UV Fusion: ನನಗೂ ಜೀವ ಇದೆ


Team Udayavani, Dec 23, 2023, 7:30 AM IST

15-uv-fusion

ಅಂದು ಶುಭ್ರ ಮುಂಜಾನೆ. ನನ್ನ ರೆಂಬೆ ಕೊಂಬೆಯ ಮೇಲಿನ ಹನಿಗಳು ಚಿಗುರು ಬಿಸಿಲಿಗೆ ಇನ್ನೂ ಆರಿ ಹೋಗಿರಲಿಲ್ಲ. ಇನ್ನೇನು ಚಿಗುರು ಬಿಡುವ ಎಳೆಯ ಎಲೆಗಳು. ನಾನೊಂದು ಸಿಹಿಯಾದ ಪನ್ನೇರಳೆ ಹಣ್ಣಿನ ಮರ. ಭವಿಷ್ಯದಲ್ಲಿ ಹಣ್ಣಾಗುವ ನನ್ನ ಕಂದಮ್ಮಗಳ ಕನಸು ಕಾಣುತ್ತಾ ಹಾಗೇ ಅರಳಿ ನಿಂತಿದ್ದೆ. ಚಳಿಗೆ ಮೈ ಜುಮ್‌ ಎನ್ನುತ್ತಿತ್ತು. ಕಾಲೇಜು ಮಕ್ಕಳು ಒಬ್ಬೊಬ್ಬರಾಗಿ ಬರುತ್ತಿದ್ದರು. ನನ್ನ ಹಣ್ಣುಗಳನ್ನು ಅವರ ಮಡಿಲಿಗೆ ಹಾಕುವ ಯೋಜನೆಯನ್ನು ಕಲ್ಪಿಸಿಕೊಳ್ಳುತ್ತಲೇ ನನ್ನ ತುಟಿ ಅರಳಿತ್ತು.

ಹನಿ ಬಿಸಿಲಿಗೆ ಮೈಯೊಡ್ಡಿ ಚೆಂದದಿ ನಿಂತಿದ್ದೆ. ಅದಾರೋ ಇಬ್ಬರು ನನ್ನ ಬಳಿಯೇ ಬರುತ್ತಿರುವ ಭಾಸವಾಯಿತು. ಕಣ್ಣು ಮುಚ್ಚಿ ತೆರೆಯುವುದರಲ್ಲಿ ನನ್ನ ಬೆನ್ನು ಮೂಳೆಗೆ ಬಲವಾಗಿ ಹೊಡೆತ ಬಿದ್ದಿತ್ತು. ನನ್ನ ತೊಗಟೆ ಸೀಳಿ ಹೋಗಿತ್ತು. ಕಣ್ಣು ಕೆಳಗೆ ಮಾಡಿ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮತ್ತೂಂದು ಪೆಟ್ಟು ಬಿದ್ದಿತ್ತು ಊರಗಲದಲ್ಲಿ ಚಾಚಿಕೊಂಡಿರುವ ಕೈಗೆ. ಏನು ನಡೆಯುತ್ತಿದೆ ಇಲ್ಲಿ ಎಂಬುದು ಒಂಚೂರು ಅರ್ಥವಾಗಿರಲಿಲ್ಲ. ಯಾರೋ ಒಬ್ಬ ನನ್ನ ಕೈಯನ್ನು ಜೋರಾಗಿ ಎಳೆದಿದ್ದ. ನನ್ನ ಎಳೆಯ ಕಾಯಿಗಳನ್ನು ಛಿದ್ರ ಛಿದ್ರವಾಗಿ ಹರಿದು ಹಾಕುತಿದ್ದ.

ಹೇ ಅಣ್ಣಂದಿರ.. ನನ್ನ ಮುಗ್ದ ಕಂದಮ್ಮಗಳು ಅವು.. ಕಾಯಿ  ಬಲಿಯುವ ತನಕ ಬದುಕಲು ಬಿಡಿ.. ಇನ್ನು ಪುಟ್ಟ ಕಣ್ಣನ್ನೂ ಒಡೆದಿಲ್ಲ. ಹಸುಗೂಸ ಕೊಲ್ಲುವುದು ಪಾಪದ ಕೆಲಸ ಎಂದು ಜೋರಾಗಿ ಕೂಗಿಕೊಂಡಿದ್ದೆ. ಉಹೂ ಒಬ್ಬರಿಗೂ ನನ್ನ ಕೂಗು ಕೇಳಲೇ ಇಲ್ಲ. ರಪ ರಪನೇ ಕೋಲು ತೂರುತಿದ್ದರು. ಅವರು ಹೊಡೆಯುತಿದ್ದ ಪೆಟ್ಟಿಗೆ ನನ್ನ ಮೈ ಪುಡಿಯಾದಂತೆ ನೋವಾಗುತ್ತಿತ್ತು. ದೇಹ ಕಂಪಿಸುತ್ತಿತ್ತು. ಮಾತೊಂದು ಬರುವುದಿಲ್ಲ ಎಂಬುದು ಬಿಟ್ಟರೆ ನನಗೂ ಜೀವ ಇದೆಯಲ್ಲ. ತುಟಿ ಕಚ್ಚಿ ಅತ್ತಿದ್ದೆ.

