14,500 ವರ್ಷ ಹಿಂದೆ ತಯಾರಾಗಿದ್ದ ಬ್ರೆಡ್ ಪತ್ತೆ !
Team Udayavani, Jul 18, 2018, 6:22 AM IST
ಸಾವಿರಾರು ವರ್ಷಗಳ ಹಿಂದೆ ಬದುಕಿದ್ದ ಎಷ್ಟೋ ಜೀವಿಗಳ ಪಳೆಯುಳಿಕೆಗಳು ದೊರೆತು ಸುದ್ದಿಯಾಗುತ್ತವೆ. ಈಗ 14,500 ವರ್ಷಗಳ ಹಿಂದಿನ ಬ್ರೆಡ್ ಒಂದು ಜೋರ್ಡಾನ್ನಲ್ಲಿ ಪತ್ತೆಯಾಗಿದೆ.
ಯೀಸ್ಟ್ ಬಳಸಿ ಈಗ ತಯಾರಿಸುವ ಬ್ರೆಡ್ನಂತೆಯೇ ಈ ಬ್ರೆಡ್ ಕೂಡ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ ಅಷ್ಟು ವರ್ಷಗಳ ಹಿಂದೆಯೇ ಬ್ರೆಡ್ ತಯಾರಿಸಲಾಗುತ್ತಿತ್ತೇ ಎಂದು ನೀವು ಪ್ರಶ್ನಿಸಬಹುದು. ಹೌದು ಎಂದಿದ್ದಾರೆ ವಿಜ್ಞಾನಿಗಳು. ಗುಡಿಸಲುಗಳ ಮಧ್ಯೆ ಈ ಬ್ರೆಡ್ ಸಿಕ್ಕಿದೆ ಯಂತೆ. ಕಾಡಿನಲ್ಲಿ ಸಿಗುತ್ತಿದ್ದ ಧಾನ್ಯಗಳಾದ ಬಾರ್ಲಿ, ಓಟ್ಸ್ ಮುಂತಾದುವುಗಳನ್ನು ಬಳಸಿ ಈ ಬ್ರೆಡ್ ತಯಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಮೆಡಿಟರೇನಿಯನ್ ಪ್ರದೇಶದ ನಾಗರಿಕತೆ ಬೆಳವಣಿಗೆಯಲ್ಲಿ ಮೈಲುಗಲ್ಲು ಸಾಧಿಸಿತ್ತು ಎಂದು ಅವರು ಹೇಳಿದ್ದಾರೆ.