ಹಿರಿಯರಲ್ಲಿ ನಾ ಕಂಡಂತೆ ಕೋವಿಡ್ ಜಾಗೃತಿ
ಕೋವಿಡ್ ಕಾಲದ ಊರಿನ ಕಥೆಯಿದು..!
Team Udayavani, Jun 27, 2020, 10:00 AM IST
ಕೋವಿಡ್-19 ಎಂಬ ಕಣ್ಣಿಗೆ ಕಾಣದ ವೈರಸ್ ವಿಶ್ವಾದ್ಯಂತ ಹರಡಿದೆ. ಪ್ರತಿಯೊಬ್ಬರು ಸ್ವಯಂ ಜಾಗೃತರಾಗಿ ಹೋರಾಡಬೇಕೆಂಬ ಮಾತು ಕೇಳಿಬರುತ್ತಿದೆ. ಗ್ರಾಮೀಣ ಭಾಗದ ಕೆಲವು ಹಿರಿಯ ನಾಗರಿಕರಲ್ಲಿ ಈ ವೈರಸ್ ವಿರುದ್ಧ ಜಾಗೃತಿ ಮೂಡಿದೆ ಎಂಬುದು ಇತ್ತೀಚೆಗೆ ನನ್ನ ಅನುಭವಕ್ಕೆ ಬಂದಿತು.
ಇತ್ತೀಚೆಗೆ ನಾನು ಪುಟ್ಟ ಹಳ್ಳಿಯೊಂದಕ್ಕೆ ಭೇಟಿದಾಗ ಆ ಮನೆಯಲ್ಲಿ ಕೋವಿಡ್ ಮುಂಜಾಗ್ರತೆಯನ್ನು ಕಂಡು ಹಿರಿಯರಿಂದ ನಾವು ಕಲಿಯುವುದು ತುಂಬಾ ಇದೆ ಎಂಬುದು ಮನವರಿಕೆಯಾಯಿತು. ಅವರ ಮನೆಯ ಮುಂದಿನ ನಳ್ಳಿಯಲ್ಲಿ ಕಾಲು ತೊಳೆದುಕೊಂಡು ಅವರ ಮನೆಯ ಮುಂಬಾಗಿಲನ್ನು ಪ್ರವೇಶಿಸಿದೆನು. ಅಷ್ಟರಲ್ಲಿಯೇ ಅವರು ಒಂದು ಸ್ಯಾನಿಟೈಜರ್, ಒಂದು ಸೋಪ್ ಹಾಗೂ ಒಂದು ಟವಲ್ನ್ನು ನನ್ನ ಮುಂದಿಟ್ಟು, ಕೈ ತೊಳೆದು ಒರೆಸಿಕೊಳ್ಳಿ ಎಂದರು. ಅವರ ಆರೋಗ್ಯ ಕಾಳಜಿ ನನಗೆ ಮಾದರಿ ಎನಿಸಿತು.
ಅನೀಶ್ ಬಿ. ಬಿ.ಜಿ.ಎಸ್. ಶ್ರೀ ವೆಂಕಟೇಶ್ವರ ವಿದ್ಯಾಮಂದಿರ, ಕೊಪ್ಪ