First Bench: ನಾನು ಮತ್ತು ಫ‌ಸ್ಟ್‌  ಬೆಂಚು


Team Udayavani, Oct 15, 2023, 1:12 PM IST

First Bench: ನಾನು ಮತ್ತು ಫ‌ಸ್ಟ್‌  ಬೆಂಚು

ಕೀಟಲೆಗಳನ್ನು ಮಾಡುತ್ತಾ, ಅಧ್ಯಾಪಕರ ದೃಷ್ಟಿಯಲ್ಲಿ ತರಗತಿಗಳಿಗೆ ತೊಂದರೆ ನೀಡುತ್ತಾ, ಸಹಪಾಠಿಗಳೊಂದಿಗೆ ತಮಾಷೆ, ಜಗಳ, ಹರಟೆ ಹೊಡೆಯುತ್ತಾ ಕಾಲೇಜು ಲೈಫ‌ನ್ನೇ ಸ್ಮರಣೀಯ ಮಾಡುವಂತಹ ಲಾಸ್ಟ್‌ ಬೆಂಚನ್ನು ಮರೆಯಲು ಸಾಧ್ಯವೇ? ಇಲ್ಲ. ಆದರೆ ಅದರ ಜತೆಜತೆಗೆ ಯಾರಿಗೂ ಗೊತ್ತಿಲ್ಲದ ಅಷ್ಟೇನೂ ಪ್ರಚಾರವಿಲ್ಲದ ಫ‌ಸ್ಟ್‌ ಬೆಂಚಿನ ಕತೆಗಳು ಕೂಡ ಬೆಳಕಿಗೆ ಬರಬೇಕಲ್ಲವೇ?, ಹಾಗಾಗಿಯೇ ಈ ಲೇಖನ.

ನನ್ನ ಪದವಿ ಕಾಲೇಜಿನಲ್ಲಿ ಕಳೆದ ದಿನಗಳನ್ನು ಒಮ್ಮೆ ಹಿಂತಿರುಗಿ ನೋಡಿದರೆ ಅಬ್ಟಾ! ಅವು ದಿನಗಳಲ್ಲ ಸುವರ್ಣಯುಗವೇ ಸರಿ. ಕಳೆದು ಹೋದ ದಿನಗಳಿಗೆ ಮತ್ತೆ ಹೋಗಿ ಬರಬಹುದಾದ ತಂತ್ರಜ್ಞಾನ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆಲ್ಲ ಅನ್ನಿಸುವುದುಂಟು. ಐದಕ್ಕಿಂತ ಸ್ವಲ್ಪವೇ ಸ್ವಲ್ಪ ಹೆಚ್ಚು ಅಡಿ ಎತ್ತರವಿದ್ದ ನಾನು ಕುಳಿತುಕೊಳ್ಳುತ್ತಿದ್ದುದು ಫ‌ಸ್ಟ್‌ ಬೆಂಚಿನಲ್ಲಿ.

