ಹಾಸ್ಟೆಲ್‌ ದಿನಗಳ  ಮೆರುಗಿನ ಮಳೆಗಾಲ

Team Udayavani, Jun 6, 2021, 1:00 PM IST

ಹಾಸ್ಟೆಲ್‌ ದಿನಗಳ  ಮೆರುಗಿನ ಮಳೆಗಾಲ

ನಮ್ಮ ಇಡೀ ಜೀವನದ ಮುಕ್ಕಾಲು ಭಾಗದಷ್ಟು ನೆನಪು, ಸಂತೋಷವನ್ನು ಶಾಲೆ ದಿನಗಳಲ್ಲಿ ಕಳೆದಿರುತ್ತೇವೆ. ಈ ಜೀವನಕ್ಕೆ ಮತ್ತಷ್ಟು ಮೆರುಗು ತಂದದ್ದೇ ಮಳೆಗಾಲ. ಮಳೆ ಹನಿಗಳು ನೆಲಕ್ಕೆ ಬಿದ್ದಾಗ ನೂರಾರು ನೆನಪುಗಳು ಕಣ್ಣೆದುರಿಗೆ ಬರುತ್ತವೆ.  ನಮ್ಮ ಹಾಸ್ಟೆಲ್‌ ಜೀವನದ ಮಳೆಗಾಲವನ್ನು ಮರೆಯುವ ಹಾಗಿಲ್ಲ. ಹಾಸ್ಟೆಲ್‌ನಲ್ಲಿ ನಮ್ಮನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಹೊರಗೆ ಬಟ್ಟೆಯಿವೆ ಎಂಬ ನೆಪ ಹೇಳಿ ಮಳೆಯಲ್ಲಿ ನೆನೆದು ಹೋಗುತ್ತಿದ್ದೆವು.

ನಮ್ಮ ನರ್ಸ್‌ ಮಿಸ್‌ ಮಳೆ ಬಂದರೆ ಸಾಕು ಸ್ವೆಟರ್‌ ಹಾಕಿಕೊಳ್ಳಿ ಇಲ್ಲವಾದರೆ ಶೀತವಾಗುವುದು ಎಂದು ನಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದರು.  ನಮ್ಮದು ಹಾಸ್ಟೆಲ್‌ ಮೇಲ್ಛಾವಣಿಯ ಕಟ್ಟಡ. ಮೇಲ್ಛಾವಣಿಯೆಲ್ಲ ರಂದ್ರಗಳಾಗಿದ್ದವು. ಮಳೆಗಾಲ ಬಂದರೆ ಸಾಕು ಮುಗಿಯಿತು ನಮ್ಮ ಕಥೆ. ಮೋಡಗಳ ಯುದ್ಧದಲ್ಲಿ ಆಕಾಶದಿಂದ ಜೋರಾಗಿ ಸುರಿಯುವ ಮಳೆ ಬಂದರೆ ನಮ್ಮ ಛಾವಣಿಯೆಲ್ಲ ಸೋರಲಾರಂಭಿಸುವುದು. ಕೊನೆಗೆ ನೀರಿನಿಂದ ತುಂಬಿ ಹೋಗುತ್ತಿತ್ತು. ನಮ್ಮ ಪುಸ್ತಕ, ಬಟ್ಟೆ, ಬ್ಯಾಗ್‌ ಎಲ್ಲ ಒದ್ದೆಯಾಗಿರುತ್ತಿದ್ದವು. ನಮಗೆ ನೆಲ ಸ್ವತ್ಛ ಮಾಡುವುದೇ ಅಂದಿನ ಕೆಲಸವಾಗಿರುತ್ತಿತ್ತು.

ಹಾಸ್ಟೆಲ್‌ನಲ್ಲಿ ಸ್ಥಳ ಅಭಾವವಿರುವ ಕಾರಣ ಮಲಗಲು ಜಾಗವಿಲ್ಲದೆ ಟ್ರಂಕ್‌ ಮೇಲೆ ಮಲಗುತ್ತಿದ್ದೆವು. ಅದೇ ನಮ್ಮ ಪಾಲಿನ ಬೆಡ್‌. ಮಳೆ ನೀರಿನಲ್ಲೇ ನೆನೆಯುತ್ತಾ ಚಳಿಗೆ ನಡುಗಿ ಇಡೀ ರಾತ್ರಿ ಕಳೆಯುತ್ತಿದ್ದೆವು. ಮಳೆ ಬಂದಾಗ ರಾತ್ರಿ ಕರೆಂಟ್‌ ತೆಗೆದರೆ ಸಾಕು ನಾವೆಲ್ಲ ಹೆದರಿ ಒಂದು ಮೂಲೆ ಸೇರುತ್ತಿದ್ದೆವು. ತರಗತಿಯ ಸಮಯದಲ್ಲಿ ಮಳೆ ಬಂದರೆ ಛಾವಣಿಯ ಮೇಲೆ ಮಳೆ ಹನಿಯ ರಭಸಕ್ಕೆ ಶಿಕ್ಷಕರು ಪಾಠ ಮಾಡುವುದೇ ಕೇಳುತ್ತಿರಲಿಲ್ಲ. ಕಾಗದದ ದೋಣಿ ಮಾಡಿ ನೀರಿನಲ್ಲಿ ತೇಲಿಬಿಟ್ಟು ಆಟವಾಡುತ್ತಿದ್ದೆವು. ಮಳೆ ಬಂದಾಗ ಮನೆಯಿಂದ ತಂದ ಚುರುಮುರಿ ಜತೆಗೆ ಹಾಸ್ಟೆಲ್‌ ಅಲ್ಲಿ ಕೊಟ್ಟ ಚಾ ಸವಿಯುತ್ತಾ ಕಾಲ ಕಳಿದಿದ್ದೆ ಮಧುರ. ಈ ಕ್ಷಣಗಳು ಬರಿ ನಮಗೆ ನೆನಪುಗಳಷ್ಟೇ. ಆದರೆ ಬುದ್ದಿ ಬೆಳೆದಂತೆ ಮಳೆಗಾಲದ ಕಷ್ಟ ಅರಿವಾಗುತ್ತ ಹೋಯಿತು. ಕಳೆದ ವರ್ಷ ಮಳೆಯಿಂದ ಹೊಳೆಯ ಪ್ರವಾಹ ಬಂದು ಅದೆಷ್ಟು ಮನೆಗಳು ಬಿದ್ದು ಎಷ್ಟೋ ಕುಟುಂಬವು ಬೀದಿಗೆ ಬಂದಿದ್ದವು. ಕಳೆದ ವರ್ಷದ ಕರಾಳ ಮರೆಯಲಾಗದು.

ಭೂಮಿಕಾ ದಾಸರಡ್ಡಿ,  ಬಿದರಿ, ಕಂಠಿ ಕಾಲೇಜು, ಮುಧೋಳ

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.