ಹೆಮ್ಮೆಯ ಚಿತ್ರ ಕಲಾವಿದ ಪಿ.ಎನ್. ಆಚಾರ್ಯ ಅವರು ನಡೆದು ಬಂದ ಹಾದಿ
Team Udayavani, Oct 10, 2019, 3:29 PM IST
ಕರಾವಳಿ ಮೂಲದ ಚಿತ್ರ ಕಲಾವಿದರಾದ ಪಿ.ಎನ್. ಆಚಾರ್ಯ ಅವರು 5100 ಕ್ಕೂ ಹೆಚ್ಚು ಸಂಶೋಧನಾತ್ಮಕ ಚಿತ್ರಗಳನ್ನು ಅಮೆರಿಕದ ಟಫ್ಟ್ಸ್ ವಿಶ್ವವಿದ್ಯಾನಿಲಯದ ಮೂರು ಅಧ್ಯಯನ ಗ್ರಂಥಗಳಿಗೆ ರಚಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾಡಿನ ಹಲವು ನಿಯತಕಾಲಿಕಗಳಿಗೆ ಮಾತ್ರವಲ್ಲದೇ ಕಾದಂಬರಿಗಳಿಗೆ ಚಿತ್ರಗಳನ್ನು ರಚಿಸಿರುವ ಖ್ಯಾತಿ ಆಚಾರ್ಯರದ್ದಾಗಿದೆ. ಹೀಗೆ ಚಿತ್ರಕಲೆಯಲ್ಲಿ ತನ್ನದೇ ಆಗಿರುವ ಸಾಧನೆಯನ್ನು ಮಾಡಿರುವ ಪಿ.ಎನ್. ಆಚಾರ್ಯ ಅವರು ನಡೆದು ಬಂದಿರುವ ಹಾದಿಯನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದೆ.