IPL; 89 ಕ್ಕೆ ಆಲೌಟಾದ ಟೈಟಾನ್ಸ್ ; ಡೆಲ್ಲಿಗೆ ಸುಲಭ ಜಯ

Team Udayavani, Apr 17, 2024, 10:21 PM IST

1-weewqe

ಅಹಮದಾಬಾದ್: ಅಹ್ಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಆತಿಥೇಯ ಗುಜರಾತ್‌ ಟೈಟಾನ್ಸ್‌ ಶೋಚನೀಯ ಬ್ಯಾಟಿಂಗ್‌ ಪ್ರದರ್ಶನ ನೀಡಿ 6 ವಿಕೆಟ್‌ಗಳ ಹೀನಾಯ ಸೋಲನ್ನು ಹೊತ್ತುಕೊಂಡಿದೆ.
ಬುಧವಾರದ ಅಹ್ಮದಾಬಾದ್‌ ಮುಖಾ ಮುಖೀಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್‌ 17.3 ಓವರ್‌ಗಳಲ್ಲಿ ಜುಜುಬಿ 89 ರನ್ನಿಗೆ ಕುಸಿಯಿತು.

ಇದು ಐಪಿಎಲ್‌ನಲ್ಲಿ ಗುಜರಾತ್‌ ದಾಖಲಿಸಿದ ಕನಿಷ್ಠ ಗಳಿಕೆ ಹಾಗೂ ನೂರರೊಳಗೆ ಆಲೌಟ್‌ ಆದ ಮೊದಲ ನಿದರ್ಶನ. ಕಳೆದ ವರ್ಷ ಡೆಲ್ಲಿ ವಿರುದ್ಧವೇ 6ಕ್ಕೆ 125 ರನ್‌ ಮಾಡಿದ್ದು ಗುಜರಾತ್‌ ತಂಡದ ಈವರೆಗಿನ ಕನಿಷ್ಠ ಸ್ಕೋರ್‌ ಆಗಿತ್ತು. ಇದು ಐಪಿಎಲ್‌ನಲ್ಲಿ ಡೆಲ್ಲಿ ವಿರುದ್ಧ ತಂಡವೊಂದು ದಾಖಲಿಸಿದ ಅತೀ ಕಡಿಮೆ ಮೊತ್ತವೂ ಆಗಿದೆ. 2012ರಲ್ಲಿ ಮುಂಬೈ ಇಂಡಿಯನ್ಸ್‌ “ವಾಂಖೇಡೆ’ ಪಂದ್ಯದಲ್ಲಿ 92 ರನ್‌ ಮಾಡಿದ್ದು ಈವರೆಗಿನ ಕನಿಷ್ಠ ಸ್ಕೋರ್‌ ಆಗಿತ್ತು.

ಜವಾಬು ನೀಡಿದ ಡೆಲ್ಲಿ ಕೇವಲ 8.5 ಓವರ್‌ಗಳಲ್ಲಿ 4 ವಿಕೆಟಿಗೆ 92 ರನ್‌ ಮಾಡಿತು. ಇದು 7 ಪಂದ್ಯಗಳಲ್ಲಿ ಡೆಲ್ಲಿಗೆ ಒಲಿದ 3ನೇ ಜಯ. ಗುಜರಾತ್‌ ಇಷ್ಟೇ ಪಂದ್ಯಗಳಲ್ಲಿ 4ನೇ ಸೋಲನುಭವಿಸಿತು.

ಡೆಲ್ಲಿ ಘಾತಕ ಬೌಲಿಂಗ್‌
ಬೌಲಿಂಗ್‌ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿತು. ಪವರ್‌ ಪ್ಲೇಯಲ್ಲಿ ಗುಜರಾತ್‌ ತಂಡದ 4 ಪ್ರಮುಖ ವಿಕೆಟ್‌ಗಳನ್ನು ಉಡಾಯಿಸಿ ಒತ್ತಡ ಹೇರಿತು. ಈ ಸೀಸನ್‌ನ ಪವರ್‌ ಪ್ಲೇಯಲ್ಲಿ ತಂಡವೊಂದು 4 ವಿಕೆಟ್‌ ಕಳೆದುಕೊಂಡ 4ನೇ ನಿದರ್ಶನ ಇದಾಗಿದೆ. ರಾಜಸ್ಥಾನ್‌ ವಿರುದ್ಧ ಮುಂಬೈ, ಕೆಕೆಆರ್‌ ವಿರುದ್ಧ ಡೆಲ್ಲಿ ಕೂಡ ಇದೇ ಸಂಕಟಕ್ಕೆ ಸಿಲುಕಿತ್ತು. ಚೇಸಿಂಗ್‌ ವೇಳೆ ಡೆಲ್ಲಿ ಕೂಡ ಈ ಅವಧಿಯಲ್ಲಿ 4 ವಿಕೆಟ್‌ ಕಳೆದುಕೊಂಡಿತು.

