ವಿಂಡೀಸ್ ತಂಡಕ್ಕೆ ಮರಳಿದ ನರೈನ್, ಪೊಲ್ಲಾರ್ಡ್
Team Udayavani, Jul 23, 2019, 3:07 PM IST
ಭಾರತ ವಿರುದ್ದದ ಮೊದಲೆರಡು ಟಿ ಟ್ವೆಂಟಿ ಪಂದ್ಯಗಳಿಗೆ 14 ಆಟಗಾರರ ತಂಡವನ್ನು ಆಯ್ಕೆ ಮಾಡಿರುವ ವೆಸ್ಟ್ ಇಂಡೀಸ್ ಸುನೀಲ್ ನರೈನ್ ಮತ್ತು ಕೈರನ್ ಪೊಲ್ಲಾರ್ಡ್ ರನ್ನು ಮತ್ತೆ ಕರೆಸಿಕೊಂಡಿದೆ. ಸ್ಪೋಟಕ ಆಲ್ ರೌಂಡರ್ ಆಂದ್ರೆ ರಸ್ಸೆಲ್ ಕೂಡಾ ಆಯ್ಕೆಯಾಗಿದ್ದು, ಆದರೆ ಪಂದ್ಯಕ್ಕೆ ಮೊದಲು ಅವರು ಫಿಟ್ನೆಸ್ ಟೆಸ್ಟ್ ಗೆ ಒಳಪಡಬೇಕಾಗಿದೆ.
ವಿಂಡೀಸ್ ತಂಡವನ್ನು ಕಾರ್ಲೋಸ್ ಬ್ರಾಥ್ ವೇಟ್ ಮುನ್ನಡೆಸಲಿದ್ದಾರೆ. ವಿಕೆಟ್ ಕೀಪರ್ ಅಂಥೋನಿ ಬಾಂಬ್ರೆಲ್ ಮೊದಲ ಸಲ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಯುವ ಆಟಗಾರರಾದ ಕ್ಯಾರಿ ಪಿರ್ರೇ ಮತ್ತು ಜಾನ್ ಕ್ಯಾಂಪ್ ಬೆಲ್ ಕೂಡಾ ಟಿ ಟ್ವೆಂಟಿ ಸರಣಿಗೆ ಆಯ್ಕೆಯಾಗಿದ್ದಾರೆ.
ಸುನೀಲ್ ನರೈನ್ ವಿಂಡೀಸ್ ಪರವಾಗಿ ಟಿ- ಟ್ವೆಂಟಿ ಕೊನೆಯದಾಗಿ ಕಾಣಿಸಿಕೊಂಡಿದ್ದು 2016ರಲ್ಲಿ. ನಂತರ ಕೆರಬಿಯನ್ ತಂಡ ಸೇರಲು ವಿಫಲರಾಗಿದ್ದ ಸುನೀಲ್ ಮತ್ತೆ ತಂಡ ಸೇರಿದ್ದಾರೆ.
ತಂಡ: ಜಾನ್ ಕ್ಯಾಂಪ್ ಬೆಲ್, ಇವಿನ್ ಲೂಯಿಸ್, ಶಿಮ್ರನ್ ಹೆಟ್ಮೈರ್, ನಿಕೋಲಸ್ ಪೂರನ್,ಕೈರನ್ ಪೊಲ್ಲಾರ್ಡ್, ರೋವನ್ ಪೊವೆಲ್, ಕಾರ್ಲೋಸ್ ಬ್ರಾಥ್ ವೇಟ್, ಕೀಮೋ ಪೌಲ್, ಸುನೀಲ್ ನರೈನ್, ಶೆಲ್ಡನ್ ಕಾಟ್ರೆಲ್, ಒಶಾನೆ ಥೋಮಸ್, ಅಂಥೋನಿ ಬಾಂಬ್ರೆಲ್, ಆಂದ್ರೆ ರಸ್ಸೆಲ್, ಕ್ಯಾರಿ ಪಿರ್ರೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