UV Fusion: ಕೌತುಕ ಮೂಡಿಸುವ ತೇಲುವ ಗ್ರಾಮಗಳು..


Team Udayavani, Nov 8, 2023, 8:00 AM IST

12-uv-fusion

ನಮ್ಮ ಜಗತ್ತು ಹಲವಾರು ವಿಸ್ಮಯಗಳಿಂದ ಕೂಡಿದೆ. ಸಮಾಜ, ಪ್ರದೇಶಕ್ಕೆ ತಕ್ಕಂತೆ ಹಲವಾರು ಭಿನ್ನ ವಿಭಿನ್ನ ರೀತಿಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿದೆ. ವಿವಿಧ ಪ್ರದೇಶಗಳ ಭೌಗೋಳಿಕ ಲಕ್ಷಣಗಳಿಗೆ ಸರಿಯಾಗಿ ಅಲ್ಲಿನ ಜನರ ಜೀವನ ಪದ್ಧತಿ, ಭಾಷೆಗಳಲ್ಲಿ ಬದಲಾವಣೆಗಳಿರುತ್ತವೆ. ನಮ್ಮ ಜನರು ಯಾವ ರೀತಿ ಮನೆ ಕಟ್ಟುತ್ತಾರೆ ಎಂದು ಕೇಳಿದರೆ ನೆಲದ ಮೇಲೆ ಮಾತ್ರ ಎಂದು ತಮಾಷೆಯಾಗಿ ಹೇಳುವವರೇ ಜಾಸ್ತಿ. ಆದರೆ ನಮ್ಮ ಈ ಭೂದೇವಿಯಲ್ಲೂ ಹಲವಾರು ತೇಲುವ ಗ್ರಾಮಗಳಿವೆ. ಅಲ್ಲಿನ ಸ್ಥಳಗಳು ಹೆಚ್ಚು ಪ್ರಖ್ಯಾತಿ ಪಡೆದಿದ್ದರೂ ಕೂಡ, ಇಲ್ಲಿರುವ ಜನರ ಬದುಕು ನೀರಿನ ಮೇಲೆಯೇ… ಇವರ ಆಹಾರ ಪದ್ಧತಿ, ಜೀವನ ಶೈಲಿ, ಬದುಕುವ ರೀತಿ ಇತರರಿಗಿಂತ ಸ್ವಲ್ವ ಭಿನ್ನವೇ ಆಗಿದೆ.

ಪಶ್ಚಿಮ ಆಫ್ರಿಕಾದ ಬೆನಿನ್‌ನಲ್ಲಿರುವ ಗ್ರಾಮವೇ ಗನ್ವಿ. ನೊಕೌ ಸರೋವರದ ಮಧ್ಯದಲ್ಲಿದೆ ಈ ಗನ್ವಿ ಎಂಬ ಗ್ರಾಮ. 17ನೇ ಯ ಶತಮಾನದ ಹಿಂದಿನ ಕೃತಕ ದ್ವೀಪಗಳ ಸುತ್ತ ಜೋಡಿಸಲಾದ ವರ್ಣರಂಜಿತ ಮರದ ಸ್ಟೀಲಿನಿಂದ ಮನೆಗಳನ್ನು ಇಲ್ಲಿ ನಿರ್ಮಿಸಿ ವಾಸಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಸುಮಾರು 20,000 ಜನರು ವಾಸಿಸುತ್ತಿದ್ದು, ಇದು ತೇಲುವ ಹಳ್ಳಿ ಎಂದೇ ಪ್ರಸಿದ್ಧಿ ಪಡೆದಿದೆ.

