ಬಿಎಂಡಬ್ಲ್ಯೂ ಕಾರು ಬೂದಿ ಮಾಡಿದ ಊದಿನ ಕಡ್ಡಿ
Team Udayavani, Jun 15, 2018, 4:07 AM IST
ಷೋ ರೂಮ್ನಿಂದ ತಂದ ಕಾರಿಗೆ ಪೂಜೆ ಮಾಡಲು ಹೋದ ವ್ಯಕ್ತಿ ಹಚ್ಚಿದ ಊದಿನಕ ಡ್ಡಿ ಯಿಂದ ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರು ಭಸ್ಮವಾಗಿರುವ ಘಟನೆ ಚೀನಾದ ಜಿಯಾಂಗ್ಸುನಲ್ಲಿ ನಡೆದಿದೆ. ಯಂಗ್ಝೌ ಎಂಬಾತ 4,70,000 ಯುವಾನ್ (50 ಲಕ್ಷ ರೂ.) ಮೌಲ್ಯದ ಹೊಸ ಬಿಎಂಡಬ್ಲ್ಯೂ ಕಾರು ಕೊಂಡು ತಂದಿದ್ದಾನೆ. ಕಾರು ಮನೆ ಮುಂದೆ ಬಂದು ನಿಂತ ಕೂಡಲೇ, ಮನೆಯೊಳಗಿನಿಂದ ಕೆಂಪು ಬಣ್ಣದ ಬಟ್ಟೆ ಯೊಂದನ್ನು ತಂದು ಕಾರಿಗೆ ಹೊದಿಸಿ, ಊದಿನ ಕಡ್ಡಿ ಹಚ್ಚಿ ಚೀನಾ ಸಂಪ್ರದಾಯದಂತೆ ಪೂಜೆ ಸಲ್ಲಿಸಲು ಮುಂದಾಗಿದ್ದಾನೆ. ಊದಿನ ಕಡ್ಡಿ ಹತ್ತಿ ಸಿದ ಕೂಡಲೇ ಕಾರಿಗೆ ಥಟ್ಟನೆ ಬೆಂಕಿ ಹೊತ್ತಿಕೊಂಡು, ನಿಮಿಷಗಳಲ್ಲೇ ಕಾರು ಭಸ್ಮವಾಗಿದೆ. ಆದರೆ, ಈ ಘಟನೆಯ ಕಾರಣ ತಿಳಿದು ಬಂದಿಲ್ಲ.