ಪವರ್‌ ಪ್ಲೇಯಲ್ಲಿ ಗುಜರಾತ್‌ ಸ್ಕೋರ್‌ 4 ವಿಕೆಟಿಗೆ ಕೇವಲ 30 ರನ್‌ ಆಗಿತ್ತು. ಈ ಅವಧಿಯಲ್ಲಿ ಇಶಾಂತ್‌ ಶರ್ಮ, ಖಲೀಲ್‌ ಅಹ್ಮದ್‌, ಮುಕೇಶ್‌ ಕುಮಾರ್‌ ಘಾತಕವಾಗಿ ಪರಿಣಮಿಸಿದರು. ಖಲೀಲ್‌ ಒಂದು ಮೇಡನ್‌ ಓವರ್‌ ಮೂಲಕವೂ ಗಮನ ಸೆಳೆದರು.

ಪಂದ್ಯದ ದ್ವಿತೀಯ ಓವರ್‌ನಲ್ಲಿ ನಾಯಕ ಶುಭಮನ್‌ ಗಿಲ್‌ ಅವರ ವಿಕೆಟ್‌ ಉದುರುವ ಮೂಲಕ ಗುಜರಾತ್‌ ಕುಸಿತ ಮೊದಲ್ಗೊಂಡಿತು. ಗಿಲ್‌ ಗಳಿಕೆ ಕೇವಲ 8 ರನ್‌. ಈ ಯಶಸ್ಸು ಇಶಾಂತ್‌ ಪಾಲಾಯಿತು. ವೃದ್ಧಿಮಾನ್‌ ಸಾಹಾ ಕೂಡ ಪರದಾಡಿದರು. 10 ಎಸೆತಗಳಲ್ಲಿ ಬರೀ 2 ರನ್‌ ಮಾಡಿ ಮುಕೇಶ್‌ ಎಸೆತದಲ್ಲಿ ಬೌಲ್ಡ್‌ ಆದರು. 12 ರನ್‌ ಮಾಡಿದ ಸಾಯಿ ಸುದರ್ಶನ್‌ ರನೌಟ್‌ ಸಂಕಟಕ್ಕೆ ಸಿಲುಕಿದರು. ಡೇವಿಡ್‌ ಮಿಲ್ಲರ್‌ ಗಳಿಕೆ ಎರಡೇ ರನ್‌.

47 ರನ್ನಿಗೆ ಗುಜರಾತ್‌ನ 5 ವಿಕೆಟ್‌ ಬಿತ್ತು. ಇದು ಈ ಸೀಸನ್‌ನಲ್ಲಿ 5 ವಿಕೆಟ್‌ ಪತನದ ವೇಳೆ ದಾಖಲಾದ ಕನಿಷ್ಠ ಗಳಿಕೆ.
ಅಭಿನವ್‌ ಮನೋಹರ್‌ ಮತ್ತು ಶಾರುಖ್‌ ಖಾನ್‌ ಅವರನ್ನು ಟ್ರಿಸ್ಟನ್‌ ಸ್ಟಬ್ಸ್ ಸತತ ಎಸೆತಗಳಲ್ಲಿ ಉದುರಿಸಿದರು. ಇಬ್ಬರೂ ಸ್ಟಂಪ್ಡ್ ಔಟ್‌ ಆದದ್ದು ಕಾಕತಾಳೀಯ.

31 ರನ್‌ ಮಾಡಿದ ರಶೀದ್‌ ಖಾನ್‌ ಗುಜರಾತ್‌ ಸರದಿಯ ಟಾಪ್‌ ಸ್ಕೋರರ್‌. ಅವರು 2 ಫೋರ್‌ ಹಾಗೂ ಗುಜರಾತ್‌ ಸರದಿಯ ಏಕೈಕ ಸಿಕ್ಸರ್‌ ಹೊಡೆದರು.

ಟಾಪ್ ನ್ಯೂಸ್

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

8-

Charmadi ಘಾಟ್‌ನಲ್ಲಿ ಟಾಟಾ ಏಸ್‌ ಪಲ್ಟಿ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

8-

Charmadi ಘಾಟ್‌ನಲ್ಲಿ ಟಾಟಾ ಏಸ್‌ ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.