ಯಕ್ಷರಂಗದ ಯುವ ಪ್ರತಿಭೆ ಗುರುರಾಜ್‌


Team Udayavani, Jul 10, 2021, 12:18 PM IST

ಯಕ್ಷರಂಗದ ಯುವ ಪ್ರತಿಭೆ ಗುರುರಾಜ್‌

ರ್ಯಾಪ್‌ ಹಾಡು, ಪಾಶ್ಚಾತ್ಯ ಸಂಗೀತಗಳನ್ನು ಇಷ್ಟಪಡುವ ಇಂದಿನ ಯುವ ಜನಾಂಗಗಳ ನಡುವೆ ಶಾಸ್ತ್ರೀಯ ಸಂಗೀತ ಹಾಗೂ ಭಾರತೀಯ ಸಂಗೀತ ವಿಶೇಷಗಳು ಮರೆಯಾಗುತ್ತಿವೆ. ಅದನ್ನು ಹಾಡುವುದಕ್ಕೂ, ಕೇಳುವುದಕ್ಕೂ ಇಂದಿನವರು ತಯಾರಿಲ್ಲ. ಆದರೆ ಇಲ್ಲೋರ್ವ ಯುವ ಹಾಡುಗಾರ ಮಾತ್ರ ಇವರೆಲ್ಲರಿಗಿಂತಲೂ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

ಹಾಡುಗಳ ಮೂಲಕ ಕಥೆಯನ್ನು ವರ್ಣಿಸಿ ಪೂಜಿಸುವಂತಹ ಕಲೆ ಯಕ್ಷಗಾನ..ಆಧಾರಶೃತಿಯೊಂದನ್ನು ಇಟ್ಟುಕೊಂಡು ಭಾಗವತರು ಜಾಗಟೆ ಹಿಡಿದು ಚೆಂಡೆ ಮದ್ದಲೆಗಳವಾದನದ ಗತಿಯನ್ನು ನಿಯಂತ್ರಿಸುತ್ತಾ ಪಾತ್ರಧಾರಿಗಳು ರಂಗದಲ್ಲಿ ಅಭಿನಯಿಸಿ ಕುಣಿಯುವಂತೆ ಮಾಡುತ್ತಾರೆ.ಅಂತೆಯೇ,ಯಕ್ಷಧ್ರುವ ಪಟ್ಲರ ಹಾಡಿನಿಂದ ಪ್ರೇರಣೆಗೊಂಡು ತನ್ನ 12ನೇ ವಯಸ್ಸಿನಲ್ಲಿ ಭಾಗವತಿಕೆಗೆಯತ್ತ ಒಲವು ತೋರಿದ ಶಿಮಂತೂರು ಗುರುರಾಜ್‌ ಉಪಾಧ್ಯಾಯ ಇದೀಗ ಯಕ್ಷ‌ರಂಗದಲ್ಲಿ ಮಿಂಚುತ್ತಿರುವ ಯುವಕಲಾವಿದ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಶಿಮಂತೂರು ನಿವಾಸಿಗಳಾದ ಮೋಹನ್‌ಉಪಾಧ್ಯಾಯ ಮತ್ತು ವೀಣಾ.ಎಂ.  ದಂಪತಿ ಪುತ್ರ ಗುರುರಾಜ ಉಪಾಧ್ಯಾಯ.ಬಾಲ್ಯದಲ್ಲಿ ತನ್ನ ತಂದೆ ಯಕ್ಷಗಾನ ಹಾಡುಗಳನ್ನು ಕೇಳುತ್ತಿದ್ದಾಗ ಹಾಗೂ ತಂದೆಯ ಜತೆಗೆ ಯಕ್ಷಗಾನ ನೋಡಲು ಹೋಗುತ್ತಿದ್ದುದರಿಂದ ಸಹಜವಾಗಿ ಯಕ್ಷಗಾನದತ್ತ ಆಸಕ್ತಿ ಬೆಳೆಯಿತು.  ಹಾಡುಗಳನ್ನು ಗುಣುಗುಣಿಸುವುದನ್ನು ಕಂಡ ಹೆತ್ತವರು ಮಗನಿಗೆ ಸಂಗೀತ ಶಿಕ್ಷಣವನ್ನು ನೀಡಲು ನಿರ್ಧರಿಸಿದರು. ಯೋಗೀಶ ಬಳ್ಳಪದವು ಅವರ ಬಳಿ ಸಂಗೀತಾಭ್ಯಾಸ ಹಾಗೂ ಗಣೇಶ್‌ ಕೊಲೆಕಾಡಿ ಅವರ ಬಳಿ ಭಾಗವತಿಕೆಯ ಶಿಕ್ಷಣವನ್ನು ಪಡೆಯುತ್ತಾರೆ.

