Warli painting: ಅಂದವನ್ನು ಹೆಚ್ಚಿಸುವ ಗ್ರಾಮೀಣ ಸೊಗಡಿರುವ  “ವರ್ಲಿ’ ಚಿತ್ತಾರ

Team Udayavani, Mar 12, 2024, 11:30 AM IST

4-uv-fusion

ವರ್ಲಿ ಚಿತ್ರಕಲೆಯು ಮಹಾರಾಷ್ಟ್ರದ ವಾರ್ಲಿ ಬುಡಕಟ್ಟಿನಿಂದ ಹುಟ್ಟಿಕೊಂಡ ಕಲೆಯ ಒಂದು ರೂಪ. ಇದು ವಾರ್ಲಿಸ್‌ ಎಂದು ಕರೆಯಲ್ಪಡುವ ಬುಡಕಟ್ಟು ಆದಿವಾಸಿ ಜನರಿಂದ ರಚಿತವಾಗಿದೆ. ಇಂದು ಹೆಚ್ಚಾಗಿ  ಗುರುತಿಸಲ್ಪಟ್ಟಿರುವ ವರ್ಲಿ ಚಿತ್ರಕಲೆಯು, 1970ರ ದಶಕದಲ್ಲಿ ಬುಡಕಟ್ಟು ವಲಯಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.

ಈ ವರ್ಣಚಿತ್ರಗಳನ್ನು ಮಣ್ಣು, ಇದ್ದಿಲು ಮತ್ತು ಹಸುವಿನ ಸಗಣಿ ಆಧಾರಿತ ಮೇಲ್ಮೆ„ಗಳ ಮೇಲೆ ಚಿತ್ರಿಸಲಾಗುತ್ತಿತ್ತು. ಹಿಂದೆ ಮೈದಾನಗಳ ಅಥವಾ ಕಾಲೇಜಿನ ಕಂಪೌಂಡ್‌ ಮೇಲೆ ಕಾಣಿಸಿಕೊಳ್ಳುತ್ತಿದ್ದ ವರ್ಲಿ ಪೈಂಟಿಂಗ್‌ ಇದೀಗ ಮನೆಯ ಇಂಟೀರಿಯರನ್ನು ಅಂದಗೊಳಿಸಲು ಬಳಸಲಾಗುತ್ತಿದೆ ಹಾಗೂ ಇದು ಮನೆಯನ್ನು ಅಂದಗಾಣಿಸುವಲ್ಲಿ ಅತ್ಯುತ್ತಮ  ಪಾತ್ರವನ್ನು ವಹಿಸುತ್ತಿದೆ.

ಸಾಮರಸ್ಯದ ಪ್ರತೀಕ

ಸಾಮಾನ್ಯವಾಗಿ ವರ್ಲಿ ಪೈಂಟಿಂಗ್‌, ಬೇಟೆಯಾಡುವುದು, ಮೀನುಗಾರಿಕೆ, ಕೃಷಿ, ಹಬ್ಬಗಳು, ನೃತ್ಯ ಮತ್ತು ಇನ್ನಿತರ ಕಾರ್ಯಗಳ ಸಂಕೀರ್ಣ ದೃಶ್ಯಗಳನ್ನು ಒಳಗೊಂಡಿರುತ್ತವೆ. ಇದು ಬುಡಕಟ್ಟು ಜನಾಂಗದ ನೈಸರ್ಗಿಕ ಪ್ರಪಂಚದ ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ.

ವರ್ಲಿ ಜನರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ನಂಬಿಕೆ, ಮೌಲ್ಯ ಮತ್ತು ರೂಢಿಗಳನ್ನು ಹೊಂದಿರುವುದರಿಂದ  ಅವರು ತಮ್ಮ ಸಂಪ್ರದಾಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಹಾಗೆಯೇ ಸಮಕಾಲೀನ ಸಂಸ್ಕೃತಿಯ ಪ್ರಭಾವವನ್ನು ವಿರೋಧಿಸುತ್ತಾರೆ. ವರ್ಲಿ ಕಲೆಯು ಅವರ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಉಳಿಸಿಕೊಡುವಲ್ಲಿಯೂ ಮಹತ್ವದ ಪಾತ್ರವನ್ನು ವಹಿಸುತ್ತದೆ.