ವಿಯೆಟ್ನಾಂ ದೇಶ ಪ್ರವಾಸಿಗರ ನೆಚ್ಚಿನ ತಾಣ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಇದು ಹೆಚ್ಚು ಪ್ರಸಿದ್ಧಿ ಪಡೆದಿರುವುದೇ ಪ್ರೇಕ್ಷಣೀಯ ಪ್ರವಾಸಿ ಸ್ಥಳಗಳಿಂದ. ಇಲ್ಲಿ ಕೂಡ ಒಂದು ತೇಲುವ ಗ್ರಾಮವಿದೆ. ಆ ಗ್ರಾಮದ ಹೆಸರು ಹಾ ಲಾಂಗ್‌ ಬೇ. ಹಾ ಲಾಂಗ್‌ ಬೇ ಒಂದು ಕಾಲದಲ್ಲಿ ಮೀನು ಮಾರುಕಟ್ಟೆಯಾಗಿತ್ತು. ಈ ಗ್ರಾಮದಲ್ಲಿ ಸುಮಾರು 1,600 ಮಂದಿ ವಾಸಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತೆ.

ವಿಯೆಟ್ನಾಂನ ಈ ನಗರಕ್ಕೆ ಹ ಲಾಂಗ್‌ ಬೇ ಅನ್ನೋ ಹೆಸರು ಬರೋದಿರುವುದಕ್ಕೂ ಒಂದು ಇತಿಹಾಸವಿದೆ. ವಿಯೆಟ್ನಾಂ ಮತ್ತು ಯುನೈಟೆಡ್‌ ಸ್ಟೇಟ್‌ಗಳ ಮಧ್ಯೆ ಯುದ್ಧ ನಡೆದ ಸಂದರ್ಭ ವಿಯೆಟ್ನಾಂನ ಪ್ರಜೆಗಳು ದೇವರಲ್ಲಿ ಯುನೈಟೆಡ್‌ ಸ್ಟೇಟ್‌ನ ಜನರನ್ನು ಇಲ್ಲಿಂದ ಓಡಿಸಿ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಆಗ ಜನರ ಬೇಡಿಕೆಯನ್ನು ಆಲಿಸಿಕೊಂಡ ದೇವರು ಆ ಪ್ರದೇಶಕ್ಕೆ‌ ಡ್ರ್ಯಾಗನ್‌ಗಳನ್ನು ಕಲಿಸುತ್ತಾರೆ. ಈ ಡ್ರ್ಯಾಗನ್‌ಗಳು ಇಳಿದ ಸ್ಥಳಕ್ಕೆ ಹಲಾಂಗ್‌ ಎಂದು ಹೆಸರು ಬಂತು ಎನ್ನಲಾಗುತ್ತದೆ.

ಇನ್ನು ಮಯನ್ಮಾರ್‌ ದೇಶ ಹೆಚ್ಚು ಪ್ರಸಿದ್ಧಿ ಪಡೆದಿರುವುದು ಕಡಲ ತೀರಗಳು ಮತ್ತು ಬೌದ್ಧ ದೇವಾಲಯಗಳಿಂದ. ಇಲ್ಲಿಯೂ ಯಾಂಗ್ವೆ ಎಂಬ ತೇಲುವ ಗ್ರಾಮವಿದೆ. ಇದೇ ರೀತಿ ಟಾನ್ಲ ಸ್ಯಾಪ್‌ ಎಂಬ ಗ್ರಾಮ ಕಾಂಬೋಡಿಯಾದಲ್ಲಿದೆ. ಟಾನ್ಲ ಸರೋವರ ಮೇಲೆಯೇ ಈ ತೇಲುವ ಗ್ರಾಮವಿದೆ. ಇನ್ನು ಥೈಲ್ಯಾಂಡ್‌ನ‌ ಫಾಂಗ್‌ ನ್ಗಾ ಪ್ರಾಂತ್ಯದಲ್ಲಿ ಕೋ ಪಾನ್ನಿ ಎಂಬ ತೇಲುವ ಗ್ರಾಮವಿದೆ.

ಇವರ ಬದುಕು ಇತರರಿಗಿಂತ ತುಂಬಾನೆ ವಿಶೇಷವೆಂದು ಹೇಳಬಹುದು. ಯಾಕಂದ್ರೆ ಇವರ ಬದುಕು ನಡೆಯೋದು ನೀರಿನ ಮೇಲೆಯೆ. ಇಮ್ರ ತಮ್ಮ ಮನೆಗಳನ್ನು ಕಟ್ಟುವ ರೀತಿಯೇ ವಿಶೇಷ. ನೀರಿನ ಮೇಲೆ ಬಲವಾದ, ಕಂಬಗಳನ್ನು ನೆಟ್ಟು ಅದರ ಮೇಲೆ ಮನೆಗಳನ್ನು ನಿರ್ಮಿಸುತ್ತಾರೆ. ಜೀವನ ನಿರ್ವಹಣೆಗೆ ಮುಖ್ಯವಾಗಿ ತರಕಾರಿಗಳು, ಹಣ್ಣುಗಳನ್ನು ಬಳಸುತ್ತಾರೆ.

ಆಧುನೀಕತೆಯಿಂದಾಗಿ ಇಂದು ಜನರು ಬಸ್, ಬೈಕು, ಆಟೋ, ಕಾರುಗಳಲ್ಲಿ ಓಡಾಡ್ತಾರೆ. ಆದ್ರೆ ತೇಲುವ ಗ್ರಾಮದ ಜನರು ಮಾತ್ರ ತಮ್ಮ ಸಂಚಾರಕ್ಕೆ ಕಯಾಕ್‌ಗಳನ್ನ ಉಪಯೋಗಿಸ್ತಾರೆ. ಈ ಕಯಾಕ್‌ಗಳೇ ಇವ್ರ ಸಂಚಾರಕ್ಕೆ ನೆರವಾಗ್ತಾ ಇರೋದು. ಮೀನುಗಾರಿಕೆಯೆ ಇವ್ರ ಜೀವನಕ್ಕೆ ಮೂಲ ಆಧಾರವಾಗಿದೆ. ಯಾಕಂದ್ರೆ ನೀರಿನ ಮೇಲೆಯೆ ಇವರು ತಮ್ಮ ಬದುಕನ್ನು ಕಟ್ಟಿಕೊಂಡ ಕಾರಣ ಮೀನುಗಳನ್ನು ಮಾರಾಟ ಮಾಡಿ ತಮ್ಮ ಬದುಕನ್ನು ಮುನ್ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇವೆಲ್ಲಾ ಪ್ರವಾಸಿ ತಾಣವಾದ ಕಾರಣ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಹಳ್ಳಿಯಲ್ಲಿ ಶಾಲೆ, ಮಾರುಕಟ್ಟೆಯ ಜತೆ ಮಸೀದಿಯನ್ನು ಕೂಡ ತೆರೆಯಲಾಗಿದೆ. ಪ್ರವಾಸಿ ತಾಣವಾದ ಕಾರಣ ಇತ್ತೀಚಿನ ದಿನಗಳಲ್ಲಿ ಇವರಿಗೆ ಜೀವನದ ಆದಾಯದ ಮೂಲವಾಗಿ ಮಾರ್ಪಟ್ಟಿದೆ. ಒಟ್ಟಾರೆಯಾಗಿ ನೋಡುತ್ತಾ ಹೋದರೆ, ತೇಲುವ ಗ್ರಾಮಗಳಲ್ಲಿ ಬದುಕುವ ಜನರು ಮೀನುಗಾರಿಕೆಯ ಜತೆ ಕೃಷಿಯನ್ನೇ ಅವಲಂಬಿಸಿರುವುದು ಕಂಡುಬರುತ್ತದೆ. ದೊಡ್ಡ ದೊಡ್ಡ ಕಂಬಗಳನ್ನು ಬಳಸಿಕೊಂಡು ತಮ್ಮ ಮನೆಗಳನ್ನು ನಿರ್ಮಿಸಿಕೊಂಡಿರುವುದು ಇಂದಿಗೂ ಅಚ್ಚರಿಯಾಗಿಯೇ ಉಳಿದಿದೆ.

