸರ್ಕಾರವೇ ಸಾವರ್ಕರ್‌ ಕುರಿತ ಅಂಚೆ ಚೀಟಿ ಬಿಡುಗಡೆ ಮಾಡಿತ್ತು!

- ಅಜಯ್‌ ಕಶ್ಯಪ್‌

ನನ್ನ ಹಿಂದಿ ಸರಿಯಿಲ್ಲ ಹಾಗಾಗಿ ಅಂದುಕೊಂಡದ್ದು ಬೇರೆ, ಆಡಿದ್ದು ಬೇರೆ ಅಂತಾರೆ ಪಿತ್ರೋಡಾ. ಮಣಿಶಂಕರ್‌ ಅಯ್ಯರ್‌ ಕೂಡ "ನೀಚ್‌' ಪದದ ಅರ್ಥ ತಮಗೆ ಗೊತ್ತಿಲ್ಲ ಎಂದಿದ್ದರು. ಎಂಥ ಜೋಕು!

- ●ಶೆಹಜಾದ್‌ ಪೂನಾವಾಲಾ

ಮೇ 23ರರವರೆಗೂ ಟಿ.ವಿ. ಚಾನೆಲ್‌ಗ‌ಳಿಂದ ದೂರವಿರಲು ಕಾಂಗ್ರೆಸ್ಸಿಗರು ಸ್ಯಾಮ್‌ ಪಿತ್ರೋಡಾಗೆ ಹೇಳಬೇಕು. ಪ್ರತಿಬಾರಿಯೂ ಅವರು ಮಾತನಾಡಿದಾಗಲೂ ಎದುರಾಳಿಗಳಿಗೆ ಮದ್ದುಗುಂಡು ಸಿಗುತ್ತದೆ. ಸೆಲ್ಫ್ ಗೋಲ್‌ ಹೊಡೆಯುವಲ್ಲಿ ಅವರದ್ದು ಎತ್ತಿದ ಕೈ. ಕಾಂಗ್ರೆಸ್‌ನ ಪುಣ್ಯವೆಂದರೆ, ಮಣಿಶಂಕರ್‌ ಅಯ್ಯರ್‌ ಸುಮ್ಮನಿರುವುದು!

- ●ರಾಹುಲ್‌ ಕನ್ವಾಲ್‌

ನಿಮ್ಮ ಕನಸುಗಳು, ನಿಮ್ಮ ಅನುಮಾನಗಳಿಗಿಂತಲೂ ಬಲಿಷ್ಠವಾಗಿದ್ದಾಗ ಮಾತ್ರ ಗುರಿಯೆಡೆಗೆ ಸುಲಲಿತವಾಗಿ ಸಾಗುತ್ತೀರಿ.

- ●ರಾಬಿನ್‌ ಶರ್ಮಾ

ಮಿಸ್ಟರ್‌ ಕೇಜ್ರಿವಾಲ್‌, ನಾನು ಬಿಜೆಪಿಯ ಬೆಂಬಲಿಗ ಅಲ್ಲ. ಆದರೆ ಗೌತಂ ಗಂಭೀರ್‌ ನಿಮ್ಮಂತೆ ನೈತಿಕವಾಗಿ ಕೆಳಕ್ಕೆ ಕುಸಿದಿರುವ ವ್ಯಕ್ತಿಯಂತೂ ಅಲ್ಲ ಎಂದು ಹೇಳಬಲ್ಲೆ. ಈ ರೀತಿಯ ಕೆಟ್ಟ ರಾಜಕೀಯ ಮಾಡದಿರಿ.

- ●ಸಿವೈಎಸ್‌ಕೆಭಾಯ್‌

ಸೃಜನಶೀಲತೆಗೆ ಶ್ರದ್ಧೆಯೆಂಬ ಬೆನ್ನೆಲುಬು ಬೇಕು. ಶ್ರದ್ಧೆಯಿಲ್ಲದಿದ್ದರೆ ಸೃಜನಶೀಲತೆ ಶೂನ್ಯಕ್ಕೆ ಸಮ.

