YouTube Subscribe ಸಮರ: ಪ್ಯೂಡಿಪೈ ಹಿಂದಿಕ್ಕಿದ T- ಸಿರೀಸ್


Team Udayavani, Feb 25, 2019, 3:19 AM IST

t-series-25-2.jpg

ಇದೊಂದು ಸೈಬರ್ ಸಬ್ ಸ್ಕ್ರೈಬರ್ ಸಮರದ ಇಂಟರೆಸ್ಟಿಂಗ್ ಕಥೆ. ವಿಶ್ವದ ಜನಪ್ರಿಯ ವಿಡಿಯೋ ಸ್ಟ್ರೀಮರ್ ಯೂ-ಟ್ಯೂಬ್ ನಲ್ಲಿ ಅತೀ ಹೆಚ್ಚು ಸಬ್ ಸ್ಕ್ರೈಬರ್ ಗಳನ್ನು ಹೊಂದಿದವರ ನಡುವಿನ ಜಿದ್ದಾಜಿದ್ದಿನ ವಿಷಯ. ಸ್ವೀಡನ್ ಮೂಲದ ಯೂ-ಟ್ಯೂಬರ್ ಪ್ಯೂಡಿಪೈ ವಿಶ್ವದಲ್ಲೇ ಅತೀ ಹೆಚ್ಚು ಯೂ ಟ್ಯೂಬ್ ಸಬ್ ಸ್ಕ್ರೈಬರ್ ಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದಾನೆ. ಆದರೆ ಈತನಿಗೆ ಕತ್ತುಕತ್ತಿನ ಸ್ಪರ್ಧೆ ನೀಡುತ್ತಿದ್ದಿದ್ದು ಭಾರತೀಯ ಮ್ಯೂಸಿಕ್ ಕಂಪೆನಿ ಟಿ-ಸಿರೀಸ್.

ಹೀಗಿರುತ್ತಾ, ಮೊನ್ನೆ ಶುಕ್ರವಾರದಂದು ಟಿ-ಸಿರೀಸ್ ಈ ಸಬ್ ಸ್ಕ್ರೈಬರ್ ಸಮರದಲ್ಲಿ ಪ್ಯೂಡಿಪೈ ಚಾನೆಲನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಯೂಟ್ಯೂಬ್ ಸಬ್ ಸ್ಕ್ರೈಬರ್ ಚಾನೆಲ್ ಎಂದು ಗುರುತಿಸಿಕೊಂಡಿತು. ಆದರೆ ವಿಷಾದವೆಂದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಕೇವಲ 8 ನಿಮಿಷಗಳ ಕಾಲ ಮಾತ್ರ ಟಿ ಸಿರಿಸ್ ಗ್ ಈ ನಂಬರ್ 1 ಪಟ್ಟ ಲಭ್ಯವಾಯ್ತು. ಈ ಸಮಯದಲ್ಲಿ ಟಿ-ಸಿರೀಸ್ ಪ್ಯೂಡಿಪೈ ನ ಚಾನೆಲ್ ಗಿಂತ 2000 ಅಧಿಕ ಸಬ್ ಸ್ಕ್ರೈಬರ್ ಗಳನ್ನು ಹೊಂದಿತ್ತು.

ತನ್ನ ಸಬ್ ಸ್ಕ್ರೈಬರ್ಸ್, ವಿಡಿಯೋ ನೋಡಿದವರ ಸಂಖ್ಯೆಗಳ ಸಾಚಾತನವನ್ನು ಪರೀಕ್ಷಿಸಲು ಯೂ-ಟ್ಯೂಬ್ ಪ್ರತೀ ವರ್ಷ ನಡೆಸುವ ಆಡಿಟ್ ಪ್ರಕ್ರಿಯೆಯಿಂದಾಗಿ ಈ ಬದಲಾವಣೆ ಸಂಭವಿಸಿತು ಎಂದು ಅಂತರ್ಜಾಲ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಪ್ಯೂಡಿಪೈ ಒಮ್ಮಿಂದೊಮ್ಮೆಲೇ ತನ್ನ 20,000 ಸಬ್ ಸ್ಕ್ರೈಬರ್ ಗಳನ್ನು ಕಳೆದುಕೊಳ್ಳುವಂತಾಯ್ತು ಮತ್ತು ಟಿ-ಸಿರೀಸ್ ಕೆಲ ನಿಮಿಷಗಳ ಮಟ್ಟಿಗಾದರೂ ನಂಬರ್ 1 ಪಟ್ಟಕ್ಕೆ ಏರುವಂತಾಯಯ್ತು.

ಭೂಷಣ್ ಕುಮಾರ್ ಮಾಲಿಕತ್ವದ ಟಿ-ಸಿರೀಸ್ 1980ರಿಂದಲೂ ಭಾರತದಲ್ಲಿ ಚಿರಪರಿಚಿತವಾಗಿದೆ. ಇನ್ನು ಸ್ವೀಡನ್ ಮೂಲದ ಫೆಲಿಕ್ಸ್ ಅರ್ವಿಡ್ ಉಲ್ಫ್ ಝೆಲ್ಬರ್ಗ್ ಯೂ-ಟ್ಯೂಬ್ ನಲ್ಲಿ ತನ್ನ ಹಾಸ್ಯದ ವಿಡಿಯೋಗಳಿಂದ ಹೆಸರುವಾಸಿಯಾಗಿದ್ದು ಅಂತರ್ಜಾಲ ವಲಯದಲ್ಲಿ ‘ಪ್ಯೂಡಿಪೈ’ ಎಂದೇ ಕರೆಸಿಕೊಳ್ಳುತ್ತಿದ್ದಾನೆ. ಅಂದಹಾಗೆ ಪ್ರಸ್ತುತ ಟಿ-ಸಿರೀಸ್ 86,970,587 (8.50 ಕೋಟಿ ಪ್ಲಸ್) ಜನ ಸಬ್ ಸ್ಕ್ರೈಬರ್ಸ್ ಗಳನ್ನು ಹೊಂದಿದ್ದು ಪ್ಯೂಡಿಪೈ ಅವರ ಚಾನೆಲ್ ನ ಸಬ್ ಸ್ಕ್ರೈಬರ್ ಗಳ ಸಂಖ್ಯೆ 87,119,111 (8.70 ಕೋಟಿ ಪ್ಲಸ್) ಆಗಿದೆ. ಯೂ-ಟ್ಯೂಬ್ ನಲ್ಲಿ ನಂಬರ್ 1 ಪಟ್ಟಕ್ಕಾಗಿ ಈ ಎರಡು ಚಾನೆಲ್ ಗಳ ನಡುವೆ ಕಳೆದ 6 ವರ್ಷಗಳಿಂದ ನಿಕಟ ಸ್ಪರ್ಧೆ ನಡೆಯುತ್ತಿದೆ.

ಟಾಪ್ ನ್ಯೂಸ್

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ


MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

9-koratagere

Koratagere: ಜೂ.9 ರಂದು ಉಚಿತ ಸಾಮೂಹಿಕ ವಿವಾಹ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

7-Panaji

Panaji: ಬಿಚೋಲಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.