ಕಳ್ಳ ಮಲ ವಿಸರ್ಜಿಸಿದ್ದೇ ಎಡವಟ್ಟಾಯ್ತು!
Team Udayavani, Aug 10, 2017, 10:51 AM IST
ಕಳ್ಳ ತಾನು ಕಳ್ಳತನ ಮಾಡಿದ ಜಾಗದಲ್ಲಿ ಏನಾದರೊಂದು ಸುಳಿವು ಬಿಟ್ಟು ಹೋಗಿರುತ್ತಾನೆ ಎಂಬ ಮಾತಿದೆ. ಅದರಂತೆ ಅಮೆರಿಕದ ಕಳ್ಳನೊಬ್ಬ ಬಹುಮುಖ್ಯವಾದ ಸಾಕ್ಷಿಯನ್ನು ತಾನು ದರೋಡೆ ನಡೆಸಿದ ಮನೆಯಲ್ಲಿ ಬಿಟ್ಟು ಹೋಗಿದ್ದಾನೆ. ತನ್ನ ಎಡವಟ್ಟಿನಿಂದಾಗಿ ಆತ ಈಗ ಕಂಬಿ ಎಣಿಸು ವಂತೆ ಆಗಿದೆ. ಅಷ್ಟಕ್ಕೂ ಆತ ಮನೆಯಲ್ಲಿ ಬಿಟ್ಟುಹೋದ ಸಾಕ್ಷಿ ಏನೆಂದರೆ ಅದು ಆತನ “ಮಲ’. ದರೋಡೆಕೋರ
ಆ್ಯಂಡ್ರೂ ಡೇವಿಡ್ ಜೆನ್ಸನ್ ಲಾಸ್ ಏಂಜಲೀಸ್ನ ಮನೆ ಯೊಂದಕ್ಕೆ ಕನ್ನ ಹಾಕಿದ್ದ. ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನೆಲ್ಲಾ ಕದ್ದ ಮೇಲೆ ಆತನಿಗೆ ಮಲವಿಸರ್ಜನೆ ಮಾಡಲು ಅವಸರವಾಗಿದೆ. ಮನೆಯ ಶೌಚಾಲಯದಲ್ಲಿದ್ದ ಕಮೋಡಿನಲ್ಲಿ ಮಲವಿಸರ್ಜನೆ ಮಾಡಿದ್ದಾನೆ. ಫ್ಲಶ್ ಮಾಡಿ
ದರೆ ಸದ್ದಾಗಿ ಎಲ್ಲಿ ತಾನು ಸಿಕ್ಕಿಬೀಳುತ್ತೇನೊ ಎಂದು ಆತ ಫ್ಲಶ್ ಮಾಡದೇ ಅಲ್ಲಿಂದ ಹೊರಬಿದ್ದಿದ್ದಾನೆ. ಮರುದಿನ ತನಿಖೆಗಾಗಿ ಬಂದ ಪೊಲೀಸರು ಕಮೋಡ್ನಲ್ಲಿದ್ದ ಮಲ ತೆಗೆದುಕೊಂಡು ಹೋಗಿ ಡಿಎನ್ಎ ಪರೀಕ್ಷೆಗೆ ನೀಡಿದ್ದಾರೆ. ಈ ಡಿಎನ್ಎ ಶಂಕಿತ ದರೋಡೆಕೋರ ಡೇವಿಡ್ ಡಿಎನ್ಎ ಜೊತೆ ಹೊಂದಿಕೆಯಾಗಿದೆ. ಈಗ ಆತ ಪೊಲೀಸರ ಅತಿಥಿ.