ಟ್ರಾನ್ಸ್‌ವುಮೆನ್‌ ಇನ್‌ಸ್ಪೆಕ್ಟರ್‌ ಆದ ಕಥೆ

Team Udayavani, Oct 2, 2020, 9:00 AM IST

905

ಹುಟ್ಟುತ್ತಾ ಪ್ರದೀಪ್‌ ಕುಮಾರ್‌ ಆಗಿದ್ದವನು ಬೆಳೆಯುತ್ತಾ ಪ್ರೀತಿಕಾ ಆಗಿದ್ದು ಸುಲಭವೇನಾಗಿರಲಿಲ್ಲ. ಪ್ರೀತಿಕಾ ತಮಿಳುನಾಡಿನ ಸೇಲಂನಲ್ಲಿ ಚಾಲಕ ಮತ್ತು ದರ್ಜಿ ದಂಪತಿಗೆ ಮಗನಾಗಿ ಜನಿಸಿದಳು.

ಕಷ್ಟದ ಬಾಲ್ಯವನ್ನು ಕಂಡ ಆಕೆ ತನ್ನಗಾಗುತ್ತಿದ್ದ ಬದಲಾವಣೆ ಅರಿಯದೇ ಬೇಸತ್ತಿದ್ದಳು. ಆಕೆಯ ಕಷ್ಟ ನೋಡಲಾಗದ ತಂದೆ ತಾಯಿ ಕಂಡ ಕಂಡ ದೇವಾಲಯ, ವೈದ್ಯರು, ಜೋತಿಷಿಗಳ ಬಳಿ ಕರೆದುಕೊಂಡು ಹೋದರು, ಆದರೆ ಯಾವುದೂ ಪ್ರಯೋಜನವಾಗಲಿಲ್ಲ.

ಅನಂತರ ಆಕೆ ಒಂಬತ್ತನೇ ತರಗತಿಯಲ್ಲಿರುವಾಗ ದೇಹದಲ್ಲಿ ಬದಲಾವಣೆ ಕಾಣಲಾರಂಭಿಸಿತು. ಆಕೆಗೆ ತನ್ನಲ್ಲಿ ಆಗುತ್ತಿದ್ದ ಬದಲಾವಣೆಗಳು ಒಂದೋಂದಾಗಿ ಗಮನಕ್ಕೆ ಬರಲಾರಂಭಿಸಿದ್ದವು. ಯಾರಲ್ಲೂ ಹೇಳಿಕೊಳ್ಳಲಾಗದ ಭಾವನೆ ಜತೆಗೆ ಜನರ ಒರಟು ಮಾತು ಇವೆಲ್ಲವೂ ದಿನನಿತ್ಯ ಸುಪ್ರಭಾತದಂತಾಗಿದ್ದವು. ಬದಲಾಯಿಸಲು ಯಾವುದು ಇವಳ ಕೈಯಲ್ಲಿರಲಿಲ್ಲ, ಆದರೆ ಭವಿಷ್ಯದ ನಿರ್ಧಾರ ಆಕೆಯ ಕೈಮೀರಿ ಹೋಗಿರಲಿಲ್ಲ.

ಇದನ್ನರಿತ ಪ್ರೀತಿಕಾ ಯಾರ ಮಾತಿಗೂ ಕಿವಿಗೊಡದೆ ಓದುವುದನ್ನು ನೆಚ್ಚಿಕೊಂಡಳು. ಅವಳ ನಂಬಿಕೆ ಅವಳಿಗೆ ಮೋಸ ಮಾಡಲಿಲ್ಲ. ಛಲ ಬಿಡದೆ, ಕಂಪ್ಯೂಟರ್‌ ಅಪ್ಲಿಕೇಶನ್‌ನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಅನಂತರ ಅವರು ಚೆನ್ನೈನಲ್ಲಿರುವ ಹಾಸ್ಟೆಲ್‌ನಲ್ಲಿ ವಾರ್ಡನ್‌ ಆಗಿ ವೃತ್ತಿ ಜೀವನ ಆರಂಭಿಸಿದರು. ಅದಾದ ಬಳಿಕ ನಡೆದದ್ದು ಅವರ ಪರಿಶ್ರಮದ ಪರಿಣಾಮ ಎಂದರೆ ತಪ್ಪಾಗಲಾರದು. ತಮಿಳುನಾಡಿನ ಏಕರೂಪದ ಸೇವೆಗಳ ನೇಮಕಾತಿ ಮಂಡಳಿಗೆ ಪ್ರೀತಿಕಾ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಿದರು. ಆದರೆ ಆಕೆ ಟ್ರಾನ್ಸ್‌ವುಮೆನ್‌ ಎನ್ನುವ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕರಿಸಲಾಯಿತು.

ಆದರೂ ಪಟ್ಟು ಬಿಡದೆ ಹೈಕೋರ್ಟ್‌ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಇದನ್ನು ಪ್ರಶ್ನಿಸಿದಳು. ಅದರಂತೆ ಮದ್ರಾಸ್‌ ಹೈಕೋರ್ಟ್‌ ಆಕೆಗಾಗಿ ಲಿಖೀತ ಪರೀಕ್ಷೆ ನಡೆಸಲು ಆದೇಶಿಸಿತು. ಇದನ್ನು ಸದುಪಯೋಗಿಸಿಕೊಂಡ ಪ್ರೀತಿಕಾ ಎಲ್ಲ ಪರೀಕ್ಷೆಗಳಲ್ಲಿಯೂ ಸೈ ಎನಿಸಿಕೊಂಡು ಯಶಸ್ವಿಯಾದರು.

2015 ನ. 6ರ ಮದ್ರಾಸ್‌ ಹೈಕೋರ್ಟ್‌ ತೀರ್ಪಿನ ಪ್ರಕಾರ ಪ್ರೀತಿಕಾ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಆಗಿ ನೇಮಕಗೊಂಡರು. ಎ. 2 2017ರಂದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಆಗಿ ಅಧಿಕಾರ ವಹಿಸಿಕೊಂಡರು. ಆಕೆ ತನ್ನಿಂದ ಆಗುವುದಿಲ್ಲ ಎಂದು ಕುಳಿತಿದ್ದರೆ ಭಾರತದ ಮೊದಲ ಟ್ರಾನ್ಸ್‌ವುಮೆನ್‌ ಸಬ್‌ಇನ್‌ಸ್ಪೆಕ್ಟರ್‌ ಆಗಲು ಸಾಧ್ಯವೇ ಆಗುತ್ತಿರಲಿಲ್ಲ.

 ಪ್ರೀತಿ ಭಟ್‌, ಗುಣವಂತೆ 

ಟಾಪ್ ನ್ಯೂಸ್

ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ ಸೇರ್ಪಡೆ

ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ ಸೇರ್ಪಡೆ

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ: ಶಾಸಕ ಕೆ.ರಘುಪತಿ ಭಟ್‌ ಸಲಹೆ

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ : ಶಾಸಕ ಕೆ.ರಘುಪತಿ ಭಟ್‌ ಸಲಹೆ

ಎರಡಲ್ಲ, ನಾಲ್ಕು ನಿಮಿಷಗಳ ಬ್ರಷಿಂಗ್‌ ಬೇಕು!

ಎರಡಲ್ಲ, ನಾಲ್ಕು ನಿಮಿಷಗಳ ಬ್ರಷಿಂಗ್‌ ಬೇಕು!

ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?

ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgdtryy

ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

hyuty6t

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

ಇಂದು ನಾ ಕಂಡ ಜೋಗತಿ

ಇಂದು ನಾ ಕಂಡ ಜೋಗತಿ

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ ಸೇರ್ಪಡೆ

ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ ಸೇರ್ಪಡೆ

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ: ಶಾಸಕ ಕೆ.ರಘುಪತಿ ಭಟ್‌ ಸಲಹೆ

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ : ಶಾಸಕ ಕೆ.ರಘುಪತಿ ಭಟ್‌ ಸಲಹೆ

ಎರಡಲ್ಲ, ನಾಲ್ಕು ನಿಮಿಷಗಳ ಬ್ರಷಿಂಗ್‌ ಬೇಕು!

ಎರಡಲ್ಲ, ನಾಲ್ಕು ನಿಮಿಷಗಳ ಬ್ರಷಿಂಗ್‌ ಬೇಕು!

ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?

ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.