“ಇರುವುದೆಲ್ಲವ ಬಿಟ್ಟವರ ನಡುವೆ’: ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ
Team Udayavani, Sep 4, 2018, 3:47 PM IST
ದಾವಣಗೆರೆ ದೇವರಾಜ್ ನಿರ್ಮಾಣದ “ಇರುವುದೆಲ್ಲವ ಬಿಟ್ಟು’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಬೋಲ್ಡ್ ಆಗಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಟ್ರೈಲರ್ ಗೆ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದ್ದು, ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ. ಹಾಗೂ ಚಿತ್ರದ ಒಂದು ಹಾಡು ತಮಿಳು ನಟ ಸಿಂಬು ಕಂಠದಲ್ಲಿ ಮೂಡಿ ಬಂದಿದ್ದು, ಚಿತ್ರಕ್ಕೆ ಶ್ರೀಮುರಳಿ ಧ್ವನಿ ನೀಡುವ ಮೂಲಕ ಹೊಸಬರ ತಂಡವನ್ನು ಪ್ರೋತ್ಸಾಹಿಸಿದ್ದಾರೆ. ಇನ್ನು ಚಿತ್ರವನ್ನು ಕಾಂತ ಕನ್ನಲ್ಲಿ ನಿರ್ದೇಶಿಸಿದ್ದು, ಮಹೇಶ್ ಮಳವಳ್ಳಿ ಸಂಭಾಷಣೆ, ವಿಲಿಯಂ ಡೇವಿಡ್ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ, ಶ್ರೀನಿವಾಸ್ ಕಲೆ ಇದೆ. ತಾರಾಗಣದಲ್ಲಿ ತಿಲಕ್, ಶ್ರೀಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ, ರಿಚರ್ಡ್ ಲೂಯಿಸ್ ಮುಂತಾದವರಿದ್ದಾರೆ. ಅಂದಹಾಗೆ “ಇರುವುದೆಲ್ಲವ ಬಿಟ್ಟು’ ಈ ಶೀರ್ಷಿಕೆಗೆ “ಇರುವೆ ಬಿಟ್ಟುಕೊಳ್ಳುವುದೇ ಜೀವನ’ ಎಂಬ ಅಡಿಬರಹವಿದೆ. ಚಿತ್ರದ ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ.