UV Fusion: ಒಳ್ಳೆಯದು ಕೆಟ್ಟದ್ದು ಯಾವುದರಲ್ಲಿದೆ?


Team Udayavani, Sep 19, 2023, 2:00 PM IST

8–uv-fusion

ಅದೇನು ಹೆಣ್ಣು ಮಕ್ಕಳ್ಳೋ ಏನೊ? ನಯ ನಾಜುಕು ನಾಚಿಕೆ ಯಾವುದು ಇಲ್ಲ ಇತ್ತೀಚಿನ ಹೆಣ್ಣು ಮಕ್ಕಳಿಗೆ. ಮೊನ್ನೆ ನಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ಅಂತ ಹೋಗಿದ್ದೆ. ಅಲ್ಲಿ ಒಬ್ಳು ಹುಡುಗಿ ಅಸಭ್ಯ ಬಟ್ಟೆ ಹಾಕೊಂಡು ಬಂದಿದ್ಲು ಅಂತೀನಿ?! ಥು!!! ಥು!! ಕಾಲ ತುಂಬಾ ಕೆಟ್ಟು ಹೋಯ್ತಪ್ಪ….. ಇಂಥಹ ಬಹುತೇಕ ಮಾತುಕತೆಗಳನ್ನ ನಾವುಗಳು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಕೇಳುತ್ತಲೇ ಇರುತ್ತೇವೆ.

ಆದರೆ ಪ್ರಾಮಾಣಿಕವಾಗಿ ಹೇಳಿ. ಈಗಿನ ಕಾಲ ಬದಲಾಗಿದೆಯೋ ಅಥವಾ ಈಗಿನ ಕಾಲದಲ್ಲಿನ ಜನರ ನಡವಳಿಕೆಗಳು ಬದಲಾಗಿದೆಯೋ? ಈಗ ನನ್ನ ಪ್ರಶ್ನೆ ಏನೆಂದರೆ ಆ ಸಿನೆಮಾದಲ್ಲಿನ ಅಥವಾ ಆ ಕಾರ್ಯಕ್ರಮದಲ್ಲಿ ಆ ಹುಡುಗಿಯರು ಹಾಕಿದ್ದ ಬಟ್ಟೆಗಳ ಬಗ್ಗೆ ಯಾಕೆ ಮಾತಾಡಬೇಕು? ಸ್ನೇಹಿತರ ಅಥವಾ ಸ್ನೇಹಿತೆಯರೇ ನಡುವಿನ ಗಾಢವಾದ ಸ್ನೇಹ ಕಾಣ ಸಿಗುವುದಿಲ್ಲವೇ ಯಾಕೆ?.

ಅಣ್ಣ ತಮ್ಮಂದಿರ ನಡುವಿನ ಬಾಂಧವ್ಯ ಕಾಣ ಸಿಗುವುದಿಲ್ಲವೇ?, ಸಂಬಂಧಗಳ ಮೌಲ್ಯ ಕಾಣ ಸಿಗುವುದಿಲ್ಲವೇ? ಇಷ್ಟೆಲ್ಲಾ ಒಳ್ಳೇ ವಿಷಯಗಳು ಇರುವಾಗ ನಮ್ಮ ಕಣ್ಣು, ಮನಸು, ಬುದ್ಧಿ ಯಾತಕ್ಕೆ ಕೆಟ್ಟದ್ದರ ಬಗ್ಗೆಯೇ ಯೋಚಿಸುತ್ತದೆ, ಮಾತನಾಡುತ್ತದೆ.

ಇದರರ್ಥ ಇಷ್ಟೇ. ನಾವು ಪ್ರಪಂಚವನ್ನ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾ ಎಲ್ಲದರಲ್ಲೂ ಋಣಾತ್ಮಕ ಅಥವಾ ನಕರಾತ್ಮಕ ವಿಷಯಗಳನ್ನೇ ಗಣನೆಗೆ ತೆಗೆದುಕೊಳ್ಳುತ್ತ ಅದರ ಬಗ್ಗೆಯೇ ಯೋಚಿಸುತ್ತೇವೆ.ಅದೇ ನಮ್ಮ ಯೋಚನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ನೋಡಿ. ಋಣಾತ್ಮಕ ವಿಷಯಗಳನ್ನ    ಗಣನೆಗೆ ತೆಗೆದುಕೊಳ್ಳುವ ಬದಲು ಅದರಲ್ಲಿರುವ ಧಣಾತ್ಮಕ ಅಥವಾ ಸಕರಾತ್ಮಕ ವಿಷಯಗಳನ್ನ ಗಣನೆಗೆ ತೆಗೆದುಕೊಳ್ಳಿ. ಆಗ ನಮ್ಮ  ಕಣ್ಣಿಗೆ ಎಲ್ಲದರಲ್ಲೂ ಒಳ್ಳೆಯದೇ ಕಾಣಿಸುತ್ತದೆ.

