ಉಡುಪಿಯ ಅಭಿಜ್ಞಾ ರಾವ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ | Udayavani
Team Udayavani, Jul 14, 2020, 6:00 PM IST
ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು ಈ ಬಾರಿಯೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಗಮನಾರ್ಹವಾಗಿ 6 ಪ್ರಮುಖ ರ್ಯಾಂಕ್ ಗಳನ್ನು ಜಿಲ್ಲೆಯ ವಿದ್ಯಾರ್ಥಿನಿಯರು ಪಡೆದುಕೊಂಡಿದ್ದು ಹೆಮ್ಮೆಯ ವಿಚಾರವಾಗಿದೆ. ವಿದ್ಯೋದಯ ಪಪೂ ಕಾಲೇಜಿನ ಕಾಲೇಜಿನ ವಿದ್ಯಾರ್ಥಿನಿ ಅಭಿಜ್ಞಾ ರಾವ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ, ಇವರು ವಿಠ್ಠಲ್ ರಾವ್ ಮತ್ತು ಆಶಾ ರಾವ್ ಅವರ ಪುತ್ರಿಯಾಗಿದ್ದು ಪಿಸಿಎಂಸಿ ಹಾಗೂ ಸಂಸ್ಕೃತದಲ್ಲಿ 100 ಅಂಕ ಹಾಗೂ ಇಂಗ್ಲೀಷ್ ನಲ್ಲಿ 96 ಅಂಕ ಪಡೆದಿದ್ದಾರೆ. #abhijnarao #pucrank #pucresults #1strank