ಮರಿಜುವಾನಾ ಮಾರಾಟಕ್ಕೂ ಇದೆಯೊಂದು ಕೋರ್ಸ್
Team Udayavani, Oct 20, 2017, 7:24 AM IST
ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ ಪದವಿ ಎಲ್ಲರಿಗೂ ಗೊತ್ತು. ಆದರೆ ಮಾದಕ ವಸ್ತು ಮರಿಜುವಾನಾ ಮಾರಾಟದಲ್ಲಿ ಪದವಿ ತರಗತಿ ಆರಂಭವಾದರೆ ಹೇಗೆ? ಶಾಂತಂ ಪಾಪಂ ಎಂದು ತಿಳಿದುಕೊಳ್ಳಬೇಡಿ. ಉತ್ತರ ಮಿಚಿಗನ್ ವಿವಿಯಲ್ಲಿ ಅದನ್ನು ಆರಂಭಿಸಲಾಗಿದೆ. ಹಾಗಿದ್ದರೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರೆಲ್ಲ ಮರಿಜುವಾನಾ ಸೇವನೆಯಲ್ಲಿ ಅಮಲಾಗಿ ಓಲಾಡುತ್ತಾ ತರಗತಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿದುಕೊಂಡರೆ ತಪ್ಪಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಮರಿಜುವಾನಾದ ಬಳಕೆ ಹೆಚ್ಚುತ್ತಿರುವುದರಿಂದ ಈ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದೆ.
ಪ್ರಯೋಗಶಾಲೆಯಲ್ಲಿ ಕೃತಕವಾಗಿ ಅದನ್ನು ಸಿದ್ಧಪಡಿಸಲಾಗುವುದಿಲ್ಲವಂತೆ. ಅದೇ ಮಾದರಿಯ ಇತರ ವೈದ್ಯಕೀಯ ಗಿಡಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ ಎನ್ನುತ್ತಾರೆ ವಿವಿಯ ರಸಾಯನಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಬ್ರಾಂಡನ್ ಕ್ಯಾನ್ಪೀಲ್ಡ್. ಅಧ್ಯಯನದಲ್ಲಿ ವೈದ್ಯಕೀಯ ವಿಭಾಗ ಮತ್ತು ಅದರ ಮಾರುಕಟ್ಟೆ ವಿಚಾರಗಳು ಒಳಗೊಂಡಿವೆೆ ಎಂದು ಪ್ರೊಫೆಸರ್ ಪ್ರತಿಪಾದಿಸುತ್ತಾರೆ. ನಾಲ್ಕು ವರ್ಷದ ಪದವಿಗೆ ಈಗಾಗಲೇ ಹಲವರು ಆಸಕ್ತಿ ವಹಿಸಿದ್ದಾರಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್