UV Fusion: ರೈಲುಗಾಡಿ ಸಂಖ್ಯೆ 16630


Team Udayavani, Nov 8, 2023, 7:45 AM IST

11-uv-fusion

ನೇಸರ ಬೆಳ್ಳಿ ಪರದೆಯಿಂದ ಮೆಲ್ಲಮೆಲ್ಲನೆ ಜಾರುವ ಸಮಯ ಅದಾಗಲೇ ಶುರುವಾಗಿಬಿಟ್ಟಿತ್ತು.  ಚಿಲಿಪಿಲಿ ಗಾನದ ನಡುವೆ ವೇಗವಾಗಿ ಮನೆಮುಟ್ಟುವ  ಭರದಲ್ಲಿದ್ದವು  ಹಕ್ಕಿಗಳು. ಆಗಸವು ನೇಸರನಿಗೆ ವಿದಾಯ ಹೇಳಲು ತವಕಿಸುತ್ತಿತ್ತು. ಮಧುರ ಮಾರುತದ ತಣ್ಣನೆ ಬೀಸುವ ತಂಗಾಳಿಯ ಆಲಿಂಗನಕ್ಕೆ  ಮನವಾದರೂ ಜಾರದೇ ಇರದು. ಇಂತಹ ಸಮಯದಲ್ಲಿ ರೈಲು ಅಥವಾ ಬಸ್‌ ವಿಂಡೋ ಸೀಟ್ನಲ್ಲಿ ಕೂತು ಗವಾಕ್ಷಿಯಿಂದ ಹೊರನೋಟ  ಬೀರಿದಾಗ ಕಣ್ಸೆಳೆಯುವ ಪ್ರಕೃತಿಯ ರಂಗೇರಿಸುವ ದೃಶ್ಯದ ಸೌಂದರ್ಯಕ್ಕೆ ಸಾಟಿಯಿಲ್ಲ.

ನನಗೂ ಮುಸ್ಸಂಜೆಯ ಪಯಣವೆಂದರೆ ಎಲ್ಲಿಲ್ಲದ ಖುಷಿ. ಕಣ್ಣಿಗೆ ಹಬ್ಬದ ವಾತಾವರಣವನ್ನು ಕಟ್ಟಿ ಕೊಡುವ ಬೇಸಗೆಯ ಮುಸ್ಸಂಜೆ ಸಮಯಕ್ಕೆ ಪುಳಕಿತನಾಗದೆ ಇರೆನು. ಕರಾವಳಿಯ ಕಾಲೇಜಿನಿಂದ ಮಲಬಾರ್‌ ಭಾಗಕ್ಕೆ ದಿನನಿತ್ಯದ ಓಡಾಟದಲ್ಲಿ ರೈಲು ಗಾಡಿಯು ನನಗೆ ಸಾಥ್‌ ಕೊಡುತ್ತಿತ್ತು. ಯಾವಾಗಲೂ ಮುಸ್ಸಂಜೆ ಪಯಣದ ಸವಿಯನ್ನು ನೆನೆಯುವ ಮನ ಪ್ರಕೃತಿಯನ್ನು ನೋಡದೇ ಇರದು. ಗೆಳೆಯರೊಂದಿಗೆ ಸಂವಾದ- ಸಂಧಾನ ಮಾಡಿಕೊಂಡು ವಿಂಡೋ ಸೀಟಿಗಾಗಿ ಕಾಡಿ ಬೇಡಿ ಪಡೆಯುತ್ತಿದ್ದಾರೆ.

