UV Fusion: ಲೋಪವಿರುವುದು ಅಭ್ಯರ್ಥಿಗಳಲ್ಲೋ ಅಧಿಕಾರಿಗಳಲ್ಲೋ?

Team Udayavani, Feb 22, 2024, 8:00 AM IST

7-uv-fusion

ಎಂದಿನಂತೆ ಮುಂಜಾನೆ ಪತ್ರಿಕೆಯನ್ನು ಓದುತ್ತಿರುವಾಗ ನಾಲ್ಕನೇ ಪುಟದ ಬಲ ಭಾಗದಲ್ಲಿದ್ದ ಸುದ್ದಿಯೊಂದು ಬಲವಾಗಿ ನನ್ನನ್ನು ಕಾಡಿತ್ತು. ಆ ಸುದ್ದಿ ಪಿಎಸ್‌ಐ ಪರೀಕ್ಷೆಗೆ ಡ್ರೆಸ್‌ ಕೋಡ್‌ ಎಂಬ ಶೀರ್ಷಿಕೆಯಲ್ಲಿತ್ತು. ಹಲವು ತಿರುವುಗಳ ಬಳಿಕ ಜನವರಿ 23ರಂದು ನಡೆಯಲಿರುವ ಸಬ್‌ ಇನ್‌ಸ್ಪೆಕ್ಟರ್‌ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆಇಎ ಡ್ರೆಸ್‌ ಕೋಡ್‌ ಬಿಡುಗಡೆ ಮಾಡಿದೆ.

ಈ ಸುದ್ದಿ ಉದ್ದಕ್ಕೂ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಧರಿಸಬಹುದಾದ ಉಡುಗೆ – ತೊಡುಗೆಗಳ ವಿವರಣೆಯನ್ನು ಸಾಲು ಸಾಲಾಗಿ ನೀಡಲಾಗಿತ್ತು. ಕುಡಿಯುವ ನೀರಿನ ಬಾಟಲಿ ತರುವುದು ನಿಷೇಧದಿಂದ ಹಿಡಿದು ದೊಡ್ಡ ಬಟನ್‌ ಬಟ್ಟೆಗಳನ್ನು ಧರಿಸಬಾರದು ಎಂಬ ಸೂಕ್ಷ್ಮ ಸಂಗತಿಯವರೆಗೂ ನೀತಿ ನಿಯಮಗಳನ್ನು ಕೊಡಲಾಗಿತ್ತು.

ಈ ಹತ್ತಾರು ಶರತ್ತುಗಳನ್ನು ಓದಿದ ಬಳಿಕ ನನ್ನಲ್ಲಿ ಮೂಡಿದ ಸಂಶಯವೆಂದರೆ ಕೆಇಎ ಪ್ರತೀ ಪರೀಕ್ಷೆಯಲ್ಲೂ ಇಂತಹ ಸೂಚನೆಗಳು ಇರುವುದು ಹೊಸತೇನಲ್ಲ, ಎಲ್ಲ ಪರೀಕ್ಷೆಗಳನ್ನು ಎಂದಿನಂತೆ ಸಹಜ. ಆದರೆ ಕಳೆದ ಬಾರಿ ನಡೆದ ಪಿಎಸ್‌ಐ ಪರೀಕ್ಷೆಯಲ್ಲಿ ಈ ನಿಯಮಾವಳಿಗಳು ಇರಲಿಲ್ಲವೇ?, ಇದ್ದರೂ ಪರೀಕ್ಷಾ ಪ್ರಾಧಿಕಾರದವರು ಗಮನಿಸಲಿಲ್ಲವೇ?, ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕೆಮರಾಗಳು ಇರಲಿಲ್ಲವೇ, ಇದ್ದರೂ ಅದನ್ನು ಪರಿಶೀಲನೆಗೆ ಒಳಪಡಿಸಲಿಲ್ಲವೇ? ಕಳೆದ ಬಾರಿಯೂ ಪರೀಕ್ಷೆ ಸಮೀಪಿಸುತ್ತಿದ್ದಂತೆ ಇಲಾಖೆ ಇದೇ ರೀತಿಯ ಸುತ್ತೋಲೆಯನ್ನು ಹೊರಡಿಸಿರಲಿಲ್ಲವೇ? ಇಷ್ಟೆಲ್ಲಾ ಕಟ್ಟುನಿಟ್ಟಿನ ಪಾಲನೆಗಳು ಯಶಸ್ವಿಯಾಗಿದ್ದರೆ ಅಕ್ರಮ ಎಲ್ಲಿ ಮತ್ತು ಹೇಗೆ ನಡೆದವು ಎಂದು.