ಅದೆಲ್ಲಾ ಅವರಿಗೆಲ್ಲಿ ಕಾಣಬೇಕು. ತಂಡ ತಂಡವೇ ನನ್ನೊಡಲಿಗೆ ಕೈ ಹಾಕಿತ್ತು. ಒಂದೆರಡು ನಿಮಿಷವಲ್ಲ. ಗಂಟೆಗಟ್ಟಲೆ ನನ್ನ ಜೀವ ತೇಯ್ದಿದ್ದರು. ನನ್ನ ಎಳೆಯ ಕಾಯಿಗಳನ್ನು ಹಂಚಿ ತಿಂದು ತೇಗಿದ್ದರು.  ನಾಳೆಯ ಕನಸು ಹೆಣೆಯುತಿದ್ದ ನನ್ನ ಚಿಗುರು ಎಲೆಗಳನ್ನು ತರಚಿ ಹೊಸಕಿ ಹಾಕಿದ್ದರು.  ನಿಮ್ಮ ಅಮ್ಮನಂತೆ ನಾನು ಹೊಸ ಜೀವಕ್ಕೆ ಜೀವ ಕೊಟ್ಟಿರುವೆ. ಪುಟ್ಟ ಕಾಯಿಗಳನ್ನಾದರೂ ಬಿಡಿ ಎಂದು ಬೇಡಿ ಕೊಂಡಿದ್ದಾರೆ. ತಾಯಿಯೊಬ್ಬಳ ಶಾಪವಿದೆ ನಿಮ್ಮ ಮೇಲೆ ಎಂದು ವದರಿದ್ದೆ. ಉಹೂ ಕಲ್ಲು ಬಂಡೆಗಳವು  ಕೇಳಲೇ ಇಲ್ಲ. ನನ್ನಲ್ಲೂ ಕೂಗುವ ಶಕ್ತಿ ಇರಲಿಲ್ಲ.. ಕಣ್ಣು ಮಂಜಾಗಿತ್ತು. ಪಾಪ.. ಹಸಿವಿರಬಹುದು. ಎಷ್ಟು ದಿನವಾಗಿತ್ತೋ ಊಟ ಮಾಡಿ ನನ್ನ ಕಾಯಿಗಳಿಂದ ಹೊಟ್ಟೆ ತುಂಬಿತಲ್ಲ ಖುಷಿಯಾಗಿರಿ ಎಂದು ಕಣ್ಣು ಮುಚ್ಚಿದ್ದೆ.

ಮಾರನೇ ದಿನ ಎಚ್ಚರವಾದಾಗ ನನ್ನ ಗಾಯಗಳು ಸ್ವಲ್ಪ ಮಾಗಿತ್ತು. ಮೈ ಕೈ ನೋವು ಹಾಗೇ ಇತ್ತು. ಯಾರಾದರೂ ಸನಿಹಕ್ಕೆ ಬಂದರೆ ಗಡ ಗಡ ನಡಗುತ್ತಿದ್ದೆ.  ನನ್ನ ಪುಟ್ಟ ಕೂಸುಗಳ ಹೆಣಗಳು ನನ್ನ ಕಾಲ ಬುಡದಲ್ಲೇ ಬಿದ್ದಿತ್ತು.. ಚಿಗುರು ಎಲೆಗಳು ಬಾಡಿ ಹೋಗಿತ್ತು. ಮತ್ತೂಂದು ತಂಡ ಇಂದು ಯುದ್ಧಕ್ಕೆ ಸಜ್ಜಾಗಿದೆ ಎಂದು ಅರಿತಾಗ ಅಯ್ಯ ರಾಕ್ಷಸರ.. ನನಗೂ ಜೀವವಿದೆ. ಭಾವನೆ ಇದೆ.. ಎಂದು ಕೂಗಬೇಕೆನಿಸಿತ್ತು…

ಮೂಕಿಯಾದರೇನು ನಾನು ತಾಯಿಯಲ್ಲವೆ?

ಮರವಾದರೇನು? ನನಗೂ ಜೀವವಿಲ್ಲವೆ?

-ಶಿಲ್ಪಾ ಪೂಜಾರಿ

ಜಡ್ಡಿಗದ್ದೆ

ಟಾಪ್ ನ್ಯೂಸ್

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.