ನಮ್ಮ ಬುದ್ಧಿ ಮತ್ತೆ,ಯೋಚನಾ ಶಕ್ತಿ ಸಕರಾತ್ಮಕ ಮನಸ್ಥಿತಿಯ ಮೇಲೆ ಎಲ್ಲವೂ ನಿಂತಿದೆ. ಪ್ರತಿಯೊಂದು ವಿಷಯದಲ್ಲಾಗಲಿ ಅಥವಾ ಕೆಲಸಗಲ್ಲಿ ಆಗಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಎರಡು ಪ್ರವೃತ್ತಿಗಳು ಇದ್ದೇ ಇರುತ್ತದೆ.ಆದರೆ ಅದನ್ನ ನಾವು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಚಿಂತನೆ ಅವಲಂಬಿತವಾಗಿರುತ್ತದೆ.ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ ಕಾಣಿಸುವುದಂತೆ.ನಕರಾತ್ಮಕ ಮನಸ್ಥಿತಿ ಗೆದ್ದಲು ಇದ್ದ ಹಾಗೇ. ನಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತಾ ಹೋಗುತ್ತಿದ್ದ ಹಾಗೇ ನಮ್ಮ ಸಕರಾತ್ಮಕ ಚಿಂತನೆಗಳು ಗೆದ್ದಲು ಕೊರೆದ ಹಾಗಗುತ್ತದೆ.

ಯಾವ ವ್ಯಕ್ತಿ ನಕರಾತ್ಮಕವಾಗಿ ಯೋಚಿಸುತ್ತಾನೋ ಅದು ಅವನ ವೈಯುಕ್ತಿಕ ಜೀವನದ ಮೇಲೆ ಅಡ್ಡ ಪರಿಣಾಮ ಬಿದ್ದೇ ಬೀರುತ್ತದೆ. ಪರಿಣಾಮವಾಗಿ ಅವನು ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಬಿಡುತ್ತಾನೆ.ಅದೇ ಧನಾತ್ಮಕವಾಗಿ ಯೋಚಿಸುವ ವ್ಯಕ್ತಿ ಅವನ ಸಕರಾತ್ಮಕ ಮನಸ್ಥಿತಿಯ ಫಲವಾಗಿ ಎಲ್ಲ ವಿಷಯದಲ್ಲೂ ಅತ್ಯುತ್ತಮ ಫಲಿತಾಂಶವನ್ನೇ ಕಾಣುತ್ತಾನೆ. ಪರಿಣಾಮವಾಗಿ ಯಶಸ್ಸು ಅವನದಾಗುತ್ತದೆ ಮತ್ತು ಅವನು ಉತ್ತುಂಗಕ್ಕೆ ಏರುತ್ತಾನೆ. ಇದೇ ಒಬ್ಬ ಸಕಾರಾತ್ಮಕ  ಚಿಂತಕನಿಗೂ ಒಬ್ಬ ನಕರಾತ್ಮಕ ಚಿಂತಕನಿಗೂ ಇರುವ ನಡುವಿನ ವ್ಯತ್ಯಾಸ. ಧನಾತ್ಮಕವಾಗಿ ಯೋಚಿಸಿ,  ಸಕಾರಾತ್ಮಕವಾಗಿರಿ.  ಮತ್ತು ಧನಾತ್ಮಕ ಫಲಿತಾಂಶವನ್ನು ಪಡೆಯಿರಿ.

-ಸುಸ್ಮಿತಾ ಕೆ. ಎನ್‌.

ಅನಂತಾಡಿ

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.