ಉಳಿದದ್ದು ಆಕಾಶ ; ಹೊಸ ಮಳೆಗಾಲಕ್ಕೆ ಹಳೆ ಬೆನ್ನುಡಿ
ಫ್ಯೂಷನ್ ; ಹದಿನೈದು ದಿನಗಳಿಗೊಮ್ಮೆ ಯುವ ಬೆಳದಿಂಗಳು
Team Udayavani, May 30, 2020, 7:30 PM IST
ಆಕಾಶದ ಬಣ್ಣ ನೀಲಿಯಣ್ಣ ಆದರೂ ಮೋಡದ ಬಣ್ಣ ಕಪ್ಪು ಕಣಣ್ಣ ಕಾಣುವ ಕನಸಿಗೆ ಯಾವ ಬಣ್ಣ ಬದುಕ ಗಾಲಿಗೆ ನೂರು ಬಣ್ಣ
ನಲ್ಮೆಯ ಮಳೆಯೇ
ಮಳೆ ನೀ ಬಂದರೆ ಜೀವನ ಭಲೇ
ಕಾಲ ಕಾಲಕ್ಕೆ ಬೆಳೆ
ಮಳೆ ನೀ ಮಿತಿ ಮೀರಿದರೆ ಪ್ರವಾಹದ ಹೊಳೆ
ಜನ-ಜೀವನ ದುಃಖ ಸಾಗರದ ಕಳೆ
ಇದ ಮರುಕಳಿಸದಂತೆ ನೀ ತಡೆ
ಆದರೂ ನೀ ಕಾಲ ಕಾಲಕ್ಕೆ ನಮ್ಮನ್ನು ಬಿಡೆ
ನೀನಿದ್ದರೆ ರೈತರ ಜೀವನ ಬಿಡುಗಡೆ
-ಸುಮಲತಾ, ಬಜಗೋಳಿ
ಓ ಮಳೆರಾಯ
ಈ ಬಾರಿಯ ಮಳೆಯಲಿ
ನೆಂದ ಮನಸುಗಳಿಗಿಂತ
ನೊಂದ ಮನಸುಗಳು ಹೆಚ್ಚಯ್ಯ
ತಪ್ಪು ನಿನ್ನದಲ್ಲ ನಮ್ಮದಯ್ಯ
ಇರುವ ಮರವನ್ನು ಕಡಿದು ಬಡಿದು ತಿಂದರಯ್ಯ
ಪರಿಣಾಮದ ಹೊರೆ ಹೊರುವವರಾರಯ್ಯ
-ವಿಶಾಲ ಕರೂರು, ಆಳ್ವಾಸ್ ಕಾಲೇಜು, ಮೂಡುಬಿದಿರೆ
ನೆರೆಗೆ ಹೆದರಿ ಹೋಗುವುದೇನು?
ಬದುಕ ಬೋನಿಗೆ ಸಿಕ್ಕ ಮೇಲೆ…