ಶಿಕ್ಷಣದ ಜತೆಗೆ ಹಾಡುವುದನ್ನೂ ಹವ್ಯಾಸವಾಗಿ ಬೆಳೆಸಿಕೊಂಡರು. ಕಾಲೇಜಿನ ವೇದಿಕೆಗಳು ಇವರ ಪ್ರತಿಭೆಗೆ ಪ್ರೋತ್ಸಾಹವನ್ನು ನೀಡಿದವು.

ಇದನ್ನೂ ಓದಿ: ಬದಲಾಗುತ್ತಿರುವ ಹಬ್ಬಗಳ ಸಂಭ್ರಮದ ಶೈಲಿ

ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆ.ಪಿ.ಎಸ್‌.ಕೆ. ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು. ಸೈಂಟ್‌ ಜೋಸೆಫ್ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ ಪದವಿ ಗಳಿಸಿ ಇದೀಗ ಖಾಸಗಿ ಕಂಪೆನಿಯಲ್ಲಿ ಉದ್ಯೋಗಸ್ತರಾಗಿದ್ದಾರೆ. ಉದ್ಯೋಗದ ಜತೆಗೆ ಹವ್ಯಾಸವನ್ನೂ ಮುಂದುವರಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

ಬಾಲ್ಯದಲ್ಲಿ ತನ್ನ ತಂದೆ ಯಕ್ಷಗಾನ ಹಾಡುಗಳನ್ನು ಕೇಳುತ್ತಿದ್ದಾಗ ಸಹಜವಾಗಿ ಯಕ್ಷಗಾನದತ್ತ ಆಸಕ್ತಿ ಬೆಳೆಯಿತು.ಯಕ್ಷಗಾನದ ಎಲ್ಲ ಹಾಡುಗಳನ್ನು ಇಷ್ಟಪಡುತ್ತಾರೆ. ಸಂಗೀತ ಹಾಗೂ ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

ಹವ್ಯಾಸಿ ಕಲಾವಿದರಾದ ಇವರು ಇದುವರೆಗೆ ಅನೇಕ ಗಾನವೈಭವ, ನಾಟ್ಯವೈಭವ, ಯಕ್ಷಗಾನ ಬಯಲಾಟ,ತಾಳಮದ್ದಳೆಗಳನ್ನು ನಡೆಸಿಕೊಟ್ಟಿದ್ದಾರೆ. ಅಭ್ಯಸಿಸದೆ ವೇದಿಕೆ ಏರಬಾರದು

ಮುಂಬರುವ ಕಲಾವಿದರು ಸರಿಯಾಗಿ ಯಕ್ಷಗಾನ ಭಾಗವತಿಕೆಯ ಅಭ್ಯಾಸವನ್ನು ಮಾಡದೇ ವೇದಿಕೆ ಏರಬಾರದು. ಕನಿಷ್ಠ ಬಾಲಪಾಠವನ್ನಾದರೂಕಲಿತಿರಬೇಕು ಎನ್ನುವ ಕಿವಿಮಾತನ್ನು ನೀಡುತ್ತಾರೆ ಗುರುರಾಜ್‌. ಯಕ್ಷಗಾನವನ್ನು ಪೂಜನೀಯವಾಗಿ ಕಾಣುವ ಇವರುಯಕ್ಷಗಾನವೆಂಬುದು ಕೇವಲ ಕಲಾಪ್ರಕಾರವಲ್ಲದೇ ದೈವಿಕಕಲೆಯೆನಿಸಿಕೊಂಡಿದೆ.ಎಲ್ಲ ಕಲೆಗೂ ದೈವಿಕವಾದ ಅನುಗ್ರಹವಿರುವುದಿಲ್ಲ.ಎಂಬ ಅಭಿಪ್ರಾಯ ಹೊಂದಿದ್ದಾರೆ. ಪಾಲಕರು  ಹಾಗೂ  ಸ್ನೇಹಿತರ ಸಹಕಾರ ಇಂದು ನನ್ನನ್ನು ಉತ್ತಮ ಕಲಾವಿದನಾಗುವಂತೆ ಮಾಡಿದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಳ್ಳುತ್ತಾರೆ.

 

ವೈಷ್ಣವಿ ಜೆ. ರಾವ್‌

ಅಂಬಿಕಾ ವಿದ್ಯಾಲಯ, ಪುತ್ತೂರು

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.