ಕ್ಯಾರೆಟ್ ಎಂದು ಕಾರ್ಗೆ ಬಾಯಿ ಹಾಕಿದ ಕತ್ತೆ!
Team Udayavani, Oct 2, 2017, 4:45 AM IST
ಹಂಗ್ರಿ ಮ್ಯಾನ್ ಈಸ್ ಆ್ಯಂಗ್ರಿ ಮ್ಯಾನ್ ಎಂಬ ಇಂಗ್ಲಿಷ್ ಗಾದೆ ಮಾನವರಿಗೆ ಅನ್ವಯ. ಅದನ್ನೇ ಕತ್ತೆಗೆ ಅನ್ವಯಿಸಿದರೆ ಹೇಗಿರುತ್ತದೆ? ಎಲ್ಲಿಂದೆಲ್ಲಿಗೆ ಹೋಲಿಕೆ ಎಂದು ಯೋಚಿಸಬೇಡಿ. ಜರ್ಮನಿಯಲ್ಲಿ ನಡೆದ ಪ್ರಕರಣ ಹಾಗೆಯೇ ಆಗಿದೆ.
ಜನಪ್ರಿಯ ಕಾರು ಕಂಪನಿ ಮ್ಯಾಕ್ಲಾರೆನ್ ಕಂಪನಿಯ ಅದ್ಧೂರಿ ಕಾರನ್ನು ಕ್ಯಾರೆಟ್ ಎಂದು ಕತ್ತೆ ತಿನ್ನಲು ಹೋಗಿ ಫಜೀತಿಗೆ ಒಳಗಾಗಿದೆ. ಕತ್ತೆಯನ್ನು ಕಟ್ಟಿ ಹಾಕಲಾಗಿದ್ದ ಸ್ಥಳದಲ್ಲಿಯೇ ಕ್ಯಾರೆಟ್ ಬಣ್ಣದ ಮ್ಯಾಕ್ ಲಾರೆನ್ ಕಾರನ್ನು ಪಾರ್ಕ್ ಮಾಡಲಾಗಿತ್ತು. ಕತ್ತೆಗೆ ಹಸಿವಾಗಿತ್ತೋ ಏನೋ, ಕಾರು ಅದಕ್ಕೆ ಕ್ಯಾರೆಟ್ ರೀತಿಯಲ್ಲಿ ಕಂಡಿದೆ. ಕೂಡಲೇ ಕತ್ತೆ ಬಾಯಿ ಹಾಕಿದೆ. ಇದರಿಂದ ಕಾರಿಗೆ ಕೊಂಚ ಹಾನಿಯಾಗಿದೆ. ಕ್ರುದ್ಧನಾದ ಕಾರಿನ ಮಾಲೀಕ ಪೊಲೀ ಸರಿಗೆ ದೂರು ನೀಡಿದ.
ಕೋರ್ಟಲ್ಲಿ ವಿಚಾರಣೆ ನಡೆದು ಕತ್ತೆಯ ಒಡೆಯ, ಕಾರ್ ಮಾಲೀಕನಿಗೆ 4.47 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶವೂ ಆಯಿತು. ಆದರೆ ಅದನ್ನು ನೀಡಲು ಕತ್ತೆಯ ಒಡೆಯ ನಿರಾಕರಿಸಿದ್ದಾನೆ. ಅಂದ ಹಾಗೆ ಮ್ಯಾಕ್ಲಾರೆನ್ ಕಾರಿನ ಬೆಲೆ 1.73 ಕೋಟಿ ರೂ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