ಆಚರಣೆ ; ಸೌರಮಾನ, ಚಾಂದ್ರಮಾನ ಯುಗಾದಿ ನಡುವಿನ ವ್ಯತ್ಯಾಸ ಏನು?


ಪಲ್ಲವಿ, Apr 1, 2019, 3:52 PM IST

yugadi

ಪ್ರತಿ ಸಂವತ್ಸರದಲ್ಲಿ ಮೊದಲನೆಯದಾಗಿ ಬರುವ ಯುಗಾದಿ ಹಬ್ಬವು. ಶಾಸ್ತ್ರಗಳಲ್ಲಿ ವಿಶೇಷ ಸ್ಥಾನವನ್ನು ಪಡೆದು ಮಹಾಪರ್ವಕಾಲವೆಂದು ಪರಿಗಣಿಸಲ್ಪಟ್ಟಿದೆ. ಈ ಯುಗಾದಿಯ ದಿನ ರಾಜಯೋಗವಿರುತ್ತದೆ ಎನ್ನುವ ಸಂಗತಿಯು ಕೇಳಿಬರುತ್ತದೆ ಹಾಗಾಗಿ ಈ ದಿನದಲ್ಲಿ ಯಾವುದೇ ಕೆಲಸಕ್ಕೂ ಮುಹೂರ್ತ ನೋಡಬೇಕೆಂಬ ಅವಶ್ಯಕತೆ ಇರುವುದಿಲ್ಲ ಎಂದು ಕೆಲವರು ಹೇಳುತ್ತಾರೆ.

ಬ್ರಹ್ಮನನ್ನು , ಬ್ರಹ್ಮಾಂಡವನ್ನು ಸೃಷ್ಟಿಸಿದ ಭಗವಂತ ಸೃಷ್ಟಿಯ ಜವಾಬ್ದಾರಿಯನ್ನು ಚತುರ್ಮುಖ ಬ್ರಹ್ಮನಿಗೆ ಕೊಟ್ಟನು ನಂತರ ಬ್ರಹ್ಮನು ನಾರಾಯಣನ ಆಜ್ಞೆಯಂತೆ ಸೃಷ್ಟಿಯನ್ನು ಆರಂಭಿಸಿದ ದಿನವೇ ಚೈತ್ರಶುಕ್ಲಪ್ರತಿಪತ್ (ಪಾಡ್ಯ). ಸೃಷ್ಟಿಯ ಆದಿಯ ದಿನದ ನೆನಪಿಗಾಗಿ ಯುಗಾದಿಯನ್ನು ಆಚರಿಸುತ್ತೇವೆ. ಯುಗ ಎಂದರೆ ಕಾಲ, ವರ್ಷ ಅಥವಾ ಸಂವತ್ಸರ. ಆದಿ ಎಂಬ ಶಬ್ದ ಪ್ರಥಮವೆಂಬುದನ್ನು ಸೂಚಿಸುತ್ತದೆ. ಸಂವತ್ಸರದ ಮೊದಲದಿನವನ್ನು ಯುಗಾದಿ ಎಂದು ಕರೆಯುತ್ತಾರೆ. ಒಂದು ಸಂವತ್ಸರ ವನ್ನು ವಿವಿಧ ಮಾನದಂಡದಿಂದ ಗುರುತಿಸಲಾಗುವುದು. ಚಂದ್ರನ ಸಂಚಾರದ ಲೆಕ್ಕದಂತೆ ಚಾಂದ್ರಮಾನ, ಸೂರ್ಯನ ಸಂಚಾರದ ಲೆಕ್ಕದಂತೆ ಸೌರಮಾನ ಹಾಗೂ ನಕ್ಷತ್ರಗಳ ಮಾನದಂಡದಂತೆ ನಕ್ಷತ್ರಮಾನ  ಎಂದು ತಿಳಿಯಬಹುದು.

