ಪೊಲೀಸರೊಂದಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ವಾದ

Team Udayavani, Jun 26, 2021, 11:01 PM IST

ಪೊಲೀಸರೊಂದಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ವಾದ

ಬಾಗಲಕೋಟೆ : ಜಿಲ್ಲೆಯ ಇಳಕಲ್ಲ ನಗರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಪೊಲೀಸರೊಂದಿಗೆ ವಾಗ್ವಾದ ನಡೆದ ಪ್ರಸಂಗ ಶನಿವಾರ ಸಂಜೆ ನಡೆದಿದೆ.

ಮಾಜಿ ಶಾಸಕ ಕಾಶಪ್ಪನವರ ಅವರಿಗೆ ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗುವ ಜಾಮೀನುಸಹಿತ ವಾರೆಂಟ್ ಜಾರಿಯಾಗಿದ್ದು, ಅದನ್ನು ತಲುಪಿಸಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಇದಕ್ಕೂ ಮುಂಚೆ ಕಾಶಪ್ಪನವರ ಮನೆಯಲ್ಲಿ ಕೌಟುಂಬಿಕ ಜಗಳ ನಡೆದಿದೆ ಎಂದು ಅಕ್ಕ-ಪಕ್ಕದ ಮನೆಯವರು ಫೋನ್ ಕಾಲ್ ಮಾಡಿ, ದೂರಿದ್ದರು. ಹೀಗಾಗಿ ನಾವು ಮನೆಗೆ ಬಂದಿದ್ದೇವೆ ಎಂದು ಪೊಲೀಸರು ಈ ವೇಳೆ ಕಾಶಪ್ಪನವರ್ ಅವರಿಗೆ ತಿಳಿಸಿದ್ದರು.

ಇದರಿಂದ ಗರಂ ಆದ ಮಾಜಿ ಶಾಸಕ ಕಾಶಪ್ಪನವರ್, ನಮ್ಮ ಮನೆಯಲ್ಲಿ ಜಗಳ ನಡೆದಿಲ್ಲ. ಅದು ಹೇಗೆ ಸರ್ಚ್ ವಾರೆಂಟ್ ಇಲ್ಲದೇ ನಮ್ಮ ಮನೆಗೆ ನುಗ್ಗಿದ್ದೀರಿ. ನಮ್ಮ ಮನೆಯಲ್ಲಿ ಯಾವಾಗ ಗಲಾಟೆ ಆಗಿದೆ ಎಂದು ಸಾಬೀತು ಮಾಡಿ. ಬಂಧಿಸುವುದಾಗಿ ಹೇಳುತ್ತೀರಿ. ನನ್ನನ್ನು ಬಂಧಿಸಿ ಎಂದು ಮನೆಯ ವರಾಂಡದಲ್ಲಿ ಕುಳಿತರು. ಈ ವೇಳೆ ಕಾಶಪ್ಪನವರ ಬೆಂಬಲಿಗರೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಇದನ್ನೂ ಓದಿ :ಒಬಿಸಿಗೆ ಮೀಸಲು ಸಿಗದಿದ್ದರೆ ರಾಜಕೀಯ ನಿವೃತ್ತಿ: ಫ‌ಡ್ನವೀಸ್‌

ಹುನಗುಂದ ಸಿಪಿಐ ಹೊಸಕೇರಪ್ಪ ಕೋಳೂರ, ಇಳಕಲ್ಲ ಪಿಎಸ್‌ಐ ಎಸ್.ಬಿ. ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ ಕಾಶಪ್ಪನವರ್ ಮನೆಗೆ ಭೇಟಿ ನೀಡಿ, ಬೆಂಗಳೂರಿನ ಕೋರ್ಟ್ ವಾರಂಡ್ ನೀಡಲು ಬಂದಿದ್ದೇವೆ. ನಿಮ್ಮ ಮನೆಯಲ್ಲಿ ತೀವ್ರ ಗಲಾಟೆ ನಡೆಯುತ್ತಿದೆ ಎಂದು ಫೋನ್ ಕರೆ ಬಂದಿವೆ. ಹೀಗಾಗಿ ನಾವು ಬಂದಿದ್ದೇವೆ. ನೀವು ಮಾಜಿ ಶಾಸಕರು. ಸುಮ್ಮನ್ನೆ ನ್ಯೂಸ್ ಕ್ರಿಯೆಟ್ ಮಾಡಬೇಡಿ. ನಾವು ನಿಮ್ಮ ಎದುರಾಳಿಗಲ್ಲ. ನಾವು ನಮ್ಮ ಕರ್ತವ್ಯ ನಿರ್ವಹಿಸಲು ಬಂದಿದ್ದೇವೆ. ಯಾರೇ, ಎಲ್ಲಿಂದಲೇ ಕರೆ ಮಾಡಿದರೂ ಹೋಗಿ ತಪಾಸಣೆ ಮಾಡುವುದು ನಮ್ಮ ಕರ್ತವ್ಯ ಎಂದು ವಾದಿಸಿದರು.