ವರ್ಲಿ ಚಿತ್ರಕಲೆ ಕೇವಲ ಕಲಾ ಪ್ರಕಾರವಷ್ಟೇ ಅಲ್ಲ ಬದಲಾಗಿ  ಕಥೆ ಹೇಳುವ ಒಂದು ಸಾಧನವೂ ಹೌದು.  ಈ ವರ್ಣಚಿತ್ರಗಳ ಮೂಲಕ, ವರ್ಲಿ ಜನರು ತಮ್ಮ ಜಾನಪದ, ಸಂಪ್ರದಾಯಗಳು ಮತ್ತು ಸಾಮಾಜಿಕ ಪದ್ಧತಿಗಳನ್ನು ಸಂರಕ್ಷಿಸುವುದರ ಜತೆಗೆ ಅವುಗಳನ್ನು ಜನರಿಗೆ ಚಿತ್ರದ ಮೂಲಕ ರವಾನಿಸುತ್ತಿದ್ದರು.

ವರ್ಲಿ ಕಲೆ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಜಾನಪದ ಶೈಲಿಯ ಚಿತ್ರಕಲೆ ಎಂದು ಕರೆಯಲ್ಪಡುತ್ತದೆ. ವರ್ಲಿ ಕಲೆಯ ಪ್ರಮುಖ ಉದ್ದೇಶವೆಂದರೆ ಮನೆಯನ್ನು ಅಥವಾ ಗೋಡೆಗಳನ್ನು ಚೆಂದಗಾಣಿಸುವುದು. ಮನೆಗಳು, ಗುಡಿಸಲುಗಳು ಮತ್ತು ಸಮುದಾಯದ ಸ್ಥಳಗಳ ಗೋಡೆಗಳನ್ನು ಅಲಂಕರಿಸಲು ಈ ವರ್ಣಚಿತ್ರಗಳನ್ನು ಬಳಸಲಾಗುತ್ತದೆ.

ವರ್ಲಿ ಜನಾಂಗದವರು ವರ್ಣಚಿತ್ರಗಳನ್ನು  ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಮಾರಂಭಗಳಲ್ಲೂ ಬಳಸುತ್ತಿದ್ದರು. ಉದಾಹರಣೆಗೆ, ಸುಗ್ಗಿ ಅಥವಾ ಇತರ ಮಂಗಳಕರ ಸಂದರ್ಭಗಳಲ್ಲಿ, ವರ್ಲಿ ವರ್ಣಚಿತ್ರಗಳನ್ನು ಆಚರಣೆಗಳ ಭಾಗವಾಗಿ ರಚಿಸಲಾಗುತ್ತಿತ್ತು.

ಆಧುನಿಕ ಸ್ಪರ್ಷ: ಜನರಿಗೆ ಮನೆಯನ್ನು ಕಟ್ಟಿಸುವುದು ಒಂದು ಸವಾಲಾದರೆ ಅದನ್ನು ಅಂದಗಾಣಿಸುವುದು ಇನ್ನೊಂದು ಸವಾಲು. ಈ ಸವಾಲನ್ನು ಸುಲಭಗೊಳಿಸುವಲ್ಲಿ ವರ್ಲಿ ಪೈಂಟಿಂಗ್‌ ಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಇದೇ ವರ್ಲಿ ಚಿತ್ತಾರಗಳು ಇದೀಗ ಇಂಟಿರಿಯರ್‌ ವಿನ್ಯಾಸದಲ್ಲಿ ಬಹಳ ಟ್ರೆಂಡಿಂಗನ್ನು ಪಡೆದುಕೊಂಡಿದೆ.