ಚಾಂದ್ರಮಾನದಂತೆ ಚೈತ್ರಾದಿ ಹನ್ನೆರಡು ತಿಂಗಳು ಒಂದು ವರ್ಷ, ಸೌರಮಾನದ ಪ್ರಕಾರ ಮೇಷಾದಿ ಹನ್ನೆರಡು ರಾಶಿಗಳ ಹನ್ನೆರಡು ಸಂಕ್ರಮಣದ ಲೆಕ್ಕದಲ್ಲಿ ಒಂದು ವರ್ಷ. ನಕ್ಷತ್ರಮಾನದಲ್ಲಿ ಇಪ್ಪತ್ತೇಳು ನಕ್ಷತ್ರಗಳು ಕಳೆದಾಗ ಒಂದು ತಿಂಗಳು ಹಾಗೆ ಇಪ್ಪತ್ತೇಳು ನಕ್ಷತ್ರಗಳು ಪೂರ್ಣಗೊಂಡಾಗ  ಒಂದು ವರ್ಷ.  ಸೌರಮಾನ ವರ್ಷವನ್ನು ಸಂವತ್ಸರ” ವೆಂದು, ಚಾಂದ್ರಮಾನ ವರ್ಷವು ಅಧಿಕ ಮಾಸದ ಮೂಲಕ ಸೌರವರ್ಷವನ್ನು ಅನುಸರಿಸುವದರಿಂದ ಅನುವತ್ಸರ” ವೆಂದು ಕರೆಯುತ್ತಾರೆ.  ಭಾರತದಲ್ಲಿ ಎಲ್ಲೆಡೆ ಚಾಂದ್ರಮಾನದ ಪ್ರಕಾರ ವರ್ಷವನ್ನು ಆರಂಭಿಸುವುದು ಹೆಚ್ಚು ಅನುಸರಣೀಯವಾಗಿದೆ. ಕರಾವಳಿ ಪ್ರದೇಶದಲ್ಲಿ ಸೌರಮಾನದ ಅನುಷ್ಠಾನವು ಚಾಲ್ತಿಯಲ್ಲಿದೆ.

ವರ್ಷ, ಋತು, ಮಾಸ , ಪಕ್ಷ ಎಲ್ಲಕ್ಕೂ ಪ್ರಾರಂಭಮಂಗಲವಾಗಿ ಸಂವತ್ಸರಕ್ಕೆ ಆರಂಭದ ರೂಪದಲ್ಲಿರುವ ಪರ್ವಕಾಲ ವರ್ಷ ಪೂರ್ತಿಗೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭ ಸಂಕಲ್ಪವನ್ನು ಮಾಡಿಕೊಳ್ಳುವ ದಿನ. ಇಂದು ಮಾಡುವ ಸಂಕಲ್ಪವು ಅತ್ಯಂತ ಪ್ರಭಾವಪೂರ್ಣವಾಗುತ್ತದೆ ಎಂಬ ನಂಬಿಕೆ ಇದೆ. ವರ್ಷ ಪ್ರಾರಂಭದ ದಿನದಿಂದ ಕಾಲಮಹಿಮೆ ಮತ್ತು ಅಂದಿನ ಅನುಷ್ಠಾನಗಳಿಂದ ಒಳ್ಳೆಯ ಅಥವಾ ಕೆಟ್ಟ ಘಟನೆ ಯಾವುದು ಒದಗಿದರೂ ವರ್ಷಪೂರ್ತಿ ಅದೇ ಗತಿಯಲ್ಲಿ ಸಾಗುವುದು ಎಂಬ ನಂಬಿಕೆಯು ಇದೆ.  ಯುಗಾದಿಯ ದಿನ ರೇವತಿ ನಕ್ಷತ್ರವನ್ನು ಒಳಗೊಂಡಿದ್ದು ಈ ದಿವಸದಲ್ಲಿ ಯಾವ ವಾರ ಇರುತ್ತದೆಯೋ ಅದರ ಗ್ರಹವನ್ನೇ ವರ್ಷದ ಅಧಿಪತಿ ಎಂದು ಕರೆಯುತ್ತಾರೆ.

ಯುಗಾದಿಯ ಆಚರಣೆ

ಗೃಹಾಲಂಕಾರ        

ಯುಗಾದಿಯ ಹಬ್ಬಕ್ಕೆ ಮೊದಲೇ ಮನೆಯನ್ನೆಲ್ಲ ಸ್ವಚ್ಛಮಾಡಿ ವಸಂತನ ಆಗಮನಕ್ಕೆ ಸಿದ್ಧವಾಗಬೇಕು. ವಸಂತ ಋತುವಿನಕಾಲದಲ್ಲಿ ಯುಗಾದಿಯ ಸಂಭ್ರಮಕ್ಕೆ ಪ್ರಕೃತಿಯು ಹೊಸ ಚಿಗುರಿನಿಂದ ಮೈತುಂಬಿ ಕಂಗೊಳಿಸುತ್ತಿರತ್ತಾಳೆ. ಪ್ರಕೃತಿಯ ಸೊಬಗಿನಲ್ಲಿ ದೊರೆಯುವ ಮಾವಿನಕುಡಿ , ಬೇವಿನಕುಡಿ, ಬೇವಿನ ಹೂವು, ಚೈತ್ರಮಾಸದ ವಿಶೇಷ ಫಲ- ಪುಷ್ಪಗಳು ಮಂಗಳದ್ರವ್ಯಗಳನ್ನು ತಂದು ಮನೆಯೆನ್ನೆಲ್ಲಾ ತಳಿರುತೋರಣಗಳಿಂದ ಶೃಂಗರಿಸಿ, ಗೋಮಯದಿಂದ ಮನೆಯ ಅಂಗಳವನ್ನು , ಪೂಜೆಯ ಗೃಹವನ್ನು ಸಾರಿಸಿ ರಂಗವಲ್ಲಿಯನ್ನು ಹಾಕಿ ಅಲಂಕರಿಸಬೇಕು. ಈ ಅಲಂಕಾರವು ಮೈ-ಮನಸ್ಸನ್ನು ಹಸಿರಾಗಿಸುತ್ತದೆ. ಹಸಿರು ತೋರಣ, ಫಲಪುಷ್ಪಗಳಿಂದ ಅಲಂಕೃತಗೊಂಡ ಗೃಹ ಹಬ್ಬದ ಕಳೆಯನ್ನು ಹೆಚ್ಚಿಸುತ್ತದೆ.

ತೈಲಾಭ್ಯಂಗ

ಯುಗಾದಿಯ ದಿನ ಸೂರ್ಯೋದಯಕ್ಕೆ  ಮೊದಲೇ ಎಳ್ಳೆಣ್ಣೆಯಿಂದ ಅಭ್ಯಂಗಮಾಡಿಕೊಳ್ಳುವು ವಿಶೇಷವಾಗಿದೆ. ಪರ್ವಕಾಲದ ಸ್ನಾನ ವಿಶೇಷ. ಅದರಲ್ಲೂ ವರ್ಷದ ಆದಿಯಾದ ಯುಗಾದಿಯು ಮೈ-ಮನಸ್ಸನ್ನು ಹಗುರಾಗಿಸುವ ದಿನ. ಅಭ್ಯಂಗದಿಂದ ದೈಹಿಕವಾಗಿ-ಮಾನಸಿಕವಾಗಿ ವಿವಿಧ ಲಾಭಗಳುಂಟು. ಸೂರ್ಯನ ಬೇಗೆಯು ಹೆಚ್ಚಿ ಋತು ಬದಲಾವಣೆಯಿಂದ ಉಷ್ಣಸಂಬಧಿ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ಈ ಅಭ್ಯಂಗವು ದೇಹಕ್ಕೆ ತಂಪನ್ನುಂಟುಮಾಡುತ್ತದೆ.

