ಕೇರಳದ ಉದ್ಯೋಗಿಗಳಿಗೆ ಮಂಗಳೂರಿಗೆ ಬರಲು ತಿಂಗಳಿಗೆ ಒಮ್ಮೆ ಮಾತ್ರ ಅವಕಾಶ
Team Udayavani, Jul 7, 2020, 4:59 PM IST
ಉಳ್ಳಾಲ: ಮಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳ ಸರಕಾರ ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧಿಸಿದ ಕಾರಣ ಪಾಸ್ ಹಿಡಿದು ದಿನನಿತ್ಯ ಕೆಲಸಕ್ಕೆ ಬರುತ್ತಿದ್ದವರನ್ನು ಕೇರಳ ಪೊಲೀಸರು ತಲಪಾಡಿಯಲ್ಲಿ ತಡೆಹಿಡಿದಿರುವುದು ಗೊಂದಲಕ್ಕೆ ಕಾರಣವಾಗಿದೆ. ಜು.11 ರ ಅವಧಿವರೆಗೆ ದ.ಕ ಜಿಲ್ಲಾಡಳಿತ ನೀಡಿರುವ ಪಾಸ್ ಇದೆ. ಅಷ್ಟು ಸಮಯ ಬಿಡಬೇಕು ಎಂದು ಮಂಗಳೂರಿಗೆ ಬರುವ ಮಂದಿ ಕೇರಳ ಪೊಲೀಸರನ್ನು ಒತ್ತಾಯಿಸಿದ್ದಾರೆ. ಆದರೆ ಮಂಗಳೂರು ಬಂದ ಐದು ಮಂದಿಯಲ್ಲಿ ಕೋವಿಡ್ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ಸರಕಾರದ ಕಠಿಣ ಆದೇಶ ಇರುವುದರಿಂದ ಮಂಗಳೂರಿನಲ್ಲೇ ಉಳಿದುಕೊಂಡು 28 ದಿನಕ್ಕೊಮ್ಮೆ ಕೇರಳಕ್ಕೆ ಬಂದು ಹೋಗಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.