Udayavni Special

ಏನಿದು ಕ್ಲಬ್ ಹೌಸ್ ಆ್ಯಪ್: ಇದರ ಜನಪ್ರಿಯತೆಗೆ ಕಾರಣಗಳೇನು ?


Team Udayavani, Jun 9, 2021, 11:40 AM IST

club-hosue

ಕ್ಲಬ್‌ ಹೌಸ್‌ … ಕಳೆದ ಕೆಲವು ದಿನಗಳಿಂದ ಬಹುಚರ್ಚೆಯಲ್ಲಿರುವ ವಿಷಯ. ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಮಾದರಿಯಲ್ಲೆ ಅತ್ಯಲ್ಪ ಅವಧಿಯಲ್ಲಿ ಜನರನ್ನು ಸೆಳೆದಂತಹ ಆ್ಯಪ್. ಇದು ಕೂಡ ಒಂದು ಸಾಮಾಜಿಕ ಜಾಲತಾಣ. ಆದರೆ ಇದರಲ್ಲಿ ಇತರ ಜಾಲತಾಣಗಳಂತೆ ಪೋಸ್ಟ್‌ ಹಾಕಲು ಸಾಧ್ಯವಿಲ್ಲ ಮತ್ತು ಟೈಪ್‌ ಮಾಡಲಾಗುವುದಿಲ್ಲ. ಅದರ ಬದಲು ಇಲ್ಲಿ ವಾಯ್ಸ್‌ ಚಾಟ್‌ ಮೂಲಕ ಸಂವಹನ ನಡೆಸಬಹುದು.

ಇಷ್ಟು ವರ್ಷಗಳ ಕಾಲ ಫೋಟೋ, ವಿಡಿಯೋ, ಸಂದೇಶಗಳ ಮೂಲಕ ವ್ಯವಹರಿಸಲು ಹಲವು ಸೋಶಿಯಲ್ ಮೀಡಿಯಾಗಳಿದ್ದವು. ಆದರೇ ವಾಯ್ಸ್ ಚಾಟ್ ನಡೆಸಲು ಪ್ರತ್ಯೇಕವಾದ ಆ್ಯಪ್ ಗಳಿರಲಿಲ್ಲ. ಇದ್ದರೂ ಪರಿಣಾಮಕಾರಿಯಾಗಿರಲಿಲ್ಲ. ಇದೀಗ ಬಂದಿರುವ ಕ್ಲಬ್ ಹೌಸ್ ಆ್ಯಪ್ ಈ ಎಲ್ಲಾ ಕೊರತೆಗಳನ್ನು ನೀಗಿಸಿದೆ. ಇಲ್ಲಿ ಸಾಮಾನ್ಯರಿಂದ ಹಿಡಿದು ಜನಪ್ರಿಯ ವ್ಯಕ್ತಿಗಳಿದ್ದಾರೆ. ಪ್ರತಿ ಮಾತುಕತೆಯೂ ಕೂಡ ಲೈವ್ ಮೂಲಕವೇ ಜರುಗುತ್ತವೆ. ಆದ್ದರಿಂದ ಆ್ಯಪ್ ಎಂಗೇಜ್ ಮೆಂಟ್ ಪ್ರಮಾಣವೂ ಹೆಚ್ಚಾಗುತ್ತಿದೆ.

ಮೊದಲು  ಐಫೋನ್‌ನಲ್ಲಿ ಈ ತಂತ್ರಜ್ಞಾನ ಲಭ್ಯವಿತ್ತು. ಈಗ ಇದು ಆ್ಯಂಡ್ರಾಯ್ಡ್‌ ಗೂ ಲಗ್ಗೆ ಇಟ್ಟಿದೆ. ಇದರ  ಫೀಚರ್​ ಗಳು ಕೂಡ ಅತ್ಯುತ್ತಮವಾಗಿರುವುದರಿಂದ ಡೌನ್​ಲೋಡ್​ ಪ್ರಮಾಣ ಹೆಚ್ಚಾಗಿದೆ. ಹೊಸ ಅಪ್ ಡೇಟ್ ನಲ್ಲಿ ಬಳಕೆದಾರರು ತಮ್ಮ ಇನ್​ಸ್ಟಾಗ್ರಾಮ್ ಪ್ರೊಫೈಲ್ ಸೇರ್ಪಡೆ ಮಾಡುವ ಅವಕಾಶವಿದೆ.

ಈ ಅಪ್ಲಿಕೇಶನ್ ನನ್ನು ಆಲ್ಫಾ ಎಕ್ಸ್ ಫ್ಲೊರೇಶನ್ ಕಂಪೆನಿ ಮೂಲಕ ಪೌಲ್ ಡೇವಿಸನ್ ಹಾಗೂ ರೋಹನ್ ಸೇಠ್ 2020ರ ಮಾರ್ಚ್ ನಲ್ಲಿ ಬಳಕೆಗೆ ತಂದರು (ಐಒಎಸ್). 2021ರ ಮೇನಲ್ಲಿ  ಆ್ಯಂಡ್ರಾಯ್ಡ್ ನಲ್ಲಿ ಈ ಅಪ್ಲಿಕೇಶನ್ ಜಾರಿಗೆ ಬಂತು. ಕ್ಲಬ್​ಹೌಸ್ ಎಂಬುದು ಇನ್ವಿಟೇಷನ್ ಓನ್ಲಿ ಸೋಷಿಯಲ್ ಮೀಡಿಯಾ ಆ್ಯಪ್. ಇದರ ಮೂಲಕವಾಗಿ ಚಾಟ್​ ರೂಮ್​ಗಳಲ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ನಡೆಸಬಹುದು. ಇದರಲ್ಲಿ 5000 ಮಂದಿಯ ತನಕ ಒಂದು ಗುಂಪಾಗಿ ವಾಯ್ಸ್ ಚಾಟಿಂಗ್ ​ಮಾಡುವ ಅವಕಾಶ ಇದೆ.

ಈ ಆ್ಯಪ್​ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ. ​ಉದಾ: ಎಲನ್ ಮಸ್ಕ್ ಕ್ಲಬ್ ಹೌಸ್ ಮೂಲಕ ಮಾತನಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಈ ಮಾತುಕತೆಯನ್ನು ಯಾರೂ ಬೇಕಾದರೂ ಕೇಳಿಸಿಕೊಳ್ಳಬಹುದು. ನಿಮಗೆ ಪ್ರಶ್ನೆ ಕೇಳಬೇಕೆಂದು ಅನಿಸಿದರೆ ‘ಕೈ ಗುರುತು’ ಇರುವ ಲೋಗೋವನ್ನು  ಒತ್ತಿದರಾಯಿತು. ರೂಂ ಕ್ರಿಯೆಟ್ ಮಾಡಿದವರು ಪ್ರಶ್ನೆ ಕೇಳಲು ಅನುವು ಮಾಡಿಕೊಡುತ್ತಾರೆ.

ಇಲ್ಲಿ ನಿಮ್ಮದೆ ಆದ ಅಕೌಂಟ್ ಕ್ರಿಯೆಟ್ ಮಾಡಬಹುದು. ಪ್ರಸಿದ್ದ ವ್ಯಕ್ತಿಗಳನ್ನು, ನಿಮ್ಮ ಸ್ನೇಹಿತರನ್ನು “Follow” ಮಾಡಬಹುದು. ಇದೀಗ ಈ ಅಪ್ಲಿಕೇಶನ್ 2 ಮಿಲಿಯನ್ ಗಿಂತಲೂ ಹೆಚ್ಚು ಆ್ಯಂಡ್ರಾಯ್ಡ್ ಡೌನ್ ಲೋಡ್ ಗಳಾಗಿದೆ. ಮಾರ್ಕ್ ಜುಕರ್ ಬರ್ಗ್, ಎಲನ್ ಮಸ್ಕ್ ರಂತಹ ಜನಪ್ರಿಯ ವ್ಯಕ್ತಿಗಳು  ಕೂಡ ಈ ಆ್ಯಪ್ ಬಳಸುತ್ತಿದ್ದಾರೆ.

