ಹೆಂಡತಿ ಶಾಪಿಂಗ್ ಮಾಡ್ತಿದ್ರೆ ಪತಿಗೆ ಮಸಾಜ್ ಮಾಡ್ತಾರೆ!
Team Udayavani, Jul 24, 2017, 4:11 AM IST
ಹೆಂಡತಿ ಜೊತೆ ಶಾಪಿಂಗ್ ಹೋಗೋದು ಅಂದ್ರೆ ಬೋರೋ ಬೋರು! ಎಷ್ಟು ಹೊತ್ತು ಆದ್ರೂ ಹೆಂಡತಿಗೆ ಖರೀದಿ ಆಗಲ್ಲ. ನೋಡಿದ್ದನ್ನು ಎಷ್ಟು ನೋಡಿದ್ರೂ ಸಾಕಾಗಲ್ಲ ಎಂಬುದು ದೂರು. ಕಾರಣ ಶಾಪಿಂಗ್ ವ್ಯವಹಾರದಿಂದ ತಪ್ಪಿಸಿಕೊಳ್ಳಲು ಗಂಡಂದಿರು ನಾನಾ ಕಾರಣ ಹೇಳ್ತಾರೆ. ಆದ್ರೆ ಚಾಲಾಕಿ ಪತ್ನಿಯರ ಎದುರು ಪ್ರತಿ ಸಲವೂ ಗಂಡಂದಿರ ಇಂತಹ ಆಟಗಳೆಲ್ಲ ನಡೆಯೋದೇ ಇಲ್ಲ. ಪರಿಣಾಮ ಹೆಂಡತಿ ಹಿಂದೆ ಹೋಗಲೇ ಬೇಕಾ
ಗುತ್ತೆ!. ಆದರೆ ಚೀನಾದ ಶಾಂಘೈ ನಗರದಲ್ಲಿ ಗಂಡಂದಿರಿಗೆ ಈ ಸಮಸ್ಯೆಗಳಿಲ್ಲ. ಅಲ್ಲಿನ ಮಾಲ್ಗಳಿಗೆ ಹೋದರೆ ಹೆಂಡ್ತಿ ಯನ್ನು ಶಾಪಿಂಗ್ಗೆ ಬಿಟ್ಟು, ಗಂಡಂದಿರು ಮಸಾಜ್ಗೆ ಲೆದರ್ ಚೇರ್ನಲ್ಲಿ ಕೂರಬಹುದು. ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಅಲ್ಲೇ ಅದ್ಭುತವಾದ ವಿಡಿಯೋ ಗೇಮ್ ಆಡುವ ವ್ಯವಸ್ಥೆ, ಟೀವಿ, ವಿಶ್ರಾಂತಿ ಪಡೆವ ವ್ಯವಸ್ಥೆ ಎಲ್ಲವೂ ಇದೆ. ಇದಕ್ಕೆ ಸುಮಾರು 200 ರೂ. ಶುಲ್ಕವಿದೆಯಂತೆ. ಹೆಂಡತಿ ಹಿಂದೆ ಬಂದವರಿಗೆ ಮನರಂಜನೆ ವ್ಯವಸ್ಥೆ ಇದ್ದು ಶಾಪಿಂಗ್ ಮುಗಿವವರೆಗೆ ಹಾಯಾಗಿ ಇರಬಹುದಂತೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