- ●ರಿಕಾರ್ಡೋ ಪೊಲಾಕ್‌

ಟ್ವಿಟ್ಟರ್‌ನಲ್ಲಿ ನಿಜಕ್ಕೂ ಸಾಮಾನ್ಯ ಜನರಿದ್ದಾರಾ ಅಥವಾ ಕೇವಲ ಕಾಂಗ್ರೆಸ್‌, ಬಿಜೆಪಿ ಮತ್ತು ಆಪ್‌ ನಾಯಕರು ಮತ್ತು ಹುಸಿ ಅಕೌಂಟ್‌ಗಳೇ ತುಂಬಿವೆಯೇ?

- ●ತೂಬೋಲ್ನಾ

ಎಂದಿಗೂ ಪ್ರೀತಿ ಮತ್ತು ಸಹಾನುಭೂತಿಯನ್ನು ಬೇಡದಿರಿ. ಇವೆಲ್ಲವೂ ಉಚಿತವಾಗಿ ದೊರೆಯಬೇಕಾದ ಸಂಗತಿಗಳು.

- ●ಲೈಫ್ಕೋಟ್ಸ್‌

ಅದೇಕೆ ಪ್ರಿಯಾಂಕಾ ಗಾಂಧಿಯವರು ದುರ್ಯೋಧನನ ಉದಾಹರಣೆ ಕೊಟ್ಟದ್ದು? ಸುಮ್ಮನೇ ನರೇಂದ್ರ ಮೋದಿಗೆ ಹೊಸ ಹೆಸರು ಕೊಡುವುದು ಕಾಂಗ್ರೆಸ್‌ನ ಕೆಲಸ.

- ●ದಿವ್ಯಾಂಕ್‌ ತ್ರಿವೇದಿ

ಈ ಹಂತದಲ್ಲಿ ಪ್ರತಿಯೊಬ್ಬರೂ ಒಬ್ಬರನ್ನೊಬ್ಬರ ದೌರ್ಬಲ್ಯಗಳನ್ನು ಅರಿತುಕೊಂಡು ಟೀಕಿಸುತ್ತಿದ್ದಾರೆ. ಆದರೆ ಪ್ರತಿ ಹಂತದಲ್ಲಿಯೂ ಎಲ್ಲೆಯನ್ನು ಮೀರಿದೆ.

- ●ಸುಪರ್ಣಾ ಸಿಂಗ್‌

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ಆಸಕ್ತಿಯೇ ಇಲ್ಲ. ಕಾಂಗ್ರೆಸ್‌ ಮತ್ತು ಅದರ ವಂಶ ವೃಕ್ಷಕ್ಕೆ ಅವರು ಮಾಡಿದ ಕೆಲಸಗಳ ಬಗ್ಗೆ ಬಹಳ ವೇದನೆಯಿಂದ ನೆನಪು ಮಾಡಿಕೊಡಬೇಕಾಗುತ್ತದೆ.

- ●ಅನಿಲ್‌ ಕೋಲಿ

ಈ ಹಂತದಲ್ಲಿ ಪ್ರತಿಯೊಬ್ಬರೂ ಒಬ್ಬರನ್ನೊಬ್ಬರ ದೌರ್ಬಲ್ಯಗಳನ್ನು ಅರಿತುಕೊಂಡು ಟೀಕಿಸುತ್ತಿದ್ದಾರೆ. ಆದರೆ ಪ್ರತಿ ಹಂತದಲ್ಲಿಯೂಎಲ್ಲೆಯನ್ನು ಮೀರಿದೆ.

- ಸುಪರ್ಣಾ ಸಿಂಗ್‌

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ಆಸಕ್ತಿಯೇ ಇಲ್ಲ. ಕಾಂಗ್ರೆಸ್‌ ಮತ್ತು ಅದರ ವಂಶ ವೃಕ್ಷಕ್ಕೆ ಅವರು ಮಾಡಿದ ಕೆಲಸಗಳ ಬಗ್ಗೆ ಬಹಳ ವೇದನೆಯಿಂದ ನೆನಪು ಮಾಡಿಕೊಡಬೇಕಾಗುತ್ತದೆ.

- ಅನಿಲ್‌ ಕೋಲಿ

ಮತ್ಸರದಿಂದ ನಮ್ಮದೇ ಮನ ಸೊರಗುತ್ತದೆಯೇ ವಿನಃ ಎದುರಿನವ್ಯಕ್ತಿಗೆ ಏನೂ ವ್ಯತ್ಯಾಸವಾಗುವುದಿಲ್ಲ.