ಟಾಪ್ ನ್ಯೂಸ್

cpy

ಮುಂದಿನ ವಾರದಿಂದ ಪ್ರವಾಸೋದ್ಯಮಕ್ಕೆ ಅವಕಾಶ: ಸಚಿವ ಯೋಗೇಶ್ವರ್

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

023

ಅಂದು ‘ನೋ’ ಎಂದವಳು ಇಂದು ‘ಎಸ್’ ಅಂತಾಳಾ?  ಶಾರುಖ್ ಸಿನಿಮಾದಲ್ಲಿ ‘ಸೂಪರ್’ ಬೆಡಗಿ ?

ramesh-jarkiholi

ಮನನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ಹೌದು, ಆದರೆ..:ಸುತ್ತೂರು ಮಠದಲ್ಲಿ ರಮೇಶ್ ಜಾರಕಿಹೊಳಿ

rekha-kadiresh

ರೇಖಾ ಕದಿರೇಶ್ ಕೊಲೆ ಪ್ರಕರಣ: ಸಂಬಂಧಿಗಳಿಂದಲೇ ಕೊಲೆ! ಫೈರಿಂಗ್ ಮಾಡಿ ಇಬ್ಬರ ಬಂಧನ

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

dfghjkjhg

ಖುರ್ಚಿ ಉಳಿಸಿಕೊಳ್ಳಲು ಅಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ರು : ಸಿಎಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ರೈಲಿನ ಭಿಕ್ಷೆಯಿಂದ ಬದುಕು ರೂಪಿಸಿದ ದೇಶದ ಮೊದಲ ಮಂಗಳಮುಖಿ ಫೋಟೋ ಜರ್ನಲಿಸ್ಟ್ ಜೋಯಾಳ ಯಶೋಗಾಥೆ

ರೈಲಿನ ಭಿಕ್ಷೆಯಿಂದ ಬದುಕು ರೂಪಿಸಿದ ದೇಶದ ಮೊದಲ ಮಂಗಳಮುಖಿ ಫೋಟೋ ಜರ್ನಲಿಸ್ಟ್ ಜೋಯಾಳ ಯಶೋಗಾಥೆ

steave jobs

ಛಲದಂಕಮಲ್ಲ: ತಾನು ಕಟ್ಟಿದ್ದ ದೈತ್ಯ ಆ್ಯಪಲ್ ಕಂಪನಿಯಿಂದಲೇ ಹೊರಬಿದ್ದಿದ್ದ ಸ್ಟೀವ್ ಜಾಬ್ಸ್!

ತುಳುನಾಡಿನ ಮಹತ್ವ ಸಾರುವ ಗೆಜ್ಜೆಕತ್ತಿ

ತುಳುನಾಡಿನ ಮಹತ್ವ ಸಾರುವ ಗೆಜ್ಜೆಕತ್ತಿ

health-tips-for-healthy-life

  ತಿನ್ನಲು ಕಹಿ, ಆರೋಗ್ಯಕ್ಕೆ ಸಿಹಿ ಈ ಹಾಗಲಕಾಯಿ

MUST WATCH

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

ಹೊಸ ಸೇರ್ಪಡೆ

24-jkd-4b

ಪಂಚಮಸಾಲಿ ಮೂರನೇ ಪೀಠಕ್ಕೆ ಶ್ರೀಕಾರ

23-kalaghatagi 4

ಮುತ್ತಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆ

ertytrertyuhygtfdsa

ವಶಪಡಿಸಿಕೊಂಡಿದ್ದ ಡ್ರಗ್ಸ್ ನಾಶ ಮಾಡಲು ಕ್ರಮ ಕೈಗೊಳ್ಳಲಾಗಿದೆ : ಬೊಮ್ಮಾಯಿ

05

ಮತದಾರರ ಕರಡು ಪಟ್ಟಿ ಬಿಡುಗಡೆಗೆ ಸಿದ್ಧತೆ

06

ಲಾಡ್‌-ಛಬ್ಬಿ ಮುಸುಕಿನ ಗುದ್ದಾಟ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.