Growth of a Miyawaki Forest in a city | World Environment day Special
Team Udayavani, Jun 5, 2020, 10:55 AM IST
ದಕ್ಷಿಣ ಭಾರತದ ಮಿಯಾವಾಕಿ ವನ ದಟ್ಟ ಕಾಡು ಬೆಳೆಸುವ ಸುಲಭ ಮಾದರಿ ವಿಧಾನ ಕಟಪಾಡಿ: ಪರಿಸರ ಮಾಲಿನ್ಯ, ಅಂತರ್ ಜಲ ವೃದ್ಧಿ, ಹೆಚ್ಚುತ್ತಿರುವ ಭೂಮಿಯ ತಾಪಮಾನ ಸಹಿತ ಇಂತಹ ಹತ್ತು ಹಲವಾರು ಸಮಸ್ಯೆಗೆ ಪರಿಹಾರವೇ “ಮಿಯಾವಾಕಿ ಕಾಡು”. ಕಟಪಾಡಿ ಮಹೇಶ್ ಶೆಣೈಯವರ ಪೊಸಾರು ಎಂಬಲ್ಲಿನ “ಗುರು ಕೃಪಾದಲ್ಲಿ ಒಂದು ಸಣ್ಣ ಖಾಸಗಿ ಮಿಯಾವಾಕಿ ಅರಣ್ಯ ಬೆಳೆಸಲು ಪ್ರಯತ್ನ ನಡೆಸಿದ್ದು ಯಶಸ್ವಿಯಾಗಿದ್ದಾರೆ. ಈ ವನವನ್ನು ಮಹೇಶ್ ಶೆಣೈ “ಗಣಪತಿ ವನ” ಎಂದು ಹೆಸರಿಸಿದ್ದಾರೆ . ” ಮಿಯಾವಾಕಿ” ಈ ವಿಧಾನವು ಭಾರತದ ಪಂಜಾಬ್ , ಮುಂಬೈ, ಬೆಂಗಳೂರು ಮತ್ತು ಮುಂತಾದ ಕಡೆಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಅತ್ಯಂತ ಕಡಿಮೆ ಸ್ಥಳದಲ್ಲಿ ಖಾಸಗಿ ಅರಣ್ಯವನ್ನು ನಿರ್ಮಿಸ ಬಹುದಾಗಿದೆ. ಈ ವಿಧಾನದಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ 400 ಮರಗಳನ್ನು ನೀಡಬಹುದಾಗಿದೆ. ಇದರಲ್ಲಿ ಎರಡು ಹಂತಗಳಿದ್ದು ಮೊದಲನೇ ಹಂತದಲ್ಲಿ ಗಿಡ ಮರ ನೆಡಲು ಬೇಕಾಗುವಂತಹ ಮಣ್ಣಿನ ಪದರವನ್ನು ರಚಿಸುವುದು ಮತ್ತು ಎರಡನೇ ಹಂತದಲ್ಲಿ ಸಸಿಗಳನ್ನು ನೆಡುವುದು ಯೋಜನೆಯಾಗಿದೆ.