- ಪೌಲೋ ಕೋಲ್ಹೋ

ಕೇಜ್ರಿವಾಲ್‌ ಮೇಲೆ ಮತ್ತೂಬ್ಬ ವ್ಯಕ್ತಿಯಿಂದ ಹಲ್ಲೆ. ಇದು ಅವರ ಮೇಲೆ ನಡೆಯುತ್ತಿರುವ ಮೂರನೇ ದಾಳಿ. ಮುಖ್ಯಮಂತ್ರಿಗೆ ಭದ್ರತೆಯೇ ಇಲ್ಲ ಎಂದರೆ ಏನರ್ಥ?

- ಮುಝಮ್ಮಿಲ್‌ ಎನ್‌

ಚುನಾವಣೆ ಎಂಬುದು ತಾತ್ಕಾಲಿಕ. ಆದರೆ ದೆಹಲಿ ಸಿಎಂ ಕೇಜ್ರಿವಾಲ್‌ರಿಗೆ ಕೆನ್ನೆ ಮೇಲೆಹೊಡೆಸಿಕೊಳ್ಳುವುದು ಶಾಶ್ವತ.

- ವಿಜಯ್‌ ಸಿಂಗ್‌

ಹಮೀದ್‌ ಅನ್ಸಾರಿ, ಅರವಿಂದ ಸುಬ್ರಹ್ಮಣ್ಯಂ ಹೀಗೆ ಇನ್ನೂ ಹಲವರುಇದ್ದಾರೆ. ಅವರಿಗೆ ಕೊಡ ಮಾಡಲಾಗಿರುವ ಪದೋನ್ನತಿಯ ಅವಧಿಮುಕ್ತಾಯವಾಗುತ್ತಲೇ ಏನೇನೋ ಮಾತನಾಡುತ್ತಾರೆ.

- ನಾಗೇಂದ್ರ ಶರ್ಮಾ

ಪ್ರಿಯಾಂಕಾ ವಾದ್ರಾ ವಾರಾಣಸಿಯಿಂದ ಸ್ಪರ್ಧೆ ಮಾಡಬೇಕಾಗಿತ್ತು.ಅಲ್ಲಿ ನಡೆದ ರೋಡ್‌ ಶೋ ಮತ್ತು ಇತರ ಕಾರ್ಯಕ್ರಮಗಳಿಂದ ನನಗೆ ಹೀಗೆ ಅನಿಸುತ್ತಿದೆ.

- ಸ್ವೇಪ್ರಿಯಾ

ಹೊಸ ಸೇರ್ಪಡೆ

  • ನವದೆಹಲಿ: ''ರಾಮಜನ್ಮಭೂಮಿ ಪ್ರಕರಣದ ವಿವಾದಿತ ಸ್ಥಳದಲ್ಲಿ ಶತಮಾನಗಳ ಹಿಂದೆಯೇ ಹಿಂದೂ ದೇಗುಲವಿತ್ತು. ಅದನ್ನು ಕೆಡವಿ ಮಸೀದಿಯನ್ನು ಕಟ್ಟಲಾಗಿತ್ತು. ಇದಕ್ಕೆ ಸಾಕ್ಷಿಯಾಗಿ...

  • ನವದೆಹಲಿ: ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ತಮ್ಮ ಖಾತೆಗಳೊಂದಿಗೆ ಆಧಾರ್‌ ಸಂಖ್ಯೆ ಜೋಡಿಸುವುದನ್ನು ಕಡ್ಡಾಯ ಮಾಡುವ...

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಪಾಕಿಸ್ಥಾನಕ್ಕೆ ಸೆಟಲೈಟ್‌ ಕರೆ ಮಾಡಿರುವ ಕುರಿತು ರಾಷ್ಟ್ರೀಯ ತನಿಖಾ ದಳ ಮತ್ತು ರಾ ಅಧಿಕಾರಿಗಳು ಸ್ಥಳೀಯ...

  • ಸುಬ್ರಹ್ಮಣ್ಯ: ಅನಾರೋಗ್ಯ ದಿಂದ ಬಳಲುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆ ಯಶಸ್ವಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ಆನೆ...