ನಿಮ್ಮ ಊಹೆಯಲ್ಲಿ ನಾನು ಕಲಿಯಲು ಮುಂದಿದ್ದು, ಕೀಟಲೆಗಳನ್ನು ಮಾಡದೆ, ತರಗತಿಯಲ್ಲಿ ಬೊಬ್ಬೆ ಹೊಡೆಯದೆ ಇದ್ದ ಕಠುಶಿಸ್ತಿನ, ಫ‌ಸ್ಟ್‌ ರ್‍ಯಾಂಕ್‌ ವಿದ್ಯಾರ್ಥಿಯಾಗಿದ್ದೆ ಎಂದು ಅಂದುಕೊಂಡರೆ, ದಯವಿಟ್ಟು ಕ್ಷಮಿಸಿ. ನಾನಂತವನಲ್ಲ. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ ಆದರೆ ಸುಮ್ಮನಿರುತ್ತಿದ್ದ ಜಾಯಮಾನ ನನ್ನದಲ್ಲ. ನಾನು ಸುಮ್ಮನಿದ್ದರೂ ನನ್ನ ಬಾಯಿ ಸುಮ್ಮನಿರುತ್ತಿರಲಿಲ್ಲ, ಹೊಟ್ಟೆಗೆ ಹಸಿವೆಯೇ ಇಲ್ಲದಿದ್ದರೂ ಬಾಯಿಗೆ ಹಸಿವಿತ್ತು, ಪಾಠಗಳ ನಡುವೆಯೇ ಚಿಪ್ಸ್‌ ಪ್ಯಾಕುಗಳು, ಚಾಕೋಲೇಟುಗಳು ಖಾಲಿಯಾಗುತ್ತಿದ್ದವು, ಅವುಗಳ ರ್ಯಾಪರ್‌ಗಳು ಡೆಸ್ಕಿನ ಒಳಗೆ ಒಂದು ಮೂಲೆಯಲ್ಲಿ ಹೋಗಿ ಸೇರುತ್ತಿದ್ದವು. ಕಿವಿಯಂತೂ ಅಧ್ಯಾಪಕರು ಪಾಠ ಮಾಡುತ್ತಾ ಇದ್ದರೆ ಅವರು ಹೇಳುವುದರಲ್ಲಿಯೇ ತಲ್ಲೀನವಾಗಿರುತ್ತಿತ್ತು. ಕೈ ಕವನಗಳನ್ನು ಬರೆಯುತ್ತಿತ್ತು. ಕಣ್ಣುಗಳು ಒಮ್ಮೆ ಕೈ ಏನು ಬರೆಯುತ್ತಿದೆ ಎಂದು ನೋಡುತ್ತಿತ್ತು, ಮತ್ತೂಮ್ಮೆ ಅಧ್ಯಾಪಕರು ತನ್ನನ್ನು ನೋಡುತ್ತಿದ್ದಾರೆಯೇ ಎಂದು ಗಮನಿಸುತ್ತಿತ್ತು. ಹೀಗೆ ಒಂದು ದಿನ ತರಗತಿಯಲ್ಲಿ ಒಂದೆಡೆ ಅಧ್ಯಾಪಕರು ಪಾಠ ಮಾಡುತ್ತಿರಬೇಕಾದರೆ, ಇನ್ನೊಂದೆಡೆ ನಾನು,
ಮೊದಲಿಗೆ ಅವಳ ನೋಡಿದೆ ಕಾಲೇಜಲ್ಲಿ…
ಅವಳ ಹೆಸರೂ ತಿಳಿದಿತ್ತು “ಮಲ್ಲಿ’
ನಮಗಿಬ್ಬರಿಗೂ ಅಗಿತ್ತು ಮಾತುಕತೆ, ಸನ್ನೆಯಲ್ಲಿ
ಸಿಲುಕಿಬಿಟ್ಟೆನಾ ನಾನು ಪ್ರೀತಿಯ ಬಲೆಯಲ್ಲಿ?
ಗೊತ್ತಿತ್ತು ನನಗೆ, ನಾನಿದ್ದೆ ಅವಳದೇ ಗುಂಗಿನಲ್ಲಿ
ಅವಳಿಗೆ ಚಿಂತೆ, ನಾ ಫೇಲಾದರೆ, ಎಕ್ಸಾಮಿನಲ್ಲಿ!
ಗೊತ್ತಿಲ್ಲ ಅವಳಿಗೆ, ನಾನು ಬಲು ಚಾಲಾಕಿ…
ಬರುತ್ತಿದ್ದೆ 3 ಗಂಟೆಯದ್ದನ್ನು 1 ಗಂಟೆಯಲ್ಲಿ ಗೀಚಾಕಿ!
ನಾನೂ ಸೆಳೆದಿದ್ದೆ “ಮಲ್ಲಿ’ಯ ಮನಸ್ಸನ್ನು
ಹೇಳಿಕೊಂಡೆವು ಇಬ್ಬರೂ, ಸರಿಸಿ ನಾಚಿಕೆಯನ್ನು
ಆಗೋಣವೇ ಮದುವೆ, ಒಪ್ಪಿಸಿ ಎಲ್ಲರನ್ನೂ?
ವರುಣನೂ ಸೂಚಿಸಿದ್ದನೊಪ್ಪಿಗೆ ಸುರಿಸಿ ಮಳೆಯನ್ನು!
ಎಲ್ಲರಿಚ್ಛೆಯಂತೆಯೇ ಆಯಿತು ಮದುವೆ
ಕಳೆದದ್ದೇ ಗೊತ್ತಾಗಲಿಲ್ಲ ಒಂದಿಡೀ ವರುಷವೇ!
ಅರಿವಾಗಿದೆ ಆಗಕ್ಕೂ-ಈಗಕ್ಕೂ ಇರುವ ವ್ಯತ್ಯಾಸ
ಬೇರೇನೂ ಇಲ್ಲ, ಮಾತು ಬಿಚ್ಚುವದೇ ದುಸ್ಸಾಹಸ!