ಇದಕ್ಕೆ ಮತ್ತಷ್ಟು ಗರಂ ಆದ ಕಾಶಪ್ಪನವರ್, ನನ್ನ ಮೇಲೆ ಒಂದೇ ತಿಂಗಳಲ್ಲಿ ನಾಲ್ಕು ಪ್ರಕರಣ ದಾಖಲಿಸಿದ್ದೀರಿ. ನನಗೆ ಜೀವ ಬೆದರಿಕೆ ಇದೆ ಎಂದು ನಾನು ದೂರು ಕೊಟ್ಟರೂ ಈ ವರೆಗೆ ಯಾರನ್ನೂ ವಿಚಾರಣೆ ನಡೆಸಿಲ್ಲ. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದಂತೆ ನೀವೆಲ್ಲ ಕೇಳುತ್ತಿದ್ದೀರಿ. ತಾಲೂಕಿನಲ್ಲಿ ದ್ವೇಷದ ರಾಜಕೀಯ ಮಾಡುತ್ತಿದ್ದೀರಿ. ಇದಕ್ಕೆ ನಾನು ಜಗ್ಗುವುದಿಲ್ಲ. ನನ್ನನ್ನು ಬಂಧಿಸಿ ನೋಡಿ ಎಂದರು.

ಈ ವೇಳೆ ಕಾಶಪ್ಪನವರ ಮತ್ತು ಪೊಲೀಸರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಬಳಿಕ ಪೊಲೀಸರು, ಬೆಂಗಳೂರಿನಿಂದ ಬಂದಿದ್ದ ವಾರಂಟ್ ಪ್ರತಿ ನೀಡಿ, ಅಲ್ಲಿಂದ ಮರಳಿದರು.

ಟಾಪ್ ನ್ಯೂಸ್

4-Pavagada

Pavagada: ಸಿಡಿಲಿನ ಪರಿಣಾಮ ಹೊತ್ತಿ ಉರಿದ ದನದ ಕೊಟ್ಟಿಗೆ; ಸ್ಥಳದಲ್ಲಿಯೇ ಹಸು ಸಹಜೀವ ದಹನ

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

7

Miyazaki mango: ಶಂಕರಪುರದಲ್ಲಿ ವಿಶ್ವದ ದುಬಾರಿ ಮಾವಿನಹಣ್ಣು! 

5

ಲಕ್ಷದ್ವೀಪ ಪ್ರವಾಸೋದ್ಯಮದ ಅವಕಾಶ ಬಳಸಿಕೊಳ್ಳುವಲ್ಲಿ ಮಂಗಳೂರು ಹಿನ್ನಡೆ

Anjali Ambigera Case; Girish and Anjali got married 15 days ago!

Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

Heavy rain: ಮತ್ತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ; ಸಿಡಿಲಿಗೆ ಮತ್ತೋರ್ವ ಯುವಕ ಸಾವು 

Heavy rain: ಮತ್ತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ; ಸಿಡಿಲಿಗೆ ಮತ್ತೋರ್ವ ಯುವಕ ಸಾವು 

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

4-Pavagada

Pavagada: ಸಿಡಿಲಿನ ಪರಿಣಾಮ ಹೊತ್ತಿ ಉರಿದ ದನದ ಕೊಟ್ಟಿಗೆ; ಸ್ಥಳದಲ್ಲಿಯೇ ಹಸು ಸಹಜೀವ ದಹನ

Editorial; ರೈತರಿಗೆ ಸಕಾಲದಲ್ಲಿ ಹೊಸ ಸಾಲ ಸರಕಾರ ತುರ್ತಾಗಿ ಸ್ಪಂದಿಸಲಿ

Editorial; ರೈತರಿಗೆ ಸಕಾಲದಲ್ಲಿ ಹೊಸ ಸಾಲ ಸರಕಾರ ತುರ್ತಾಗಿ ಸ್ಪಂದಿಸಲಿ

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

Kundapur: ಹೇರಿಕೆರೆ ಅಭಿವೃದ್ಧಿಗೊಂಡರೆ ಹತ್ತಾರು ಹಳ್ಳಿಗಳಿಗೆ ನೀರು

Kundapur: ಹೇರಿಕೆರೆ ಅಭಿವೃದ್ಧಿಗೊಂಡರೆ ಹತ್ತಾರು ಹಳ್ಳಿಗಳಿಗೆ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.