 ನೂತನ ವಸ್ತ್ರಾಧಾರಣೆ

ಯುಗಾದಿಯಂದು ಹೊಸ ಬಟ್ಟೆಯನ್ನು ಹಾಕುವುದು ವಿಶೇಷ. ಹಬ್ಬದ ದಿನ ಹೊಸಬಟ್ಟೆ ಹಾಕುವುದರಿಂದ ಮನಸಿಗೆ ಹೊಸ ಉಲ್ಲಾಸ ದೊರೆಯುತ್ತದೆ. ಅಷ್ಟೇ ಅಲ್ಲದೇ ಋತು ಬದಲಾವಣೆಯಿಂದ ಬೇಸಿಗೆಯ ತಾಪಮಾನಕ್ಕೆ ಅನುಗುಣ ವಾಗುವಂತಹ ವಸ್ತ್ರಗಳನ್ನು ಉಪಯೋಗಿಸುವ ಉದ್ದೇಶವು ಇದೆ.

ದೇವರ ಪೂಜೆ ಮತ್ತು ವಿಶೇಷ ಭಕ್ಷ್ಯಗಳ ನೈವೇದ್ಯ

ಯುಗಾದಿಯ ದಿನ ಮನೆಯ ಹಿರಿಯರು ಬೇಗ ಎದ್ದು ಸ್ನಾನ ಮಾಡಿ ಎಳ್ಳೆಣ್ಣೆಯನ್ನು ದೇವರಿಗೆ ಸಮರ್ಪಿಸಬೇಕು, (ದೇವಸ್ಥಾನಗಳಲ್ಲಿ ವಿಗ್ರಹಗಳಿಗೆ ಎಳ್ಳೆಣ್ಣೆಯನ್ನು ಹಚ್ಚುತ್ತಾರೆ) ಅದೇ ಎಣ್ಣೆಯನ್ನೇ ಮನೆಮಂದಿಯೆಲ್ಲ ಅಭ್ಯಂಜನಕ್ಕೆ ಉಪಯೋಗಿಸಬೇಕು. ಅಭ್ಯಂಜನ ಮುಗಿದ ನಂತರ ದೇವರಿಗೆ ಅಭಿಷೇಕ ಮಾಡಿ, ತುಪ್ಪದ ದೀಪ ಹಚ್ಚಿ, ಹೂಗಳಿಂದ ಅಲಂಕರಿಸಿ, ಅರ್ಚಿಸಿ, ಧೂಪ-ದೀಪ ಆರತಿಗಳಿಂದ ಪೂಜಿಸಬೇಕು. ವಿವಿಧ ರೀತಿಯ ಭಕ್ಷ್ಯಗಳನ್ನು, ವಿಶೇಷವಾಗಿ ಯುಗಾದಿಯಂದು ಬೇವು-ಬೆಲ್ಲ, ಮಾವಿನಕಾಯಿ ಚಿತ್ರಾನ್ನ, ಗೋಡಂಬಿಹಾಕಿದ ಪಾಯಸ, ಹೋಳಿಗೆ ಮಾಡಿ ದೇವರಿಗೆ ಸಮರ್ಪಿಸಬೇಕು. ಭಕ್ತಿಯಿಂದ ಮನೆಯವರೆಲ್ಲ ಸೇರಿ ಭಜನೆ ಸಂಕೀರ್ತನೆಗಳನ್ನು ಮಾಡಿ ನಮಸ್ಕರಿಸಬೇಕು.