ತಣ್ಣನೆ ಬೀಸುವ ಗಾಳಿಯು ಉಸಿರನ್ನು ಸೇರಿದಾಗ ದಮನಿಯು ತಂಪಾಗುತ್ತಿತ್ತು. ಅಕ್ಕಪಕ್ಕದಲ್ಲಿ ಕಾಣುವ ಹಸುರ ಗಿಡ ಮರ ಬಳ್ಳಿಗಳು ಹಸಿರೇ ಉಸಿರೆಂಬ ತತ್ವವ ಸಾರುವಂತಿದ್ದವು. ಇನ್ನು ನೇತ್ರಾವತಿಯ ಸೊಬಗನ್ನು ಕಣ್ತುಂಬಿಕೊಳ್ಳುವ ಸುಯೋಗವು ರೈಲ್ವೇ ಪಯಣಿಗನದ್ದು. ಉಳಿದ ನದಿಯಂತೆ ಅಲ್ಲದ ಈಕೆಗೆ ಉದ್ದವಾದ ಸೇತುವೆ. ಸೇತುವೆಯಿಂದಲೇ ಕರಾವಳಿಯಲ್ಲಿ ಜನಪ್ರಿಯ. ಆ ಸೇತುವೆಯ ಹಳಿಯ ಮೇಲೆ ರೈಲು ಗಾಡಿಯು ಮೆಲುವಾಗಿ ಹೋಗುವಾಗ ರೈಲು ಗಾಡಿಯ ಇಂಜಿನ್‌ ಸದ್ದು, ಬಂಡಿಯ ಹಾರ್ನ್ ಸದ್ದು ನೇತ್ರಾವತಿಯ ಅಂದವ  ಬಾಯ್ತುಂಬ ಹೊಗಳುವಂತಿತ್ತು.

ರೈಲು ಗಾಡಿ ಸಂಖ್ಯೆ 16629 ಮಂಗಳೂರು ಸೆಂಟ್ರಲ್‌ ಬಿಟ್ಟ ಕೂಡಲೇ ಸುಂದರ ರಮಣೀಯ ಪ್ರಕೃತಿಯ ಸೊಬಗನ್ನು ಕಣ್ತುಂಬುವ ಗಳಿಗೆಗೆ ಮುನ್ನುಡಿ ಬರೆಯುತ್ತದೆ. ದೂರದಲ್ಲಿ ಕಾಣುವ ಸಾಗರ, ಹರಿಯುವ ಜುಳು ಜುಳು ನದಿ ಎಲ್ಲವೂ ಎಷ್ಟೊಂದು ಚಂದ. ರೈಲುಗಾಡಿಯ ವೇಗ ಹೆಚ್ಚಾದಂತೆ ಕತ್ತಲೆಯೂ ಮೆಲ್ಲಮೆಲ್ಲನೆ ಮನೆ ಮಾಡುತ್ತಿತ್ತು. ಮೂಡಣದಲ್ಲಿ ಮೂಡಿದ ರವಿ ಬಾನಾಚೆ ಜಾರುವ ಮುನ್ನ ಕಣ್ಣಂಚಿನಲ್ಲಿ ಕವಲೊಡೆದ ಆಕರ್ಷಣೆಗೆ  ಸಾಕ್ಷಿ ಈ ಮುಸ್ಸಂಜೆ ಪಯಣ. ಉದಯನು ಅರೆ ಗಳಿಗೆ ಇದ್ದರೆ ಇನ್ನೂ ಸೊಬಗನ್ನು ಉಣಪಡಿಸುತ್ತಿದ್ದನೇನೋ ಅಲ್ಲವೇ!? ಆತ ಮರೆಯಾಗಿಯೇ ಬಿಟ್ಟ.

-ಗಿರೀಶ್‌ ಪಿ.ಎಂ.

ವಿ.ವಿ., ಮಂಗಳೂರು

ಟಾಪ್ ನ್ಯೂಸ್

Lokayukta

Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Dance: ಬಸಣ್ಣನ ಡ್ಯಾನ್ಸು

12-uv-fusion

Smile: ಕಷ್ಟ – ಸುಖದ ಜೀವನ… ನಗು ನಗುತಾ ಸಾಗಿ

11-uv-fusion

UV Fusion: ಕಡಲ ಕುವರರೇ, ನಿಮಗೊಂದು ಸಲಾಂ!

10-uv-fusion

Festival: ಊರ ಹಬ್ಬ

9-uv-fusion

Goal: ಬದಲಾವಣೆ ನಮ್ಮ ಗುರಿಯತ್ತ ಸಾಗುವಂತಿರಲಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Lokayukta

Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ

1-qwqeewqe

Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.