ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿಯಿತು ಮನೆ
Team Udayavani, Nov 20, 2019, 8:01 PM IST
ವಿಜಯಪುರ: ನಗರದ ಬಿ.ಎಸ್.ಎನ್.ಎಲ್ ಕಛೇರಿ ಹಿಂಭಾಗದ ಹಳೆಯ ಮನೆಯೊಂದು ಮಂಗಳವಾರ ಬೆಂಕಿಗೆ ಆಹುತಿ ಆಗಿದೆ. ಬುಖಾರಿ ಮಸಿದಿ ಬಳಿಯ ವಾಟರಕರ ಎಂಬರಿಗೆ ಸೇರಿದ ಕಟ್ಟಿಗೆಯಿಂದ ನಿರ್ಮಿಸಿದ್ದ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಮನೆಯನ್ನು ಸುಟ್ಟು ಹಾಕಿದೆ.