ಕಿರಿಯರು, ಗುರುಹಿರಿಯರಿಗೆಲ್ಲ ನಮಸ್ಕರಿಸಿಬೇಕು. ಮನೆಯ ಹಿರಿಯರು ಎಲ್ಲರಿಗು ಬೇವು-ಬೆಲ್ಲವನ್ನು ಹಂಚಿ ಎಲ್ಲರಿಗೂ ಒಳ್ಳೆಯದನ್ನು ಮಾಡು ಎಂದು ಹರಸಿ, ಆಶೀರ್ವಾದಗಳೊಂದಿಗೆ ಉಡುಗೊರೆಯನ್ನು ನೀಡಬೇಕು. ಆರೋಗ್ಯದ ಕಾಳಜಿಯಿಂದ ಹಾಗೂ ಜೀವನದಲ್ಲಿ ಕಷ್ಟ-ಸುಖಗಳ ಸಂಮಿಲನದ ಸಂಕೇತವಾಗಿ ಬೇವು –ಬೆಲ್ಲವನ್ನು ಹಂಚುವುದು ಪದ್ಧತಿ. ಎಲ್ಲರೂ ಒಟ್ಟಿಗೆ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಮಾಡಬೇಕು.

ಪಂಚಾಂಗ ಶ್ರವಣ

ಪಂಚಾಂಗವನ್ನು ದೇವರ ಮುಂದೆ ಇರಿಸಿ ಅದನ್ನು ಪೂಜಿಸಬೇಕು. ಮನೆಯ ಹಿರಿಯರು ಪಂಚಾಂಗದಲ್ಲಿ ತಿಳಿಸಿರುವಂತೆ ಆ ವರ್ಷದ ಅಧಿಪತಿ, ಅವನು ಬರುವ ರೀತಿ ಅದರಿಂದ ಆಗುವ ಪರಿಣಾಮಗಳು, ಮಳೆ-ಬೆಳೆ, ಲಾಭ-ನಷ್ಟ,ಚಿನ್ನಾಭರಣಗಳ ಬೆಲೆಯ ಏರಿಳಿತ ವರ್ಷ- ರಾಶಿ ಫಲಾಫಲವನ್ನು ಮನೆಯವರಿಗೆ ತಿಳಿಸಬೇಕು.

ಈ ದಿನದಿಂದ ಒಂಭತ್ತನೆ ದಿನಕ್ಕೆ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಹಾಗೆ ಕೆಲವರು ಯುಗಾದಿಯಿಂದ ನವಮಿಯವರೆಗೆ ರಾಮಾಯಣವನ್ನು ಪಾರಾಯಣ ಮಾಡುವ ಅನುಷ್ಠಾನವು ಚಾಲ್ತಿಯಲ್ಲಿದೆ. ಬಿದಿಗೆಯ ದಿನ ದೇವರಿಗೆ ವಿಶೇಷ ಪೂಜೆಯನ್ನು ಮಾಡಿ ಚಂದ್ರ ದರ್ಶನ ಮಾಡಿ “ಕ್ಷೀರ ಸಮುದ್ರದಲ್ಲಿ ಹುಟ್ಟಿದವನೇ ಲಕ್ಷ್ಮೀದೇವಿಯ ಸಹೋದರನೇ, ಶಿವನ ಜಟೆಯಲ್ಲಿರುವವನೇ, ಸೋಮದೇವನೆ ನಿನಗೆ ನಮಸ್ಕಾರ”ಎಂದು ಭಕ್ತಿಯಿಂದ ಪ್ರಾರ್ಥಿಸಿ ಹೊಸ ಬಟ್ಟೆಯ ಒಂದು ನೂಲನ್ನು ಅವನಿಗೆ ಅರ್ಪಿಸಿ ನಮಸ್ಕರಿಸುವ ಸಂಪ್ರದಾಯವು ಇದೆ.

ಯುಗಾದಿಯು ಎಲ್ಲರ ಬದುಕಲ್ಲಿ ಹೊಸಬೆಳಕು ತರಲಿ “ಬೇವಿನ ಕಹಿ ಬಿಟ್ಟು ,ಬೆಲ್ಲದ ಸಿಹಿಸಿಗಲಿ”

ಪಲ್ಲವಿ

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.