ಎಂದು ಕವನ ಬರೆದು, ಮರುದಿನ ನಮ್ಮ ಕಾಲೇಜಿನ ನೋಟೀಸು ಬೋರ್ಡಿನಲ್ಲಿ, ಸಂಬಂಧಿಕರಿಗೆ, ಫೇಸುಬುಕ್ಕಿನಲ್ಲಿ ಹಾಕಿದೊಡನೆಯೇ ಸಾಕಷ್ಟು ಅಭಿನಂದನೆಗಳು ಬಂತು. ಕೆಲವರು ಅದು ಯಾರು ಮಲ್ಲಿ? ಎಂದು ಕೇಳುತ್ತಿದ್ದರೆ, ನನ್ನದೊಂದೇ ಉತ್ತರ, ಯಾರೂ ಇಲ್ಲ. ಅದು ಕೇವಲ ಕಾಲ್ಪನಿಕವೆಂದು. ಕೆಲವೊಬ್ಬರು “ಪ್ರೇಮಕವಿ’ ಎಂದು ತಾತ್ಕಾಲಿಕ ಬಿರುದನ್ನೂ ನೀಡಿದರು. ಅದೇನೆ ಇರಲಿ, ತರಗತಿಯಲ್ಲಿ ಪಾಠ ಕೇಳಲು ಇಲ್ಲದಿದ್ದ ಮನಸ್ಸು, ಯಾರಲ್ಲಿ ಯಾವ್ಯಾವ ಪ್ರತಿಭೆ ಅಡಗಿದೆ ಎಂತಲೂ ಕಂಡುಹಿಡಿಯಲು ಸಹಕಾರಿ ಎಂದು ಆಗಲೇ ತಿಳಿದದ್ದು. ವಿಪರ್ಯಾಸವೆಂದರೆ ಹೀಗೆಯೇ ಕವನಗಳ ಬರವಣಿಗೆಯ ಮೇಲೆ ಆಸಕ್ತಿ ಹೆಚ್ಚಾಗುತ್ತಾ ಹೋಯಿತು. ನನ್ನ ಕತೆ ಇದಾದರೆ, ನನ್ನ ಆಪ್ತಮಿತ್ರ ದೀಪಕ್‌ ನದ್ದು ಇನ್ನೊಂದು ರೀತಿ. ಅವನು ಕಲಿಯಲು ಹುಷಾರು, ಹಾಗೆಂದು ತರಗತಿಯಲ್ಲಿ ಪಾಠ ಸರಿಯಾಗಿ ಕೇಳುತ್ತಿದ್ದನೆಂದಲ್ಲ. ಕಾರಣ ಅವನು ನನ್ನಂತೆಯೇ ಇದ್ದರೂ ಸ್ವಲ್ಪ ಭಿನ್ನ. ಅವನು ಕವನ ಬರೆಯುತ್ತಿರಲಿಲ್ಲ, ಕಾದಂಬರಿ ಬರೆಯಲು ಪ್ರಾರಂಭಿಸಿದ್ದ. ನನ್ನಂತೆ ಕನ್ನಡ ಭಾಷೆಯಲ್ಲಿ ಬರೆಯುತ್ತಿರಲಿಲ್ಲ, ಇಂಗ್ಲಿಷ್‌ನಲ್ಲಿ ಬರೆಯಲಾರಂಭಿಸಿದ್ದ. ನಮ್ಮ ಬಾಂಧವ್ಯ, ಗೆಳೆತನ ಹೇಗೆ ಪ್ರಾರಂಭವಾಯಿತು ಎನ್ನುವುದೇ ಇನ್ನೂ ನಿಗೂಢ. ಆದರೂ ಜೀವನಪರ್ಯಂತ ಹುಡುಕಿದರೂ ಅವನಂತಹ ಗೆಳೆಯ ಸಿಗಲು ಸ್ವಲ್ಪ ಕಷ್ಟವೇ ಸರಿ. ಅದೇನೆ ಇರಲಿ ಮತ್ತದೇ ಫ‌ಸ್ಟ್‌ ಬೆಂಚ್‌ ವಿಷಯಕ್ಕೆ ಬರುವುದಾದರೆ, ನಾವೇನು ಬಯಸಿ ಅಲ್ಲಿ ಕೂತದ್ದಲ್ಲ. ನಮ್ಮ ಹಣೆಯಲ್ಲಿ ಬರೆದಿತ್ತೋ ಅದೂ ಗೊತ್ತಿಲ್ಲ ಆದರೆ ನಮ್ಮ ಎತ್ತರವಂತೂ ಅಧ್ಯಾಪಕರಲ್ಲಿ “ಇವರನ್ನು ಫ‌ಸ್ಟ್‌ ಬೆಂಚಿನಲ್ಲಿಯೇ ಕುಳ್ಳಿರಿಸಿ’ ಎಂದು ಕೂಗಿ ಹೇಳುತ್ತಿತ್ತೋ ಏನೋ.

ಈ ಫ‌ಸ್ಟ್‌ ಬೆಂಚಿಗೂ ನನಗೂ ಹೊಸ ಸಂಬಂಧವೇನೂ ಇರಲಿಲ್ಲ, ಒಂದನೇ ತರಗತಿಯಿಂದ ಹಿಡಿದು ಪದವಿಯವರೆಗೂ ಅದೇ ಜಾಗ. ಕಾಲೇಜುಗಳು ಬೇರೆಯಾದರೂ ಫ‌ಸ್ಟ್‌ ಬೆಂಚುಗಳ ನಡುವಿನ ಸಂಬಂಧವನ್ನು ಎಂದಿಗೂ ಬಿಟ್ಟಿರಲಿಲ್ಲ. ಹೇಗೆ ಲಾಸ್ಟ್‌ ಬೆಂಚಿನವರು ಬೆಂಚನ್ನೇ ಮುರಿಯುವವರೆಗೆ ಕೀಟಲೆ ಮಾಡುತ್ತಾರೋ, ಫ‌ಸ್ಟ್‌ ಬೆಂಚಿನವರದ್ದೇನೂ ಕಡಿಮೆಯಿರುವುದಿಲ್ಲ. ಏನಿಲ್ಲವಾದರೂ ತಾವೂ ಆ ತರಗತಿಯಲ್ಲಿ ಅದರಲ್ಲೂ ಆ ಬೆಂಚಿನಲ್ಲಿ ಕುಳಿತುಕೊಂಡಿದ್ದೆವೆಂಬ ಕಾರಣಕ್ಕೋ ಏನೋ ಕೈವಾರದಲ್ಲಿಯೇ ಬೆಂಚನ್ನು ಕೆತ್ತಿ ತಮ್ಮ ಹಸ್ತಾಕ್ಷರಗಳನ್ನು ಹಾಕುವ ಪದ್ಧತಿ ರೂಢಿಸಿಕೊಂಡಿದ್ದೆವು. ಅದರ ಜತೆಗೆ ಕೆಲವು ಭಗ್ನಪ್ರೇಮಿಗಳಂತೂ ನಾನಾ ರೀತಿಯ ಚಿಹ್ನೆಗಳನ್ನು ಗೀಚಿದ್ದೇ ಗೀಚಿದ್ದು. ಇವಿಷ್ಟೇ ಅಲ್ಲ, ನಾನಾ ಬಗೆಯ ಆಟಗಳಿಂದ ಹಿಡಿದು, ಕಾಪಿ ಹೊಡೆಯುವುದು, ನಿದ್ದೆ ಮಾಡುವುದು, ಎಲ್ಲದಕ್ಕಿಂತ ತಮಾಷೆಯಾಗಿ, ಹೈ ಸ್ಕೂಲಿನಲ್ಲಿರಬೇಕಾದರೆ ಡೆಸ್ಕ್ನಲ್ಲಿಯೇ ಬ್ರಾಂಡ್‌ ಇಲ್ಲದ ನಮ್ಮದೇ ಶೈಲಿಯ ಪಕ್ಕಾ ಲೋಕಲ್‌ ಮಾವಿನ ಉಪ್ಪಿನಕಾಯಿಯನ್ನೂ ತಯಾರಿಸಿದ್ದೆವು. ಇವೆಲ್ಲ ಹೇಳಲು ಬಾಲಿಶಾ ಎಂದನಿಸುತ್ತದೆ ಆದರೆ ಆಗ ನಾವು ಪಟ್ಟ ಸಂತೋಷ ಇನ್ನೆಂದಾದರೂ ಅನುಭವಿಸಲು ಸಾಧ್ಯವೇ? ಖಂಡಿತಾ ಇಲ್ಲ.

– ಅವನೀಶ್‌ ಭಟ್‌, ಸವಣೂರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.