ಕೇವಲ ಮನೆಯನ್ನು ಅಂದಗಾಣಿಸುವಲ್ಲಿ ಮಾತ್ರವಲ್ಲದೆ ಹೊಟೇಲ್, ರೆಸ್ಟೋರೆಂಟ್‌ ಹಾಗೂ ಹಲವು ಪಬ್ಲಿಕ್‌ ಸ್ಪಾಟ್‌ಗಳಲ್ಲಿ, ಕ್ಯಾಂಪಸ್‌ಗಳಲ್ಲಿ ವರ್ಲಿ ಪೈಂಟಿಂಗ್‌ಗಳು ಕಾಣಿಸಿಕೊಳ್ಳುತ್ತಿದೆ. ಕಾಲೇಜ್‌ ಕ್ಯಾಂಪಸ್‌ ಹಾಗೂ ಆಟದ ಮೈದಾನಗಳ ಕಾಂಪೌಂಡ್‌ಗಳ ಮೇಲೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ವರ್ಲಿ ಚಿತ್ರಕಲೆಯ ನಾನಾ ಸೂಕ್ಷ್ಮ ಕಲಾತ್ಮಕ ಚಿತ್ತಾರಗಳು ಇದೀಗ ಮನೆಯೊಳಗಿನ ಗೋಡೆ ಹಾಗೂ ಇಂಟೀರಿಯರ್‌ ಡೆಕೋರೇಟ್‌ ಮಾಡುವಂತಹ ವಸ್ತುಗಳ ಮೇಲೂ ವ್ಯಾಪಿಸಿಕೊಂಡಿದೆ.‌

ಸಂತಸದ ವಿಚಾರವೆಂದರೆ,  ಗ್ರಾಮೀಣ ಬುಡಕಟ್ಟು ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ವರ್ಲಿ ಡಿಸೈನ್‌ ಇದೀಗ ಊಹೆಗೂ ಮೀರಿ ಮನೆಯ ಒಳಾಂಗಣದಲ್ಲಿ, ಗೋಡೆಗಳ ಸೌಂದರ್ಯವನ್ನು ಹೆಚ್ಚಿಸಲು  ಆಕರ್ಷಕವಾಗಿ ಮೂಡಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ಬಗೆಬಗೆಯ ಅಲಂಕಾರಿಕ ವಸ್ತುಗಳ ಮೇಲೂ  ವರ್ಲಿ ಚಿತ್ತಾರ ಈಗ ಹೊಸ ಸಂಚಲನವನ್ನೇ  ಸೃಷ್ಟಿಸಿಬಿಟ್ಟಿದೆ. ಅಲಂಕಾರಿಕ ವಸ್ತುಗಳ ಮೇಲಿರುವ ವರ್ಲಿ ಚಿತ್ತಾರದ ಗ್ರಾಮೀಣ ಸೊಗಡು ಜನರನ್ನು ಆಕರ್ಷಿಸುತ್ತಿದೆ.

ವರ್ಲಿ ಚಿತ್ರಕಲೆಯಲ್ಲಿರುವ  ಸಾಂಪ್ರದಾಯಿಕ ಮತ್ತು ಆಧುನಿಕ ಅಂಶಗಳ ಸಮ್ಮಿಲನವು ಅದನ್ನು ಇನ್ನಷ್ಟು ಪ್ರಸಿದ್ಧಿಗೊಳಿಸುವಲ್ಲಿ ಸಹಾಯವಾಗುತ್ತಿದೆ. ವರ್ಲಿ ಚಿತ್ತಾರದ  ಸರಳವಾದ ಸೌಂದರ್ಯ ಹಾಗೂ  ಆಳವಾಗಿ ಕಥೆ ಹೇಳುವ ಗುಣಗಳಿಂದ ಇದು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿ ಇಂದಿಗೂ ಉಳಿದಿದೆ.

ಲಾವಣ್ಯ ಎಸ್‌.

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.