ರಾಜ್ಯದ ಕಾನೂನು ಸುವ್ಯವಸ್ಥೆಗಳ ರಕ್ಷಣೆಗೆ ಬೆನ್ನೆಲುಬಾಗಿರಬೇಕಿರುವ ಆರಕ್ಷಕರ ಪರೀಕ್ಷೆಗಳಿಗೆ ರಕ್ಷಣೆ ಇಲ್ಲದಂತಾಯಿತಾ! ಸಾವಿರಾರು ವರಿಷ್ಠ ಅಧಿಕಾರಿಗಳಿರುವ ಸರಕಾರದ ಇಲಾಖೆಗಳಿಗೆ ಒಂದು ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗಲಿಲ್ಲವೆ? ಅಕ್ರಮಗಳ ಹಿಂದೆ ಅಧಿಕಾರಿಗಳೇ ಶಾಮೀಳಾಗಿರುವರೇ…?

ಒಟ್ಟಾರೆಯಾಗಿ ಕೆಇಎನ ಪರೀಕ್ಷೆಗಳಲ್ಲಿ ಈ ಮಟ್ಟದ ಅಕ್ರಮಗಳು ನಡೆಯಲು ಲೋಪವಿರುವುದು ಅಭ್ಯರ್ಥಿಗಳಲ್ಲೋ ಅಥವಾ ಅಧಿಕಾರಿಗಳಲ್ಲೋ ಎಂಬ ಸಂಶಯ ಎಲ್ಲರಲ್ಲೂ ಮನೆ ಮಾಡಿದೆ. ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಸರಕಾರವು ಸೇರಿದಂತೆ ಕೆಇಎನ ಕಾರ್ಯನಿರ್ವಾಹಕ ನಿರ್ದೇಶಕರು ತನ್ನ ಇಲಾಖೆಯ ಅಧಿಕಾರಿಗಳಿಗೆ ಯಾವ ರೀತಿಯ ನಿಯಮಗಳನ್ನು ಬೋಧಿಸಿದೆ?

ಈ ವರೆಗೆ ಅಕ್ರಮ ಎಸಗಿದ ಎಷ್ಟು ಜನ ಅಧಿಕಾರಿಗಳಿಗೆ ಕ್ರಮ ಜರುಗಿಸಿದೆ. ಆಯ್ಕೆ ಪ್ರಕ್ರಿಯೆಗಳಲ್ಲಿ ಯಾವ ಮಟ್ಟಿನ ಪಾರದರ್ಶಕತೆಯನ್ನು ಪಾಲಿಸುತ್ತಿದೆ? ಅಭ್ಯರ್ಥಿಗಳಿಗೊಂದು ನ್ಯಾಯ ಅಧಿಕಾರಿಗಳಿಗೆ ಒಂದು ನ್ಯಾಯ. ಇದೇ ಕಾರಣಕಲ್ಲವೇ ಅಭ್ಯರ್ಥಿಗಳು ಇಲಾಖೆಯ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳುವುದು. ಇಂತಹ ಹತ್ತಾರು ಪ್ರಶ್ನೆಗಳು ನನ್ನಂಥ ಸಾವಿರಾರು ಅಭ್ಯರ್ಥಿಗಳಿಗೆ ಕಾಡಿದೆ ಎಂಬುದು ನನ್ನ ನಂಬಿಕೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದಕ್ಕೆ ಉತ್ತರವನ್ನು ನೀಡಬೇಕು. ನೂರಾರು ನೀತಿ ನಿಯಮಗಳನ್ನು ಅಭ್ಯರ್ಥಿಗಳ ಮೇಲೇರಿ ಹಿಂಸಿಸುವ ಬದಲು ಅಕ್ರಮ ಎಸಗುವ ಇಲಾಖೆಯ ಅಧಿಕಾರಿಗಳಿಗೆ ಕಠಿನವಾಗಿ ಶಿಕ್ಷೆಯಾಗಬೇಕು. ಅಂತಿಮವಾಗಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆದು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಫ‌ಲ ಶ್ರುತಿ ಆಗುವಂತೆ ಮಾಡಬೇಕು.

 ಅರವಿಂದ

ಎಸ್‌.ಡಿ.ಎಂ. ಕಾಲೇಜು, ಉಜಿರೆ

ಟಾಪ್ ನ್ಯೂಸ್

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ

7

Bengaluru: ಸೈಕಲ್‌ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಬಂಧನ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.