ಇಲ್ಲಿನ ಜನರು ಹಳೆಯ ಕಾಲದ ತಾಮ್ರದ ಪಾತ್ರೆಗಳನ್ನು, ಅಲ್ಯುಮೀನಿಯಂ ಪಾತ್ರೆಗಳನ್ನೇ ನಿತ್ಯ ಜೀವನದಲ್ಲಿ ಬಳಸ್ತಿದ್ದಾರೆ. ಮಣ್ಣಿನ ಕೊಡಗಳನ್ನೂ ಕೂಡಾ ಬಳಕೆ ಮಾಡ್ತಾರೆ. ಇನ್ನು ಇವ್ರ ಕೃಷಿ ಪದ್ಧತಿ ಕೂಡ ತುಂಬಾನೆ ವಿಶೇಷ. ಯಾಕಂದ್ರೆ ಇಮ್ರ ನೀರಿಗಿಂತ ಸ್ವಲ್ಪ ಮೇಲಕ್ಕೆ ಎತ್ತರವಾಗಿ ಮಣ್ಣನ್ನು ಅಗೆದು ಅಲ್ಲಿ ಬೀಜವನ್ನು ಬಿತ್ತಿ ಕೃಷಿ ಮಾಡ್ತಾರೆ.

ಇದೇ ರೀತಿ ಹಂತ ಹಂತವಾಗಿ ಮಾಡಿಕೊಂಡು ಕೃಷಿ ಪದ್ಧತಿಯನ್ನು ಇನ್ನೂ ಮುಂದುವರೆಸಿದ್ದಾರೆ. ಇತ್ತೀಚೆಗೆ ಮಾನವನ ದುಷ್ಕೃತ್ಯಗಳಿಂದ ಅದೆಷ್ಟೋ ಪರಿಸರ ನಾಶವಾಗ್ತಾ ಇವೆ. ಹಾಗೇನೆ ಪ್ರಕೃತಿ ಕೂಡಾ ಅಂತವ್ರಿಗೆ ಭೂಕಂಪನ, ಚಂಡಮಾರುತ, ಬಿರುಗಾಳಿ, ಸುಳಿಗಾಳಿ ಮೂಲಕ ಸರಿಯಾದ ರೀತಿಯಲ್ಲಿಯೇ ಉತ್ತರ ನೀಡ್ತಾ ಇದೆ. ಇಂತಹ ದೃಷ್ಟಿಯಲ್ಲಿ ನೋಡುವುದಾದರೆ, ತೇಲುವ ಗ್ರಾಮಗಳ

ಜನರು ನೀರಿನ ಮೇಲೆಯೇ ದೊಡ್ಡ ದೊಡ್ಡ ಕಂಬಗಳನ್ನು ನಿರ್ಮಿಸಿ ಮನೆಗಳನ್ನು ಕಟ್ಟಿಕೊಂಡು ಬದುಕು ನಡೆಸುತ್ತಿರುವುದು ವಿಪರ್ಯಾಸವೇ ಸರಿ.

-ಹೇಮಾವತಿ

ಎಸ್‌ಡಿಎಮ್, ಉಜಿರೆ

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

UV Fusion: ಮುದ ನೀಡಿದ ಕೌದಿ

13-uv-fusion

UV Fusion: ನಾವು ನಮಗಾಗಿ ಬದುಕುತ್ತಿರುವುದು ಎಷ್ಟು ಹೊತ್ತು?

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

11-plastic

Eco-friendly Bio Plastic: ಪರಿಸರ ಸ್ನೇಹಿ ಮೆಕ್ಕೆಜೋಳದ ಬಯೋ ಪ್ಲಾಸ್ಟಿಕ್‌

15-uv-fusion

Nature: ಪ್ರಕೃತಿ ಮಾತೆಯೇ ನೀ ಏಕೆ ಮೌನವಾಗಿರುವೆ ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.