ಮಾಲೀಕನ ರೌದ್ರಾವತಾರ: ದರೋಡೆಕೋರರೇ ಪರಾರಿ!
Team Udayavani, Jun 21, 2017, 5:26 AM IST
ದರೋಡೆಗೆ ಅಂತ ಮನೆಯೊಂದಕ್ಕೆ ಗನ್ ಎಲ್ಲ ಹಿಡ್ಕೊಂಡೇನೋ ಬಂದ್ರು! ಆದ್ರೆ ಮನೆ ಮಾಲೀಕನ ರೌದ್ರಾವತಾರ ನೋಡಿ.. ದರೋಡೆಕೋರರು ಕಂಗಾಲಾಗಿ,ಎದ್ದೂಬಿದ್ದು, ಬದುಕಿದ್ರೆ ಸಾಕಪ್ಪಾ…ಅಂತ ಓಡಿಹೋಗಿದ್ದಾರೆ.
ಇಷ್ಟಕ್ಕೂ ಈ ಘಟನೆ ನಡೆದಿದ್ದು, ಅಮೆರಿಕದ ಫ್ಲೋರಿಡಾದಲ್ಲಿ. ಆ ಮನೆ ಮಾಲೀಕ ರಾತ್ರಿ ಹೊತ್ತು ಒಂಚೂರು ನೆಮ್ಮದಿಯಾಗಿ ಮನೆ ಲಾಂಜ್ನಲ್ಲಿ ಕೂತಿದ್ದ. ಇದೇ ಹೊತ್ತಿಗೆ ಹೊಂಚುಹಾಕಿದ್ದ ಮೂವರು ದರೋಡೆಕೋರರು ಗನ್ ಹಿಡಿದು ನೇರ ಒಳಗೆ ನುಗ್ಗಿದ್ದಾರೆ.
ಸಾಮಾನ್ಯದವರಾದರೆ, ದರೋಡೆಕೋರರನ್ನು ನೋಡಿ ಹೆದರಿಯೇ ಇದ್ದಿದ್ದನ್ನೆಲ್ಲಾ ಕೊಟ್ಟುಬಿಡಬೇಕು. ಆದರೆ ಈ ಮಾಲೀಕ ಅಂತಿಥವನಲ್ಲ. ಬಲು ಘಾಟಿ, ದರೋಡೆಕೋರರನ್ನು ಕಂಡು ಕೂಡಲೇ ಮನೆಯೊಳಗಿಂದ ಮಚ್ಚೊಂದನ್ನು ತಂದು ಝಳಪಿಸಿದ್ದಾನೆ. ಜೊತೆಗೆ ದರೋಡೆಕೋರರ ಮೇಲೆಯೇ ಏರಿ ಹೋಗಿದ್ದು, ಓರ್ವನ ಕೈಯಿಂದ ಬಂದೂ ಕು ಕಿತ್ತುಕೊಂಡಿದ್ದಾನೆ. ಇಷ್ಟಾಗುತ್ತಲೇ ದರೋಡೆಕೋರರು ಕಾಲಿಗೆ ಬುದ್ಧಿ ಹೇಳಿದ್ದಾರೆ. ಈ ಘಟನಾವಳಿಗಳೆಲ್ಲ ಮನೆಯಲ್ಲಿದ್ದ ಸೀಸಿಟೀವಿಯಲ್ಲಿ ರೆಕಾರ್ಡ್ ಆಗಿದೆ.ಸಾಮಾಜಿಕ ಜಾಲತಾಣಗಳಲ್ಲೂ ವೀಡಿಯೋ ವೈರಲ್ ಆಗಿದೆ.